ಶ್ರೀ ಜಗದ್ಗುರು ಮರಳಸಿದ್ದೇಶ್ವರ ಸ್ವಾಮಿ ಲಕ್ಷ ದೀಪೋತ್ಸವ.
ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾದೀಶ್ವರ ಶ್ರೀ ಶ್ರೀ ಶ್ರೀ ೧೦೦೮ ಲಿಂಗೈಕ್ಯ ಜಗದ್ಗುರು ಮರಳುಸಿದ್ದ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳವರ 12ನೇ ವರ್ಷದ ಪುಣ್ಯಸ್ಮರಣೆ , ಸಾಮೂಹಿಕ ವಿವಾಹ , ಮತ್ತು ಸೋಮವಾರ ದಂದು ಶ್ರೀ ಜಗದ್ಗುರು ಮರಳಸಿದ್ದೇಶ್ವರ ಸ್ವಾಮಿ ಲಕ್ಷ ದೀಪೋತ್ಸವ.
ಕೊಟ್ಟೂರು: ಉಜ್ಜಿನಿಯ ಪ್ರತಿ ವರ್ಷದ ಪದ್ಧತಿಯಂತೆ ಉಜ್ಜಯಿನಿ ಸದ್ಧರ್ಮ ಪೀಠದ ಶೆಕ್ಷೇತ್ರನಾಥ ಶ್ರೀ ಜಗದ್ಗುರು ಮರಳುಸಿದ್ದೇಶ್ವರರ ಸೋಮವಾರ ದಂದು ಕಾರ್ತಿಕ ಲಕ್ಷ ದೀಪೋತ್ಸವ , ಲಿಂಗೈಕ್ಯ ಜಗದ್ಗುರು ಮರುಸಿದ್ದ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ 12ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮ ಭಾನುವಾರ ಕ್ಷೇತ್ರದ ಪ್ರಮುಖ ಬೀದಿಗಳಲ್ಲಿ ಭಾವಚಿತ್ರದ ಮೆರವಣಿಗೆಯೊಂದಿಗೆ ಪ್ರಾರಂಭಗೊಂಡಿತು. ಸಂಜೆಯ ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರಮುಖ ಅಧಿಕಾರಿಗಳಿಗೆ ಗೌರವಿಸಲಾಯಿತು ನಂತರ ಶಾಲಾ ಮಕ್ಕಳಿಂದ ಕಾರ್ಯಕ್ರಮವು ನೆರವೇರಿತು.
ಸೋಮವಾರ ಮುಂಜಾನೆಯಿಂದಲೇ ಜಗದ್ಗುರಗಳ ಕತೃ ಗದ್ದುಗೆಗೆ ಅಭಿಷೇಕ, ಹೋಮ ,ಪೂಜಾ ದಿ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು, ಇದೇ ಸಂದರ್ಭದಲ್ಲಿ ಮೂರು ಜೋಡಿ ಸಾಮೂಹಿಕ ವಿವಾಹ ನಡೆದಿದ್ದು , ಸಹಸ್ರಾರು ಜನ ಕ್ಷೇತ್ರದ ಅಧಿ ದೇವತೆ ಶ್ರೀ ಜಗದ್ಗುರು ಮರಳುಸಿದ್ದೇಶ್ವರರ ಹಾಗೂ ಮಾತೆ ಗೌರಿಯ, ಸರತಿ ಸಾಲಿನಲ್ಲಿ ಬಂದು ಆಶೀರ್ವಾದವನ್ನು ಪಡೆದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ