ಪೋಸ್ಟ್‌ಗಳು

ನವೆಂಬರ್, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ದಾಸ ಶ್ರೇಷ್ಠ ಕನಕದಾಸರು ಸಮಾಜದಲ್ಲಿ ನಾವೆಲ್ಲರೂ ಒಂದೇ ಯಾವುದೇ ಕುಲ ಬೇದ ಭಾವ ಇಲ್ಲ:ಮಲ್ಲಪ್ಪ ಗುಡ್ಲಾನೂರ್

ಇಮೇಜ್
ಕೊಟ್ಟೂರು ನ.30,  ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ದಾಸ ಶ್ರೇಷ್ಠ ಕೀರ್ತನಕಾರು ಶ್ರೀ ಕನಕ ದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಜಯಂತಿಯನ್ನು  ಸರಳವಾಗಿ ಗುರುವಾರದಂದು ಆಚರಿಸಲಾಯಿತು. ಆದರ್ಶ  ಸಲಹೆ,, ತಲ್ಲಣಿಸದಿರು ಕಂಡ್ಯ ತಾಳು ಮನವೇ ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ’  ಎನ್ನುವ ಭರವಸೆಯ ಮಾತುಗಳನ್ನು ಆಡಿದವರು ಹಾಗೂ ದಾಸ ಶ್ರೇಷ್ಠ ಕನಕದಾಸರು ಸಮಾಜದಲ್ಲಿ ನಾವೆಲ್ಲರೂ ಒಂದೇ ಯಾವುದೇ ಕುಲ ಬೇದ ಭಾವ ಇಲ್ಲ ಎನ್ನುವ ಸಂದೇಶ ಸಾರಿದವರು ಎಂದು ಗ್ರಂಥಾಲಯ ಮೇಲ್ವಾಚಲಕರು ಮಲ್ಲಪ್ಪ ಗುಡ್ಲಾನೂರ್ ಮಾತನಾಡಿದರು. ಈ ಸಂದರ್ಭದಲ್ಲಿ ಗುರುಬಸವರಾಜ್ ಮತ್ತಿಹಳ್ಳಿ ಪ್ರೌಢಶಾಲಾ ಶಿಕ್ಷಕರು ಈಶಪ್ಪ ಬಾಚನಹಳ್ಳಿ, ವಿದ್ಯಾರ್ಥಿಗಳು ಗ್ರಂಥಾಲಯ ಓದುಗರು ಇದ್ದರು.

ಹ್ಯಾಳ್ಯ ಗ್ರಾಮ ಪಂಚಾಯಿತಿಯಲ್ಲಿ ಕನಕದಾಸರ ಜಯಂತಿ ಆಚರಣೆ

ಇಮೇಜ್
ಕೊಟ್ಟೂರು :ನ 30 ತಾಲೂಕಿನ ಹ್ಯಾಳ್ಯ ಗ್ರಾಮ ಪಂಚಾಯಿತಿಯಲ್ಲಿ ಗುರುವಾರದಂದು ಕನಕದಾಸ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸುವ ಮೂಲಕ ಕನಕ ಜಯಂತಿಯನ್ನು  ಆಚರಿಸಲಾಯಿತು. ಕನಕದಾಸರು ನಾಡಿನ ಉದ್ದಗಲಕ್ಕೂ ಕಾಲ್ನಡಿಗೆಯಲ್ಲಿ ಸಂಚರಿಸಿ ಭಕ್ತಿಭಾವ, ವೈರಾಗ್ಯಗಳನ್ನು ಸಾರಿ ಸಮಾಜವನ್ನು ಜಾಗೃತಿಗೊಳಿಸಿದರು. ನವ ಸಮಾಜ ನಿರ್ಮಾಣ ಮಾಡಲು ನಕದಾಸರ ಚಿಂತನೆ, ತತ್ವ ಮತ್ತು ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಪಿಡಿಒ ಸಿಎಚ್ಎಂ ಗಂಗಾಧರ ತಿಳಿಸಿದರು. ಇದೇ ಸಂದರ್ಭದಲ್ಲಿ ಟಿ ರಾಜ, ಗುಂಡಪ್ಪರ ಕೊಟ್ರೇಶ್, ಉಪಾಧ್ಯಕ್ಷರು ಡಿ ನಾಗೇಶ್, ನುಪ್ಪಣ್ಣ ಗ್ರಂಥಾಲಯ ಬಡಿಗೇರ್ ಲೋಕೇಶ್, ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

*ಕನಕ ಜಯಂತಿ ಅಂಗವಾಗಿ ಸಂತ ಶರಣರ ವೇಷ ಧರಿಸಿ ಪ್ರದರ್ಶನ ನೀಡಿದ ರಾಷ್ಟ್ರೋತ್ಥನ ವಿದ್ಯಾ ಕೇಂದ್ರದ ಮಕ್ಕಳು*

ಇಮೇಜ್
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಿ.ಬಿ. ಎಸ್. ಇ ಯಲ್ಲಿ ಗುರುವಾರ ರಂದು ಸಂತ ಶರಣರು ಕನಕದಾಸ ಜಯಂತಿಯನ್ನು ಆಚರಿಸಲಾಯಿತು.  ಈ ಸಂರ್ಭದಲ್ಲಿ 8ನೇ ತರಗತಿ ವಿದ್ಯಾರ್ಥಿನಿಯಾದ ಕುಮಾರಿ ಕೊಟ್ರಮ್ಮ ಇವರು ಕನಕದಾಸರ ಕುರಿತು " ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ.  ಕನಕದಾಸರು ದಂಡನಾಯಕರಾಗಿದ್ದು ಯುದ್ಧವೊಂದರಲ್ಲಿ ಸೋತ ಅವರಿಗೆ ಉಪರತಿ/ವೈರಾಗ್ಯ ಉಂಟಾಗಿ ಹರಿಭಕ್ತರಾದರು" ಎಂದು ಹೇಳಿದಳು. 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳು ದಾಸ ಸಾಹಿತ್ಯದ ಕೀರ್ತನೆಗಳನ್ನು ಹೇಳಿದರು. 6ನೇ ತರಗತಿಯ ವಿದ್ಯಾರ್ಥಿಯಾದ ಕಾರ್ನಿಕ್ ಕನಕದಾಸರ ವೇಷಧಾರಿ ಆಗಿದ್ದನು. ಮನ್ವಿತ್ ಪುರಂದರದಾಸರ ವೇಷಧಾರಿಯಾಗಿದ್ದನು. ವಿದ್ಯಾರ್ಥಿನಿ ಅಂಕಿತ ಕನಕದಾಸರ ತಾಯಿಯ ವೇಷಧರಿಸಿದ್ದಳು, ಬೃಂದಾ ಪುರಂದರದಾಸರ ತಾಯಿಯ ವೇಷ ಧರಿಸಿದ್ದಳು, ದೀಕ್ಷಾ ಪುರಂದರದಾಸರ ಹೆಂಡತಿಯ ವೇಷ ಧರಿಸಿದ್ದಳು. ಹೀಗೆ ಆರನೇ ತರಗತಿಯ ಮಕ್ಕಳಿಂದ ದಾಸ ಪರಂಪರೆಯ ಛದ್ಮವೇಷ ಪ್ರದರ್ಶನ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಾಲೆಯ ಉಪ ಪ್ರಧಾನಾಚಾರ್ಯರಾದ ಶ್ರೀಸುವೀರರವರು, ಗುರುವೃಂದದವರು, ಪಾಲಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು

ಕನಕರ ಕೀರ್ತನೆಯಲ್ಲಿ ಸಾಮಾಜಿಕ ಪ್ರಜ್ಞೆ

ಇಮೇಜ್
ಕನ್ನಡ ಸಾಹಿತ್ಯದಲ್ಲಿ ಶರಣ ಸಾಹಿತ್ಯ ಮತ್ತು ದಾಸ ಸಾಹಿತ್ಯ ಅತ್ಯಂತ ಜನಪ್ರಿಯವಾದ ಹಾಗೂ ಜನಪರವಾದ ಸಾಹಿತ್ಯವಾಗಿದೆ. ೧೨ನೇ ಶತಮಾನಕ್ಕಿಂತ ಪೂರ್ವದಲ್ಲಿ ಸಾಹಿತ್ಯ ರಾಜಾಶ್ರಯವಾಗಿದ್ದು, ಉದ್ದಾಮ ಪಂಡಿತರಿಗೆ ಮಾತ್ರ ಮೀಸಲಿದ್ದು ಜನಸಾಮಾನ್ಯರಿಗೆ ತಲುಪದೇ ಕಬ್ಬಿಣದ ಕಡಲೆಯಂತಾಗಿತ್ತು. ಇಂತಹ ಕಾಲಘಟ್ಟದಲ್ಲಿ ೧೨ನೇ ಶತಮಾನದಲ್ಲಿ ವಚನ ಚಳುವಳಿ ಮತ್ತು ನಂತರ ೧೫-೧೬ನೇ ಶತಮಾನದಲ್ಲಿ ಬಂದ ಹರಿದಾಸರ ಚಳುವಳಿ ನಡೆಯಿತು. ಈ ಎರಡೂ ಚಳುವಳಿಯಲ್ಲಿ ಧರ್ಮಶ್ರದ್ಧೆ ಮತ್ತು ಭಕ್ತಿ ಪ್ರಧಾನವಾಗಿ ಇದ್ದುದನ್ನು ಕಾಣಬಹುದು.    ಶರಣರದು ಹರ ಭಕ್ತಿಯಾದರೆ , ದಾಸರದು ಹರಿ ಭಕ್ತಿ. ಈ ಎರಡೂ ಚಳುವಳಿಯಲ್ಲಿ ಭಕ್ತಿಯ ಜೊತೆಗೆ ಸಮಾಜದ ಅಂಕು-ಡೊAಕುಗಳನ್ನು ತಿದ್ದಿ ಮಾನವೀಯತೆಯನ್ನ ಎತ್ತಿ ಹಿಡಿದು ಅರಿವಿನ ಬೆಳಕಿನ ದಾರಿಯನ್ನು ತೋರಿಸಿದ್ದಾರೆ. ಆಡುಭಾಷೆಯು ಇವರ ಸಾಹಿತ್ಯದಲ್ಲಿ ಬಳಕೆಯಾದ್ದರಿಂದ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯವು ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸಾಹಿತ್ಯವಾಗಿ ಜೀವಂತಿಕೆಯನ್ನು ಪಡೆದಿವೆ.  ಹೀಗೆ ದಾಸ ಸಾಹಿತ್ಯವು ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ಒಂದು ಜನಪ್ರಿಯ ಸಾಹಿತ್ಯವಾಗಿ ಜನರ ಮನದಲ್ಲಿ ಉಳಿದಿದೆ. ಈ ದಾಸ ಸಾಹಿತ್ಯದಲ್ಲಿ ನೂರಾರು ದಾಸರು ಇದ್ದರೂ ಕನ್ನಕದಾಸರು ಮತ್ತು ಪುರಂದರ ದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಿದ್ದಾರೆ. ಅಲ್ಲದೇ ಕನಕ ದಾಸರು ಇಡೀ ದಾಸ ಸಾಹಿತ್ಯದಲ್ಲೇ ಕೆಳವರ್ಗದಿಂದ ಬಂದ ಏಕೈಕ ವ್

ಕೃಷ್ಣನನ್ನೇ ತನ್ನೆಡೆಗೆ ತಿರುಗಿಸಿದ ಭಕ್ತಿವಂತ ಕನಕದಾಸರು- ಅಮರೇಶ್ ಜಿ ಕೆ

ಇಮೇಜ್
ಕೊಟ್ಟೂರು 30.11.2023 :- ತಾಲೂಕು ಕಛೇರಿ, ಕೊಟ್ಟೂರಿನ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಇಂದು ದಾಸಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ತಹಶೀಲ್ದಾರರು ಹಾಗೂ ತಾಲೂಕಿನ ಕುರುಬ ಸಮಾಜದ ಮುಖಂಡರೆಲ್ಲರೂ ಕನಕದಾಸರಿಗೆ ಪುಷ್ಪಾರ್ಚನೆ ಮಾಡಿ ಭಕ್ತಿ ಸಮರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. 16ನೇ ಶತಮಾನದಲ್ಲಿಅನೇಕ ದಾಸರು ಬಂದರು. ಅವರಲ್ಲೆಲ್ಲಾ ಶ್ರೇಷ್ಠ ದಾಸರಾಗಿ, ಸಂತ್ರರಾಗಿ ಬದುಕಿದ್ದರು. ಅವರ ಭಕ್ತಿ ಎಷ್ಟಿತ್ತೆಂದರೆ ಭಗವಂತ ಶ್ರೀಕೃಷ್ಣನನ್ನೇ ತನ್ನೆಡೆಗೆ ತಿರುಗಿಸಿಕೊಂಡರು. ಇವರು ಭಕ್ತಿ ಚಳುವಳಿಯ ಜೊತೆಗೆ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ ಮಾನವೀಯತೆಯನ್ನು ಎತ್ತಿಹಿಡಿದು ಅರಿವಿನ ಬೆಳಕಿನ ದಾರಿಯನ್ನು ತೋರಿಸಿದ್ದಾರೆ. ಇವರ ಸಾಹಿತ್ಯ ಜನರಾಡುವ ಭಾಷೆಯಲ್ಲಿದ್ದುದರಿಂದ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸಾಹಿತ್ಯವಾಗಿ ಜೀವಂತಿಕೆಯನ್ನು ಪಡೆದಿದೆ ಎಂದು ತಹಶೀಲ್ದಾರರಾದ ಅಮರೇಶ ಜಿ ಕೆ ಇವರು ಕನಕದಾಸರನ್ನು ನೆನೆದರು. ಸಮಾಜದ ಮುಖಂಡರಾದ ಸಿದ್ದೇಶ್ , ಮೂಗಪ್ಪ ಅಧ್ಯಕ್ಷರು, ತಾಲೂಕು ಕುರುಬ ಸಮಾಜ, ಪುಲಿಕೇಶಿ ವಕೀರಲು ಹಾಗೂ ತಾಲೂಕು ಕುರುಬ ಸಮಾಜದ ಖಜಾಂಚಿ ಇವರು ಕನಕದಾಸರು ಇಡೀ ಮನುಕುಲಕ್ಕೆ ನೀಡಿದ ಕೊಡುಗೆ ಕುರಿತು ಮಾನನಾಡಿದರು.  ಕಾರ್ಯಕ್ರಮದಲ್ಲಿ ಲೀಲಾ.ಎಸ್. ತಹಶೀಲ್ದಾರ್ ಗ್ರೇಡ್-2, ಕುರುಬ ಸಮಾಜದ ಉಪಾಧ್ಯಕ್ಷರಾದ ಮೇಘರಾಜ, ಪಟ್ಟಣ ಪಂಚಾಯಿತಿ ಸದಸ್ಯರಾದ ತೋಟದ ರಾಮಣ್ಣ, ಮಾಜಿ ಸದಸ್ಯ

ಸೌಂದರ್ಯಪ್ರಜ್ಞೆ ಮೂಡಿಸುವ ಕಲೆ ಕನಕದಾಸರಿಗೆ ದಕ್ಕಿದೆ:ಎ ನಸರುಲ್ಲಾ

ಇಮೇಜ್
ಕೊಟ್ಟೂರು ನ.30, ಪಟ್ಟಣದ ಪಂಚಾಯಿತಿ ಸದಸ್ಯರು ಸಮುದಾಯದ ಮುಖಂಡರು ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮುಖಾಂತರ  ಕನಕದಾಸರ ಜಯಂತಿಯನ್ನು ಸರಳವಾಗಿ ಗುರುವಾರದಂದು ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಆಚರಿಸಿದರು. ನಂತರ ಮಾತನಾಡಿದ ಕನಕದಾಸರು ಇತಿಹಾಸವನ್ನು ಸಾಹಿತ್ಯದ ಪಠ್ಯದಲ್ಲಿರಿಸಿ ಅದಕ್ಕೊಂದು ಸೌಂದರ್ಯಪ್ರಜ್ಞೆ ಮೂಡಿಸುವ ಕಲೆ ಕನಕದಾಸರಿಗೆ ದಕ್ಕಿದೆ. ಅದಕ್ಕೆ ಉದಾಹರಣೆ ಅವರ ‘ಮೋಹನತರಂಗಿಣಿ’. ನಳಚರಿತ್ರೆ, ಹರಿಭಕ್ತಿಸಾರಗಳು ಕೂಡ ಅವರ ಸೃಜನಶೀಲ ಬದುಕಿನ ಧ್ಯಾನವೇ. ಆಗಿದೆ, ಎಂದು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳು ಎ ನಸರುಲ್ಲಾ . ತಿಳಿಸಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರು  ಕೆಂಗರಾಜ್, ಶಫಿ, ಸಮುದಾಯದ ಮುಖಂಡರು ಬೋರನಹಳ್ಳಿ ಮರಿಯಪ್ಪ, ಎಲ್ ಐ ಸಿ ಮೂಗಣ್ಣ, ಪಟ್ಟಣ ಪಂಚಾಯಿತಿ ಆರ್ ಐ ಕೊಟ್ರೇಶ್, ಪರಶುರಾಮ್, ಅಜ್ಜಪ್ಪ, ಸುರೇಶ್, ಪಟ್ಟಣ ಪಂಚಾಯತಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

"ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಕನಕದಾಸರ ಜಯಂತಿ ಆಚರಣೆ"

ಇಮೇಜ್
ಕೊಟ್ಟೂರು : ತಾಲೂಕಿನ ಪೊಲೀಸ್ ಠಾಣೆಯಲ್ಲಿ  ಗುರುವಾರದಂದು ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸುವ ಮೂಲಕ ಕನಕ ಜಯಂತಿಯನ್ನು  ಆಚರಿಸಲಾಯಿತು. ಕನಕದಾಸರು ನಾಡಿನ ಉದ್ದಗಲಕ್ಕೂ ಕಾಲ್ನಡಿಗೆಯಲ್ಲಿ ಸಂಚರಿಸಿ ಭಕ್ತಿಭಾವ, ವೈರಾಗ್ಯಗಳನ್ನು ಸಾರಿ ಸಮಾಜವನ್ನು ಜಾಗೃತಿಗೊಳಿಸಿದರು. ನವ ಸಮಾಜ ನಿರ್ಮಾಣ ಮಾಡಲು ನಕದಾಸರ ಚಿಂತನೆ, ತತ್ವ ಮತ್ತು ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಿಪಿಐ ವೆಂಕಟಸ್ವಾಮಿ ಮಾತನಾಡಿದರು.  ಇದೇ ಸಂದರ್ಭದಲ್ಲಿ ಕೊಟ್ಟೂರು ಪೊಲೀಸ್ ಠಾಣೆಯ ಪಿಎಸ್ಐ ಗೀತಾಂಜಲಿ ಸಿಂಧೆ, ನೂರ್ ಮುಹಮ್ಮದ್, ಚಂದ್ರು,  ಏರಿಸ್ವಾಮಿ ,ಪೊಲೀಸ್  ಇಲಾಖೆಯ ಸಿಬ್ಬಂದಿ  ವರ್ಗದವರು ಹಾಜರಿದ್ದರು.

*ಮನೆಮನೆಗೂ ಅಂಚೆ ಅಣ್ಣ- ವಿ. ಎಲ್, ಚಿತ್ತಕೋಟಿ*

ಇಮೇಜ್
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಚೌಡಾಪುರ ಗ್ರಾಮದಲ್ಲಿ ಬುಧವಾರ ರಂದು ನಡೆದ ರಾಷ್ಟ್ರ ಮತ್ತು ರಾಜ್ಯ ಸರ್ಕಾರಗಳು ಬಡವರಿಗೆ ಮತ್ತು ಕೂಲಿಕಾರ್ಮಿಕರಿಗೆ ವೃದ್ಯಾಪಿಗಳಿಗೆ, ಕೊಡುವ ಸೌಲಭ್ಯಗಳನ್ನು ಆಯಾ ಊರಿನ ಮನೆ ಮನೆಗೆ ತೆರಳಿ ಫಲಾನುಭವಿಗಳಿಗೆ ಮುಟ್ಟಿಸುವ ಜವಾಬ್ದಾರಿಯನ್ನು ಅಂಚೆ ಇಲಾಖೆಯ ಗ್ರಾಮೀಣ ಅಂಚೆ ನೌಕರರು ಮಾಡುವ ಕೆಲಸವನ್ನು ಜಗತ್ತಿನಲ್ಲಿ ಮತ್ತೆ ಯಾರೂ ಕೂಡ ಮಾಡಲಾರರು, ಹಳ್ಳಿ ಹಳ್ಳಿಗೂ ಸಣ್ಣ ಮಟ್ಟದ ಬ್ಯಾಂಕ್ ಆಗಿ ಸಣ್ಣ ಮಟ್ಟದ ಹೂಡಿಕೆಯಗಾರರ ಭವಿಷ್ಯದ ನಿಧಿಯಾಗಿ ಭಾರತ ದೇಶದ ಅಂಚೆ ಇಲಾಖೆ ಕೆಲಸ ಮಾಡುತ್ತಿದೆ ಎಂದು ಬಳ್ಳಾರಿ ವಿಭಾಗದ ಅಂಚೆ ಅಧ್ಯಕ್ಷರಾದ ವಿ, ಎಲ್, ಚಿತ್ತಕೋಟೆ ಇವರು ಕೂಡ್ಲಿಗಿ ಉಪ ವಿಭಾಗದ ಚೌಡಾಪುರ ಗ್ರಾಮದಲ್ಲಿ ನಡೆದ ಜನ ಸಂಪರ್ಕ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು,                    ಆಧಾರ್ ಸೌಲಭ್ಯದಿಂದ ಹಲವಾರು ಸೌಲಭ್ಯಗಳು ದೊರಕುತ್ತವೆ ಮತ್ತು ಎಲ್ಲೇ ಖಾತೆ ತೆರೆದರು ಆಧಾರ್ ಕಾರ್ಡ್ ಕಡ್ಡಾಯವಾಗಿ ಇರುತ್ತದೆ, ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕಿನ ಮೂಲಕ ಬ್ಯಾಂಕ್ ಖಾತೆಗಳಿಂದ ಹಣ ಬಿಡಿಸಿಕೊಳ್ಳುವುದು ಮತ್ತು ಅಂಚೆ ಇಲಾಖೆ ಖಾತೆಗಳಿಂದ ಹಣ ಬಿಡಿಸಿಕೊಳ್ಳುವುದು ಹಾಗೂ ಆ ಹಣವನ್ನು ಪೋಸ್ಟ್ ಆಫೀಸ್ ನ ಇತರೆ ಖಾತೆಗಳಿಗೆ ಕಟ್ಟುವುದು, ಸರ್ಕಾರದಿಂದ ಬರುವ ಎಲ್ಲಾ ಸೌಲಭ್ಯಗಳನ್ನು ಉದ್ಯೋಗ ಖಾತ್ರಿ ಯೋಜನೆಗೆ ಹಾಕಿದ ಹಣವನ್ನು ಬಿಡಿಸಿಕೊಳ್ಳುವ ವ್ಯವಸ್ಥೆಯನ್ನು ಈಗ ಅಂಚೆ ಇಲಾಖೆಯೂ ಮಾಡುತ್ತ

ಕನಕ ಜಯಂತಿಗೆ ಹಾಲುಮತ ಸಮಾಜದಿಂದ ಶಾಸಕ ಡಾ. ಶ್ರೀನಿವಾಸ್ ರಿಗೆ ಕಂಬಳಿ ಹೊದಿಸಿ ಆಹ್ವಾನ

ಇಮೇಜ್
ಕೂಡ್ಲಿಗಿ ಕ್ಷೇತ್ರದ ಹಾಲುಮತ ಸಮುದಾಯದ ಮುಖಂಡರು , ತಾಲೂಕು ಕುರುಬ ಸಂಘಟನೆಯ ಪದಾಧಿಕಾರಿಗಳು ಸಂಘ ಬುಧವಾರ ರಂದು  ಮಾನ್ಯಶಾಸಕರಾದ ಡಾ. ಶ್ರೀನಿವಾಸ್ ಎನ್. ಟಿ. ರವರ ಜನ್ಮಸ್ಥಳವಾದ ನರಸಿಂಹಗಿರಿ ಗ್ರಾಮಕ್ಕೆ ನೂರಾರು ಹಾಲುಮತ ಸಮುದಾಯದ ಮುಖಂಡರುಗಳು ತೆರಳಿ ಮತ್ತು ಸಮಾಜ ಸೇವಕರಾದ ಶಾಸಕರ ಸಹೋದರ ತಮ್ಮಣ್ಣ ಎನ್. ಟಿ. ಅವರನ್ನು  ಕಂಬಳಿ ಮೂಲಕ ಸನ್ಮಾನಿಸಿದರು. ಕೂಡ್ಲಿಗಿ ಪಟ್ಟಣದ ಚಂದ್ರಶೇಖರ ಆಜಾದ್ ರಂಗಮಂದಿರದಲ್ಲಿ  ದಿನಾಂಕ 30-11-23 ರಂದು ನಡೆಯಲಿರುವ ದಾಸಶ್ರೇಷ್ಠ ಸಂತ ಶ್ರೀ ಕನಕದಾಸರ ಅದ್ದೂರಿ ಜಯಂತ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಶಾಸಕರು ಮಾತನಾಡಿ , ಕೂಡ್ಲಿಗಿ ಕ್ಷೇತ್ರದ ಜನರ ಒಳಿತಿಗಾಗಿ ಹೋಬಳಿ ಮಟ್ಟದಲ್ಲಿ ಕಛೇರಿಯನ್ನು ತೆರೆಯುತ್ತೇವೆ.  ಹಾಗೆಯೇ ಸರ್ವ ಜನಾಂಗದ ಶಾಂತಿಯ ತೋಟವಾಗಿ ಎಲ್ಲರೂ ಅಭಿವೃದ್ಧಿ ವಿಚಾರದಲ್ಲಿ ಒಟ್ಟಾಗಿ ಹೋಗೋಣ  ಎಂದರು.  ಈ ಸಂದರ್ಭದಲ್ಲಿ ಕೂಡ್ಲಿಗಿ ಮತ ಕ್ಷೇತ್ರದ   ಹಾಲುಮತ ಸಮಾಜದ  ಮುಖಂಡರು ಹಾಗೂ ಕುರಬ ಸಂಘದ ಅಧ್ಯಕ್ಷರಾದ ಬೋಪಲಾಪುರದ ಬಸವರಾಜ,ಉಪನ್ಯಾಸಕರು ಟಿ. ದೇವಪ್ಪ, ಕೆ. ರಾಘವೇಂದ್ರ, ಕೆಂಚ ಲಿಂಗಪ್ಪ, ಮಲ್ಲಿಕಾರ್ಜುನ ಉಮೇಶ್,ಕಟ್ರಳ್ಳಿ ಬಸವರಾಜ್, ಶಿವರಾಮಪ್ಪ, ಮದ್ಯಾನಪ್ಪ, ನಾಗೇಶ್ ಮಹದೇವಪ್ಪ, ಕನಮೋಡುಗು ಭುಜಂಗಪ್ಪ ಅಂಜಿನಪ್ಪ,ಹಾಗೂ ಸಂಘದ ಪದಾಧಿಕಾರಿಗಳು  ಉಪಸ್ಥಿತರಿದ್ದರು.

*ಪಟ್ಟಣ ಪಂಚಾಯಿತಿ ವತಿಯಿಂದ*ಅಂಚೆ ವ್ಯವಸ್ಥೆ*

ಇಮೇಜ್
ಕೊಟ್ಟೂರು:ದಿನಾಂಕ: 29.11.2023 ರಂದು ಮಾನ್ಯ ಜಿಲ್ಲಾಧಿಕಾರಿಗಳ ನಿರ್ದೇಶನದದಂತೆ *" ಪಟ್ಟಣ ಪಂಚಾಯಿತಿ ಮನೆ ಬಾಗಿಲಿಗೆ "* ಕಾರ್ಯಕ್ರಮದಡಿ 4ನೇ ಹಂತವಾಗಿ Form 3 ಯನ್ನು ಮನೆ ಬಾಗಿಲಿಗೆ ವಿತರಿಸುವ ಅಭಿಯಾನ  ಕಾರ್ಯಕ್ರಮದಡಿ ಕೊಟ್ಟೂರು ಪಟ್ಟಣದ ನಾಗರೀಕ ಸೇವೆಗಳಾದ, *11 - ನಮೂನೆ-3, 02 - ಜನನ ಮತ್ತು 03 - ಮರಣ ಪ್ರಮಾಣ ಪತ್ರಗಳನ್ನು *ಅಂಚೆ ವ್ಯವಸ್ಥೆ* ಮುಖಾಂತರ ರವಾನಿಸಲಾಯಿತು.

ಜನರ ಮೂಲಭೂತ ಸೌಕರ್ಯಗಳಿಗೆ ತೊಂದರೆಯಾದರೆ ಸಹಿಸೆನು : ಶಾಸಕ ಕೆ ನೇಮಿರಾಜನಾಯ್ಕ

ಇಮೇಜ್
ಕೊಟ್ಟೂರು: ಇಡೀ ಕ್ಷೇತ್ರದಲ್ಲಿ ಜನರ ಮೂಲಭೂತ ಸೌಕರ್ಯಗಳಿಗೆ ಯಾವುದೇ ಧಕ್ಕೆ ಬಾರದಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಇಲ್ಲವಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಶಾಸಕ ನೇಮಿರಾಜನಾಯ್ಕ ಅಧಿಕಾರಿಗಳಿಗೆ ತಾಕೀತು ಮಾಡಿದರು. ಇಡೀ ಕ್ಷೇತ್ರಗಳಲ್ಲಿ ವಿದ್ಯುತ್ ಒದಗಿಸುವಲ್ಲಿ ಯಾವುದೇ ವ್ಯತ್ಯಯ ಉಂಟಾದರೆ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಅವರ ಮೇಲೆ ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಎಂದರು. ಮಂಗಳವಾರ ಪಟ್ಟಣದ ತಾಲೂಕು ಕಛೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಮಾತನಾಡಿದ ಅವರು, ಕೊಟ್ಟೂರು ತಾಲ್ಲೂಕಿನ ೧೪ ಗ್ರಾಮ ಪಂಚಾಯಿತಿಗಳಲ್ಲಿ ಜನರ ಸಮಸ್ಯೆಗಳಿಗೆ ಪೂರಕವಾಗಿ ಅಧಿಕಾರಿಗಳು ಸ್ಪಂದಿಸಬೇಕು ಎಂದರು. ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಪಿಡಿಓಗಳಿಂದ ಮುಂದಿನ ಮಾರ್ಚ್ ಏಪ್ರಿಲ್ ವರೆಗೆ ನೀರಿನ ಬರವಿದ್ದು, ಇರುವ ಅನುದಾನವನ್ನು ಸಮರ್ಪಕವಾಗಿ ಜನರ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಬಳಸಬೇಕು ಎಂದರು. ಸರ್ಕಾರದಿಂದ ನಯಾಪೈಸೆಯ ಅನುದಾನವು ಸಿಗದ ಪರಿಸ್ಥಿತಿಯಿದೆ. ಆದ್ದರಿಂದ ಇರುವ ಅನುದಾನದಲ್ಲೇ ಸರಿಯಾಗಿ ಬಳಸಬೇಕು ಎಂದರು. ಕೊಟ್ಟೂರು ಪಟ್ಟಣದಲ್ಲಿ ಸುಮಾರು ೩೨೦೦೦ ಜನಸಂಖ್ಯೆಯ ಮಾಹಿತಿ ಪಡೆದು ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ಇದನ್ನು ಸರಿಪಡಿಸಬೇಕೆಂದು ಮುಖ್ಯಾಧಿಕಾರಿಗಳಿಗೆ ತಿಳಿಸಿದರು. ಶುದ್ಧ ಕುಡಿಯುವ ನೀರಿನ ಘಟಕಗಳ ಮಾಹಿತಿ

ತಾಲೂಕು ಪಂಚಾಯಿತಿ ಗ್ರೇಡ್-೧ ಕಾರ್ಯದರ್ಶಿಯವರಾದ ರೂಪಾ , ಡಾಟಾ ಎಂಟ್ರಿ ಆಪರೇಟರ್ ಮೋಹನ್ ವರ್ಗಾವಣೆ

ಇಮೇಜ್
 "ನಮ್ಮ ಪ್ರಜಾ ಸಾಕ್ಷಿ ವರದಿ ಫಲಶ್ರುತಿ" ಕೊಟ್ಟೂರು: ತಾಲೂಕು ಪಂಚಾಯಿತಿಯ ಪ್ರಗತಿ ಪರಿಶೀಲನಾ ಸಭೆಯನ್ನು ಶಾಸಕರು ಮಂಗಳವಾರ ರಂದು ಕರೆಯಲಾಗಿತ್ತು.ನಂತರ ಇತ್ತೀಚೆಗೆ ಕೊಟ್ಟೂರು ತಾಲ್ಲೂಕು ಪಂಚಾಯಿತಿಯಲ್ಲಿ ಲಂಚದ ಆರೋಪ ಕೇಳಿಬಂದಿರುವ  ಹಿನ್ನೆಲೆಯಲ್ಲಿ ಆಡಳಿತಾತ್ಮಕ ದೃಷ್ಟಿಯಿಂದ  ಗ್ರೇಡ್-೧ ಕಾರ್ಯದರ್ಶಿಯವರಾದ ರೂಪ ಮತ್ತು ಡಾಟಾ ಎಂಟ್ರಿ ಆಪರೇಟರ್ ಮೋಹನ್ ರವರನ್ನು ವರ್ಗಾವಣೆ 22.11/2023 ರಂದು ಆದೇಶ ಹೊರಡಿಸಿದ್ದಾರೆ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ  ಕಾರ್ಯಾಲಯ ವಿಜಯನಗರ ಜಿಲ್ಲಾ ಪಂಚಾಯಿತಿಯಿಂದ ವರ್ಗಾವಣೆ ಆದೇಶ ಹೊರಡಿಸಿದ್ದಾರೆ. ಗ್ರೇಡ್ ಒನ್ ಕಾರ್ಯದರ್ಶಿಯಾದ ರೂಪ ವರ್ಗಾವಣೆ  ಗ್ರೇಡ್ ಒನ್ ಕಾರ್ಯದರ್ಶಿಯಾದ ರೂಪ ಅವರನ್ನು ತಾಲೂಕಿನ ಕೆ.ಅಯ್ಯನಹಳ್ಳಿ ಪಂಚಾಯಿತಿಗೆ ಹಾಗೂ ಡಾಟಾ ಆಪರೇಟರ್ ಮೋಹನ್‌ರವರನ್ನು ಕೂಡ್ಲಿಗಿಗೆ ವರ್ಗಾವಣೆ ಮಾಡಿದ್ದಾರೆ.  ಡಾಟಾ ಎಂಟ್ರಿ ಆಪರೇಟರ್ ಮೋಹನ್ ಕುಮಾರ್  ಪತ್ರಿಕೆ ವರದಿಗಳು, ಸಾರ್ವಜನಿಕರು ಹಾಗೂ ಸಂಘಟನೆಗಳ ದೂರಿನ ಆಧಾರದ ಮೇಲೆ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ವರ್ಗಾವಣೆ ಮಾಡಿ ಆದೇಶಿಸಿದ್ದಾರೆ. ಎಂದು ಮಂಗಳವಾರ ಸಭೆಯಲ್ಲಿ ಪತ್ರಕರ್ತರಿಗೆ ತಿಳಿಸಿದರು. ರೂಪ ಹಾಗೂ ಮೋಹನ್‌ರವರಿಗೆ ಸರಿಯಾಗಿ ಕೆಲಸ ನಿರ್ವಹಿಸಿ, ಸರ್ಕಾರಿ ಕೆಲಸ ಎಲ್ಲರಿಗೂ ದೊರೆಯತಕ್ಕದಲ್ಲ ದೊರೆತಿರುವ ಕೆಲಸವನ್ನು ಸರಿಯಾಗಿ ನಿರ್ವಹಿಸಿ .ಎಂದು ಶಾಸಕ ನೇಮಿರಾಜನಾಯ್ಕ ತಿಳಿಸಿದರು. ಈ ಹಿಂದೆ ಪಶು ಇಲಾಖೆ

ನಿವೇಶನ ಮಂಜೂರಾತಿ ಪತ್ರ ನೀಡಲು ಕರವೇ ಮನವಿ

ಇಮೇಜ್
ಮಸ್ಕಿ : 2021-22ನೇ ಸಾಲಿನಲ್ಲಿ ಡಾ.ಅಂಬೇಡ್ಕರ್ ವಸತಿ ಯೋಜನೆಯಡಿ ನಿವೇಶನ ಪಡೆದ ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಹಾಗೂ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿ ಕರವೇ ಕಾರ್ಯಕರ್ತರು ಸೋಮವಾರ ತಲೇಖಾನ್ ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ತಾಲೂಕಿನ ತಲೇಖಾನ ಗ್ರಾಮ ಪಂಚಾಯಿತಿ ಮುಂಭಾಗ ಫಲಾನುಭವಿಗಳು ಕರವೇ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಗ್ರಾಮ ಪಂಚಾಯಿತಿಗೆ ಹೆಚ್ಚುವರಿ ಮನೆಗಳನ್ನು ಆಯ್ಕೆ ಮಾಡಲಾಯಿತು. ಆದರೆ, ಇದುವರೆಗೂ ಅನುಮೋದನೆ ಪತ್ರ ನೀಡಿಲ್ಲ. ಕರವೇ ತಾಲೂಕು ಘಟಕದ ಅಧ್ಯಕ್ಷ ಮಾತನಾಡಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಆಯ್ಕೆಯಾದ ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಳ್ಳಲು ಅನುಮತಿ ನೀಡುತ್ತಿಲ್ಲ ಎಂದು ಕರವೇ ತಾಲೂಕ ಅಧ್ಯಕ್ಷ ದುರ್ಗರಾಜ ವಟಗಲ್ ಆರೋಪಿಸಿದರು. ಕೆಲವು ಫಲಾನುಭವಿಗಳು ಮನೆ ನಿರ್ಮಿಸಿಕೊಂಡಿದ್ದಾರೆ. ಅಭಿವೃದ್ಧಿ ಅಧಿಕಾರಿಗಳು ಅದರ ಜಿಪಿಎಸ್ ಫೋಟೋಗಳನ್ನು ಅಪ್‌ಲೋಡ್ ಮಾಡುತ್ತಿಲ್ಲ. ಫಲಾನುಭವಿಗೆ ಮನೆ ಕಟ್ಟಿಕೊಳ್ಳಲು ಅವಕಾಶ ನೀಡದಿದ್ದರೆ ಕೂಡಲೇ ಆದೇಶ ಪ್ರತಿ, ಜಿಪಿಎಸ್, ಫೋಟೋ ಅಪ್ಲೋಡ್ ಮಾಡಿ ಮನೆ ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಡಿ ಇಲ್ಲವೇ ನಮ್ಮ ಸಂಘಟನೆಯ ವತಿಯಿಂದ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.  ಬಾಕ್ಸ್ ಸುದ್ದಿ ಫಲಾನುಭವಿಗಳಿಗೆ ನಿವೇಶನ ಮಂಜೂರಾತಿ ಪತ್ರ ವಿತರಣೆ.ತಲೇಖಾನ್ ಗ್ರಾ.ಪಂ ಕಾರ್ಯದರ್ಶಿ ತಾಮಸ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ

"ರಾಜಕೀಯದಲ್ಲಿ ನಾನು ವಿದ್ಯಾರ್ಥಿ ನಾನು ಅನುಭವಿ ರಾಜಕಾರಣಿಯಲ್ಲ "

ಇಮೇಜ್
  ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ತೂಲಹಳ್ಳಿ ಗ್ರಾಮ ಪಂಚಾಯಿತಿಗೆ ಶಾಸಕರಾದ ಎನ್‌ ಟಿ ಶ್ರೀನಿವಾಸ್ ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ಅವಲೋಕನ ನಡೆಸಿದರು "ರಾಜಕೀಯದಲ್ಲಿ ನಾನು ವಿದ್ಯಾರ್ಥಿ ನಾನು ಅನುಭವಿ ರಾಜಕಾರಣಿಯಲ್ಲ " ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಉಜ್ಜಿನಿ ಜಿಲ್ಲಾ ಪಂಚಾಯಿತಿಗೆ ಶೇಕಡ 70ರಷ್ಟು ಅನುದಾನ ಮೀಸಲಿಟ್ಟಿದ್ದೇವೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯಲ್ಲಿ ರಸ್ತೆ ಶಿಕ್ಷಣ ಆರೋಗ್ಯಕ್ಕೆ ಹೆಚ್ಚು ಹೊತ್ತು ನೀಡಲಿದ್ದೇವೆ ಯಾವುದೇ ಪಕ್ಷ ಜಾತಿ ಪ್ರದೇಶ ನೋಡದೆ ಸರ್ವರ ಅಭಿವೃದ್ಧಿಗೆ ಕೈಜೋಡಿಸುವುದು ನನ್ನ ಗುರಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಕೊನೆ ಗಡಿಭಾಗದಲ್ಲಿ ಇರುವ ಗ್ರಾಮಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತೇನೆ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಭೇದ ಭಾವ ತಾರತಮ್ಯ ಮಾಡುವುದಿಲ್ಲ ತಮ್ಮ ಪರವಾಗಿ ಸದಾಕಾಲ ಕಾರ್ಯನಿರ್ವಹಿಸುತ್ತೇನೆ. ಅಭಿವೃದ್ಧಿಯ ದೃಷ್ಟಿಯಿಂದ ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ವಾಟ್ಸಪ್ ಗ್ರೂಪ್ ಮಾಡಲಾಗಿದೆ ಅದರಲ್ಲಿ ತಮ್ಮ ಕಷ್ಟಗಳನ್ನು ಹಂಚಿಕೊಳ್ಳಿ ಅದಕ್ಕೆ ನಾನು ನ್ಯಾಯ ದೊರಕಿಸಿ ಕೊಡುತ್ತೇನೆ ಉಜ್ಜಿನಿ ಮತ್ತು ತೂಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ ಮಾಡುತ್ತೇನೆ ಸರ್ಕಾರಿ ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ಅದಕ್ಕೆ ತಕ್ಕಂತೆ ಪರಿಹಾರ ಕಂಡುಕೊಳ್ಳುವ ಅದರ ಮೂಲಕ ಜನರ ಕಷ್ಟಗಳಿಗೆ ಶ್ರಮಿಸುತ್ತೇನೆ ಎಂದು ಸಾರ್ವಜನಿಕರಲ್ಲಿ

ಶಿಕ್ಷಣ ಸಂಸ್ಥೆಗಳು ದೇಶ ಕಟ್ಟುವ ವ್ಯಕ್ತಿತ್ವವನ್ನು ರೂಪಿಸಬೇಕು. ಶಾಸಕ- ಡಾ. ಶ್ರೀನಿವಾಸ್ ಎನ್. ಟಿ.

ಇಮೇಜ್
ಕೊಟ್ಟೂರು ತಾಲೂಕು ನಾಗರಕಟ್ಟೆ ಗ್ರಾಮದಲ್ಲಿ ಕನ್ನಡದ ತೇರ ಎಳೆಯೋಣ ಬಾರಾ ಪ್ರತಿ ವರ್ಷದಂತೆ ಈ ವರ್ಷವೂ ಸಹ ಅದ್ದೂರಿಯಾಗಿ ಶಾಲಾ ಮಕ್ಕಳಿಂದ ತಾಯಿ ಭುವನೇಶ್ವರಿಯ ಭಾವಚಿತ್ರದೊಂದಿಗೆ ಮೆರವಣಿಗೆ ಮಾಡಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು. ಕೂಡ್ಲಿಗಿ ಮತ ಕ್ಷೇತ್ರದ ನಾಗರಕಟ್ಟೆಯ ಶ್ರೀ ಸಾವಜ್ಜಿ ಗುರುಸಿದ್ದನ ಗೌಡ್ರು ಸುಮಂಗಲಮ್ಮನವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ಶ್ರೀ ಎಸ್ . ವಿ. ಎಸ್. ಬಿ. ಪ್ರೌಢಶಾಲೆ ವತಿಯಿಂದ ಕನ್ನಡ ರಾಜ್ಯೋತ್ಸವ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಾನ್ಯಶಾಸಕರಾದ ಡಾ. ಶ್ರೀನಿವಾಸ್ ಎನ್. ಟಿ. ಅವರು  ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.   ಶಿಕ್ಷಕರು,ವೈದ್ಯರು , ವಿಜ್ಞಾನಿಗಳು,ವಕೀಲರು  ಸಮಾಜದಲ್ಲಿ ಯುವ ಸಮುದಾಯಕ್ಕೆ ಸ್ಪೂರ್ತಿ. ಎಲ್ಲರೂ ಒಂದೇ ವೇದಿಕೆಯಲ್ಲಿ ಒಟ್ಟಿಗೆ ಪಾಲ್ಗೊಂಡಿರುವುದು ಹೆಮ್ಮೆಯ ವಿಚಾರ.ಈ ಭಾಗದ ಹಿರಿಯ ರಾಜಕೀಯ ಮುಖಂಡರಾದ ನಾಗರಕಟ್ಟೆ ರಾಜಣ್ಣನವರು ಇಂತಹ  ಮಹತ್ವದ ಕಾರ್ಯಕ್ರಮವನ್ನು  ರೂಪಿಸಿದಕ್ಕೆ ಅವರನ್ನು  ಈ ವೇದಿಕೆ ಮೂಲಕ  ಅಭಿನಂಧಿಸುತ್ತೇನೆ ಎಂದರು.   ಪ್ರಾಥಮಿಕ ಮತ್ತು ಪ್ರೌಢಶಾಲೆ  ಹಂತದಲ್ಲಿ ಶಿಕ್ಷಣ ಸಂಸ್ಥೆಗಳು  ದೇಶ ಕಟ್ಟುವಂತಹ ವ್ಯಕ್ತಿತ್ವವನ್ನು  ರೂಪಿಸುವ ಮುಖ್ಯ ಪಾತ್ರ ವಹಿಸಬೇಕು. ಸಮಾಜದಲ್ಲಿ ಸುಳ್ಳು ಹೇಳದೆ  ಸತ್ಯ, ನ್ಯಾಯ ಮತ್ತು ನಿಷ್ಠೆಯಿಂದ ನಡೆಯುವ  ವ್ಯಕ್ತಿತ್ವ ಸೃಷ್ಟಿಯಾಗಬೇಕು. ಅವರವರ  ಸಾಧನೆಗಳು ಮಾತನಾಡುವಂತ

ಸಂವಿಧಾನ ಸಮರ್ಪಣಾ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮ ಯಶಸ್ವಿ

ಇಮೇಜ್
ಮಸ್ಕಿ ತಾಲೂಕಿನ ಹಾಲಾಪೂರ ಗ್ರಾಮದ ಜನನಿ ಪದವಿ ಪೂರ್ವ ಕಾಲೇಜ್ ನಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಕವಿತಾಳ ಪಿಎಸ್ಐ ಜಿ.ಪಂಪಣ್ಣ ಮಾತನಾಡಿ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನವನ್ನು ನಿರಂತರವಾಗಿ ಮತ್ತು ನಿಷ್ಠೆಯಿಂದ ಅಧ್ಯಯನ ಮಾಡಬೇಕು,ಸತತ ಓದು,ಕಠಿಣ ಅಭ್ಯಾಸದಿಂದ ಭವಿಷ್ಯದಲ್ಲಿ ಉನ್ನತವಾದ ಹುದ್ದೆಯನ್ನು ಪಡೆದು ದೇಶಕ್ಕೆ ನಿಮ್ಮದೆ ಆದ ಕೊಡುಗೆ ಕೊಡಿ ಎಂದು ಹೇಳಿದರು. ಅದೇ ರೀತಿಯಲ್ಲಿ ಹಾಲಾಪೂರ ಗ್ರಾಮ ಪಂಚಾಯತಿ ಪಿಡಿಒ ವಿಶ್ವನಾಥ ರವರು ಮಾತನಾಡುತ್ತಾ ಸಂವಿಧಾನ ನಮ್ಮ ದೇಶದ ಮಹಾನ್ ಸಂಪತ್ತು, ಹೀಗಾಗಿ ನಾವೆಲ್ಲರೂ ನಿರಂತರವಾಗಿ ಸಂವಿಧಾನ ಅಧ್ಯಯನ ಮಾಡಿ ಕಾಯ್ದೆ ಕಾನೂನು ರೀತಿ ನೀತಿಗಳನ್ನು ತಿಳಿದು ಭವ್ಯ ಭಾರತದ ಉತ್ತಮ ಪ್ರಜೆಗಳಾಗಬೇಕು ಎಂದು ಪಿಡಿಒ ವಿಶ್ವನಾಥ ಹೇಳಿದರು.  ಈ ಸಂದರ್ಭದಲ್ಲಿ ಕಾಲೇಜ್ ಪ್ರಾಚಾರ್ಯರಾದ ನಾಗೇಶ ಜಂಗಮರಹಳ್ಳಿ, ಎ ಎಸ್ ಐ ಆಂಜನೇಯ ಉಪ ಪ್ರಾಚಾರ್ಯರಾದ ಸಿದ್ದಾರ್ಥ ಪಾಟೀಲ್ ಉಪನ್ಯಾಸಕರಾದ ಮರಿಸ್ವಾಮಿ,ಪರಪ್ಪ ಬಂಡಾರಿ, ವಿರೇಶ , ಯುನಿಸ್ ಅಕ್ರಮ, ದಿವ್ಯಾ ಕುಮಾರಿ, ಗ್ರಾಮ ಪಂಚಾಯತಿ ಸದಸ್ಯರಾದ ಆಬೆಲ್ ರಾಜ್ ,ಚಂದಪ್ಪ ಇತರರು ಇದ್ದರು.

ಯುವಕರು ಉನ್ನತ ಶಿಕ್ಷಣ ಪಡೆದು ಸ್ವಾವಲಂಬಿ ಜೀವನ ನಡೆಸಲು ಕರೆ : ಸುರೇಶ್ ಭೂಮರೆಡ್ಡಿ

ಇಮೇಜ್
 ವರದಿ : - ಮಂಜುನಾಥ್ ಕೋಳೂರು, ಕೊಪ್ಪಳ             ಕೋಪ್ಪಳ ನವಂಬರ್ 26 :-  ನಗರದ ಕಿನ್ನಾಳ ರಸ್ತೆಯಲ್ಲಿರುವ ಬಿ.ಎಸ್ಪಿ ಕಾಂಫಟ್೯  ಹೋಟೆಲ್ ಸಭಾಂಗಣದಲ್ಲಿ              ಕನಾ೯ಟಕ ದಲಿತ ಸಂಘಷ್೯ ಸಮಿತಿ ಭಿಮವಾದ ವತಿಯಿಂದ ಸಂವಿಧಾನ ಸಮರ್ಪಣ ದಿನಾಚರಣೆಯ ಅಂಗವಾಗಿ ಶೋಷಿತರ ವಿಮೋಚನೆಗಾಗಿ ಹಾಗೂ ಸಂವಿಧಾನ ಉಳಿವಿಗಾಗಿ ಜಾಗೃತಿ ಸಮಾವೇಶ  "ಸಂವಿಧಾನ ದಿನಾಚರಣೆ" ಕಾರ್ಯಕ್ರಮವನ್ನು ಭಾನುವಾರ ಆಚರಿಸಲಾಯಿತು.   ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ                      ಜಿಲ್ಲಾ ಗುತ್ತೇದಾರರ ಸಂಘದ ಅಧ್ಯಕ್ಷ ಸುರೇಶ್ ಭೂಮರೆಡ್ಡಿ ಅವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ  ಮಾಲಾರ್ಪಣೆ ಮಾಡಿ ಪುಜೆ ಸಲ್ಲಿಸುವ ಮೂಲಕ ಕಾಯ೯ಕ್ರಮಕ್ಕೆ ಚಾಲನೆ ನೀಡಿದರು.                                              ಬಳಿಕ ಮಾತನಾಡಿದ ಅವರು, ಯುವಕರು ಮೊದಲು ಶಿಕ್ಷಣಕ್ಕೆ ಆದ್ಯತೆ  ಕೊಟ್ಟು   ಉನ್ನತ ಮಟ್ಟದ ವಿದ್ಯಾಭ್ಯಾಸವನ್ನು  ಮುಗಿಸಿ  ಪ್ರಮುಖ ಹುದ್ದೆಗಳಾದ ಐ.ಎ.ಎಸ್ , ಐ.ಪಿ.ಎಸ್ ,  ಗಳಂತ  ಉನ್ನತ ಹುದ್ದೆಗಳನ್ನು ಪಡೆದುಕೊಂಡು  ಸಾರ್ವಜನಿಕರ ವಲಯದಲ್ಲಿ ಕೆಲಸವನ್ನು ಮಾಡುತ್ತ . ಬಡವರ , ಕೂಲಿ ಕಾರ್ಮಿಕರ , ಶೋಷಣೆ ಗೋಳಪಟ್ಟವರ , ತುಳಿತಕೊಳಗಾದವರ , ಕೆಳ ವರ್ಗದವರ  ಮಕ್ಕಳನ್ನು ಶೈಕ್ಷಣಿಕ , ಆರ್ಥಿಕ , ಸಾಮಾಜಿಕವಾಗಿ   ಸಹಾಯ ಹಸ್ತ ಚಾಚಿ ಅವರನ್ನು  ಸಮಾಜಮುಖಿಯಾಗಿ ಮೇಲೆತ್ತುವ ಮುಖಾಂತರ  ಅವರನ್ನು ಸಾವಲ

ಸಂವಿಧಾನ ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ : ಮಲ್ಲಪ್ಪ ಎಸ್ ಗೋನಾಳ್ಕರ್

ಇಮೇಜ್
ಮಸ್ಕಿ : ದೇಶದ ಸಾರ್ವಭೌಮತೆ ಹಾಗೂ ಪ್ರಜೆಗಳ ಹಕ್ಕುಗಳ ರಕ್ಷಣೆ ಸಂವಿಧಾನದಿಂದ ಮಾತ್ರ ಸಾಧ್ಯವಾಗಿದೆ. ಸಂವಿಧಾನ ಜನರ ಜೀವನಾಡಿಯಾಗಿದ್ದು, ಪ್ರತಿಯೊಬ್ಬ ಭಾರತೀಯನೂ ಸಂವಿಧಾನವನ್ನು ಗೌರವಿಸಬೇಕು ಎಂದು ದಲಿತ ಮುಖಂಡರಾದ ಮಲ್ಲಪ್ಪ ಎಸ್ ಗೋನಾಳ್ಕರ್ ಅವರು ತಿಳಿಸಿದರು. ಗೋನಾಳ ಗ್ರಾಮದಲ್ಲಿ ನಡೆದ "ಸಂವಿಧಾನ ಸಮರ್ಪಣಾ ದಿನ ಹಾಗೂ ಪ್ರತಿಜ್ಞಾ ವಿಧಿ ಬೋಧನಾ ಕಾರ್ಯಕ್ರಮ"ದಲ್ಲಿ ಸಂವಿಧಾನ ಶಿಲ್ಪಿ ಬಿ.ಆ‌ರ್. ಅಂಬೇಡ್ಕ‌ರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯ ಪೂರ್ವದಿಂದಲೂ ದೇಶಕ್ಕೆ ಉತ್ತಮ ಕಾನೂನಿನ ಅವಶ್ಯ ಹಿನ್ನೆಲೆ, ಸಂವಿಧಾನ ಶಿಲ್ಪಿ ಡಾ. ಬಿ.ಆ‌ರ್.ಅಂಬೇಡ್ಕ‌ರ್ ನೇತೃತ್ವದಲ್ಲಿ ಸಂವಿಧಾನ ರಚನೆಯಾಗಿದ್ದು, ಅಭಿನಂದನಾರ್ಹ ಎಂದರಲ್ಲದೆ, ವಿಶ್ವದ ಹಲವಾರು ಲಿಖಿತ ಮತ್ತು ಅಲಿಖಿತ ಸಂವಿಧಾನಗಳನ್ನು ಅಧ್ಯಯನ ಮಾಡುವ ಮೂಲಕ ನಮ್ಮ ದೇಶಕ್ಕೆ ಬೇಕಾದಂತಹ ಕಾನೂನುಗಳನ್ನು ಅಳವಡಿಸಿಕೊಂಡು ಜನರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಮೇಲೆತ್ತಲು ಭಾರತದ ಸಂವಿಧಾನ ಸಹಕಾರಿಯಾಗಿದೆ ಎಂದರು. ಈ ವೇಳೆ,ಮಲ್ಲಯ್ಯ ಪೂಜಾರಿ,ಚಿನ್ನಗೌಡ ಮಾಲಿ ಪಾಟೀಲ್, ಮಲ್ಲಣ್ಣಗೌಡ ಗ್ರಾ.ಪ.ಸದಸ್ಯರು,ದುರ್ಗಸಿಂಗ್,ಶರಣಬಸವ ಎಸ್ ,ಶಿಕ್ಷಕರು, ಡಾ.ಮಲ್ಲನಗೌಡ, ಅನ್ವರ್ ಪಾಷ,ಶಂಕರ್, ಕರಿಬಸವ, ಬಸವರಾಜ ಮಡಿವಾಳ,ಮಲ್ಲಯ್ಯ ಗೋನಾಳ, ಹುಚ್ಚಪ್ಪ ಗೋನಾಳ,ಹಾಗೂ ಇತರರು ಇದ್ದರು.

ಸಂವಿಧಾನದ ಸಮರ್ಪಣಾ ದಿನಾಚರಣೆ

ಇಮೇಜ್
ಮಸ್ಕಿ : ಭಾನುವಾರ ಮಸ್ಕಿ ಪಟ್ಟಣದಲ್ಲಿ ಸಂವಿಧಾನ ಸಮರ್ಪಣಾ ದಿನದ ನಿಮಿತ್ಯ  ಡಾ.ಬಿ.ಆರ್.ಅಂಬೇಡ್ಕರ್ ರವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಸಂವಿಧಾನದ ಪೀಠಿಕೆ ಓದುವುದರ ಮೂಲಕ ಸಂವಿಧಾನದ ಸಮರ್ಪಣಾ ದಿನಾಚರಣೆಯ ಆಚರಿಸಿಲಾಯಿತು. ಪಟ್ಟಣದ ಕಾಂಗ್ರೇಸ್ ಕಾರ್ಯಾಲಯ ಮತ್ತು ಶಾಸಕರ ಕಾರ್ಯಾಲಯದಲ್ಲಿ ಬಾಬಾ ಸಾಹೇಬ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಫೋಟೊಗೆ ಪುಷ್ಪ ಹಾಕುವುದರ ಮೂಲಕ ನಮನ ಸಲ್ಲಿಸುವ ಸಂವಿಧಾನದ ಸಮರ್ಪಣಾ ದಿನಾಚರಣೆ ಸರಳ ಕಾರ್ಯಕ್ರಮ ಮಸ್ಕಿ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಆರ್. ಬಸನಗೌಡ ತುರುವಿಹಾಳ್ ರವರ ನೇತೃತ್ವದಲ್ಲಿ ಜರಗಿತು. ಇದೆ ಸಂದರ್ಭದಲ್ಲಿ ಗ್ರಾಮೀಣ ಘಟಕದ ಅಧ್ಯಕ್ಷರಾದ ಹನುಮಂತಪ್ಪ ಮುದ್ದಾಪುರ,ಕಿಸಾನ್ ಘಟಕದ ಅಧ್ಯಕ್ಷರಾದ ಮೈಬೂಬ ಸಾಬ್ ಮುದ್ದಾಪುರzಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಶ್ರೀಶೈಲಪ್ಪ ಬ್ಯಾಳಿ,ಕರಿಯಪ್ಪ ಮೆಡಿಕಲ್, ಮಲ್ಲಯ್ಯ ಮುರಾರಿ ಎಸ್.ಸಿ ಮೋರ್ಚಾ,ಭೀಮಣ್ಣ ಉಪ್ಪಲದೊಡ್ಡಿ, ಹುಲುಗಪ್ಪ ಉಪ್ಪಲದೊಡ್ಡಿ, ಸಬ್ಬೀರ್,ಆನಂದ ಜೋಗಿನ, ಕೃಷ್ಣಾ ಚಿಗಿರಿ, ಸಿದ್ದು ಮುರಾರಿ, ಮಲ್ಲಯ್ಯ ನಾಗರಾಳ್,ಶ್ರೀ ಶರಣಪ್ಪ ಹೂಗಾರ್, ಗಂಗಾಧರ್ ಮುರಾರಿ ಹಾಗೂ ಪಕ್ಷದ ಮುಖಂಡರು ಭಾಗಿಯಾಗಿದ್ದರು.

ಕೆಎಸ್‌ಆರ್‌ಟಿಸಿ ಚಾಲಕನ ವಿರುದ್ಧ ಪ್ರಕರಣ ದಾಖಲು

ಇಮೇಜ್
ಕೊಟ್ಟೂರು: ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕನ ನಿರ್ಲಕ್ಷದಿಂ ದ ಪ್ರಯಾಣಿಕ ಬಸವರಾಜಪ್ಪ ನವರಿಗೆ ಎಡ ಭಾಗದ ಚಕ್ರ ತಗುಲಿ ತೀವ್ರ ಗಾಯಗೊಂಡಿದೆ ಇದರ ಸಂಬಂಧ ಚಾಲಕನ ವಿರುದ್ಧ ಕೊಟ್ಟೂರು ಪೊಲೀ ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕ ಬಸವರಾಜಪ್ಪ ಗ್ರಾಮ ನಡುಮಾವಿನಹಳ್ಳಿ ಇವರು ಭಾನುವಾರ ಸಂಡೂರು ತಾಲೂಕಿನ ಹೊಸಹಳ್ಳಿ ಯಲ್ಲಿ ಇರುವ ಮಗಳನ್ನು ನೋಡಿಕೊಂಡು ಬರುವ ಸಂಬಂಧ ಬೆಳ್ಳಿಗೆ 11-45 ಸುಮಾರಿಗೆ ಕೊಟ್ಟೂರು ಬಸ್‌ ನಿಲ್ದಾಣ ಕ್ಕೆ ಬಂದು ಬಸ್ ನಂಬರ್ ಕೆ. ಎ 35 ಎಫ್ 353 ಸಂಖ್ಯೆ ವುಳ್ಳ ಬಸ್ ನ್ನು ಹತ್ತಲು ಮುಂದಾಗುವಾಗ ಚಾಲಕನ ಅಕ್ಕ ಪಕ್ಕ ಪ್ರಯಾಣಿಕರನ್ನು ಗಮನಿಸದೆ ಅತೀ ವೇಗದ ಮತ್ತು ಬೇಜವಾಬ್ದಾರಿ ಚಾಲನೆ ಮಾಡಿದ್ದರಿಂದ ಬಸವ ರಾಜಪ್ಪನಿಗೆ ಎಡ ಭಾಗದ ಗಾಲಿ ತಗುಲಿ ತೊಡೆಗೆ ಹಾಗೂ ಮೂತ್ರ ಸ್ಥಾನಕ್ಕೆ ಬಲವಾದ ಪೆಟ್ಟು ಬಿದ್ದು ತೀವ್ರ ಗಾಯಗೊಂಡಿದ್ದಾನೆ ಎಂದು ಆರೋಪಿತನ ಮೇಲೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ, ಸಂವಿಧಾನ ಪೀಠಿಕೆ ಓದಿ ನಮನ ಸಲ್ಲಿಕೆ

ಇಮೇಜ್
ಕೊಟ್ಟೂರು: ಪಟ್ಟಣದ ಪೊಲೀಸ್ ಠಾಣೆಯಲ್ಲಿ ನವಂಬರ್ 26 ಸಂವಿಧಾನ ದಿನಾಚರಣೆ ಅಂಗವಾಗಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹಾಗೂ ಸಂವಿಧಾನ ಪೀಠಿಕೆಯನ್ನು ಓದುವುದರ ಮೂಲಕ ನಮನವನ್ನು ಸಲ್ಲಿಸಲಾಯಿತು. ಸಂವಿಧಾನ ರಚಿಸುವ ಪೂರಕವಾಗಿ 13 ಸಮಿತಿಗಳನ್ನು ರಚಿಸಲಾಯಿತು ಇದರಲ್ಲಿ 7 ಸದಸ್ಯರುಗಳನ್ನು ನೇಮಕ ಮಾಡಲಾಯಿತು ಅದರಲ್ಲಿ ಸಂವಿಧಾನದ ಮೂಲ ಕರುಡು ರಚನ ಸಮಿತಿ ಅಧ್ಯಕ್ಷರನ್ನಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಆಯ್ಕೆಮಾಡಲಾಯಿತು ದಿನದಲ್ಲಿ 18 ಗಂಟೆಗಳ ಕಠಿಣ ಶ್ರಮ ದಿಂದ ನೊಂದವರ ಪಾಲಿಗೆ ಬೆಳಕಾಗುವಂತೆ 2 ವರ್ಷ 11ತಿಂಗಳು 18 ದಿನಗಳ ಕಾಲ ಸಂವಿಧಾನ ಎನ್ನುವ ಅದ್ಭುತ ವಾದ ಶಿಲ್ಪವನ್ನು ನಿರ್ಮಿಸಿ ಭಾರತದ ಸಂವಿಧಾನ ಶಿಲ್ಪಿಯಾಗಿ ಡಾ. ಬಿ. ಆರ್ ಅಂಬೇಡ್ಕರ್ ರವರು ಹೊರಹೊಮ್ಮಿದರು ಎಂದು ಎಎಸ್‌ಐ ಚಂದ್ರಪ್ಪ ನವರು ಮಾತನಾಡಿದರು. ಭಾರತದ ಸಂವಿಧಾನ ಸರ್ವ ಜನರಿಗೂ ಸರಿಸಮನವಾದ ಹಕ್ಕು ನೀಡಿರುವ ಜಗತ್ತಿನ ಅತೀ ದೊಡ್ಡ ಲಿಖಿತ ಸಂವಿಧಾನ ಇದನ್ನು ಪ್ರತಿ ಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆಯಬೇಕು ಎಂದು ಪೊಲೀಸ್ ಕಾನ್ಸೆಬಲ್ ವಿಷ್ಣುರವರು ಮಾತನಾಡಿದರು. ಪೊಲೀಸ್ ಪೇದೆಗಳಾದ ಚಂದ್ರಮೌಳಿ ನಾಗರಾಜ್, ರಾಜೇಂದ್ರ, ಬಸವನಗೌಡ, ನೂರು ಅಹಮದ್, ಮಂಜಮ್ಮ, ಹಾಗೂ ಸಿಬ್ಬಂದಿ ವರ್ಗದವರು ಇದ್ದರು.

ಅಖಲ ಕರ್ನಾಟಕ ಕುಳುವ ಮಹಾಸಂಘಕ್ಕೆ ಸಿಂದನೂರ ಜಿಲ್ಲಾ ಅಧ್ಯಕ್ಷರಾಗಿ:-ಶ್ರೀ ಹುಲುಗಪ್ಪ ತುರಡಗಿ ಆಯ್ಕೆ

ಇಮೇಜ್
ಸಿಂದನೂರ: ಅಖಲ ಕರ್ನಾಟಕ ಕುಳುವ ಮಹಾಸಂಘ (ರಿ) ಬೆಂಗಳೂರು ರಾಜ್ಯಾಧ್ಯಕ್ಷರಾದ ಶ್ರೀ ಶಿವಾನಂದ ಭಜಂತ್ರಿ ಅವರು ಆದೇಶದ ಮೇರೆಗೆ ದಿನಾಂಕ -26/11/2023 ರವಿವಾರ ರಂದು ಸಿಂಧನೂರ ಸರ್ಕಿಟ ಹೌಸ್ ನಲ್ಲಿ ರಾಯಚೂರ ಜಿಲ್ಲೆಯ ಎಲ್ಲಾ ತಾಲೂಕುಗಳು ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಸಮ್ಮುಖದಲ್ಲಿ ರಾಜ್ಯ ಉಪಾಧ್ಯಕ್ಷರಾದ ಶ್ರೀ ನೀಲಕಂಠಪ್ಪ ಭಜಂತ್ರಿ ಮಸ್ಕಿ ಇವರ ಅಧ್ಯಕ್ಷತೆಯಲ್ಲಿ ಅಖಿಲ ಕರ್ನಾಟಕ ಕುಳವ ಮಹಾಸಂಘದ ರಾಯಚೂರ ಜಿಲ್ಲಾ ಯುವ ಘಟಕ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಆಯ್ಕೆ ಮಾಡಲಾಗಿದೆ. 1) ಗೌರವಾಧ್ಯಕ್ಷರು:-ಶ್ರೀ ರಮೇಶ ದೇವದುರ್ಗ 2) ಜಿಲ್ಲಾ ಅಧ್ಯಕ್ಷರು:-ಶ್ರೀ ಹುಲುಗಪ್ಪ ತುರಡಗಿ ಸಿಂಧನೂರು 3) ಜಿಲ್ಲಾ ಪ್ರ ಕಾರ್ಯದರ್ಶಿ:-ಶ್ರೀಪರಶುರಾಮ ನಕ್ಕುಂದಿ 4) ಜಿಲ್ಲಾ ಉಪಾಧ್ಯಕ್ಷರು:-ಶ್ರೀ ಬಸವರಾಜ ಸಿರವಾರ 5) ಜಿಲ್ಲಾ ಉಪಾಧ್ಯಕ್ಷರು:-ಶ್ರೀ ಗಂಗಾಧರ ಮದ್ಲಾಪೂರ ಮಾನವಿ 6) ಜಿಲ್ಲಾ ಉಪಾಧ್ಯಕ್ಷರು:- ಶ್ರೀ ದ್ಯಾಮಣ್ಣ ಮಾವಿಣಬಾವಿ ಲಿಂಗಸುಗೂರು 7) ಜಿಲ್ಲಾ ಉಪಾಧ್ಯಕ್ಷರು:-ಶ್ರೀ ನರಸಿಂಹಲು ಮಾಣಿಕ ರಾಯಚೂರು  8) ಜಿಲ್ಲಾ ಖಜಾಂಚಿ :-ಶ್ರೀ ಮಂಜುನಾಥ ಅರಕೇರಿ 9) ಜಿಲ್ಲಾ ಸ.ಕಾರ್ಯದರ್ಶಿ:-ಶ್ರೀ ನರಸಪ್ಪ ಬುದ್ದಿ ನ್ನಿ 10) ಜಿಲ್ಲಾ ಸ.ಕಾರ್ಯದರ್ಶಿ:-ಶ್ರೀ ಹನುಮಂತ ನೇಲೂಗಲ್ಲ 11) ಜಿಲ್ಲಾ ಸ.ಕಾರ್ಯದರ್ಶಿ:-ಶ್ರೀ ಕುಮಾರ ಭಜಂತ್ರಿ ಹಟ್ಟಿ 12) ಜಿಲ್ಲಾ ಸ.ಕಾರ್ಯದರ್ಶಿ:-ಶ್ರೀ ಹನುಮಂತ ನಂದವಾಡಗಿ ಸಿಂಧನೂರು 13) ಜಿಲ್ಲಾ ಸ.ಕಾಯ೯ದಶಿ೯:-ಶ್ರೀರಮೇ

"ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನ ಭಾರತ "

ಇಮೇಜ್
ಕೊಟ್ಟೂರು: ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತಕ್ಕಿದೆ ಆದರೆ ಈ ಪ್ರಜಾಪ್ರಭುತ್ವ ಮೂಲ ಅಂದರೆ ಈ ದೇಶದ ಸಂವಿಧಾನ. ಈ ಸಂವಿಧಾನ ರಚನೆಯಾಗಿ ಅಂಗೀಕಾರಗೊಂಡ ದಿನವೇ ರಾಷ್ಟ್ರೀಯ ಸಂವಿಧಾನ ದಿನ ಎಂದು ನವೆಂಬರ್ 26ರಂದು ಈ ದಿನ ರಾಷ್ಟ್ರೀಯ ಸಂವಿಧಾನ ದಿನಾಚರಣೆ ಆಚರಣೆ ಮಾಡುತ್ತೇವೆ ಎಂದು ಛಲವಾದಿ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಹಾಗೂ ಪ. ಪಂ. ಸದಸ್ಯ ಎಂ ಸಿ ಕೆಂಗರಾಜು ಹೇಳಿದರು.  ಇಲ್ಲಿನ ಚಲವಾದಿ ಕಾಲೋನಿಯಲ್ಲಿರುವ ಮುಖಂಡರು ಯುವಕರು ಸೇರಿ ಭಾನುವಾರದಂದು ಭಾರತ ಸಂವಿಧಾನ ಅರ್ಪಣೆಗೊಂಡ ಅಂಗವಾಗಿ ರಾಷ್ಟ್ರೀಯ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು. ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ವಿಜಯನಗರ ಜಿಲ್ಲೆಯ ಚಲವಾದಿ ಮಹಾಸಭಾ ಉಪಾಧ್ಯಕ್ಷರಾದ ಎಂ ಸಿ ಕೆಂಗರಾಜು ಮಾತನಾಡಿ ಪ್ರಪಂಚದಲ್ಲಿ ಅತ್ಯಂತ ಶ್ರೇಷ್ಠ ಸಂವಿಧಾನ ಇರುವುದು ನಮ್ಮ ಭಾರತ ದೇಶದಲ್ಲಿ ಮಾತ್ರ ಈ ಪ್ರಜಾಪ್ರಭುತ್ವ ಮೂಲ ಆಧಾರವೇ ಈ ದೇಶದ ಸಂವಿಧಾನ ಭಾರತ ದೇಶದ ಇತಿಹಾಸದಲ್ಲಿ 1949 ನವೆಂಬರ್ 26ರಂದು ಪ್ರಮುಖವಾದ ದಿನ ಕಾರಣ ನಮ್ಮ ದೇಶಕ್ಕೆ ಸಂವಿಧಾನವನ್ನು ಅಳವಡಿಸಿಕೊಂಡು ದಿನ ಇದು ಈ ದೇಶದ ಮೂಲಕ ಪ್ರಜಾಪ್ರಭುತ್ವ ಸರ್ವರಿಗೂ ಸಮಾನತೆ ನೀಡಿದ ಡಾ. ಬಿಆರ್ ಅಂಬೇಡ್ಕರ್ ರವರನ್ನು ಪ್ರತಿಯೊಬ್ಬ ಭಾರತೀಯನೂ ಸ್ಮರಿಸಿಕೊಳ್ಳಬೇಕು ಕೇವಲ ಅಂಬೇಡ್ಕರ್ ಅವರು ರಚಿಸಿರುವ ಭಾರತ ಸಂವಿಧಾನ ಕೆಲವು ವರ್ಗಕ್ಕೆ ಸೀಮಿತವಾಗಿಲ್ಲದೆ ಸರ್ವರಿ

ನಾವೆಲ್ಲರೂ ಕಾನೂನು ಪಾಲನೆ ಮಾಡಬೇಕು :ಎಸ್ ಕೆ ಗಿರೀಶ್

ಇಮೇಜ್
ಕೊಟ್ಟೂರು :ಸಾರ್ವಜನಿಕ ಗ್ರಂಥಾಲಯದಲ್ಲಿ ಭಾನುವಾರ ರಂದು *ಸಂವಿಧಾನ ದಿನ* ನಿಮಿತ್ತ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಮಾಡಿ ಪುಷ್ಪಾರ್ಚನೆ  ಸಮರ್ಪಿಸಲಾಯಿತು. *ನಾವೆಲ್ಲರೂ ಕಾನೂನು ಗಳನ್ನ ಓದಿ ಪಾಲನೆ ಮಾಡಬೇಕು*   ಎಂದು ಎಸ್ ಕೆ ಗಿರೀಶ್ ಹೇಳಿದರು.                             *ನಾವೆಲ್ಲರೂ ಸಮಾನತೆಯಿಂದ ಬದುಕಬೇಕು* ಎಂದು ಮಲ್ಲಪ್ಪ ಗುಡ್ಲಾನೂರ್ ಶಾಖಾ ಗ್ರಂಥಾಲಯ ಅಧಿಕಾರಿ ಮಾತನಾಡಿದರು ಹಾಗೂ ವಿದ್ಯಾರ್ಥಿಗಳು, ಓದುಗರು, ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು ಇದ್ದರು.

ನಿಂಬಳಗೇರೆ ಕೆ.ಜೆ.ವಿ.ಎಸ್ ನಡೆ- ಶಾಲೆ ಕಡೆ"*ಎಂಬ ವೈಜ್ಞಾನಿಕ ಕಾರ್ಯಕ್ರಮ

ಇಮೇಜ್
ಕೊಟ್ಟೂರು: ನಿಂಬಳಗೆರೆ ಗ್ರಾಮದ  ಬಿಕೆವಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಕೂಡ್ಲಿಗಿ ವತಿಯಿಂದ ಕೆ.ಜೆ.ವಿ.ಎಸ್ ನಡೆ- ಶಾಲೆ ಕಡೆ"*ಎಂಬ ವೈಜ್ಞಾನಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.  ಕೆ ಜೆ ವಿ ಎಸ್ ಅಧ್ಯಕ್ಷರಾದ ಶ್ರೀಯುತ ಜಿ ಜಗದೀಶ್ ಇವರು ಪ್ರಾಸ್ತಾನಿಕವಾಗಿ ಮಾತನಾಡಿ ನಮ್ಮ ಸಮಿತಿ ವತಿಯಿಂದ ವೈಜ್ಞಾನಿಕ ಸಾಹಿತ್ಯ, ಚಿತ್ರಕಲೆ, ಆರೋಗ್ಯ ವಿಜ್ಞಾನ, ಚಿಂತನೆ, ರಸಪ್ರಶ್ನೆ ಹಾಗೂ ಸಮಾಜದಲ್ಲಿರುವ ಕಂದಾಚಾರಗಳನ್ನು ತೊಲಗಿಸುವಂತಹ ಕಾರ್ಯಕ್ರಮಗಳನ್ನು ನಮ್ಮ ತಂಡದ ಮೂಲಕ ಮಾಡಲಾಗುತ್ತದೆ. ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದು ಸಮಾಜ ತಿದ್ದುವ ಕೆಲಸವನ್ನು ಮಾಡಬೇಕೆಂದು ಹೇಳಿದರು.  ಪ್ರಾಥಮಿಕ ಶಾಲಾ ಶಿಕ್ಷಕರ ಜಿಲ್ಲಾ ಸಂಘದ ಕಾರ್ಯದರ್ಶಿಗಳು ಹಾಗೂ ಕೆ ಜೆ ವಿ ಎಸ್ ಜಿಲ್ಲಾ ಸಂಯೋಜಕರು ಶ್ರೀ ಬಿ ಬಿ ಶಿವಾನಂದ ಇವರು ಸಮಾಜದಲ್ಲಿ ಎಲ್ಲಿಯವರೆಗೆ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳದೆ ನಂಬುತ್ತೇವೆಯೋ ಅಲ್ಲಿವರೆಗೂ ಮೋಸ ಮಾಡುವವರು ಇರುತ್ತಾರೆ.  ಮೂಡನಂಬಿಕೆ ಬೆಳೆಸುವಂತಹ ವ್ಯಕ್ತಿಗಳ ಮಾತನ್ನು ಕೇಳದೆ ಸದಾ ಜಾಗೃತರಾಗಿರಬೇಕೆಂದು ಹೇಳಿದರು.  ಸಮಿತಿಯ ಸದಸ್ಯರಾದ ಶ್ರೀ ನವೀನ್ ಕುಮಾರ್ ಶಿಕ್ಷಕರು ಇವರು ವಿಜ್ಞಾನ ಹೇಗೆ ಹುಟ್ಟಿತು?  ವಿಜ್ಞಾನ ಜೀವನಕ್ಕೆ ಎಷ್ಟು ಅವಶ್ಯಕ?   ಜೀವನದಲ್ಲಿ ಹಣ, ಆಸ್ತಿ ಮುಖ್ಯವಲ್ಲ. ಯಾರಲ್ಲಿ ಜ್ಞಾನ ಇರುತ್ತದೆಯೋ ಅವರು ಸ್ಥಿರವಾಗಿ ಉಳಿಯುತ್ತಾರೆ ಎಂದು ಹೇಳಿದರ

ಸಂವಿಧಾನ ರಕ್ಷಣೆ ನಮ್ಮೆಲ್ಲರ ಹೊಣೆ

ಇಮೇಜ್
-ಸಿ.ಮ.ಗುರುಬಸವರಾಜ  ಹವ್ಯಾಸಿ ಬರಹಗಾರರು  “ದೇಶವೆಂದರೆ ಕೇವಲ ಮಣ್ಣಲ್ಲ, ದೇಶವೆಂದರೆ ಅಲ್ಲಿನ ಮನುಷ್ಯರು” ಎಂದು ತೆಲುಗಿನ ಮಹಾಕವಿ ವೆಂಕಟ ಅಪ್ಪರಾವ್ ಗರ್ಜಡ ಹೇಳಿದರೆ, “ ದೇಶವೆಂದರೆ ಮನುಷ್ಯರು” ಎಂದು ಸೋವಿಯತ್ ರಷ್ಯಾ ಸಂವಿಧಾನವು ಭಾವಿಸಿದ್ದಾರೆ. ಹೀಗೆ ಭಾರತ ಎಂದರೆ ಬರೀ ದೇಶವಲ್ಲ. ಅನೇಕ ಧರ್ಮ, ಜಾತಿ, ಭಾಷೆ, ಸಂಸ್ಕೃತಿಗಳನ್ನು ಹೊಂದಿರುವ ಸಮೃದ್ದವಾದ ದೇಶ. ನಮ್ಮ ದೇಶದ ಇತಿಹಾಸವನ್ನು ನೋಡಿದಾಗ ಪ್ರಾಚೀನ ಕಾಲದಿಂದಲೂ ಹಲವಾರು ದೇಶಗಳ ಜನರು ಬಂದು ಬಾಳಿದ್ದಾರೆ, ಆಳಿದ್ದಾರೆ, ಇಲ್ಲಿನ ಸಂಪತ್ತನ್ನು ಲೂಟಿ ಮಾಡಿದ್ದಾರೆ. ಆದರೂ ಇಂದಿಗೂ ಸಮೃದ್ದವಾದ ದೇಶವಾಗಿ ಅಳಿಯದೇ ಉಳಿದಿದೆ. ಇಲ್ಲಿನ ನದಿಗಳು, ಫಲವತ್ತಾದ ಭೂಮಿಗೆ ಆಕರ್ಷಿತರಾಗಿ ಹೊರಗಿನಿಂದ ಕೃಷಿಕರು ಬದುಕು ಕಟ್ಟಿಕೊಳ್ಳಲು ಬಂದರು. ಸಂಪತ್ತಿಗೆ ಆಶೆಗೆ, ತಮ್ಮ ರಾಜ್ಯಗಳನ್ನು ವಿಸ್ತರಣೆ ಮಾಡುವ ಉದ್ದೇಶಕ್ಕಾಗಿ ಗ್ರೀಕರು, ಅರಬ್ಬರು, ನಿಗ್ರೋ, ಮಂಗೋಲಿಯನ್ನರು, ಆರ್ಯರು, ಪರ್ಷಿಯನ್ನರು, ಹೂಣರು, ಕುಶಾನರು, ಮೊಘಲರು, ಖಿಲ್ಜಿಗಳು, ತೊಘಲಕ್ರು, ಬಹಮನಿಗಳು, ಪೋರ್ಚ್ಗೀಸರು, ಪ್ರೆಂಚರು, ಡಚ್ಚರು ಮತ್ತು ಬ್ರಿಟಿಷರು ಈ ದೇಶಕ್ಕೆ ಬಂದರು. ಹೀಗೆ ದೇಶದಲ್ಲಿನ ಮೂಲ ನಿವಾಸಿಗಳು, ಹೊರಗಿನಿಂದ ಬಂದು ನೆಲಸಿದವರು ಸೇರಿ ಭಾರತದಲ್ಲಿ 2011ನೇ ಜನಗಣತಿ ಪ್ರಕಾರ 125 ಕೋಟಿ ಜನಸಂಖ್ಯೆ, 4,635 ಬಗೆಯ ಜನಾಂಗೀಯ ಪಂಗಡ, 325 ಭಾಷೆ, 19,569 ಮಾತೃ ಭಾಷೆಗಳು, 25 ಲಿಪಿಗಳನ್ನು ಹೊಂದಿದ್ದರೂ ಪರಸ್ಪರ

ಕನ್ನಡವನ್ನು ಕಟ್ಟುವ ಕಾರ್ಯ ಪ್ರತಿ ಕನ್ನಡಿಗನಿಂದ ಆಗಬೇಕು : ಸಿದ್ದರಾಮ ಕಲ್ಮಠ

ಇಮೇಜ್
"ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸ ವಿದೆ" *ಇತಿಹಾಸದಲ್ಲಿ ಸಾಂಸ್ಕೃತಿಕ ಚರಿತ್ರೆಯನ್ನು ಹೊಂದಿರುವ ಕನ್ನಡ ಭಾಷೆಗೆ ತನ್ನದೇ ಆದಂತಹ ವಿಶಿಷ್ಟ ಸ್ಥಾನವಿದೆ * ಕೊಟ್ಟೂರು :ಕನ್ನಡ ನಾಡು, ಭಾಷೆ, ಸಂಸ್ಕೃತಿ ಗತ ಇತಿಹಾಸವನ್ನು ಹೊಂದಿದ್ದು, ಇದರ ಪರಂಪರ ಉಳಿಸುವುದು ಹಾಗೂ ಕಟ್ಟುವ ಕಾರ್ಯ ಪ್ರತಿಯೊಬ್ಬ ಕನ್ನಡಿಗನಿಂದ ಆಗಬೇಕು. ಅಲ್ಲದೇ ಕನ್ನಡ ಇತಿಹಾಸವನ್ನು ಮುನ್ನೆಡೆಸುವ ನಿಟ್ಟಿನಲ್ಲಿ ದೀರ್ಘಕಾಲಿಕ ಯೋಜನೆ ಯಾರೋಬ್ಬರು ಮಾಡಿಲ್ಲದರಿವುದು ವಿಷಾದನೀಯ ಎಂದು ಕ.ಸಾ.ಪ ಜಿಲ್ಲಾ ನಿಕಟ ಪೂರ್ವ ಅಧ್ಯಕ್ಷ ಸಿದ್ದರಾಮ ಕಲ್ಮಠ ಹೇಳಿದರು. ಇಲ್ಲಿನ ಡಾ.ಹೆಚ್.ಜಿ.ರಾಜ್ ಸಭಾಂಗಣದಲ್ಲಿ ಕೊಟ್ಟೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಶನಿವಾರ ಅಯೋಜಿಸಿದ್ದ ೬೮ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೇವಲ ಭಾಷೆಗಷ್ಟೇ ಸೀಮಿತವಾಗದೇ ಶಿಲ್ಪ ಕಲೆ ಇತರೆ ಸಂಸ್ಕೃತಿಯ ಇತಿಹಾಸ ವನ್ನು ಹೊಂದಿದೆ ಅನೇಕ ರಾಜರ ಪೂರ್ವಿಕರ ಕಾಲದಲ್ಲಿಯೇ ಮಹತ್ವ ಹೊಂದಿದ್ದ ಕನ್ನಡ ಭಾಷೆ ಅಂದಿನಿAದಲೇ ಅದನ್ನು ಉಳಿಸಿಕೊಂಡು ಬಂದಿದೆ .ಕನ್ನಡ ನಾಡಿನ ಇತಿಹಾಸ ಬೇರೆ ಭಾಷೆಯೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಕನ್ನಡ ನಾಡಿನ ಸಾಂಸ್ಕೃತಿಕ ಚರಿತ್ರೆಯನ್ನು ಎಲ್ಲರೂ ಅರಿತಿರಬೇಕು. ಅದರೊಂದಿಗೆ ಕನ್ನಡ ನಾಡಿನ ಮಹತ್ವನ್ನು ಮತ್ತಷ್ಟು ಉತ್ತುಂಗಕ್ಕೆ ಏರಿಸಬೇಕು ಎಂದರು.  ಕನ್ನಡ ನಾಡು ನುಡಿ ಮತ್ತು ಕರ್ನಾಟಕ ನಾಮಕರಣ ಮಹತ್ವ ಕುರಿತು ಮಾತನಾಡಿದ ಉಪನ

"ಗ್ರಾಮೀಣ ಪ್ರದೇಶದ ರೈತರ ನೆರವಿಗೆ ಭಾರತ ಕಮ್ಯುನಿಸ್ಟ್ ಸಿಪಿಐ ಪಕ್ಷವು ಸದಾ ಸಿದ್ದ"

ಇಮೇಜ್
ಉದ್ಯೋಗ ಖಾತರಿ ಆಳು ಗಳಿಗೆ 50 ಆಳು ಹೆಚ್ಚುವರಾಗಿ ಕೊಡಬೇಕೆಂದು: ಭಾರತ ಕಮ್ಯುನಿಸ್ಟ್ ಸಿಪಿಐ ಪಕ್ಷದ ತಾಲೂಕು ಕಾರ್ಯದರ್ಶಿ ರೇಣುಕಮ್ಮ ಒತ್ತಾಯ ಕೊಟ್ಟೂರು: ತಾಲೂಕು ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಎಲ್ಲ ಹಳ್ಳಿಗಳಿಗೂ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕಂದಗಲ್ ಗ್ರಾಮ ಪಂಚಾಯಿತಿ ಉದ್ಯೋಗ ಖಾತರಿ ನೂರು ದಿನಗಳ ಮುಗಿದಿದ್ದು ನೂರಾರು ಕುಟುಂಬಗಳು ಕೆಲಸ ಇಲ್ಲದೆ ಮನೆಯಲ್ಲೇ ಇದ್ದು ಬರಪೀಡಿತ ತಾಲೂಕು ಅಂತ ಘೋಷಣೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಇರುವ ಹಳ್ಳಿಯ ಒಂದು ಮನೆಯಲ್ಲಿ ನಾಲ್ಕಾರು ಕುಟುಂಬಗಳು ಇವೆ ಜನರಿಗೆ ಬದುಕಲು ಕಷ್ಟವಾಗುತ್ತಿದೆ. ಅದಕ್ಕಾಗಿ ರಾಜ್ಯ ಸರ್ಕಾರ ಇನ್ನು ಹೆಚ್ಚುವರಿಗಾಗಿ 50 ಆಳು ಗಳನ್ನು ಕೂಡಲೇ ಜಾರಿಗೆ ತರಬೇಕೆಂದು .ತಾಲೂಕು ಪಂಚಾಯಿತಿ ವ್ಯಾಪ್ತಿಗೆ ಸೇರಿರುವ 14 ಗ್ರಾಮ ಪಂಚಾಯಿತಿಯ ಎಲ್ಲ ಹಳ್ಳಿಗಳಿಗೆ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ  ಇದನ್ನು ತಾಲೂಕು ಪಂಚಾಯಿತಿ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕೆಂದು.ಎಂದು ಭಾರತ ಕಮ್ಯುನಿಸ್ಟ್ ಸಿಪಿಐ ಪಕ್ಷದ ತಾಲೂಕು ಕಾರ್ಯದರ್ಶಿ ರೇಣುಕಮ್ಮ, ಕಾರ್ಯಕರ್ತ ತಿಮ್ಮಣ್ಣ ,ಎಚ್ ರಾಜನ ಗೌಡ, ವಿಠಲ. ಒತ್ತಾಯಿಸಿದರು.

ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಲು ತಹಶೀಲ್ದಾರ್ ಮೂಲಕ ಮನವಿ

ಇಮೇಜ್
ಮಸ್ಕಿ :  ಅಕ್ರಮ ಗಣಿಗಾರಿಕೆ ಚಟುವಟಿಕೆ ಹಾಗೂ ಪರ ವಾನಗಿಯನ್ನು ರದ್ದುಗೊಳಿಸಿ, ಅಂಥವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ( ದಾದಾ ಸಾಹೇಬ್ ಡಾ. ಎನ್ ಮೂರ್ತಿ ಸ್ಥಾಪಿತ ಮಸ್ಕಿ ತಾಲೂಕು ಘಟಕವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ ಮೂಲಕ ಸರಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಅಕ್ರಮ ಗಣಿಗಾರಿಕೆ ಸಮಾಜಘಾತುಕ ಚಟುವಟಿಕೆಯಿಂದ ರೈತರಿಗೆ ಹಾಗೂ ಪರಿ ಸರಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ಗಣಿಗಾರಿಕೆ ಮತ್ತು ಮರಮ್ ಸಾಗಾಣಿಕೆಯನ್ನು ನಿಷೇಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ತಾಲೂಕಿನ ಮೆದಿಕಿನಾಳ, ಉಸ್ಕಿಹಾಳ, ಬೆಲ್ಲದಮರಡಿ, ವೆಂಕಟಾಪುರ್, ಸಂತೆಕೆಲ್ಲೂರು, ಗುಡದೂರು, ಹಂಪನಾಳ ಇನ್ನಿತರ ಗ್ರಾಮಗಳಲ್ಲಿ ನೂರಾರು ಎಕರೆ ಭೂಮಿಯನ್ನುರಸ್ತೆ, ಲೇಔಟ್ ಗಾಗಿ ಗುತ್ತಿಗೆದಾರರಾದ  ಅಮ್ಮಾಪುರ್ಇಂಪ್ರಾಸ್ಟ್ರಕ್ಚರಸ್ಸ್ ಅಂಡ್ ಕಂಪನಿ, ಅಮರಗುಂಡಪ್ಪ ಮೇಟಿ, ಗೋಪಾಲ್ ರೆಡ್ಡಿ ಬಳ್ಳಾರಿ ಇನ್ನಿತರರು ಗುತ್ತಿಗೆದಾರರು ಸೇರಿ ಆಕ್ರಮ ಕೂಟ ಮಾಡಿಕೊಂಡು ತಮ್ಮ ತಮ್ಮ ಕಾಮಗಾರಿಗೆ ಭಾರಿ ಪ್ರಮಾಣದ ಮರಮ್ ಮತ್ತು ಮರಳನ್ನು ಆಕ್ರಮವಾಗಿ ಹಾಗೂ ಕಾನೂನು ಬಾಹಿರವಾಗಿ ಸುಮಾರು 10-12 ವರ್ಷದಿಂದ ಅಕ್ರಮ ಕಲ್ಲುಗಣಿ ಗಾರಿಕೆ ನಡೆಯುತ್ತಿದೆ. ಇದರಿಂದ ಸುತ್ತಮುತ್ತಲ ಗ್ರಾಮದ ಜನರಿಗೆ ಆರೋಗ್ಯ ಸಮಸ್ಯೆ ಎದುರಾಗಿದೆ. ಕಲ್ಲು ಗಣಿಗಾರಿಕೆಯಿಂದ ಹೊರ ಬರುವ ಧೂಳು, ತ್ಯಾಜ್ಯ ಪರಿಸರಕ್ಕೆ ಹಾನ