ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನಾಚರಣೆ: ದೀಪದೊಂದಿಗೆ ಕಲ್ನಾಡಿಗೆಯ ಜಾಥ
ಕೊಟ್ಟೂರು : ಅಂಬೇಡ್ಕರ್‍ರ ಅವರ 67ನೇ ಮಹಾ ಪರಿನಿರ್ವಾಣದ ಅಂಗವಾಗಿ ಡಿ.6ರಂದು ಸ್ವಾಭಿಮಾನ ಸಂಕಲ್ಪದಿನವನ್ನಾಗಿ ಆಚರಣೆ ಮಾಡಲಾಗುವುದು.
ಮಹಾ ಪರಿನಿರ್ವಾಣ ದಿನದ ನಿಮಿತ್ತ ಬುಧವಾರ ರಂದು ಅಂಬೇಡ್ಕರ್ ಭಾವಚಿತ್ರದೊಂದಿಗೆ ಗಾಂಧಿ ವೃತ್ತದಿಂದ ಮೆರವಣಿಗೆ ಕಲ್ನಾಡಿಗೆಯ ಜಾಥಾ ಮೂಲಕ ಪಟ್ಟಣದ ಬಸ್ಟಾಂಡ್ ಸರ್ಕಲ್ ಹತ್ತಿರದ ವೃತ್ತದಲ್ಲಿ ಮೇಣದಬತ್ತಿ ದೀಪ ಹಚ್ಚಿ ಗೌರವಸಲ್ಲಿಸಲಾಯಿತು.
ಬದ್ದಿ ಮರಿಸ್ವಾಮಿ ಮಾತನಾಡಿದ ಅವರು, ತಲೆಮಾರುಗಳಿಂದ ನಡೆಯುತ್ತಿದ್ದ ದಲಿತ ಸಮುದಾಯಗಳ ಮೇಲಿನ ಸವರ್ಣೀಯರ ದೌರ್ಜನ್ಯವನ್ನು ಖಂಡಿಸಿದ್ದಲ್ಲದೇ, ಸಮಸಮಾಜದ ಕನವರಿಕೆಗಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟ ಅಂಬೇಡ್ಕರ್‍ರು ಡಿ.6ರಂದು ಪರಿನಿರ್ವಾಣ ಹೊಂದಿದರು. ಆದುದರಿಂದ ಡಿ.6ರಂದು ದೇಶಾದ್ಯಂತ ಶೋಕಾಚರಣೆ ಮಾಡಲಾಗುತ್ತದೆ.ಎಂದರು
ತಗ್ಗಿನಕೇರಿ ಕೊಟ್ರೇಶ್ ಮಾತನಾಡಿದ ಅವರು,ನನ್ನ ಸಾವು ಹತ್ತಿರ ಬರುತ್ತಿದೆ. ನನ್ನ ಜನರಿಗೆ ಹೇಳು ನನ್ನ ಹೋರಾಟವನ್ನು ಮುನ್ನಡಿಸಿಕೊಡು ಹೋಗಬೇಕೆಂದು ಅವರು ಸಾಯುವ ಮುನ್ನ ಹೇಳಿದ ಮಾತುಗಳು ಹೋರಾಟಗಾರರಲ್ಲಿ ಸ್ವಾಭಿಮಾನದ ಕಿಚ್ಚನ್ನು ಹಚ್ಚುತ್ತವೆ. ಆದುದರಿಂದ ಅಂದು ಸ್ವಾಭಿಮಾನ ಸಂಕಲ್ಪ ದಿನಾವಾಗಿ ಆಚರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ತಗ್ಗಿನಕೇರಿ ವಕೀಲರು ಹನುಮಂತಪ್ಪ, ಕೊಟ್ರೇಶ್ ,ಬದ್ದಿ ದುರ್ಗೇಶ್, ಕುಬೇರಪ್ಪ, ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಪೂಜಾರ್ ಚಂದ್ರಶೇಖರ್, ಪೂಜಾರ್ ಅಜ್ಜಪ್ಪ,ಬುದ್ಧಿ ಮಂಜುನಾಥ್, ಕೆ ಶಿವರಾಜ್, ಪರಶುರಾಮ್, ಅಮರೇಶ್, ಮಿಲ್ಟ್ರಿ ಅಜ್ಜಪ್ಪ, ಶ್ರೀನಿವಾಸ್, ದಲಿತ ಮುಖಂಡರು ಯುವಕರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ