ನಮ್ಮ ಪ್ರಜಾ ಸಾಕ್ಷಿ ಆನ್ಲೈನ್ ವೆಬ್ ವರದಿಗೆ ಎಚ್ಚೆತ್ತುಕೊಂಡು ಮರಳನ್ನು ತೆರವುಗೊಳಿಸಿದ ರಾಷ್ಟೀಯ ಹೆದ್ದಾರಿ ಪ್ರಾಧಿಕಾರ ಹುನಗುಂದ ಇಲಾಖೆ

ವರದಿ : ಗ್ಯಾನಪ್ಪ ದೊಡ್ಡಮನಿ

ಮಸ್ಕಿ : ತಾಲೂಕಿನ ಮುದಬಾಳ ಸಮೀಪದ ರಾಷ್ಟ್ರೀಯ ಹೆದ್ದಾರಿ 150 ಎ ರಸ್ತೆ ಹಾದು ಹೋಗುವ ಯು ಟರ್ನ್ ಬಳಿ ರಸ್ತೆಯ ಮದ್ಯ ಭಾಗದಲ್ಲಿಯೇ ಮರಳು ಚಲ್ಲಾ ಪಿಲ್ಲಿಯಾಗಿ ಬಿದ್ದಿರುವುದರಿಂದ ವಾಹನ ಸವಾರರು ಜೀವ ಭಯದಲ್ಲಿಯೇ ಓಡಾಡುವ ಸ್ಥಿತಿ ನಿರ್ಮಾಣ.ಮುದಬಾಳ ಸಮೀಪದ ರಾಷ್ಟ್ರೀಯ ಹೆದ್ದಾರಿ 150 ಎ ರಸ್ತೆ ಹಾದು ಹೋಗುವ ಅಕ್ರಮವಾಗಿ ಮರಳು ಸಾಗಾಟದ ವಾಹನಗಳು ಅತೀ ಹೆಚ್ಚು ಓಡಾಡುತ್ತಿದ್ದು, ಆ ವಾಹನಗಳಲ್ಲಿ ಮಿತಿಗಿಂತಲೂ ಅತೀ ಹೆಚ್ಚಿನ ಮರಳು ತುಂಬಿಕೊಂಡು ಹೋಗುತ್ತಿರುವುದರಿಂದ ರಸ್ತೆಯು (ಟರ್ನಿಂಗ್) ಯು ಆಕಾರದಲ್ಲಿ ಇದ್ದು ಆ ಮರಳು ರಸ್ತೆಯ ತುಂಬೆಲ್ಲಾ ಚೆಲ್ಲಾಪಿಲ್ಲಿಯಾಗಿ ಬೀಳುವುದರಿಂದ ರಸ್ತೆಯಲ್ಲಿ ದ್ವಿಚಕ್ರ ವಾಹನ ಹಾಗೂ ತ್ರಿಚಕ್ರ ವಾಹನ ಸವಾರರಿಗೆ ತುಂಬಾ ಅಪಾಯಕಾರಿಯಾಗಿದೆ.

ಇದರಿಂದಾಗಿ ಸಾರ್ವಜನಿಕರು ಜೀವ ಭಯದಲ್ಲಿ ವಾಹನ ಸವಾರ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ವಿಚಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಣ್ಣಿದ್ದು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.

ಈಗಾಗಲೇ ಇದೇ ಮಾರ್ಗದಲ್ಲಿ ಅತೀ ಹೆಚ್ಚು ಅಪಘಾತ ಸಂಭವಿಸಿ ಸಾವನಪ್ಪಿದ್ದು, ಇದಕ್ಕೆ ಪುಷ್ಠಿ ನೀಡುವಂತೆ ಒಂದು ವರ್ಷದ ಹಿಂದೆ ಒಂದೇ ಕುಟುಂಬದ ಮೂರು ಜನ ಸಾವನ್ನಪ್ಪಿದ್ದು ಆ ಘಟನೆ ಮರುಕಳಿಸದಂತೆ ಹಾಗೂ ಸಾರ್ವಜನಿಕರ ರಕ್ಷಣೆಯ ಹಿತ ದೃಷ್ಟಿಯಿಂದ ಯಾವುದೇ ಸಾವು-ನೋವು ಸಂಭವಿಸುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಕೊಟ್ಟು ರಸ್ತೆ ಮೇಲೆ ಇರುವಂತ ಮರಳನ್ನು ತೆರವುಗೊಳಿಸಿ ವಾಹನ ಸವಾರರು ಸರಾಗವಾಗಿ ಚಲಿಸಲು ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ ಎಂದು ನಮ್ಮ ಪ್ರಜಾ ಸಾಕ್ಷಿ ಆನ್ಲೈನ್ ವೆಬ್ ನಲ್ಲಿ ಪ್ರಕಟ ಮಾಡಲಾಗಿತ್ತು. ವರದಿಯಾಗುತ್ತಿದ್ದಂತೆಯೇ ಸೋಮವಾರ ರಾಷ್ಟೀಯ ಹೆದ್ದಾರಿ ಪ್ರಾಧಿಕಾರ ಹುನಗುಂದ ಇಲಾಖೆಯ ಸಂಭಂದಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಮರಳನ್ನು ಗಾಳಿ ಹಿಡಿಯುವ ಮಿಶಿನ್ ಇಂದ ತೆರವುಗೊಳಿಸುವ ಕಾರ್ಯವನ್ನು ಮಾಡಿದ್ದು ಸಾರ್ವಜನಿಕರ ಮುಖದಲ್ಲಿ ಮಂದಹಾಸ ಮೂಡಿದೆ ಎಂದು ಆ ಮಾರ್ಗವಾಗಿ ಸಂಚರಿಸುವ ವಿವಿಧ ಗ್ರಾಮಗಳ ವಾಹನ ಸವಾರರು ನಮ್ಮ ಪ್ರಜಾ ಸಾಕ್ಷಿ ಆನ್ಲೈನ್ ವೆಬ್ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ