ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸುವುದರಿಂದ , ಸದೃಡವಾದ ದೇಹ, ಸದೃಡ ಮನಸ್ಸಿರುತ್ತದೆ :ಪಿಎಸ್ಐ ಗೀತಾಂಜಲಿ ಶಿಂಧೆ
ಕೊಟ್ಟೂರು: ಮಕ್ಕಳು ಆಟಗಳಲ್ಲಿ ಭಾಗವಹಿಸುವುದರಿಂದ ಸ್ಪರ್ಧೆಗಳ ಬಗ್ಗೆ ಜ್ಞಾನ ಮೂಡುತ್ತದೆ. ನಿಮ್ಮ ವೇಳಾಪಟ್ಟಿಯಲ್ಲಿ ಕನಿಷ್ಟ 30 ನಿಮಿಷ ಆಟಕ್ಕೆ ಸಮಯ ನೀಡಿ, ಸರ್ವತೋಮುಖ ಅಭಿವೃದ್ಧಿಯೇ ನಿಜವಾದ ಶಿಕ್ಷಣ. ಭವಿಷ್ಯದಲ್ಲಿ ನಿಮಗೆ ಯಶಸ್ಸುಸಿಗಲಿ ಎಂದು ಕೊಟ್ಟೂರು ಪೋಲೀಸ್ ಠಾಣ ಪಿಎಸ್ಐ ಕು. ಗೀತಾಂಜಲಿ ಸಿಂಧೆ ಮಕ್ಕಳಿಗೆ ತಿಳಿಸಿದರು.
ಕೊಟ್ಟೂರಿನ ಇಂದು ಸಿ.ಬಿ.ಎಸ್.ಇ. ಶಾಲೆಯಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಕ್ರೀಡಾ ಶುಕ್ರವಾರ ರಂದು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ಇಂದು ಶಾಲೆಯ ಆಡಳಿತಾಧಿಕಾರಿಗಳಾದ ಶ್ರೀ ಹೆಚ್ ಎನ್ ವೀರಭದ್ರಪ್ಪನವರು ಮಾತನಾಡಿ ಮಕ್ಕಳ ಯಶಸ್ಸನ್ನು ಆಳೆಯುವ ಪೋಷಕರ ಮಾನದಂಡ ಬದಲಾಗಬೇಕು. ಕ್ರೀಡೆಯಲ್ಲಿ ಮಕ್ಕಳು ಪಾಲ್ಗೊಳ್ಳಲು ಬೆಂಬಲ ನೀಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪಥಸಂಚಲನ ಆಕರ್ಷಕ ಭಾಗವಾಗಿತ್ತು. ಶಾಲಾ ಪ್ರಾಂಶುಪಾಲರಾದ ಚೇತನ್ ಕುಮಾರ್ ಎ, ಮುಖ್ಯಗುರುಗಳಾದ ಬಸವರಾಜ ಬಿ, ಪದವಿ ಪ್ರಾಂಶುಪಾಲರಾದ ಡಾ. ವಾಗೀಶಯ್ಯ ಪಿ ಎಂ, ಪಿ.ಯು ಕಾಲೇಜಿನ ಪ್ರಾಂಶುಪಾಲರು ಪವನ್ ಕುಮಾರ್ ಹೆಚ್ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಪ್ರೇಮ ಬಿ ವಿ ನಿರೂಪಿಸಿದರು, ವಾಣಿ ಡಿ ಬಿ ಸ್ವಾಗತಿಸಿದರು ಮತ್ತು ವಿಜಯಲಕ್ಷಿ ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ