ಪೋಸ್ಟ್‌ಗಳು

ಸೆಪ್ಟೆಂಬರ್, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಜಿಲ್ಲಾ ಮಟ್ಟದ ಯೋಗ ಸರ್ಧೆಯಲ್ಲಿ ಮಟ್ಟೂರು ವಿಶ್ವವಿದ್ಯಾ ಗುರುಕುಲ ಶಾಲೆಯ ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆ : ಮಹಾಂತ ಸ್ವಾಮೀಜಿ ಅಭಿನಂದನೆ

ಇಮೇಜ್
ಮಸ್ಕಿ : ಮಹಾತ್ಮ ಗಾಂಧಿಜಿ ಕ್ರೀಡಾಂಗಣ ರಾಯಚೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಯೋಗ ಸರ್ಧೆಯಲ್ಲಿ  ಮಟ್ಟೂರು ವಿಶ್ವವಿದ್ಯಾ ಗುರುಕುಲ ಶಾಲೆಯ ವಿಧ್ಯಾರ್ಥಿ ಕು.ಸಮರ್ಥ ತಂದೆ ಶೇಖರಪ್ಪ ಪಾಲ್ಮಿ ಇವರು ವಿಭಾಗ ಮಟ್ಟಕ್ಕೆ ಆಯ್ಕೆ ಶಾಲಾ ಆಡಳಿತ ಮಂಡಳಿ ವತಿಯಿಂದ ಕಲ್ಯಾಣ ಆಶ್ರಮದ ಮಹಾಂತ ಸ್ವಾಮೀಜಿ ಅಭಿನಂದನೆ ಸಲ್ಲಿಸಿದರು. ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಹಾತ್ಮಗಾಂಧಿ ಕ್ರೀಡಾಂಗಣ ರಾಯಚೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಯೋಗ ಸರ್ಧೆಯಲ್ಲಿ  ಮಟ್ಟೂರು ವಿಶ್ವವಿದ್ಯಾ ಗುರುಕುಲ ಶಾಲೆಯ ವಿಧ್ಯಾರ್ಥಿ ಕು.ಸಮರ್ಥ ತಂದೆ ಶೇಖರಪ್ಪ ಪಾಲ್ಮಿ ಇವರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಜಿಲ್ಲಾ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಶ್ರೀ ವೀರೇಶ ನಾಯಕ ಇವರು ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ಪದಕ ನೀಡಿ ಮುಂದಿನ ವಿಭಾಗ ಮಟ್ಟಕ್ಕೆ ಆಯ್ಕೆಯಾದ ವಿಧ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದರು.  ಶುಭ ಹಾರೈಕೆ:ಕಲ್ಯಾಣ ಆಶ್ರಮದ ಪೂಜ್ಯ ನಾಡಿನ ಹೆಸರಾಂತ ಪ್ರವಚನ ಪರಮಾತ್ಮರಾದ ಶ್ರೀ ಗುರು ಮಹಾಂತ ಸ್ವಾಮೀಜಿಯವರು ಮಕ್ಕಳಿಗೆ ಆಶೀರ್ವದಿಸಿ ಶುಭಹಾರೈಸಿದರು,ಹಾಗೂ ತಿಮ್ಮಣ್ಣ ತಿಮ್ಮಾಪುರ ಇವರು ಅಭಿನಂದನೆಯನ್ನು ತಿಳಿಸಿದರು. ಈ ಸಂದರ್ಭದಲ್ಲಿ ,ಯೋಗ ಶಿಕ್ಷಕರಾದ ಶ್ರೀ ಚಂದ್ರಶೇಖರ್ ಮಟ್ಟೂರು ಹಾಗೂ ಪಾಲಕರಾದ ಶೇಖರಪ್ಪ ಪಾಲ್ಮಿ ತಿಮ್ಮಾಪುರ, ಶಾಲೆಯ ಮುಖ್ಯ ಗುರುಗಳಾದ ಶ್ರೀ ಗೋವಿಂದ ರಾಥೋಡ್

ವಿವಿಧ ಸ್ಪರ್ಧೆಯಲ್ಲಿ ಫುಲದಿನ್ನಿ ಶಾಲೆ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಇಮೇಜ್
ಸಿಂಧನೂರು: ತಾಲೂಕಿನ ರಾಗಲಪರ್ವಿ ವಲಯ ಮಟ್ಟದ ವ್ಯಾಪ್ತಿಗೆ ಬರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪುಲದಿನ್ನಿ ಶಾಲೆಯು 600 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಕುಮಾರಿ ಶರಣಮ್ಮ ತಂದೆ ಭೀಮಣ್ಣ ಇವರು ಮೇಲು ಗೈ ಸಾಧಿಸುವ ಮೂಲಕ ಆಯ್ಕೆಗೊಂಡಿದ್ದಾರೆ ಶಾಲಾ ಆಡಳಿತ ಮಂಡಳಿ ಹಾಗೂ ಗ್ರಾಮದ ಹಿರಿಯರು ಹರ್ಷ ವ್ಯಕ್ತಪಡಿಸಿದ್ದಾರೆ. ಸಿಂಧನೂರು ನಗರದಲ್ಲಿ ಆಯೋಜಿಸಲಾಗಿದ್ದ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ  ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪುಲದಿನ್ನಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಶಾಲೆಯ ವಿದ್ಯಾರ್ಥಿಗಳಾದ ವೀರನಗೌಡ ತಂದೆ ವೆಂಕಟೇಶ್ 100 ಮೀಟರ್ ಸ್ಪರ್ಧೆ ,200 ಮೀಟರ್ ಪ್ರಥಮ ಸ್ಥಾನ, ಕಿರಣ್ ತಂದೆ ನಾಗರಾಜ್ 400 ಮೀಟರ್ ಪ್ರಥಮ ಸ್ಥಾನ, ಮಂಜುನಾಥ್ ತಂದೆ ಹುಸೇನಪ್ಪ 600 ಮೀಟರ್ ಪ್ರಥಮ, ಉದ್ದ ಜಿಗಿತ ಪ್ರಥಮ ಸ್ಥಾನ ಹೀಗೆ ಹಲವು ಕ್ರೀಡೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಜಿಲ್ಲೆಗೆ ಆಯ್ಕೆಗೊಂಡು ಶಾಲೆಯ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದು ಹಾಗೂ ಊರಿನ ಗೌರವವನ್ನು ಹೆಚ್ಚಿಸಿದ್ದಾರೆ. ಮಕ್ಕಳ ಕ್ರೀಡಾ ಸ್ಪರ್ಧೆಗೆ ತರಬೇತಿದಾರರಾಗಿ ಕಾರ್ಯನಿರ್ವಹಿಸಿದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಪುಲದಿನ್ನಿ ಮುಖ್ಯ ಗುರುಗಳು ಎಂ.ಸಿ ದಿನೇಶ್ ಕುಮಾರ್ , ಸಹ ಶಿಕ್ಷಕರಾದ ರೇಣುಕಾ, ಗುಂಡಪ್ಪ ರಾಥೋಡ್ ಶಿಕ್ಷಕರು, ಅತಿಥಿ ಶಿಕ್ಷಕರಾದ ದೇವರಾಜ್ ,ಅಕ್ಕನಾಗಮ್ಮ ಶಿಕ್ಷಕಿ, ವೆಂಕಟೇಶ್ ಶಿಕ್

ಉಜ್ಜಯಿನಿ ಶ್ರೀಗಳ ವಿರುದ್ಧ ಅಪಪ್ರಚಾರ ಸುದ್ದಿ ಪ್ರಕಟಿಸದಂತೆ ತಡೆಯಾಜ್ಞೆ

ಇಮೇಜ್
ಉಜ್ಜಯಿನಿ ಶ್ರೀಗಳ ವಿರುದ್ಧ ಅಪಪ್ರಚಾರ ಮತ್ತು ಮಾನಹಾನಿ ಗೆ ಸಂಬಂಧದ ಸುದ್ದಿ ಪ್ರಕಟಿಸದಂತೆ ತಡೆಯಾಜ್ಞೆ ಕೊಟ್ಟೂರು ತಾಲೂಕಿನ ಉಜ್ಜಿನಿ ಸದ್ಧರ್ಮ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ  ವಿರುದ್ದ, ಪ್ರತಿವಾದಿಗಳು ಮತ್ತು ಅವರ ಪರವಾಗಿರುವ  ಯಾರೇ ಆಗಲಿ ಜಗದ್ಗುರು ಮತ್ತು ಶ್ರೀ ಪೀಠದ ಕುರಿತಾಗಿ ನೀಡುವ ಮಾಹಿತಿ ಹೇಳಿಕೆ ಗಳನ್ನು ಯಾವುದೇ ರೀತಿಯಲ್ಲಿ ಮುದ್ರಣ, ಪ್ರಕಟಣೆ, ಪ್ರಸಾರ ಮಾಡದಂತೆ ಪತ್ರಿಕಾ ಮಾಧ್ಯಮ ಮತ್ತು ಪ್ರಿಂಟ್‌ ಮಾದ್ಯಮಗಳಿಗೆ , ಸೋಶಿಯಲ್ ಮೀಡಿಯಾ,ಕೂಡ್ಲಿಗಿ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಮದ್ಯಾಂತರ ತಡೆಯಾಜ್ಞೆನೀಡಿ ಶುಕ್ರವಾರದಂದು ಆದೇಶ ನೀಡಿದೆ ಎಂದು ಕೊಟ್ಟೂರು ಕಟ್ಟೆಮನಿ ಬಳಗದ ಮುಖ್ಯಸ್ಥ ಎಂ.ಎಂ.ಜೆ. ಹರ್ಷವರ್ಧನ್‌ ಹೇಳಿದ್ದಾರೆ.  ಈ ಸಂಬಂದ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು ಪೀಠ ಮತ್ತು ಸ್ವಾಮೀಜಿಗಳ ವಿರುದ್ಧ ಇ ಪೇಪರ್‌, ವೆಬ್‌ಮೀಡಿಯ, ವಿದ್ಯೂನ್‌ಮಾನ ಮಾದ್ಯಮ , ವೆಬ್‌ ಸಮೂಹ ಮಾದ್ಯಮ ಸಾಮಾಜಿಕ ಜಾಲ ತಾಣಗಳು , ವಾದಿಗಳ ಕುರಿತು ಯಾವುದೇ ರೀತಿಯಲ್ಲಿ ಅರ್ಥೈಯಿಸದಂತೆ ನಿರ್ಭಂದಿಸಿ ನ್ಯಾಯಾಲಯದ ನ್ಯಾಯಾದೀಶರು ಮುಂದಿನ ವಿಚಾರಣೆ ವರೆಗೂ ಮಧ್ಯಂತರ ತಡೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.  ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಬೂದಿ ಶಿವಕುಮಾರ್, ಮೈದೂರು ಕೊಟ್ರೇಶ್‌, ಟಿ.ಮಂಜುನಾಥ, ಜಿ.ಕಾರ್ತಿಕ್‌ , ಅಟವಾಳ್ಗಿ ಸಂತೋಷ, ಕರಿಬಸವನಗೌಡ ಕೆ. (ಅಜ್ಜನಗೌಡ)

ಹೋರಾಟಕ್ಕೆ ಜಿಲ್ಲೆಯಲ್ಲಿ ನಿರಸ ಪ್ರತಿಕ್ರಿಯೆ : ಸಹಜ ಜನಜೀವನ.

ಇಮೇಜ್
ವರದಿ - ಮಂಜುನಾಥ್ ಕೋಳೂರು, ಕೊಪ್ಪಳ  ಕೊಪ್ಪಳ ಸೇ 30 : - ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ ಕರ್ನಾಟಕ ಬಂಧುಗೆ ಕೊಪ್ಪದಲ್ಲಿ ನಿರಸ ಪ್ರಕ್ರಿಯೆ ವ್ಯಕ್ತವಾಯಿತು. ಈ ಬಂಧ್ ಪ್ರತಿಭಟನೆಗೆ ಮಾತ್ರ ಸೀಮಿತವಾಗಿತ್ತು ನಗರದಲ್ಲಿ ಅಂಗಡಿ ಮುಗ್ಗಟ್ಟು ಬ್ಯಾಂಕುಗಳು ಸರ್ಕಾರಿ ಸಂಸ್ಥೆಗಳು ಎಪಿಎಂಸಿ ಮಳಿಗೆಗಳು ಮಾರುಕಟ್ಟೆ ಎಂದನಂತೆ ಕಾರ್ಯನಿರ್ವಹಿಸಿದವು . ಅಲ್ಲದೆ ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಬಸ್ ಗಳು ಯಾವುದೇ ಆಡಳಿತಡೆ ಇಲ್ಲದೆ ಸಂಚರಿಸಿದವು . ನಗರದ ಪ್ರಮುಖ ಜವರ್ ರಸ್ತೆ , ಗದಗ್ ಹೊಸಪೇಟೆ ರಸ್ತೆ , ಹಸನ್ ರಸ್ತೆ, ಸಾಲಾರ್ ಜಂಗ್ ರಸ್ತೆಯಲ್ಲಿ ಜನ ವಾಹನ ಸಂಚಾರ ಸಹಜವಾಗಿತ್ತು. ಕೆಲವು ಬೀದಿ ಬದಿ ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ತಮ್ಮ ವ್ಯಾಪಾರ ಸ್ಥಗಿತಗೊಳಿಸಿ ಅಂಗಡಿಯನ್ನು ಮುಚ್ಚಿ ಬೆಂಬಲ ಸೂಚಿಸಿದರು. ಶುಕ್ರವಾರ ಬೆಳಗ್ಗೆ ಕೆ .ಎಮ್ .ಹಳ್ಳಿ ನೇತೃತ್ವದ ಕನ್ನಡ ಪರ ಸಂಘಟನಾ ಸದಸ್ಯರು ಕೇಂದ್ರೀಯ ಬಸ್ ನಿಲ್ದಾಣದ ಬಳಿ ಕಾಲಿ ಕೊಡ ಹೊತ್ತು , ತೆಂಗಿನ ಚಿಪ್ಪು ಪ್ರದರ್ಶಿಸುತ್ತಾ ಮೆರವಣಿಗೆ ನಡೆಸಿದ್ದು ಕಂಡುಬಂತು. ಅಂಗಡಿಗಳನ್ನು ಮುಚ್ಚಿ ಬಂದಗೆ ಬೆಂಬಲ ಸೂಚಿಸುವಂತೆ ಆ ಸದಸ್ಯರು ಅಂಗಡಿಗಳನ್ನು ತೆರೆದ ಮಾಲೀಕರಿಗೆ ಮನವಿ ಮಾಡಿಕೊಳ್ಳುತ್ತಾ ಸಾಗುತ್ತಿದ್ದರು. ಕನ್ನಡ ಪರ ಸಂಘಟನೆ ( ಶಿವರಾಮೇಗೌಡ ಬಣದ) ಸದಸ್ಯರಾದ ಅಜ್ಜಪ್ಪ ಕರಡಕಲ್, ಶಿವರಾಜ್ ಉಳ್ಳಾಗಡ

ಬಸಾಪೂರ ಕೆರೆ ಮಾರಾಟ : ಹೈಕೋರ್ಟ್ ಮಧ್ಯಂತರ ಆದೇಶ

ಇಮೇಜ್
AISL/MSPL ಕಂಪನಿಯ ವಿರುದ್ಧ : ಕ್ರಮಕ್ಕೆ ಆಗ್ರಹ   ವರದಿ- ಮಂಜುನಾಥ್ ಕೋಳೂರು, ಕೊಪ್ಪಳ ಕೊಪ್ಪಳ : ಜಲ ಸಂರಕ್ಷಣೆಗೆ ಕೆರೆಗಳ ನಿರ್ಮಾಣಕ್ಕೆ ರೈತರ ಸ್ವಂತ ಜಮೀನೇ ನೀಡಿದ ಉದಾರಹಣೆಗಳು ಸಾಕಷ್ಟವೆ. ಇದರ ಏತನ್ಮಧ್ಯೆ ಕೊಪ್ಪಳ ತಾಲೂಕಿನ ಬಸಾಪೂರ ಕೆರೆಯನ್ನು ಅಂದಿನ ಸರ್ಕಾರ AISL/MSPL ಕಂಪನಿಗೆ ಸರ್ವೆ ನಂಬರ್ 143 ರಲ್ಲಿ 44 ಎಕರೆ 35 ಗುಂಟೆಯ ವಿಸ್ತೀರ್ಣವನ್ನು ಕೇವಲ 33 ಲಕ್ಷ 95 ಸಾವಿರಕ್ಕೆ ಮಾರಾಟ ಮಾಡಿದ್ದನ್ನು ಇಲ್ಲಿನ "ಕೊಪ್ಪಳ ಜಿಲ್ಲಾ ಬಚಾವ್ ಆಂದೋಲನ" ಸಮಿತಿ ಅವರು ಹೋರಾಟ ಮಾಡಿ, ನಂತರದಲ್ಲಿ ಅದನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲ (WP : 5713/2009) ಹೈಕೋರ್ಟ್ ಮೊರೆ ಹೋಗಿದ್ದರು. ಈ ಬೆನ್ನೆಲ್ಲೆ 5/1/2022ರಲ್ಲಿ ಹೈಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ ಈ ಕೆರೆಯ ಕುರಿತು, ಸಾಕು ಪ್ರಾಣಿ, ಪಕ್ಷಿ, ಮನುಷ್ಯರಿಗೂ ಬಳೆಕೆ ಪೂರಕವಾಗಿದೆ ಎಂದು ಯತಾಃಸ್ಥಿತಿ ಕಾಪಾಡಿಕೊಳ್ಳಲು ಆದೇಶಿಸಿತ್ತು. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಷರತ್ತು ಉಲ್ಲಂಘಿಸಿದ ಕಂಪನಿಗಳ ವಿರುದ್ಧ ಸೂಕ್ತ ಕ್ರಮ ತಗೆದುಕೊಳ್ಳಲು ಹಿಂದೇಟು ಹಾಕುತ್ತಿದೆ ಎಂದು ಆಂದೋಲನದ ಪ್ರಮುಖ ಮುಖಂಡರಾದ ಡಿ.ಎಚ್.ಪೂಜಾರ, ಅಲ್ಲಮಪ್ರಭು ಬೆಟ್ಟದೂರು, ಜಿ.ಎಸ್.ಗೋನಾಳ, ಮೈಲಾರಪ್ಪ ಲಿಂಗದಹಳ್ಳಿ ಬಸಾಪೂರ, ಯಮನೂರಪ್ಪ ಹಾಲಹಳ್ಳಿ, ಶಿವಯ್ಯ ಹಿರೇಮಠ, ಫಕೀರಪ್ಪ ಬಂಗ್ಲಿ ಸೇರಿದಂತೆ ಇತರೆ ಸಂಘಟಕರು ಆರೋಪಿಸಿದರು. ಪ್ರಸ್ತುತ ಕಂಪನಿಯವರು ಈಗಾಗಲೇ ತಡೆ ಗೋ

ರಾಜ್ಯ 'ಸರ್ಕಾರಿ ನೌಕರರ ವಿಶೇಷ ಸಭೆ ' ಬೈಲಾ ತಿದ್ದುಪಡಿ ಮಹಾಸಭೆಯಲ್ಲಿ ನಿರ್ಣಯ : ಜುಮ್ಮನ್ನವರ

ಇಮೇಜ್
ವರದಿ - ಮಂಜುನಾಥ್ ಕೋಳೂರು, ಕೊಪ್ಪಳ ಕೊಪ್ಪಳ ಸೆ 30 : - ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸರ್ವ ಸದಸ್ಯ, ಪದಾಧಿಕಾರಿಗಳಿಂದ "ಬೈಲಾ ತಿದ್ದುಪಡಿ" ವಿಶೇಷ ಮಹಾಸಭೆಯು ಅಕ್ಟೋಬರ್.1 ರಂದು ಕೊಪ್ಪಳ ನಗರದ ಹಿರೇಸಿಂದೋಗಿ ರಸ್ತೆಯ "ಮಹಾವೀರ" ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ ರಾಜ್ಯ ಸರ್ಕಾರಿ ನೌಕರರ ಕೊಪ್ಪಳ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನ್ನವರ ಹೇಳಿದರು. ನಗರದ ಪತ್ರಿಕಾ ಭವನದ್ದಿ ಸುದ್ದಿಗೋಷ್ಠಿ ನಡೆಸಿ ಪತ್ರಕರ್ತರಿಗೆ ಈ ವಿಷಯ ತಿಳಿಸಿದರು.  ಅಂದು ಬೆಳಿಗ್ಗೆ 11ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಕೊಪ್ಪಳ ಅಭಿನವ ಗವಿಶ್ರೀಗಳು ಸಾನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಉದ್ಘಾಟನೆ ಮಾಡಲಿದ್ದು,  ಅಧ್ಯಕ್ಷತೆಯನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿಯ್ಯ ವಹಿಸುವರು. ಸಂಸದ ಸಂಗಣ್ಣ ಕರಡಿ, ಶಾಸಕರಾದ ರಾಘವೇಂದ್ರ ಹಿಟ್ನಾಳ, ಬಸವರಾಜ ರಾಯರಡ್ಡಿ, ದೊಡ್ಡನಗೌಡ ಪಾಟೀಲ, ಜನಾರ್ಧನ ರೆಡ್ಡಿ, ಹೇಮಲತಾ ನಾಯಕ ಸೇರಿದಂತೆ ಹಲವು ಅಧಿಕಾರಿ ವರ್ಗದವರು ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ 140 ಜನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು "ಪ್ರತಿಭಾ ಪುರಸ್ಕಾರ"ಕ್ಕೆ ಆಯ್ಕೆ ಮಾಡಲಾಗಿದೆ. ಆ ವಿದ್ಯಾರ್ಥಿಗಳನ್ನು ಸಂಘದಿಂದ ಪ್ರೋತ್ಸಾಹಿಸಿ ಹೆಚ್ಚಿನ ಪ್ರೇರಣೆ ನೀಡಲು ಸನ್ಮಾನಿಸಿ ಗೌರವಿಸಲಾಗುವುದು. ತದನಂತರದಲ್ಲಿ ಜಿಲ್ಲೆಯ ಸಚಿವ, ಸಂಸದ,
ಇಮೇಜ್
ಕೊಟ್ಟೂರು ತಾಲ್ಲೂಕಿನಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ವಿಜಯನಗರ ಜಿಲ್ಲೆಯ ಶುಕ್ರವಾರ ರಂದು ತಾಲೂಕು ಮಟ್ಟದ ಬಾಲಕಾರ್ಮಿಕರ ಟಾಸ್ ಫೋರ್ಸ್ ಸಮಿತಿ ಸಭೆಯನ್ನು ತಹಶೀಲ್ದಾರ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಿ ಶುಕ್ರವಾರ ದಿನದಂದು ಕೊಟ್ಟೂರು ಪಟ್ಟಣದ ವಿವಿಧ ಸ್ಥಳಗಳಲ್ಲಿ ತಂಡದ ಮುಖಾಂತರ ಬಾಲಕಾರ್ಮಿಕರ ಆಕಸ್ಮಿಕ ದಾಳಿಯನ್ನು ನಡೆಸಿ ಮೂರು ಕಿಶೋರ ಕಾರ್ಮಿಕ ರಕ್ಷಣೆ ಮಾಡಿ ಮುಚ್ಚಳಿಕೆ ಪಡೆದುಕೊಂಡು ಪೋಷಕರಿಗೆ ಒಪ್ಪಿಸಿದ್ದು,  ಈ ಸಂಬಂಧಪಟ್ಟ ಮಾಲಿಕರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗುತ್ತದೆ.ತಂಡದಲ್ಲಿ ತಹಶೀಲ್ದಾರರು ಶ್ರೀ ಅಮರೇಶ.ಜಿ.ಕೆ ಕಾರ್ಮಿಕ ಅಧಿಕಾರಿ ಶ್ರೀ ಸೂರ್ಯಪ್ಪ, ಕಾರ್ಮಿಕ ನಿರೀಕ್ಷಕರು ಚೇತನಕುಮಾರ್ ,ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಬಾಲಕಾರ್ಮಿಕ ಯೋಜನೆಯ ಸಿಬ್ಭಂದಿˌ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು , BCM ˌ BEO ಅಧಿಕಾರಿ ಹಾಗೂ ಸಂಬಂದಿಸಿದ ಇತರೆ ಇಲಾಖೆ ಅಧಿಕಾರಿಗಳು ಭಾಗವಹಿಸಿರುತ್ತರೆ.ಎಂದು ಪತ್ರಿಕೆಗೆ ತಹಸಿಲ್ದಾರ್ ಅವರು ತಿಳಿಸಿದರು.

ಬತ್ತಿ ಹೋದ ನರಸಿಂಹನಗಿರಿ ಫಾಲ್ಸ್

ಇಮೇಜ್
ಕೂಡ್ಲಿಗಿ: ಬರದ ನಾಡಿನಲ್ಲಿ ಆಗುತ್ತಿರುವ ಮಳೆಯಿಂದ ನರಸಿಂಹನಗಿರಿಯ ಎತ್ತರವಾದ ಬೆಟ್ಟ ಕಲ್ಲುಗಳ ಗುಡ್ಡಗಳು ಈ ಗುಡ್ಡಕ್ಕೆ ಅಂಟಿಕೊಂಡಿರುವ ಬೃಹತ್ಕಾರವಾದ ಜಾರುಬಂಡೆ, ಈ ಈಜಾರು ಬಂಡೆ ಮದ್ಯೆ ಹಾಲ್ನೂರಯಂತೆ ಮೇಲಿನಿಂದ ಧುಮುಕುತ್ತಿರುವ ಜಲ ರಾಶಿ, ನರಸಿಂಹನಗಿರಿ ಫಾಲ್ಸ್ ಸುತ್ತಲು ಬೆಟ್ಟ ಕಲ್ಲು ಗುಡ್ಡಗಳು ಉತ್ತಮ ಮಳೆಯಾದರೆ ಹಸಿರಿನಿಂದ ಕಂಗೊಳಿಸುತ್ತದೆ ಅಪರೂಪಕ್ಕೆ ಸಿಗುವ ನರಸಿಂಹನಗಿರಿಯ ಫಾಲ್ಸ್ ಇಲ್ಲಿನ ಜನರು ನರಸಿಂಹ ನಾಯಕನ ಬೆಟ್ಟದ ಮೇಲೆ ಫಾಲ್ಸ್ ರೀತಿ ನೀರು ಬರುತ್ತವೆ ಅಂತ ಮಾತನಾಡುತ್ತಿದ್ದರು ಇದಕ್ಕೆ ಯಾವುದೇ ಹೆಸರಿಲ್ಲ ಜನರು ಸುಮ್ಮನೆ ಫಾಲ್ಸ್ ಅಂತ ಹೇಳುತ್ತಿದ್ದರು. ಇದಕ್ಕೆ ನಾವೇ ನರಸಿಂಹನಗಿರಿ ಅಂದರೆ ನಮಗೆ ನೆನಪು ಆಗುವುದು ನರಸಿಂಹನ ಗಿರಿಯ ಮಾಜಿ ಶಾಸಕರಾದ ಎನ್ ಟಿ ಬೊಮ್ಮಣ್ಣನವರು ನೆನಪು ಅದಕ್ಕೆ ನಮ್ಮ ಪತ್ರಿಕಾ ತಂಡದ ಮಾಧ್ಯಮದ ಮಿತ್ರರು ಇದಕ್ಕೆ ಸೂಕ್ತವಾದ ಹೆಸರು ಎನ್.ಟಿ.ಬಿ ಗಿರಿ ಫಾಲ್ಸ್ ಹಂತ ಹೆಸರಿಡೋಣ ಅಂತ ತೀರ್ಮಾನ ತೆಗೆದುಕೊಂಡು ನಾವು ಎನ್.ಟಿ.ಬಿ ಗಿರಿ ಫಾಲ್ಸ್ ಹೆಸರಿಟ್ಟಿದ್ದೇವೆ. ಮಳೆಗಾಲ ಉತ್ತಮವಾಗಿ ಆದರೆ ಎನ್.ಟಿ.ಬಿ ಗಿರಿ ಫಾಲ್ಸ್ ನೋಡಲು ಸಾಕಷ್ಟು ಸ್ಥಳೀಯರು ಆಗಮಿಸುತ್ತಿದ್ದು, ಈ ಬಾರಿ ಮಳೆ ಬರದ ಕಾರಣ ಎನ್.ಟಿ.ಬಿ ಗಿರಿ ಫಾಲ್ಸ್ ಬತ್ತಿ ಹೋಗಿದೆ ಉತ್ತಮ ಮಳೆಗಾಲ ಆದರೆ ಸಾಕು. ಕೂಡ್ಲಿಗಿ ಸುತ್ತಮುತ್ತ ಸ್ಥಳೀಯರು ಈ ಫಾಲ್ಸ್ ನೋಡುವುದಕ್ಕೆ ಆಗಮಿಸುತ್ತಿದ್ದರು. ಈ ಫಾಲ್ಸ್ ನೋಡುವುದಕ್ಕೆ ತುಂಬ ಸೊಗ

ಕೊಟ್ಟೂರೇಶ್ವರ ದೇವಸ್ಥಾನದ ಹುಂಡಿ ಎಣಿಕೆಯಲ್ಲಿ ೬೧,೧೩,೮೮೬/- ರೂ.ಗಳು

ಇಮೇಜ್
ಕೊಟ್ಟೂರು:ಪಟ್ಟಣದ ಆರಾಧ್ಯ ದೈವ ಶ್ರೀಗುರು ಕೊಟ್ಟೂರೇಶ್ವರ ದೇವಸ್ಥಾನದ ಹುಂಡಿ ಎಣಿಕೆ ಶುಕ್ರವಾರ ಬೆಳಿಗ್ಗೆ ೧೦.೦೦ ಆರಂಭವಾಗಿ ಮಧ್ಯಾಹ್ನದವರೆಗೂ ನಡೆಯಿತು. ಹುಂಡಿಯಲ್ಲಿ ಒಟ್ಟು ೬೧,೧೩,೮೮೬/- ಸಂಗ್ರಹವಾಗಿದೆ ಎಂದು ಸಹಾಯಕ ಆಯುಕ್ತರು ತಿಳಿಸಿದರು. ಶಾಲಾ ವಿದ್ಯಾರ್ಥಿಗಳು, ಬ್ಯಾಂಕ್ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ದೇವಸ್ಥಾನದ ಆಯಗಾರರು ಊರಿನ ಪ್ರಮುಖರು ಉಪಸ್ಥಿತರಿದ್ದರು. ಬೆಳಿಗ್ಗೆಯಿಂದಲೂ ಸುಗಮವಾಗಿ ಸಾಗಿದ ಎಣಿಕೆ ಮಧ್ಯಾಹ್ನದ ಹೊತ್ತಿಗೆ ಸಂಪೂರ್ಣ ಎಣಿಕೆ ಕಾರ್ಯ ಮುಗಿಯಿತು. ದೇವಸ್ಥಾನದ ಪ್ರಧಾನ ಧರ್ಮಕರ್ತ ಸಿ.ಎಚ್.ಎಂ.ಗಂಗಾಧರಯ್ಯ, ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತರು, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ.ಬಿ.ಎಂ., ಕಟ್ಟೆಮನಿ ದೈವಸ್ಥರು, ಉಪಸ್ಥಿತರಿದ್ದರು.

ಪ್ರಗತಿಪರ ಸಂಘಟನೆಗಳ ಒಕ್ಕೂಟ ಮಸ್ಕಿ

ಇಮೇಜ್
ಮಸ್ಕಿ : ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ತಡೆಹಿಡಿಯುವ ಬಗ್ಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ಮಸ್ಕಿ ವತಿಯಿಂದ ತಹಶೀಲ್ದಾರರ ಮುಖಾಂತ ರಘನವೆತ್ತ ರಾಜ್ಯ ಪಾಲರು ಕರ್ನಾಟಕ ಸರ್ಕಾರ ರಾಜಭವನ ಬೆಂಗಳೂರು ಇವರಿಗೆ ಮನವಿಯನ್ನು ಸಲ್ಲಿಸಿದರು. ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರವು 18 ದಿನ ನಿತ್ಯವೂ ತಮಿಳುನಾಡಿಗೆ ಮೂರು ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಶಿಫಾರಸ್ಸು ಮಾಡಿದೆ. ಆದರೆ ಕರ್ನಾಟಕ ಕಾವೇರಿ ಜಲನಯನ ಪ್ರದೇಶದ ಆಣೆಕಟ್ಟುಗಳಲ್ಲಿ ಮಳೆಯ ಕೊರತೆಯಿಂದಾಗಿ ನೀರಿನ ಸಂಗ್ರಹ ಕಡಿಮೆ ಇರುವ ಸಂದರ್ಭದಲ್ಲಿ ಇಂತಹ ಶಿಫಾರಸ್ಸು ಮಾಡಿರುವ ನೀರಿನ ನಿಯಂತ್ರಣ ಸಮಿತಿಯ ಏಕಮುಖ ನಿರ್ಧಾರ ಖಂಡನೀಯ, ಕಾವೇರಿ ಕಣಿವೆಯ ಆಣೆಕಟ್ಟುಗಳಲ್ಲಿ ನೀರಿನ ಸಂಗ್ರಹದ ಸ್ಥಿತಿಗತಿ ಗೊತ್ತಿದ್ದರೂ ಸಹ ಸಂಬಂಧಿಸಿದ ಸಮಿತಿ ಮತ್ತು ಪ್ರಾಧಿಕಾರವು ಪದೇ ಪದೇ ನೀರು ಹರಿಸುವಂತೆ ಮಾಡುತ್ತಿರುವ ಆದೇಶಗಳಿಂದ ಕಾವೇರಿ ನೀರು ಅವಲಂಬಿಸಿರುವ ಬೆಂಗಳೂರು, ಮೈಸೂರು, ರಾಮನಗರ, ಚಾಮರಾಜನಗರ ಮಂಡ್ಯ ಜಿಲ್ಲೆಗಳು ಈ ಭಾರಿ ತೀವ್ರ ಮಳೆ ಕೊರತೆಯಿಂದಾಗಿ ಕೃಷಿಗೆ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ತತ್ಸಾರ ಉಂಟಾಗಿರುವ ಈ ಕಾರಣಕ್ಕಾಗಿ ಈ ಕೂಡಲೇ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು.ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಮಸ್ಕಿ ವತಿಯಿಂದ ಆಗ್ರಹಿಸಿದರು. ಈ ಸಂದರ್ಭದಲ್ಲಿ,ಅಶೋಕ ಮುರಾರಿ,ಆರ್.ಕೆ ನಾಯಕ,ಕಿರಣ ಮುರಾರಿ,ವಿಜಯ ಕುಮಾರ ಬಡೀಗೆರ,ಬಸವರಾಜ ಡಿ.ಉದ್ಬಾಳ ಮಲ

ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುವ ಸುಪ್ರೀಂ ಕೋರ್ಟ್ ಆದೇಶವನ್ನು ಖಂಡಿಸಿ ಧರಣಿ

ಇಮೇಜ್
ವರದಿ- ಮಂಜುನಾಥ್ ಕೋಳೂರು  ಕೊಪ್ಪಳ ಕೊಪ್ಪಳ ಸೆ 28 :- ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಖಂಡಿಸಿ ಇಂದು ಕನ್ನಡಪರ ಸಂಘಟನೆ ಒಕ್ಕೂಟದಿಂದ ಕರ್ನಾಟಕ ರಾಜ್ಯ ಬಂದ ಕರೆ ನೀಡಿರುವ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾ ಸಂಪೂರ್ಣವಾಗಿ ಬಂದು ಮಾಡುವ ಮೂಲಕ ಕಾವೇರಿ ಕಣಿವೆಯ ಜಿಲ್ಲೆಗಳಾದ ಮಂಡ್ಯ, ಮೈಸೂರು, ಹಾಸನ , ಚಾಮರಾಜನಗರ ಜಿಲ್ಲೆಗಳ ರೈತರಿಗೆ ಬೆಂಬಲವಾಗಿ ಬಂದು ಭಾಗವಹಿಸುತ್ತಾ ಕರ್ನಾಟಕ ರಾಜ್ಯ ರೈತ ಜನತೆಗೆ ಅನ್ಯಾಯವಾಗಿ ಎಂದು ಕರ್ನಾಟಕ ರಕ್ಷಣ ವೇದಿಕೆಯ ಶಿವರಾಮೇಗೌಡ್ರು ಬನದ ರಕ್ಷಣಾ ವೇದಿಕೆಯ ಕಾರ್ಯಕರ್ತರು ಇಂದು ಶುಕ್ರವಾರದಂದು ಕೊಪ್ಪಳದ ಕೇಂದ್ರ ಬಿಂದುವಾದ ಅಶೋಕ್ ಸರ್ಕಲ್ ನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹಾಗೂ ಕೇಂದ್ರ ಸರಕಾರದ ವಿರುದ್ಧ ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಾ ಮೆರವಣಿಗೆ ಮುಖಾಂತರ ಕೊಪ್ಪಳ ನಗರದ ವಿವಿಧ ಮಾರ್ಗಗಳಾದ ಅಶೋಕ್ ಸರ್ಕಲ್ ದಿಂದ ತಾಸಿಲ್ದಾರ್ ಸರ್ಕಲ್ ಬಳಸಿಕೊಂಡು ಗಂಜ ಸರ್ಕಲ್ ಬಳಸಿಕೊಂಡು ಹೊಸಪೇಟೆ ರೋಡ್ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು .ಜಿಲ್ಲಾಧಿಕಾರಿಗಳ ಮುಖಾಂತರ ಸನ್ಮಾನ್ಯ ಭಾರತ ಸರ್ಕಾರ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿ ಅವರಿಗೆ ರಾಜ್ಯದ ರೈತ ಜನರ ಹಿತ ಕಾಪಾಡೋದಗೋಸ್ಕರ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಅರ್ಸುವುದನ್ನು ಕೂಡಲೇ ನಿಲ್ಲಿಸಬೇಕು. ಸುಪ್ರೀಂಕೋರ್ಟ್ ತೀರ್ಪನ್ನು ಪುನರ ಪರಿಶೀ

" ಬರದನಾಡಿಗೆ ಮಳೆರಾಯನಿಗೋಸ್ಕರ ಜೋಕುಮಾರ ಸ್ವಾಮಿ ದೇವರ ಮೊರೆ"

ಇಮೇಜ್
*ಮಳೆಗಾಗಿ ಜಾನ ಪದ ಸೊಗಡಿನ ಜೋಕುಮಾರ ಸ್ವಾಮಿ ದೇವರ ಮೊರೆ.* "ಜೋಕುಮಾರಸ್ವಾಮಿ ಎಂಬ ನೆಲದ ನಂಟಿನ ದೇವರು" ಕೊಟ್ಟೂರು :ಉತ್ತರ ಕರ್ನಾಟಕ ದ ಜಾನಪದ ವಿಶಿಷ್ಟ ಹಬ್ಬದ ಸಂಭ್ರಮ, ಜೋಕುಮಾರ ಸ್ವಾಮಿ ಹಬ್ಬ ಆಚರಣೆ ವಾಡಿಕೆಯ ವಿಶೇಷವಾಗಿದೆ.ಸಾಂಪ್ರಾದಾಯಿಕ ನಾಡಹಬ್ಬ ಗಣೇಶನ ಪ್ರತಿಷ್ಠಾಪನೆಯ ಮೂರು ಅಥವಾ ಐದು ದಿನಗಳ ಕಾಲ ಪ್ರಪಂಚದಲ್ಲಿ ಹಾಯಾಗಿ ಕುಳಿತುಕೊಂಡು ಕಾಯಿ ಕಡುಬು ಹೋಳಿಗೆ ಸುಖ ಭೋಜನ ಮತ್ತು ಹಣ್ಣು ಹಂಪಲುಗಳನ್ನು ಸೇವಿಸಿ ಡೊಳ್ಳು ಹೊಟ್ಟೆಯನ್ನು ತುಂಬಿಸಿಕೊಂಡು ಸತ್ತನಂತರ.ಭೂಲೋಕ ಎಂದು ವರದಿಡುತ್ತಾನೆ ಎಂಬ ಪ್ರತೀತಿ. ಆಗ ಜಗತ್ತಿನಲ್ಲಿ ಮಳೆಯಿಲ್ಲದೆ ಸೂತಕದ ಛಾಯೆ ಆವರಿಸುತ್ತದೆ. ಆಗ ಮೂರು ದಿನಗಳ ನಂತರ ಆಗಮನವಾಗುವವನೇ ಮಳೆತರು ದೇವರು ಎನ್ನುವುದು ವಾಡಿಕೆಯಾಗಿದೆ. 3 ದಿನಗಳಲ್ಲಿ ಜೋಕುಮಾರಸ್ವಾಮಿ ಹುಟ್ಟಿ ಮಳೆ ಹೋಗಿ ಬೆಳೆ ಒಣಗುತ್ತದೆ. ಆಗ ಜೋಕುಮಾರ ತನ್ನ ಕುದುರೆ ಏರಿ ಹೊಲಗದ್ದೆಗಳ ಲ್ಲಿ ಸಂಚರಿಸುತ್ತಾನೆ. ಇದಕ್ಕೆ ಸಾಕ್ಷಿ ಎಂಬಂತೆ ಹೊಲದಲ್ಲಿನ ಗಿಡಗಳ ಬುಡದಲ್ಲಿ ಹಾಗೂ ಎಲೆಗಳ ಮೇಲೆ ಬಿಳಿಯಾದ ಬುರುಗು (ನೊರೆ ) ಇರುತ್ತದೆ ಇದನ್ನು ಜೋಕುಮಾರ ಉಗುಳಿದ್ದಾನೆ. ಎಂದು ನಂಬುವ ರೈತರು ಜೋಕುಮಾರನ ಬಗ್ಗೆ ಮಾತನಾಡದೆ ಇರಲಾರ ರು.ಅವನು ತನ್ನ ಮೇಲು ಹೊದಿಕೆ ಒಮ್ಮೆ ಜೋರಾಗಿ ಆಕಾಶಕ್ಕೆ ಬೀಸಿದಾಗ ಮೋಡಗಳು ಮಳೆ ಸುರಿಸುತ್ತವೆ ಎಂಬ ಕಥೆಯ ಇದೆ ಎನ್ನುತ್ತಾರೆ ಹಿಂದಿನ ಕಾಲದ ಹಿರಿಯ ಯಜಮಾನರು ಚಿಕ್ಕ ಮಕ್ಕಳಿಗೆ ಕಥೆ ಹೇಳುವುದು ಸಾಮಾನ್ಯವಾಗ

ಉಜ್ಜಿನಿಪೀಠಕ್ಕೆ, ಕಾಶಿ ಶ್ರೀಶೈಲ ಜಗದ್ಗುರುಗಳನ್ನು ವೈಭವದ ಸ್ವಾಗತ

ಇಮೇಜ್
ಕೊಟ್ಟೂರು:ಉಜ್ಜಯಿನಿ ಪೀಠಕ್ಕೆ ಬುದುವಾರ ಆಗಮಿಸಿದ ಶ್ರೀಶೈಲ ಪೀಠದ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ 1008 ಡಾ. ಚೆನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಭಗವತ್ಪಾದರು ಹಾಗೂ ಕಾಶಿ ಪೀಠದ ನೂತನ ಶ್ರೀ ಶ್ರೀ ಶ್ರೀ1008 ಜಗದ್ಗುರು ಡಾ ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿ  ಉಜ್ಜಿನಿ ಪೀಠಕ್ಕೆ ಆಗಮಿಸಿದಾಗ ಎಲ್ಲಾ ಸದ್ಭಕ್ತರು ಅತ್ಯಂತ ವೈಭವ ಪೂರಿತವಾಗಿ ಬರಮಾಡಿಕೊಂಡರು. ಉಜ್ಜಯಿನಿ ಜಗದ್ಗುರು ಶ್ರೀ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳೊಂದಿಗೆ ಶ್ರೀ ಪೀಠದ ಕ್ಷೇತ್ರನಾಥ ಮರಳುಸಿದ್ದಸ್ವಾಮಿ, ಹಾಗೂ ಶಕ್ತಿ ದೇವತೆ ಗೌರಿ ದೇವಿ, ಮಹಾ ತಪಸ್ವಿ ಸಿದ್ದಲಿಂಗ ಜಗದ್ಗುರುಗಳ ಕರ್ತೃ ಗದ್ದುಗೆ ಜಗದ್ಗುರು ಮಹಾ ಸನ್ನಿಧಿಯವರುಗಳು ಪೂಜೆ ಸಲ್ಲಿಸಿ, ನೆರೆದಂತಹ ಭಕ್ತರಿಗೆ ಆಶೀರ್ವಾದವನ್ನು ನೀಡಿದರು.

ಕಾಂಗ್ರೆಸ್ ಪಕ್ಷದ ಕೊಪ್ಪಳ ಲೋಕಸಭಾ ಟಿಕೆಟ್ ಆಕಾಂಕ್ಷಿ ಬಸವರಾಜ್ ಸ್ವಾಮಿ ಮಳ್ಳೆಮಠ ಬೆಂಬಲಿಸಲು ಮನವಿ

ಇಮೇಜ್
ಮಸ್ಕಿ : ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿ ಬಸವರಾಜ್ ಸ್ವಾಮಿ ಮಳೆಮಠ ಅವರು ಇಂದು ಮಸ್ಕಿ ಕ್ಷೇತ್ರದ ವಿಧಾನಸಭಾ ಸದಸ್ಯರಾದ ಶಾಸಕರಾದ ಬಸವನಗೌಡ ತುರುವಿಹಾಳ ಅವರನ್ನು ಭೇಟಿ ಮಾಡಿ ಲೋಕಸಭಾ ಟಿಕೆಟ್ ಗಾಗಿ ತಮ್ಮನ್ನು ಬೆಂಬಲಿಸಲು ಮನವಿಮಾಡಿದರು. ಬಸವರಾಜ್ ಸ್ವಾಮಿ ಮಾತನಾಡಿ ಇಂದಿನ ಲೋಕಸಭಾ ಕ್ಷೇತ್ರದ ಸಂಸದರು ಭಾಷಾಜ್ಞಾನದ ಕೊರತೆಯಿಂದ, ಕೇಂದ್ರ ಸರ್ಕಾರದ ಆಡಳಿತ ವ್ಯವಸ್ಥೆ, ಅಧಿಕಾರಿ ವರ್ಗ ದೊಂದಿಗಿನ ಸಂವಹನವನದ ಕೊರತೆಯಿಂದಾಗಿ ,ಕೊಪ್ಪಳ ಲೋಕಸಭಾ ಕ್ಷೇತ್ರದ ಕೇಂದ್ರದ ಹಲವಾರು ಯೋಜನೆಗಳು ಕ್ಷೇತ್ರಕ್ಕೆ ತಂದು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ ಸಂಸತ್ ನಲ್ಲಿ ನಿರಾಳವಾಗಿ ಮಾತನಾಡಲು, ಕ್ಷೇತ್ರದ ಮತ್ತು ಭಾರತ ದೇಶದ ಜಲವಂತ ಸಮಸ್ಯೆಗಳು ಧ್ವನಿಯಾಗಲು ಕೇಂದ್ರ ಸರ್ಕಾರದ ಹಲವು ಹತ್ತು ಯೋಜನೆಗಳು ಅನುಷ್ಠಾನಕ್ಕಾಗಿ ಕೊಪ್ಪಳ ಲೋಕ ಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಸಂಸತ್ತಿನಲ್ಲಿ ರೈತರ, ಅಸಂಘಟಿತ ಕಾರ್ಮಿಕರ, ಬಡವರ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದ ಪರವಾದ ಧ್ವನಿಯಾಗಲು, ಚರ್ಚೆ ಮಾಡಲು, ಜನರೊಂದಿಗೆ ಜನರ ಸಮಸ್ಯೆಗಳಿಗೆ ಸ್ಪಂದಿಸಲು ನನ್ನನ್ನು ಲೋಕಸಭಾ ಕ್ಷೇತ್ರದ 2024ರ ಚುನಾವಣೆ ಅಭ್ಯರ್ಥಿಯನ್ನಾಗಿಸಲು ಈ ಭಾಗದ ಶಾಸಕರು ಮತ್ತು ಮುಖಂಡರು ನನಗೆ ಬೆಂಬಲಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಸ್ಕಿ ಗ್ರಾಮೀಣ ಬ್ಲಾಕ್ ಕಾಂಗ

ಶಾಂತಿ ಮತ್ತು ಸರಳತೆಯಿಂದ ನಡೆದ ಈದ್ ಮಿಲಾದ್

ಇಮೇಜ್
   ಕೊಟ್ಟೂರು ಮುಸ್ಲಿಂ ಧರ್ಮಗುರು ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮ ದಿನದ ಅಂಗವಾಗಿ ಮುಸ್ಲಿಂ ಬಾಂಧವರು ಸಂಭ್ರಮ ಸಡಗರದಿಂದ ಈದ್ ಮಿಲಾದ್ ಹಬ್ಬವನ್ನು ಗುರುವಾರ ಆಚರಣೆ ಮಾಡಿದರು. ಪಟ್ಟಣದ ಬಳ್ಳಾರಿ ಕ್ಯಾಂಪ್‌ನ ಶಾದಿಮಹಲ್‌ನಲ್ಲಿ ನಡೆಯಿತು. ಶಾಂತಿ, ಸರಳತೆಯಿಂದ ಎಲ್ಲಾ ಮುಸ್ಲಿಂ ಹಾಗೂ ಹಿಂದೂ ಬಾಂಧವರು ಪಾಲ್ಗೊಂಡು ಸೌಹಾರ್ದತೆಯಿಂದ ಕಾರ್ಯಕ್ರಮವನ್ನು ಆಚರಿಸಿದರು. ಪ್ರವಾದಿಗಳು ಸಂಪೂರ್ಣ ಮನುಕುಲ ಒಂದೇ ಎಂದು ಸಾರಿ, ಸಮಾನತೆಯ ಆದೇಶವಿತ್ತು, ಪರಸ್ಪರ ಪ್ರೀತಿಯೇ ಧರ್ಮದ ಸಾರವೆಂದು ಸಾರಿದ ಮಾನವತಾವಾದಿ. ಮನುಷ್ಯರು ಪರಸ್ಪರ ಸಹೋದರರಂತೆ ಬಾಳಬೇಕೆಂದು ಪ್ರೇರಣೆಯನ್ನಿತ್ತವರು. ಪ್ರವಾದಿಗಳು ತತ್ವಜ್ಞಾನಿಗಳು, ಸಮಾಜ ಸುಧಾರಕರು. ಅವರು ದಯಾಪರತೆ, ಔದಾರ್ಯ, ಸಂವೇದನಾಶೀಲತೆ, ದೈವಭಕ್ತಿ, ಪರಿಶ್ರಮ, ಪ್ರಾಮಾಣಿಕತೆಗಳೆಂಬ ಗುಣಗಳ ಒಡೆಯರಾಗಿದ್ದರು. ತಮ್ಮ ಶತ್ರುಗಳನ್ನೂ ಗೌರವದಿಂದ ಕಾಣುತ್ತಿದ್ದರು. ಜ್ಞಾನಾರ್ಜನೆ ಪ್ರತಿ ಮುಸ್ಲಿಂ ಸ್ತ್ರೀ-ಪುರುಷರ ಕರ್ತವ್ಯವಾಗುವ ಮೂಲಕ ಶಿಕ್ಷಣದ ಮಹತ್ವವನ್ನು ಅವರು ಎತ್ತಿಹಿಡಿದಿದ್ದಾರೆ ಎಂದು ಮುಸ್ಲಿಂ ಧರ್ಮ ಗುರುಗಳಾದ ಮುಫ್ತಿ ಯಾಸೀನ್ ಮೌಲಾನ ತಿಳಿಸಿದರು. ಮಹಿಳೆಯರಿಗೆ ಸಂಪೂರ್ಣ ಗೌರವ ಹಾಗೂ ಮುಕ್ತ ಸ್ವಾತಂತ್ರ್ಯವನ್ನು ಘೋಷಿಸಿದವರು ಪ್ರವಾದಿಗಳು. ಎಲ್ಲರೂ ತಮ್ಮ ನೆರೆಹೊರೆಯವರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸಬೇಕೆಂದು ಸೂಚಿಸುತ್ತಾರೆ. ಜೀವನದ ಪ್ರತಿ ಹೊಣೆಗಾರಿಕೆಯನ್ನು ಸಂಪೂರ್ಣವಾಗಿ ನಿರ್ವಹಿಸಬೇ

ಕೊಟ್ಟೂರು ತಾಲೂಕಿನ ಹ್ಯಾಳ್ಯಾ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ

ಇಮೇಜ್
ಕೊಟ್ಟೂರು ತಾಲ್ಲೂಕಿನ ಹ್ಯಾಳ್ಯಾ ಗ್ರಾಮ ಪಂಚಾಯಿತಿಗೆ ಈ ವರ್ಷ ಗಾಂಧಿ ಗ್ರಾಮ ಪುರಸ್ಕಾರ ಸಂದಿದೆ. ಕರ್ನಾಟಕ ಪಂಚಾಯತ್ ರಾಜ್ ಆಯುಕ್ತರು ಹ್ಯಾಳ್ಯಾ ಗ್ರಾಮ ಪಂಚಾಯಿತಿಯ ಆಡಳಿತ ವೈಖರಿಯನ್ನು ಗಮನಿಸಿ ಪುರಸ್ಕಾರದ ಆದೇಶ ಹೊರಡಿಸಿದ್ದಾರೆ. ನರೇಗಾ ಯೋಜನೆಯ ಅನುಷ್ಠಾನ, ೧೫ನೇ ಹಣಕಾಸು ಯೋಜನೆಯ ಅನುಷ್ಠಾನ, ಗ್ರಾಮ ಪಂಚಾಯಿತಿಯ ಕಾರ್ಯವೈಖರಿ, ಸಾಮಾನ್ಯ ಸಭೆ, ಗ್ರಾಮ ಸಭೆಗಳಲ್ಲಿ ಚರ್ಚಿಸಲಾದ ವಿಷಯಗಳ ಅನುಷ್ಠಾನ, ಆಯ-ವ್ಯಯದ ಅನುಷ್ಠಾನ, ೫೩, ೫೫, ೫೬ ನಮೂನೆಗಳ ನಿರ್ವಹಣೆ, ನರೇಗಾ ದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ, ಉದ್ಯೋಗ ಖಾತ್ರಿಯಲ್ಲಿ ಹೆಚ್ಚು ಮಾನವ ದಿನಗಳನ್ನು ಅನುಷ್ಠಾನಗೊಳಿಸಿರುವುದು, ಮೂಲಭೂತ ಸೌಕರ್ಯಗಳ ಅನುಷ್ಠಾನ ಈ ಎಲ್ಲ ಮಾನದಂಡಗಳನ್ನು ಪರಿಶೀಲಿಸಿ ಹ್ಯಾಳ್ಯಾ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಗ್ರಾಮ ಪಂಚಾಯಿತಿ  ಪ್ರಭಾರಿ ಪಿ.ಡಿ.ಒ. ಗಂಗಾಧರ ಮಾತನಾಡಿ, ಈ ಸಲ ಗಾಂಧಿ ಪುರಸ್ಕಾರ ನಮ್ಮ ಹ್ಯಾಳ್ಯಾ ಗ್ರಾಮ ಪಂಚಾಯಿತಿ ಆಯ್ಕೆಯಾಗಿರುವುದು ತುಂಬಾ ಸಂತೋಷವಾಗಿದೆ. ಈ ಪುರಸ್ಕಾರ ಬಂದಿರುವುದರಿಂದ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ. ಈ ರೀತಿಯ ಪ್ರೋತ್ಸಾಹಗಳು ಬರುವುದರಿಂದ ಕ್ರಿಯಾಶೀಲತೆಯಿಂದ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.

*🪔ನಿಧನ ವಾರ್ತೆ: ಇಮ್ಮಡಾಪುರದ ದಂಡೆಮ್ಮ ನಿಧನ - ಕೂಡ್ಲಿಗಿ🪔*

ಇಮೇಜ್
ವಿಜಯನಗರ ಜಿಲ್ಲೆ ಕೂಡ್ಲಿಗಿ:ಪಟ್ಟಣದ14ನೇ ವಾರ್ಡ ವಾಸಿಯಾದ ಡಾ. ಬಿ. ಆರ್. ಅಂಬೇಡ್ಕರ್ ನಗರದ ಇಮ್ಮಡಾಪುರದ ದಂಡೆಮ್ಮ ರವರು (75) ಇವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಈ ದಿನ ಮಧ್ಯಾಹ್ನ 9.30 ರ ಸಮಯಲ್ಲಿ ಬಳ್ಳಾರಿಯ ವಿಮ್ಸ್ ಹಾಸ್ಪೆಟಲ್ನಲ್ಲಿ ನಿಧಾನ ಹೊಂದಿರುತ್ತಾರೆ. ಇವರಿಗೆ ಓರ್ವ ಗಂಡು 4 ಜನ ಹೆಣ್ಣು ಮಕ್ಕಳಿದ್ದು ಇವರನ್ನು ಸಮುದಾಯದ ಹಿರಿಯರು ಅವರ ಮಕ್ಕಳು ಹಾಗೂ ಮೊಮ್ಮಕ್ಕಳು ಸೇರಿದಂತೆ, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. *ಅಂತ್ಯಕ್ರಿಯೆ:-* ಮೃತರಾದ ಇಮುಡಾಪುರ ದಂಡೆಮ್ಮ ಇವರ ಅಂತ್ಯಕ್ರಿಯೆ ನಾಳೆ ಬೆಳಿಗ್ಗೆ 10:30ಕ್ಕೆ ಗಂಟೆಗೆ, ಪಟ್ಟಣದ ಅಂಚಿನಲ್ಲಿರುವ ಶಾಂತಿ ವನದಲ್ಲಿ ಜರುಗಲಿದೆ. *ಸಂತಾಪ:-* ಪಟ್ಟಣ ಸೇರಿದಂತೆ ತಾಲೂಕಿನ ಸಮಸ್ತ ಸಮಾಜದವರು, ಹಾಗೂ ವಿವಿದ ಸಮಾಜದವರು ಮುಖಂಡರಗಳು ಹಾಗೂ ಇಮ್ಮಡಾಪುರ ವಂಶದವರು ಸೇರಿದಂತೆ ವಿವಿದ ಜನ ಪ್ರತಿನಿಧಿಗಳು. ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ರೈತರು, ಕಾರ್ಮಿಕರು, ವಿವಿದ ಪಕ್ಷಗಳ ಮುಖಂಡರು, ನಾಗರೀಕರು ಹಾಗೂ ಗಣ್ಯರು, ನಿಧನರಾದ ಇಮ್ಮಡಪುರದ ದಂಡೆಮ್ಮ ರವರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಹಂಪನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಲಕರ ಖೋ ಖೋ ತಂಡ ವಿಭಾಗ ಮಟ್ಟಕ್ಕೆ ಆಯ್ಕೆ

ಇಮೇಜ್
ಮಸ್ಕಿ : ತಾಲ್ಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಂಪನಾಳ ಬಾಲಕರ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಪ್ರಬಲ ಸ್ಪರ್ಧೆಯಿಂದ ಮಣಿಸುವ ಮೂಲಕ ವಿಭಾಗೀಯ ಮಟ್ಟಕ್ಕೆ ಆಯ್ಕೆ ಯಾಗುವ ಮೂಲಕ ಶಾಲೆಯ ಘನತೆ ಗೌರವ ಹೆಚ್ಚಿಸಿದ್ದಾರೆ ನನ್ನ ಶಾಲೆಯ ಮಕ್ಕಳು ಎಂದು ಶಾಲಾ ಆಡಳಿತ ಹರ್ಷ ವ್ಯಕ್ತಪಡಿಸಿದ್ದಾರೆ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಂಪನಾಳ ಬಾಲಕರ ಶಾಲೆಯ ವಿದ್ಯಾರ್ಥಿಗಳ ಪಂದ್ಯಾವಳಿಯು ಜಿಲ್ಲಾ ಮಟ್ಟದಿಂದ ವಿಭಾಗೀಯ ಮಟ್ಟಕ್ಕೆ ಆಯ್ಕೆ ಆಗಿರುವುದು ನಮ್ಮ ಭಾಗದ ಬಾಲಕರಿಗೆ ಸಿಕ್ಕ ದೊಡ್ಡ ಯಶಸ್ಸು, ವೆಂಕೋಬ ರವರ ಮಾರ್ಗ ದರ್ಶನದಲ್ಲಿ ಮೊದಲ ಬಾರಿಗೆ ಜಿಲ್ಲಾ ಮಟ್ಟದಿಂದ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇಂತಹ ಅದ್ಭುತ ಸಾಧನೆಗೈದ ವಿದ್ಯಾರ್ಥಿಗಳಿಗೆ ಎಸ್ ಡಿ ಎಂ ಸಿ ಅಧ್ಯಕ್ಷ ಹಾಗೂ ಸದಸ್ಯರು, ಗ್ರಾಮಸ್ಥರು ಅಭಿನಂದನೆ ಸಲ್ಲಿಸಿ ಮುಂದಿನ ದಿನಗಳಲ್ಲಿ ರಾಷ್ಟ್ರ ಮಟ್ಟದವರೆಗೆ ಆಯ್ಕೆಯಾಗಿ ಗ್ರಾಮಕ್ಕೆ ಉತ್ತಮ ಹೆಸರು ತರಬೇಕೆಂದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿ ಹರ್ಷವ್ಯಕ್ತಪಡಿಸಿದರು.

ಕಾಲು, ಬಾಯಿ ಜ್ವರ ತಡೆ ಲಸಿಕಾ ಅಭಿಯಾನಕ್ಕೆ ಚಾಲನೆ

ಇಮೇಜ್
ಕಾನ ಹೊಸಹಳ್ಳಿ: ಸಮೀಪದ ಹೂಡೇಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಯಕನಹಳ್ಳಿ ಪಶುಪಾಲನೆ ಆಸ್ಪತ್ರೆ ಮತ್ತು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ಇವರ ಸಹಯೋಗದೊಂದಿಗೆ ಮಂಗಳವಾರ ಕಾಲು ಬಾಯಿ ರೋಗ ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ಹೂಡೇಂ ಗ್ರಾ.ಪಂ ಅಧ್ಯಕ್ಷ ಬಿ ರಾಮಚಂದ್ರಪ್ಪ ಗೋಮಾತೆಗೆ ಪೂಜೆ ಮಾಡಿ ನಂತರ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು ಮನೆಯ ರಾಸುಗಳಿಗೆ ಸಕಾಲದಲ್ಲಿ ಲಸಿಕೆ ಹಾಕಿಸಿ ಅವುಗಳ ಜೀವ ಉಳಿಸಿ ಎಂದರು. ಈ ವೇಳೆ ತಾಯಕನಹಳ್ಳಿ ಪಶು ಚಿಕಿತ್ಸಾಲಯ ಡಾ ಸುನಿಲ್ ಕುಮಾರ್ ಮಾತನಾಡಿ, ಬರದ ಪರಿಸ್ಥಿತಿಯಲ್ಲಿ ರೈತರಿಗೆ ಹೈನುಗಾರಿಕೆಯೇ ಮುಖ್ಯವಾಗಿದೆ. ರಾಸುಗಳಿಗೆ ತಪ್ಪದೆ ಲಸಿಕೆ ಹಾಕಿಸಿ ಎಂದರು. ಈ ವೇಳೆ ಕಾಲು, ಬಾಯಿ ಜ್ವರದ ಬಗ್ಗೆ ಜಾಗೃತಿ ಮೂಡಿಸುವ ಭಿತ್ತಿ ಪತ್ರ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಕುಮಾರ್, ಮುಖಂಡರಾದ ಹುಡೇಂ ಬೋಸಯ್ಯ, ಸಿಬ್ಬಂದಿ ನಾಗೇಶ್, ಊರಿನ ಮುಖಂಡರು, ಮಹಿಳೆಯರು ಉಪಸ್ಥಿತರಿದ್ದರು‌

ದಲಿತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿದ್ಯಾರ್ಥಿ ಸಮಸ್ಯೆಯ ಕುರಿತು ಮನವಿ

ಇಮೇಜ್
ಮಸ್ಕಿ : ಪಟ್ಟಣದ ಅಂಬೇಡ್ಕರ್ ವೃತ್ತ ಗಾಂಧೀ ನಗರದಿಂದ ಕಾಲ್ನಡಿಗೆಯ ಜಾಥಾ ಮೂಲಕ ತಹಶೀಲ್ದಾರ್ ಕಚೇರಿಯ ವರೆಗೆ ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ನ್ಯಾಯ ಒದಗಿಸಬೇಕು ಎಂದು ಘೋಷಣೆ ಕೂಗುತ್ತಾ ತೆರಳಿ ಕಚೇರಿ ಬಳಿ ಧರಣಿ ನಡೆಸಿ ಕೊನೆಗೆ ತಹಶೀಲ್ದಾರರಿಗೆ ಹಾಗೂ ಶಾಸಕರ ಆಪ್ತರಿಗೆ ದಲಿತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಮನವಿ ಪತ್ರವನ್ನು ಸಲ್ಲಿಸಲಾಯಿತು. ಬುಧವಾರ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ತಹಶೀಲ್ದಾರ ಕಚೇರಿವರೆಗೆ ದಲಿತ ವಿದ್ಯಾರ್ಥಿ ಪರಿಷತ್ ಮುಂದಾಳತ್ವದಲ್ಲಿ ನೂರಾರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾಲ್ನಡಿಗೆ ಜಾಥಾ ಮುಖಾಂತರ ತೆರಳಿ ತಹಶೀಲ್ ಕಚೇರಿಯ ಮುಂಭಾಗಲ್ಲಿ ಪ್ರತಿಭಟನೆ ನಡೆಸಿ, ಮಸ್ಕಿ ತಾಲೂಕು ವಿದ್ಯಾರ್ಥಿಗಳ ಹಲವಾರು ಸಮಸ್ಯೆಗಳ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಘೋಷಣೆಯನ್ನು ಕೂಗುತ್ತಾ, ವಿದ್ಯಾರ್ಥಿ ಯುವ ಜನರ ಶೈಕ್ಷಣಿಕ ಅಭಿವೃದ್ಧಿಗಾಗಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಸ್ಕಿಯ ತಹಶೀಲ್ದಾರರಾದ ಅರಮನೆ ಸುಧಾ ಹಾಗೂ ಮಸ್ಕಿ ಕ್ಷೇತ್ರದ ಶಾಸಕರ ಆಪ್ತ ಸಹಾಯಕ ಬಸವರಾಜ್ ಯದ್ದಲದಿನ್ನಿ ಇವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ವಿದ್ಯಾರ್ಥಿಗಳ ಬೇಡಿಕೆಗಳನ್ನು ಶೀಘ್ರವೇ ಈಡೇರಿಸುವುದಾಗಿ ಭರವಸೆಯನ್ನು ನೀಡಿದರು. ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರರಾದ ಎಚ್.ಎನ್ ಬಡಿಗೇರ್ , ಮಹಿಳಾ ಮಹಾಶಕ್ತಿ ಸಬಲೀಕರಣ ಸಂಘಟನೆಯ ಸಂಸ್ಥಾಪಕ ಮತ್ತು ರಾಜ್ಯಾಧ್ಯಕ್ಷರಾದ ಶ್ರ

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಿಗೆ ಮನವಿ

ಇಮೇಜ್
ಹಗರಿ ಬೊಮ್ಮನಹಳ್ಳಿ ಸಹಾಯಕ ನಿರ್ದೇಶಕ ಆಂಜನೇಯ ನೇತೃತ್ವದಲ್ಲಿ ಹಂಪಸಾಗರ ಭೇಟಿ ನೀಡಿ ಅಲೆಮಾರಿ ಸಮುದಾಯಗಳಾದ ಕೊರಮ ಕೊರಚ ಕೊರವ ಸಮುದಾಯಗಳಿಗೆ ನಿವೇಶನ ಹಕ್ಕು ಪತ್ರ ಹಾಗೂ ಶ್ರೀ ನೂಲಿಚಂದಯ್ಯ ಸಮುದಾಯ ಭವನ ನಿರ್ಮಾಣ ಮಾಡುಬೇಕೆಂದು ಮನವಿ ಸಲ್ಲಿಸಲಾಯಿತು.ಶ್ರೀ ನೂಲಿಚಂದಯ್ಯ ಯುವ ಘಟಕ ಹಂಪ.ಸಾಗರ ಹುಡುಚಪ್ಪ ಹೆಚ್ ಭಜಂತ್ರಿ ಪ್ರಧಾನ ಕಾರ್ಯದರ್ಶಿ ಹಾಗೂ ಸಮುದಾಯದ ಉಪಸ್ಥಿತರಿದ್ದರು 

ಕೆ. ರಾಯಪುರ ಗ್ರಾಮದ ಬಾಲಕ ಸಾವು ದುರಂತ, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಸ್ಥಳಕ್ಕೆ ಬೇಟಿ,ಎರಡು ಲಕ್ಷ ನೆರವು.

ಇಮೇಜ್
ಕೂಡ್ಲಿಗಿ : ತಾಲೂಕಿನ ಕೆ. ರಾಯಪುರ ಗ್ರಾಮದಲ್ಲಿ ಗುಡಿಸಲು ಬಂಡೆ ಕುಸಿದು ನಾಲ್ಕು ವರ್ಷದ ಬಾಲಕ ತೇಜಸ್ ಮೃತ ಪಟ್ಟ ಕುಟುಂಬಕ್ಕೆ ವಸತಿ, ಅಲ್ಪಸಂಖ್ಯಾತರ ಹಾಗೂ ವಿಜಯನಗರ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ವೈಯಕ್ತಿಕವಾಗಿ ಎರಡು ಲಕ್ಷ ರೂ. ಪರಿಹಾರ ನೀಡಿದ್ದಾರೆ. ಜಿಲ್ಲಾ ಪ್ರವಾಸದಲ್ಲಿದ್ದ ಸಚಿವರು, ಮಂಗಳವಾರ ಘಟನೆ ತಿಳಿದು ಶಾಸಕ ಶ್ರೀನಿವಾಸ್ ಜತೆಗೂಡಿ ಗ್ರಾಮಕ್ಕೆ ಭೇಟಿ ನೀಡಿ ಮಗುವಿನ ತಂದೆ ಶಾಂತಕುಮಾರ್ -ತಾಯಿ ಮಲ್ಲೇಶ್ವರಿಗೆ ದುರಂತದ ಕುರಿತು ಸಾಂತ್ವನ ಹೇಳಿ ಶಾಸಕರು ಹಾಗೂ ಸಚಿವರು ಎರಡು ಲಕ್ಷ ಪರಿಹಾರ ನೀಡಿದರು. ಹಾಗೆ ಇವರಿಗೆ ಮನೆ ಇಲ್ಲದೆ ಇರುವುದನ್ನು ತಿಳಿದು ವಸತಿ ಸಚಿವರು ತಮ್ಮ ಅಧಿಕಾರಿಗಳನ್ನು ಕರೆದು ಆ ಬಡ ಕುಟುಂಬಕ್ಕೆ  ರಾಜೀವ್ ಗಾಂಧಿ ವಸತಿ ನಿಗಮದಿಂದ ಅಂಬೇಡ್ಕರ್ ಆವಾಸ್ ಯೋಜನೆಯಡಿಯಲ್ಲಿ ಮನೆ ಕಟ್ಟಿಕೊಡುವ ಭರವಸೆ ಸಹ ನೀಡಿದರು.ಹಾಗೂ ಮುಖ್ಯಮಂತ್ರಿ ಅವರ ಪರಿಹಾರ ನಿಧಿ ಯಿಂದಲೂ ನೆರವು ಕೊಡಿಸುವುದಾಗಿ ಹೇಳಿದರು. ಶಾಸಕ ಶ್ರೀನಿವಾಸ್ ಈ ಸಂದರ್ಭದಲ್ಲಿ DSS. ಮುಖಂಡ ಚಂದ್ರು ಇವರು ಮಗುವಿನ ಘಟನೆಯ ದುರಂತದ ವಿಷಯ ತಿಳಿಸಿ ಕೆಲವು ಫೋಟೋಗಳನ್ನು ಶಾಸಕರಿಗೆ ವಾಟ್ಸಾಪ್ ಕಳಿಸಿದ ತಕ್ಷಣ ಶಾಸಕರು ಈ ವಿಷಯವನ್ನು ತುಂಬಾ ಗಂಬೀರವಾಗಿ ತೆಗೆದುಕೊಂಡು ಘಟನೆಯ ಬಗ್ಗೆ ಸಚಿವರಿಗೆ ತಿಳಿಸಿ,ಈ ದಿನ ಸಮಯ ಬಿಡುವು ಮಾಡಿಕೊಂಡು ಗ್ರಾಮಕ್ಕೆ ಮಂಗಳವಾರ ರಾತ್ರಿ ಸಮಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಮಗುವನ್ನು ಕಳೆದುಕೊಂಡಿದ್ದ ದಲಿತ ಕುಟ

ತರಳಬಾಳು ಸ್ವಾಮೀಜಿಗಳೇ ನಿಮ್ಮ ಮಾತು ಬರೀ ಪೊಳ್ಳು ಆಶ್ವಾಸನೆಯಾಯಿತೇ?

ಇಮೇಜ್
  ಬಡದಲಿತರ ಮೇಲಿನ ದಬ್ಬಾಳಿಕೆಗೆ ಕೊನೆಯೇ ಇಲ್ಲವೇ? ಮೇಲ್ವರ್ಗದ ದಬ್ಬಾಳಿಕೆಯಿಂದ ಮುಕ್ತಿ ಗೊಳ್ಳಿಸಿ| ನಮ್ಮನ್ನು ಬದುಕಲು ಬಿಡಿ ಎನ್ನುವ| ಬಡ ದಲಿತ ಕುಟುಂಬಗಳ ಆಕ್ರಂದನ..! ಕೊಟ್ಟೂರು ಪಟ್ಟಣದಲ್ಲಿ ಈ ಹಿಂದೆ ತರಳಬಾಳು ಹುಣ್ಣಿಮೆ ಕಾರ್ಯಕ್ರಮದ ಸಂದರ್ಭದಲ್ಲಿ ಕಾರ್ಯಕ್ರಮದ ಮೊದಲ ದಿನವೇ ಜಗಳೂರು, ಉಜ್ಜಿನಿ ಮಾರ್ಗದ ಮೂಲಕ ಕೊಟ್ಟೂರಿಗೆ ಬರುವ ಕಾಳಾಪುರ ಗ್ರಾಮದ ಹತ್ತಿರ ಗಲಾಟೆಗಳು ನಡೆದು, ಮೇಲ್ವರ್ಗದವರು ದಲಿತರ ಮನೆಗಳ ಮೇಲೆ ಸುಖಾಸುಮ್ಮನೆ ಗ್ರಾಮದೊಳಗೆ ನುಗ್ಗಿ ದಲಿತರ ಮನೆಗಳನ್ನು ಹೊಕ್ಕು, ಪ್ರಾಣಹಾನಿ ಹಾಗೂ ಚರಾಸ್ತಿಗಳಾದ ಸೈಕಲ್ ಮೋಟಾರ್, ಆಟೋ, ಇನ್ನಿತರೆ ಮನೆಯ ಚರಾಸ್ತಿಗಳನ್ನು ಸುಟ್ಟು ಭಯದ ವಾತಾವರಣವನ್ನು ಸೃಷ್ಟಿಸಿದ್ದರು. ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ಸಹ ಈ ಹಿಂದೆ ದಾಖಲಾಗಿತ್ತು. ಈ ಸಂದಿಗ್ಧತೆಯನ್ನು ಅರಿತ ತರಳಬಾಳು ಸ್ವಾಮಿಗಳು ಆ ಹುಣ್ಣಿಮೆ ಕಾರ್ಯಕ್ರಮದ ವೇದಿಕೆಯಲ್ಲಿ ಕಾಳಾಪುರ ಗ್ರಾಮವನ್ನು ದತ್ತು ತೆಗೆದುಕೊಳ್ಳುತ್ತೇವೆ ಎಂದು ಆಶ್ವಾಸನೆಯನ್ನು ಕೊಟ್ಟಿದ್ದರು. ಕಾರ್ಯಕ್ರಮ ೦೫-೦೩-೨೦೨೩ ರಂದು ನಡೆದು ಸುಮಾರು ಏಳು ತಿಂಗಳು ಗತಿಸಿದರೂ ಇದುವರೆಗೂ ಕಾಳಾಪುರ ಗ್ರಾಮಸ್ಥರಿಗೆ ಯಾವುದೆ ಪರಿಹಾರ ದೊರೆತಿರುವುದಿಲ್ಲ. ತಮ್ಮ ಕಾರ್ಯಕ್ರಮಕ್ಕೆ ಅಪಾಯ ಬರಬಹುದೆಂಬ ನಿಟ್ಟಿನಲ್ಲಿ ವೇದಿಕೆಯ ಮೇಲೆ ಸ್ವಾಮೀಜಿಗಳು ಕೊಟ್ಟ ಆಶ್ವಾಸನೆ ಬರೀ ಮಾತಿನಲ್ಲಿಯೇ ಇದೆ ವಿನಾಃ ಯಾವುದೇ ಪ್ರಯೋಜನವೂ ಆಗಿಲ್ಲ, ಪರಿಹಾರವೂ ದೊರೆತಿಲ್ಲ. ಇತ್ತ

ಶಾಸಕರ ಕಾರ್ಯಾಲದ ಮುಂಭಾಗದಲ್ಲಿರುವ ರಸ್ತೆಗೆ ಶ್ರೀ ಕಾಳಿಕಾದೇವಿ ರಸ್ತೆ ಎಂದು ಹೆಸರಿಡಬೇಕು ಎಂದು ಮನವಿ

ಇಮೇಜ್
ಮಸ್ಕಿ : ತಾಲೂಕಿನ ಶಾಸಕರ ಕಾರ್ಯಾಲದ ಮುಂಭಾಗದಲ್ಲಿರುವ ರಸ್ತೆಗೆ ಶ್ರೀ ಕಾಳಿಕಾದೇವಿ ರಸ್ತೆ ಎಂದು ಹೆಸರಿಡಬೇಕು ಹಾಗೂ ಪುರಸಭೆಯ ಹೊಸ ಮಳಿಗೆ ಪಕ್ಕದಲ್ಲಿ ಶ್ರೀ ಭಗವಾನ್ ವಿಶ್ವಕರ್ಮ ಎಂದು ನಾಮಫಕಲ ಹಾಕಲು ಪರವಾನಿಗೆ ನೀಡಬೇಕೆಂದು ಮಸ್ಕಿ ತಾಲೂಕಿನ ವಿಶ್ವಕರ್ಮ ಸಮಾಜ ವತಿಯಿಂದ ಪುರಸಭೆ ಮುಖ್ಯ ಅಧಿಕಾರಿಗೆ ಮನವಿ ಮಾಡಿದರು. ಮಸ್ಕಿ ತಾಲೂಕಿನ ಮಸ್ಕಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಶಾಸಕರ ಕಾರ್ಯಾಲದ ಮುಂಭಾಗದಲ್ಲಿರುವ ರಸ್ತೆಯಲ್ಲಿ ಹಳೆಯ ಪುರಾತನ ದೇವಸ್ಥಾನವಿದ್ದು ಅ ರಸ್ತೆಗೆ ಶ್ರೀ ಕಾಳಿಕಾದೇವಿ ರಸ್ತೆ ಎಂದು ಹೆಸರಿಡಬೇಕು ಮತ್ತು ಮಸ್ಕಿ ತಾಲೂಕಿನಲ್ಲಿ ಹಲವಾರು ವೃತ್ತಗಳಿಗೆ ಗಣ್ಯ ಮಾನ್ಯರು ಸಮಾಜ ಸುಧಾಕರರವರುಗಳ ಹೆಸರುಗಳು ಇದ್ದು. ವಿಶ್ವಕರ್ಮ ಸಮಾಜದ ಯಾವ ರಸ್ತೆ ಅಥವಾ ವೃತ್ತಕ್ಕೂ ಹೆಸರು ಇಲ್ಲದ ಕಾರಣ ವಿಶ್ವಕರ್ಮ ಸಮಾಜದ ಸೃಷ್ಟಿ ಕರ್ತ ಶ್ರೀ ಭಗವಾನ್ ವಿಶ್ವಕರ್ಮ ಇವರ ಹೆಸರಿನ ನಾಮಫಕಲ ಹಾಕಲು ಪರವನಿಗೆ ನೀಡಬೇಕು ಈ ಹಿಂದೆ ಪುರಸಭೆ ಮುಖ್ಯಾಧಿಕಾರಿ ಗಳು ವಿಶ್ವಕರ್ಮ ಸಮಾಜದ ವತಿಯಿಂದ ಮನವಿ ಪತ್ರ ನೀಡಿದರು ಈ ಕೆಲಸ ಆಗಿರಲಿಲ್ಲ ಆದ್ದರಿಂದ ವಿಶ್ವಕರ್ಮ ಸಮಾಜದವರು ಶಾಸಕರ ಗಮನಕ್ಕೆ ತಂದ ನಂತರ ಶಾಸಕರು ಮನವಿ ಪತ್ರವನ್ನು ಪುರಸಭೆಗೆ ಮುಖ್ಯ ಅಧಿಕಾರಿಗೆ ಸಲ್ಲಿಸಿ ಎಂದು ತಿಳಿಸಿದರು. ನಂತರ ಸಮಾಜದವರೆಲ್ಲ ಸೇರಿ ಪುರಸಭೆ ಮುಖ್ಯ ಅಧಿಕಾರಿ ನರಸ ರೆಡ್ಡಿ ಇವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಿಜಯ ಬಡಿಗೇರ್, ಅಮರೇಶ ಪ

*'ಕಲಾ ಸೇವಾ ರತ್ನ' ಸಿರಿ ಸಾಸಲವಾಡ ಚನ್ನವೀರ ಸ್ವಾಮಿ*

ಇಮೇಜ್
ಕೂಡ್ಲಿಗಿ:ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಸಾಸಲವಾಡ ಗ್ರಾಮದ ಕಲಾವಿದ ಸಿ, ಎಂ,ಚನ್ನವೀರ ಸ್ವಾಮಿ ಇವರಿಗೆ *ಕಲಾ ಸೇವಾ ರತ್ನ* ಪ್ರಶಸ್ತಿ ಲಭಿಸಿದೆ. ಕವಿತಾ ಮೀಡಿಯಾ ಸೋರ್ಸ್ ಪ್ರೈ,ಲಿ, ಹೈ ಬ್ರೀಡ್ ನ್ಯೂಸ್ ಕನ್ನಡ ಸುದ್ದಿವಾಹಿನಿ ಸತತ ಕಳೆದ ಐದು ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ಸೇವೆಸಲ್ಲಿಸಿ ಸಾಧನಗೈದ ಸಾಧಕರಿಗೆ ಪುರಸ್ಕಾರ ನೀಡುತ್ತಿದ್ದು,ಸೆಪ್ಟೆಂಬರ್ 24 ರಂದು ಧಾರವಾಡದ ರಂಗಾಯಣದಲ್ಲಿ ಪರಮ ಪೂಜ್ಯ ಶ್ರೀ ಮಹೇಶ್ವರ ಮಹಾ ಸ್ವಾಮಿಗಳು,ಪುಣ್ಯಕ್ಷೇತ್ರ ನಂದಿಪುರ, ಶ್ರೀ ಸದ್ಗುರು ಗಾಡಿತಾತ ಶಿವಶರಣರು ಚೌಕಿಮಠ ಕೊಂಬಳಿ ಇವರ ಸಾನಿಧ್ಯದಲ್ಲಿ ಸುದ್ದಿವಾಹಿನಿಯ ಸಂಸ್ಥಾಪಕರಾದ ಬಿ, ಎನ್,ಹೊರಪೇಟೆ ಇವರು ಆಯೋಜಿಸಿದ್ದ ಕರುನಾಡ ಸಾಧಕರು 2023 ಕಾರ್ಯಕ್ರಮದಲ್ಲಿ ರಂಗಭೂಮಿಯ ಸಂಗೀತ ಕ್ಷೇತ್ರದಲ್ಲಿ ಸೇವೆಗೆ ಪರಿಗಣಿಸಿ ಕಲಾ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಎಂದು ಸಿ, ಎಂ, ಚನ್ನವೀರ ಸ್ವಾಮಿ ಪತ್ರಿಕೆಗೆ ತಿಳಿಸಿದ್ದಾರೆ. ಇವರಿಗೆ ಸಾಸಲವಾಡ ಸೇರಿದಂತೆ ತಾಲೂಕಿನ ಸಂಗೀತ ಕಲಾವಿದರು,ರಂಗಭೂಮಿ ಕಲಾವಿದರು, ವಿವಿಧ ಸಂಘಟನೆಯ ಪದಾಧಿಕಾರಿಗಳು, ಜನಪ್ರತಿನಿಧಿಗಳು,ಮೆಚ್ಚುಗೆ ವ್ಯಕ್ತಪಡಿಸಿ,ಅಭಿನಂದನೆ ಸಲ್ಲಿಸಿದ್ದಾರೆ.

*SDMC, ಸದಸ್ಯರಿ ಗೆ ಪಟ್ಟಣ ಹಾಗೂ ಹಳ್ಳಿಗಳ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಜರಿಗೆ ಜಾಗೃತಿ ಮೂಡಿಸಿ, ಗುನ್ನಳ್ಳಿ ರಾಘವೇಂದ್ರ*

ಇಮೇಜ್
ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಶಾಲಾ ಅಭಿವೃದ್ಧಿ ಮೇಲ್ ಉಸ್ತುವಾರಿ ಸಮಿತಿ ಸಮನ್ವಯ ವೇದಿಕೆ ಕೂಡ್ಲಿಗಿ ಹಾಗೂ ಕೊಟ್ಟೂರು ತಾಲೂಕು ಘಟಕದ ವತಿಯಿಂದ ತಾಲೂಕಿನ ಎಸ್ಡಿಎಂಸಿ ಸದಸ್ಯರಿಗೆ ಪೂರ್ವಭಾವಿ ಸಭೆ ಆಯೋಜನೆ. ಈ ಕಾರ್ಯಕ್ರಮದಲ್ಲಿ ಸಿಐಟಿಯು ಮುಖಂಡ ವಿರುಪಾಕ್ಷಪ್ಪ ವಕೀಲರು ಭಾಗವಹಿಸಿ ಮಾತನಾಡುತ್ತ ಎಲ್ಲರೂ ಸೇರಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡುವಂತಹ ಕೆಲಸ ಎಸ್ಡಿಎಂಸಿ ಅಧ್ಯಕ್ಷರಿಗೆ ಇದೆ. ನಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ಕೊಡಿಸುವುದರ ಬಗ್ಗೆ ನಾವುಗಳು ಯೋಚನೆ ಮಾಡಬೇಕು,ಶಿಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಳ್ಳೆಯ ಕೆಲಸ ಮಾಡಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಎಸ್ ಡಿ ಎಮ್ ಸಿ ಜಿಲ್ಲಾಧ್ಯಕ್ಷರಾದ ಗುನ್ನಳ್ಳಿ ರಾಘವೇಂದ್ರ ಮಾತನಾಡಿ ಖಾಸಗಿ ಶಾಲೆಗಳ ಡೊನೇಷನ್ ಹಾವಳಿ ಹೆಚ್ಚಾಗಿದೆ. ಈ ಹಾವಳಿಯನ್ನು ತಪ್ಪಿಸಬೇಕೆಂದರೆ ನಮ್ಮ ಪಟ್ಟಣ ಹಾಗೂ ಹಳ್ಳಿಗಳಲ್ಲಿರುವ ಸರ್ಕಾರಿ ಶಾಲೆಗಳನ್ನು ನಾವು ಎಸ್ ಡಿಎಂ ಸಿ ಅಧ್ಯಕ್ಷರುಗಳು ಹಾಗೂ ಸದಸ್ಯರು ಶಾಲೆಯ ಅಭಿವೃದ್ಧಿಯತ್ತ ಸಾಗೋಣ ಎಂದು ತಿಳಿಸುತ್ತ ಶಾಲೆಯ ಅಧ್ಯಕ್ಷರಾಗಬೇಕೆಂದರೆ ಪುಣ್ಯದ ಕೆಲಸ ನಾವು ಮಕ್ಕಳ ಮನಸ್ಸಲ್ಲಿ ಉಳಿವಂತ ಒಳ್ಳೆಯದನ್ನು ಮಾಡಿದರೆ ಮುಂದೊಂದು ದಿನ ಆ ಮಕ್ಕಳು ನಮ್ಮನ್ನು ಒಳ್ಳೆಯ ಕೆಲಸದ ಬಗ್ಗೆ ನೆನಪಿಸಿಕೊಳ್ಳುತ್ತಾರೆ. ಸರ್ಕಾರಿ ಶಾಲೆಯಲ್ಲಿ ಸಾಕಷ್ಟು ಸೌಲಭ್ಯಗಳು ಇವೆ. ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿದರ

ನಾಳೆ ದಲಿತರ ದ್ವನಿ ಕ್ರಾಂತಿಕಾರಿ ಗಾಯಕ ಗದ್ದರ್ ಗೆ ಶ್ರದ್ಧಾಂಜಲಿ

ಇಮೇಜ್
ಮಾನ್ವಿ ಸೆ ೨೫ :-ಗದ್ದರ್ ರವರು ಆಂಧ್ರ ಪ್ರದೇಶದ ತೆಲಂಗಾಣ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆಸಿದ ಮುಂಚೂಣಿ ನಾಯಕರಾಗಿದ್ದರು. ವಿಶಾಲವಾದ ಭಾರತದುದ್ದಕ್ಕೂ ಗದ್ದರ್ ರವರು ಕಾರ್ಯಕ್ರಮಗಳ ಮೂಲಕ ಶೋಷಿತ ಸಮುದಾಯಗಳಿಗೆ ಉತ್ಸಾಹ ನೀಡಿದಂತಹ ರೋಮಾಂಚನಗೊಳ್ಳುವ ಹಾಡುಗಳ ಮೂಲಕ ಅರಿವು ಮೂಡಿಸುತ್ತಿದ್ದರು. ಗದ್ದರ್ ರವರ ಕಾರ್ಯಕ್ರಮವೆಂದರೆ ಲಕ್ಷಾಂತರ ಜನ ಸೇರುತಿದ್ದರು. ಅವರ ನಿಷ್ಟೂರವಾದ ನೇರವಾದ ನುಡಿ, ಪದಗಳ ಬಳಕೆ ಹಾಡುಗಳ ಸಾಲಿನ ಅರ್ಥವಾಗುತ್ತದೆ. ಗದ್ದರ್ ರವರು ನಮ್ಮನ್ನು ಅಗಲಿದ್ದರೂ ಅವರ ಹಾಡುಗಳು ಮತ್ತು ಮಾತುಗಳು ನಮ್ಮಲ್ಲಿ ಜೀವಂತವಾಗಿದೆ.ದಿಟ್ಟ ಕ್ರಾಂತಿಕಾರಿ ಹೋರಾಟಗಾರ ಗುಮ್ಮಡಿ ವಿಠ್ಠಲರಾವ್ ಗದ್ದರ್ ಇವರಿಗೆ ತಾಲೂಕ ದಲಿತಪರ ಸಂಘಟನೆಯ ಸಹಯೋಗದೊಂದಿಗೆ ಸೆ ೨೭ ರಂದು ತಾಲೂಕ ಪಂಚಾಯತಿ ಸಭಾಂಗಣದಲ್ಲಿ ಮುಂಜಾನೆ ೧೧ ಗಂಟೆಗೆ ಮೃತರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಯಲ್ಲಪ್ಪ ಬಾದರದಿನ್ನಿ ಹೇಳಿದರು. ತಾಲೂಕ ಪ್ರಗತಿಪರ ಸಂಘಟನೆಯೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು ತಳ-ಕೆಳ ವರ್ಗದ ನೋವುಗಳನ್ನು ತನ್ನ ಹಾಡಿನ ಮೂಲಕ ದೇಶದ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತಾ ಅವರಿಗೆ ನ್ಯಾಯ ಕೊಡಿಸುವಲ್ಲಿ ಮುಂಚೂಣಿ ನಾಯಕನಾಗಿದ್ದ ಇವರು ಕಳೆದ ಕೆಲವು ತಿಂಗಳಿಂದೆ ನಮ್ಮನಗಲಿದ್ದಾರೆ ಇವರ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಹಿರಿಯ ಮುಖಡರಾದ ಅಂಬಣ್ಣ ಅರೋಲಿ, ಎಂ ಆರ್ ಬೇರಿ ಸೇರಿದಂತೆ ಅನೇಕರು ಆಗಮಿಸುತ್ತಿ

ನಾರಾ ಚಂದ್ರಬಾಬು ನಾಯ್ಡು ಬಂಧನವನ್ನು ಖಂಡಿಸಿ ಬಹಿರಂಗ ಸಭೆ

ಇಮೇಜ್
ಮಾನ್ವಿ: ಪಟ್ಟಣದ ಕಾಕತೀಯ ನಗರದಲ್ಲಿ ಮಾನ್ವಿ ತಾಲೂಕು ರೈತ ಜನಸಂಘ ವತಿಯಿಂದ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಬಂಧನವನ್ನು ಖಂಡಿಸಿ ಸಿ.ಬಿ.ಎನ್. ಅವರಿಗೆ  ಮಾನವಿ ರೈತರ ಸಂಘೀ ಭಾವ ಹೆಸರಿನಲ್ಲಿ ನಡೆದ ಬಹಿರಂಗ ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ಹಂಪಯ್ಯ ನಾಯಕ ಮಾತನಾಡಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಮೂರು ಅವಧಿಗೆ ಮುಖ್ಯಮಂತ್ರಿಗಳಾಗಿ ಆಂಧ್ರಪ್ರದೇಶದ ಅಭಿವೃದ್ದಿಗೆ ಸಾಕಷ್ಟು ಶ್ರಾಮಿಸಿದ್ದಾರೆ. ಅಂತಹವರನ್ನು ಇಂದಿನ ಸರಕಾರದಿಂದ ಆಕ್ರಮವಾಗಿ ಬಂಧಿಸಿರುವುದು ಸರಿಯಲ್ಲ ಈ ಬಂದನದ ಹಿಂದೆ ಸೇಡಿನ ರಾಜಕೀಯ ದುರುದ್ದೇಶವಿದ್ದೆ ಆದ್ದರಿಂದ ನಾವೇಲರು ಅವರನ್ನು ಬೆಂಬಲಿಸೋಣ ಎಂದು ತಿಳಿಸಿದರು. ಮಂತ್ರಾಲಯ ತೆಲುಗುದೇಶಂ ಪಕ್ಷದ ಉಸ್ತುವರಿ ಹಾಗೂ ಮಾಜಿ ಶಾಸಕ ತಿಕ್ಕರೆಡ್ಡಿ ಮಾತನಾಡಿ ಆಂಧ್ರ ಪ್ರದೇಶದಲ್ಲಿ ಇಂದಿನ ಸರಕಾರದಿಂದ ಅನೇಕ ಆಕ್ರಮಗಳು ನಡೆಯುತ್ತಿದೆ ಮರಳು ದಂಧೆ, ಆಕ್ರಮ ಮಧ್ಯಮಾರಟ ಸೇರಿದಂತೆ ಕಾನೂನು ಬಹಿರ ಚಟುವಟಿಕೆಗಳು ನಿರತಂಕವಾಗಿ ನಡೆಯುತ್ತಿರುವುದಕ್ಕೆ ಆಂಧ್ರಸರಕಾರವೇಬೆAಬಲ ನೀಡುತ್ತಿದೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು ಜನರು ಭಯದಿಂದ ಜೀವನ ನಡೆಸುವಂತಾಗಿದೆ ರಾಜಕೀಯ ದುರುದ್ದೇಶ ಸಾಧನೆಗಾಗಿ ಆಂಧ್ರ ಪ್ರದೇಶ  ಸರಕಾರ ಅಧಿಕಾರಕ್ಕೆ ಬಂದು ೪ ವರ್ಷದ ನಂತರ ಈಗ ಹಿಂದಿನ ಸರಕಾರದ ಅವಧಿಯಲ್ಲಿ ನಡೆದಿದೆ ಎನ್ನುವ ಅರೋಪವನ್ನು ಹೊರಿಸಿ ಯಾವುದೇ ಪುರವ

ಏಮ್ಸ್ ಹೋರಾಟ ಸಮಿತಿ ವತಿಯಿಂದ ಪ್ರಧಾನ ಮಂತ್ರಿಗಳಿಗೆ ಮನವಿ

ಇಮೇಜ್
ಮಾನ್ವಿ: ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಏಮ್ಸ್ ಹೋರಾಟ ಸಮಿತಿ ವತಿಯಿಂದ ರಾಯಚೂರಿಗೆ ಏಮ್ಸ್ ವೈದ್ಯಕೀಯ ಸಂಸ್ಥೆಯನ್ನು ಮಂಜೂರು ಮಾಡುವಂತೆ ಒತ್ತಾಯಿಸಿ ಪ್ರಧಾನ ಮಂತ್ರಿಗಳಿಗೆ ಉಪತಹಸೀಲ್ದಾರ್ ವಿನಾಯಕರಾವ್ ಮೂಲಕ ಮನವಿ ಸಲ್ಲಿಸಿ ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತರಾಧ್ಯ ಶಿವಚಾರ್ಯ ಮಹಾಸ್ವಾಮಿಗಳು ಮಾತನಾಡಿ ರಾಜ್ಯದಲ್ಲಿ ಅತ್ಯಂತ ಹಿಂದುಳಿದಿರುವ ಕಲ್ಯಾಣ ಕರ್ನಾಟಕ ಪ್ರದೇಶದ ರಾಯಚೂರು ಜಿಲ್ಲೆಗೆ ಏಮ್ಸ್ ವೈದ್ಯಕೀಯ ಸಂಸ್ಥೆಯನ್ನು ಮಂಜೂರು ಮಾಡುವುದರಿಂದ ಈ ಭಾಗದಲ್ಲಿನ ಬಡ ರೋಗಿಗಳಿಗೆ ಉತ್ತಮ ವೈದ್ಯಾಕೀಯ ಸೇವೆಯನ್ನು ಪಡೆಯಲು ಸಾಧ್ಯವಾಗುತ್ತದೆ ಎನ್ನುವ ಉದ್ದೇಶದಿಂದ ರಾಜ್ಯದ ಮುಖ್ಯಮಂತ್ರಿಗಳು ೨ ಬಾರಿ ಕೇಂದ್ರಸರಕಾರಕ್ಕೆ ಪತ್ರವನ್ನು ಕೂಡ ಬರೆದಿದ್ದಾರೆ. ಕಳೆದ ೫೦೦ ದಿನಗಳಿಂದ ಏಮ್ಸ್ ಗಾಗಿ ಹೋರಾಟ ನಡೆಸಲಾಗುತ್ತಿದೆ ಐ.ಐ.ಟಿ ಕಾಲೇಜ ಸ್ಥಾಪನೆಯಲ್ಲಿ ಆದ ಅನ್ಯಾಯವನ್ನು ಸರಿಪಡಿಸಿ ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಒತ್ತಾಯಿಸಿದರು. ಪಟ್ಟಣದ ಬಸವ ವೃತ್ತದಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನ ಮೆರವಾಣಿಗೆ ನಡೆಸಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಸಂಘ ಸಂಸ್ಥೆಯ ಪದಾಧಿಕಾರಿಗಳು, ಸರ್ವೋದಯ ಪ್ಯಾರ ಮೇಡಿಕಲ್ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು. ತಾ.ಸಂಚಾಲಕ ಹೆಚ್.ಶರ್ಪುದ್ದೀನ್ ಪೋತ್ನಾಳ್,ಮನೋಜ್ ಕುಮಾರ ಮಿಶ್ರಾ, ರಾಜು ತಾಳಿಕೋಟೆ, ರಾಜಾ ಸುಭಾಸ ಚಂದ್ರನಾಯಕ,ಆನಿಲ್ ಕುಮಾರ, ಸೈಯಾದ್ ಅಹ್ಮದ್ ಹುಸೇನಿ ಮತವಾಲ್,ಭೀಮರಾಯ ನಿತಿ

ನೂತನ ಕೃಷಿ ಅಧಿಕಾರಿಯಾಗಿ ಶಿವಶರಣ ಭೋವಿ ಅಧಿಕಾರ ಸ್ವೀಕಾರ

ಇಮೇಜ್
ಮಸ್ಕಿ ಪಟ್ಟಣದ ಕೃಷಿ ಇಲಾಖೆಯ ನೂತನ ಕೃಷಿ ಅಧಿಕಾರಿಯಾಗಿ ಶಿವಶರಣ ಭೋವಿ ಇವರು ಸೋಮವಾರ ಅಧಿಕಾರ ಸ್ವೀಕರಿಸಿದರು. ಹಲವು ತಿಂಗಳುಗಳಿಂದ ಅಧಿಕಾರಿ ಇಲ್ಲದೇ ಖಾಲಿ ಇದ್ದ ಕೃಷಿ ಇಲಾಖೆಗೆ ಸೋಮವಾರ ಹೊಸ ಕಳೆ ಬಂದಂತಾಗಿದೆ. ರೈತ ಭಾಂದವರು ಯಾವುದೇ ಕೃಷಿ ಸಲಕರಣೆ ಹಾಗೂ ಔಷಧಿ ಪಡೆಯಲು ಅಧಿಕಾರಿ ಇಲ್ಲದೇ ರಾಮನ ಗೆರೆ ಎಳೆದಂತಾಗಿತ್ತು. ಶಿವಶರಣ ಭೋವಿ ಇವರು ನೂತನ ಕೃಷಿ ಅಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡುತ್ತಲೇ ತೊಗರಿ ಹಾಗು ಇನ್ನಿತರೇ ಬೆಳೆಗಳಿಗೆ ಔಷಧಿ ಸಿಂಪಡಣೆ ಎಣ್ಣೆಗಳನ್ನು ವಿತರಣೆ ಮಾಡಿದರು. ಮಸ್ಕಿ ಹೋಬಳಿ ಕೃಷಿ ಇಲಾಖೆ ವ್ಯಾಪಿಯ ರೈತ ಭಾಂದವರು ಶಾಲು ಹೊದಿಸಿ ಹೂವಿನ ಹಾರ ಹಾಕಿ ಸಂತೋಷದಿ ಬರಮಾಡಿಕೊಂಡರು. ಇದೇ ಸಂದರ್ಭದಲ್ಲಿ ಕೃಷಿ ಇಲಾಖೆ ಸಿಬ್ಬಂದಿ ಮಂಜುನಾಥ,ಪ್ರಸಾದ,ಜಯರಾಮ ಹಾಗೂ ರೈತ ಮುಖಂಡರು ಭಾಗಿಯಾಗಿದ್ದರು.

ಮಸ್ಕಿ ತಾಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಿ ಹಾಗೂ ಪೂರ್ಣ ಪ್ರಮಾಣದ ಇಲಾಖೆಗಳನ್ನು ಪ್ರಾರಂಭಿಸಿ : ಮನವಿ

ಇಮೇಜ್
ಮಸ್ಕಿ, ಪಟ್ಟಣದ ಭ್ರಮರಾಂಬ ದೇವಸ್ಥಾನದಿಂದ ಆರಂಭವಾಗಿ ತಹಸೀಲ್ದಾರ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ಮೂಲಕ ತೆರಳಿ ಮಸ್ಕಿ ತಾಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿ ಹಾಗೂ ಸಂಭಂದಪಟ್ಟ ಇಲಾಖೆಗಳನ್ನು ಕಾರ್ಯಾರಂಭ ಮಾಡುವಂತೆ ತಹಸೀಲ್ದಾರ ಮೂಲಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕ ಘಟಕದ ನೇತೃತ್ವದಲ್ಲಿ ಮನವಿ ಪತ್ರವನ್ನು ಸಲ್ಲಿಸಲಾಯಿತು. ರಾಯಚೂರು ಜಿಲ್ಲೆಯಲ್ಲಿ ಈ ಬಾರಿ ಸಂಪೂರ್ಣವಾಗಿ ಮುಂಗಾರು ಮಳೆ ಕೈಕೊಟ್ಟಿದ್ದು ಇದರ ಜೊತೆಯಲ್ಲಿ ಕೆಲವು ಭಾಗ ಟಿ ಬಿ ಪಿ ನೀರಾವರಿ ಸೌಲಭ್ಯ ಹೊಂದಿದ್ದರು ನಮ್ಮ ಭಾಗಕ್ಕೆ ಈವರೆಗೂ ನೀರು ತಲುಪಿರುವುದಿಲ್ಲ ಇದಕ್ಕೆ ಮುಖ್ಯ ಕಾರಣ ನೀರಾವರಿ ಇಲಾಖೆ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡದೇ ಇರುವುದು. ಅಲ್ಲದೆ ಮೇಲ್ಭಾಗದಲ್ಲಿ ನೀರನ್ನು ಕಳುವು ಮಾಡುವುದು ಇಲ್ಲವೇ ಮಾರಾಟ ಮಾಡುತ್ತಿರುವ ಬಗ್ಗೆ ಕೇಳಿ ಬಂದಿರುತ್ತದೆ. ಮಸ್ಕಿ ತಾಲೂಕಿನ ಮಾರಲದಿನ್ನಿ ನಾಲಾ ಯೋಜನೆ ಇದ್ದು ಈ ಬಾರಿ ಜಲಾಶಕ್ಕೆ ಅರಿವು ಇಲ್ಲದೆ ನೀರಿನ ಸಂಗ್ರಹ ಕೆಳಮಟ್ಟದಲ್ಲಿ ಇರುವುದರಿಂದ ಇದರ ಮೇಲೆ ಅವಲಂಬಿತವಾಗುವ ರೈತರ ಗತಿ ದೇವರೇ ಗತಿ ಎನ್ನುವಂತಾಗಿದೆ. ಹಾಗೋ ಹೀಗೋ ಸಾಲ ಸೂಲ ಮಾಡಿಕೊಂಡ ರೈತರು ತಮ್ಮ ತಮ್ಮ ಜಮೀನನ್ನು ಸಾಗುವಳಿ ಮಾಡಿದ್ದು, ಈ ಬಾರಿ ಜಮೀನಿಗೆ ಹಾಕಿದ ಖರ್ಚು ವೆಚ್ಚ ಸಹಿತ ಬಂದಿಲ್ಲ ರೈತರು ಆಕಾಶದತ್ತ ಮುಖಮಾಡಿ ನೋಡುವ ಸ್ಥಿತಿ ಎದುರಾ

*ಕೊಟ್ಟೂರಿನಲ್ಲಿ ರೈತ ಸಂಘದಿಂದ ಧರಣಿ ಸತ್ಯಾಗ್ರಹ*

ಇಮೇಜ್
ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನಲ್ಲಿ ಕರ್ನಾಟಕ ರಾಜ್ಯ ರೈತಸಂಘ  ಹಾಗೂ  ಹಸಿರು ಸೇನೆ ಸಂಘಟನೆಗಳು ಉಜ್ಜಿನಿ ಸರ್ಕಲ್ ನಿಂದ ತಾಲೂಕು ತಹಸೀಲ್ದಾರರ ಕಾರ್ಯಾಲಯದ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಮಳೆಗಾಲದ ಮುಕ್ಕಾಲು ಭಾಗ ಮುಕ್ತಾಯವಾಗಿದ್ದರು ಸರ್ಕಾರ 161 ತಾಲೂಕುಗಳನ್ನು ಮಾತ್ರ ಬರಗಾಲವೆಂದು ಘೋಷಣೆ ಮಾಡಿದ್ದು ಉಳಿದ 74 ತಾಲ್ಲೂಕುಗಳನ್ನು ಬರಗಾಲವೆಂದು ಘೋಷಣೆ ಮಾಡಬೇಕು.  ವಿದ್ಯುತ್ತನ್ನು ಸಮರ್ಪಕವಾಗಿ ಸರಬರಾಜು ಮಾಡಬೇಕು, ಬ್ಯಾಂಕ್ ಮತ್ತು ಫೈನಾನ್ಸ್ ಗಳ ಸಾಲ ವಸುಲಾತಿ ಕಿರುಕುಳವನ್ನು ನಿಲ್ಲಿಸಬೇಕು.  ರೈತರ ಪಂಪ್ ಸೆಟ್ ಗಳ ಆರ್ ಆರ್ ನಂಬರ್ ಮಾಡಬೇಕೆಂದು.ಮತ್ತು ರೈತ ವಿರೋಧಿ ನೀತಿಗಳ ವಿರುದ್ಧ ಜಿಲ್ಲಾ ತಾಲೂಕು ಕಚೇರಿಗಳ ಎದುರು ರೈತರ ಧರಣಿ ಸತ್ಯಾಗ್ರಹ ಮಾಡಿ ಕೊಟ್ಟೂರು ತಾಲೂಕಿನಲ್ಲಿ ಜೆಸ್ಕಾಂ ಅಧಿಕಾರಿಗಳು ನಿರ್ಲಕ್ಷತನದಿಂದ ಎಲ್ಲೆಂದರಲ್ಲಿ ವಿದ್ಯುತ್ ಕಂಬಗಳಿಗೆ ಬಳ್ಳಿ ಅಂಟಿಕೊಂಡಿರುವುದು ಹಾಗೂ ಟ್ರಾನ್ಸ್ಫರೆಂಟ್ ಹಾಂಗೂ ಮರಗಳಿಗೆ ಮರ ಟೊಂಗೆಗಳು ಹಾದು ಹೋಗಿರುವುದು ಅತಿ ಹೆಚ್ಚಾಗಿ ಕಂಡುಬರುತ್ತದೆ. ಇದಲ್ಲದೆ ಟ್ರಾನ್ಸ್ಫಾರಂ ಮತ್ತು ಆರ್ ಆರ್ ನಂಬರ್ ಪಡೆಯಲು 20000ಗಟ್ಟಲೆ ಹಣ ವಸೂಲಿ ಮಾಡುತ್ತಿದ್ದಾರಂತೆ ಮತ್ತು ತೋಟಗಾರಿಕೆ ರೇಷ್ಮೆ ಇಲಾಖೆಯಲ್ಲಿ ರೈತರಿಗೆ ಆಗುವ ಅನ್ಯಾಯ ಅಕ್ರಮಗಳು ಅತಿರಿಕ್ತವಾಗಿವೆ ಇದಕ್ಕೆ ತಕ್ಷಣವೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಇಲ್ಲದಿದ್ದರೆ ಮುಂದೆ ಇಂತಹ ಧರಣಿಗಳಲ್ಲದೆ ಉಗ್ರವಾ

ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜಯಂತಿ ಆಚರಣೆ

ಇಮೇಜ್
ಮಸ್ಕಿ, ಪಟ್ಟಣದ ಭಾರತೀಯ ಜನತಾ ಪಕ್ಷ ಮಸ್ಕಿ ಕಾರ್ಯಾಲಯದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜಯಂತಿ ಅಂಗವಾಗಿ ರಕ್ತದಾನ ಶಿಬಿರ ಮಾಡಲಾಯಿತು. ಕಾರ್ಯಕ್ರಮದ ಕುರಿತು ಪಂಡಿತ್ ದೀನ್ ದಯಾಳ್ ಉಪಾಧ್ಯಾಯರು ಅವರ ಕುರಿತಾಗಿ ಜನಪ್ರಿಯ ಮಾಜಿ ಶಾಸಕರಾದ ಪ್ರತಾಪ್ ಗೌಡ ಪಾಟೀಲ್ ಅವರು ಮಾತನಾಡಿ ಜನಸಂಘದ ನೇತಾರರು, ಏಕಾತ್ಮ ಮಾನವತವಾದದ ಪ್ರವರ್ತಕರು, ಬಲಪಂಥೀಯ ಚಿಂತಕರು, ಅಂತ್ಯೋದಯದ ಪ್ರೇರಣೆ, ರಾಷ್ಟ್ರಭಕ್ತ ಹಾಗೂ ಮಹಾನ್ ದಾರ್ಶನಿಕ ಅವರು ಈ ದೇಶಕ್ಕೆ ನೀಡಿರುವ ಏಕಾತ್ಮ ಮಾನವ ದರ್ಶನ, ತತ್ವ- ಆದರ್ಶಗಳು ಸದಾ ಸ್ಫೂರ್ತಿ ಮತ್ತು ಮಾದರಿಯ ದೇಶವೇ ಸರ್ವಶ್ರೇಷ್ಠ ಎಂಬ ಭಾವನೆಯಿಂದ ಜನರನ್ನು ಸಂಸ್ಕಾರಗೊಳಿಸಿ ಸಂಘಟಿತರಾದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜೀವನ ಅಪಾರ ಮತ್ತು ಸ್ಪೂರ್ತಿದಾಯಕವಾಗಿದೆ.   ಸಮಗ್ರ ಮಾನವತಾವಾದ ಮತ್ತು ಅಂತ್ಯೋದಯ ತತ್ವವನ್ನು ನೀಡುವ ಮೂಲಕ ಜಗತ್ತಿಗೆ ಹೊಸ ಮಾರ್ಗವನ್ನು ತೋರಿಸಿಕೊಟ್ಟವರು ಎಂದು ಮಾತನಾಡಿದರು.  ಇದೇ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಶಿವಪುತ್ರಪ್ಪ ಹರಳಹಳ್ಳಿ , ಪಕ್ಷದ ಹಿರಿಯ ಮುಖಂಡರಾದ ಮಹಾದೇವಪ್ಪ ಗೌಡ ಪೊಲೀಸ್ ಪಾಟೀಲ್, ಮಲ್ಲಪ್ಪ ಅಂಕುಶದೊಡ್ಡಿ, ಡಾಕ್ಟರ್ ಬಿ.ಎಚ್ ದಿವಟರ, ಬಸವಂತರಾಯ ಕುರಿ, ಶಿವಪ್ಪ ಹುಬ್ಬಳ್ಳಿ, ಶಿವಶಂಕರಪ್ಪ ಹಳ್ಳಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶರಣಬಸವ ಸೊಪ್ಪಿಮಠ, ಯುವ ಮೋರ್ಚಾ ಅಧ್ಯಕ್ಷರಾದ ಶರಣೇಗೌಡ ತಿಡಿಗೋಳ, ಪುರಸಭೆ ಸದಸ್ಯರಾದ ಮೌನೇಶ್ ಮುರಾರಿ

30.09.2023 ಒಳಗೆ |ಎನ್.ಪಿ.ಸಿ.ಐ.ಆಧಾರ ನಂಬರ್ ಲಿಂಕ್ | ಕಡ್ಡಾಯವಾಗಿ ಮಾಡಿಸಲು ಸಾರ್ವಜನಿಕರಿಗೆ ಮನವಿ

ಇಮೇಜ್
ಎನ್.ಪಿ.ಸಿ.ಐ.ಆಧಾರ ನಂಬರ್ ಲಿಂಕ್  ಕಡ್ಡಾಯ   ಕೊಟ್ಟೂರು: ಮಾನ್ಯ ಜಿಲ್ಲಾಧಿಕಾರಿಗಳು, ವಿಜಯನಗರ ಜಿಲ್ಲೆ ಇವರ  ಸಂದೇಶ ಮೇರೆಗೆ ಸರ್ಕಾರದಿಂದ ವೃದ್ಧಾಪ್ಯ-ಅಂಗವಿಕಲ ವಿಧವಾ-ಸಂಧ್ಯಾ ಸುರಕ್ಷಾ-ಮನಸ್ವಿನಿ-ಮೈತ್ರಿ ಮತ್ತು ಇತರೆ ಮಾಸಿಕ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳಿಗೆ ಬ್ಯಾಂಕ್ ಖಾತೆಗೆ ಆಧಾರ ನಂಬರ್ ಲಿಂಕ್ ಆಗಿಲ್ಲ. ಮತ್ತು ಎನ್.ಪಿ.ಸಿ.ಐ.ಆಧಾರ ನಂಬರ್ ಲಿಂಕ್ ಆಗಿಲ್ಲ ಹಾಗೂ ಆಧಾರ ನಂಬರ್ ಚಾಲ್ತಿ ಇಲ್ಲ ಅಂದರೆ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು ಕಡ್ಡಾಯವಾಗಿ ಎನ್‌.ಪಿ.ಸಿ.ಐ.ಆಧಾರ ನಂಬರ್ ಲಿಂಕ್ ಮಾಡಿಸಲು ಸಾರ್ವಜನಿಕರಿಗೆ ತಿಳಿಸಲಾಗಿದೆ. 1.ಕೆಲವೊಂದು ತಾಂತ್ರಿಕ ಕಾರಣಗಳಿಂದ ನಿಮ್ಮ ಆಧಾರ ನಂಬರ್ ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿಲ್ಲ. 2.ಲಿಂಕ್ ಆಗಿರದ ಫಲಾನುಭವಿಗಳ ಪಟ್ಟಿ ನಿಮ್ಮ ಪಿಂಚಣಿ ಜಮಾ ಆಗುವ ಬ್ಯಾಂಕ್‌ ಖಾತೆ ಅಥವಾ ಪೋಸ್ಟ್ ಆಫೀಸ್ ನಲ್ಲಿ ಸಿಗುತ್ತದೆ.(ಮತ್ತು ನಿಮ್ಮ ಗ್ರಾಮದ ಆಡಳಿತಾಧಿಕಾರಿಗಳ ಬಳಿ ಸಿಗುತ್ತದೆ. 3.ನೀವು ಕಡ್ಡಾಯವಾಗಿ, ದಿನಾಂಕ: 30.09.2023ರೊಳಗಾಗಿ ನಿಮ್ಮ ಪಿಂಚಣಿ ಜಮಾ ಆಗುವ ಬ್ಯಾಂಕಿಗೆ/ಪೊಸ್ಟ್ ಆಫೀಸಿಗೆ ಹೋಗಿ, ಆಧಾರ " ನಂಬರ್ ಲಿಂಕ್ ಮಾಡಿಸಲೇಬೇಕು. ಹಾಗೂ N.P.C...ಗೆ. ಆಧಾರ ನಂಬರ್ ಲಿಂಕ್ ಕಡ್ಡಾಯವಾಗಿ ಮಾಡಿಸಲೇಬೇಕು. 4.ತಪ್ಪಿದ್ದಲ್ಲಿ ಸರ್ಕಾರದಿಂದ ಬರುವ ಪಿಂಚಣಿ ತಾವು ಪಡೆದುಕೊಳ್ಳಲು ತೊಂದರೆ ಆಗುತ್ತದೆ ತಿಳಿಯಿರಿ, ಅದ್ದರಿಂದ ಕಂದಾಯ ಇಲಾಖೆಯ ತಹಶೀಲ್ದಾರರು, ಕೊಟ್ಟೂ

ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ ಲಕ್ಷ್ಮೀ ರವರಿಗೆ ಸನ್ಮಾನ

ಇಮೇಜ್
  ದೇವದುರ್ಗ : ತಾಲೂಕ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ವತಿಯಿಂದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾದ ಶಿಕ್ಷಕಿ ಶ್ರೀಮತಿ ಲಕ್ಷ್ಮೀ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇಂದು ಪಟ್ಟಣದ ಶ್ರೀ ಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಹೂವಿನಹೆಡಗಿ ಎಂಬಲ್ಲಿ ಏರ್ಪಡಿಸಲಾಗಿದ್ದ ತಾಲೂಕ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ವತಿಯಿಂದ ಉತ್ತಮ ಶಿಕ್ಷಕಿ ಪ್ರಶಸ್ತಿ ನೀಡಲಾಗುವ ಪ್ರಶಸ್ತಿಗೆ ಭಾಜನರಾಗಿ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ರೆಹಮಾನಿಯಾ ಪಬ್ಲಿಕ್ ಶಾಲೆಯ ಶ್ರೀಮತಿ ಲಕ್ಷ್ಮೀ ಶಿಕ್ಷಕಿ ಪ್ರಶಸ್ತಿಯನ್ನು ರೆಹಮಾನಿಯಾ ಪಬ್ಲಿಕ್ ಶಾಲೆಯ ಬೋಧಕ ವರ್ಗ, ಸಿಬ್ಬಂದಿ ವರ್ಗ ಹಾಗೂ ಮುದ್ದು ಮಕ್ಕಳ ವತಿಯಿಂದ ಅಭಿನಂದಿಸಿ ಸನ್ಮಾನಿಸಿ ಗೌರವಿಸಿದರು .

ಕನಾ೯ಟಕ ರಾಜ್ಯ ಅಂಗವಿಕಲರ ಆರ್ ಪಿ ಡಿ ಟಾಸ್ಕ್ ಫೋರ್ಸ್ ಸಮಿತಿ ವತಿಯಿಂದ ಸಭೆ

ಇಮೇಜ್
  ಮಸ್ಕಿ : ತಾಲೂಕಿನ ಮಸ್ಕಿ ಪುರಸಭೆಯ ಆವರಣದಲ್ಲಿ ಆರ್ ಪಿ ಡಿ ಟಾಸ್ಕ್ ಫೋರ್ಸ್ ರಾಜ್ಯ ಕಾರ್ಯದರ್ಶಿಗಳಾದ ಸುರೇಶ ಭಂಡಾರಿ ಮುದಗಲ್ ರವರ ನೇತೃತ್ವದಲ್ಲಿ ರಾಯಚೂರು ಜಿಲ್ಲಾಧ್ಯಕ್ಷರಾದ ಎಂ. ಡಿ. ಜಾಫರ್ ಮಾನ್ವಿರವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ಅಂಗವಿಕಲರ ಆರ್ ಪಿ ಡಿ ಟಾಸ್ಕ್ ಫೋರ್ಸ್ ರಾಯಚೂರು ಜಿಲ್ಲಾ ಸಮಿತಿಯ ಸಭೆಯನ್ನು ಮಾಡಲಾಯಿತು. ಸಭೆಯಲ್ಲಿ ಸ್ಥಳೀಯ ಸಂಸ್ಥೆಗಳಾದ ನಗರಸಭೆ ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಲ್ಲಿ ವಿಕಲಚೇತನರಿಗೆ ಮೀಸಲಿರುವ ಶೇ 5 ಅನುದಾನದ ಕ್ರಿಯಾ ಯೋಜನೆಯನ್ನು ಮಾಹಿತಿ ಹಕ್ಕು ಅಧಿನಿಯಮದ ಮೂಲಕ ಪಡೆಯುವುದು. ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಉದ್ಯೋಗ ಖಾತ್ರಿ ಚೀಟಿಗಳನ್ನು ಪಡೆದುಕೊಂಡ ವಿಕಲಚೇತನರ ಮಾಹಿತಿ ಪಡೆಯುವುದು. ಜಿಲ್ಲಾ ಮಟ್ಟದಲ್ಲಿ ವಿಕಲಚೇತನರ ಸಮಸ್ಯೆಗಳ ಕುರಿತು ಪತ್ರಿಕಾ ಗೋಷ್ಠಿಯನ್ನು ಮಾಡುವುದು. ಆರ್ ಪಿ ಡಿ ಟಾಸ್ಕ್ ಫೋರ್ಸ್ ತಾಲೂಕ ಸಮಿತಿಗಳ ಬಲವರ್ಧನೆ ಹಾಗೂ ಜಿಲ್ಲಾ ಮಟ್ಟದ ವಿಶ್ವ ಅಂಗವಿಕಲರ ದಿನಾಚರಣೆಯ ಬಗ್ಗೆ ಚರ್ಚೆ ಮಾಡಲಾಯಿತು.   ಈ ಸಂದರ್ಭದಲ್ಲಿ ಸಿರವಾರ ತಾಲೂಕ ಅಧ್ಯಕ್ಷರನ್ನಾಗಿ ಗುಂಡಪ್ಪಗೌಡ ಬಲಟಗಿ. ಮಸ್ಕಿ ತಾಲೂಕ ಅಧ್ಯಕ್ಷರನ್ನಾಗಿ ಹನುಮೇಶ್ ನಾಯಕ ಹಾಗೂ ಸಿಂಧನೂರು ತಾಲೂಕ ಅಧ್ಯಕ್ಷರನ್ನಾಗಿ ಕುಮಾರಿ ಜಯಶ್ರೀ ಉಪ್ಪಲದೊಡ್ಡಿ ಇವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಜಿಲ್ಲಾ ಹಾಗೂ ವಿವಿಧ ತಾಲೂಕ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರು ಭಾಗವಹಿದ್ದರು.

ಬೆಳಗಾವಿ ಅಧಿವೇಶನದಲ್ಲಿ ಶಿಕ್ಷಕರ ಸಮಸ್ಯೆ ಕುರಿತು ಚರ್ಚಿಸುವೆ: ಕೆ ನೇಮಿರಾಜ್ ನಾಯ್ಕ

ಇಮೇಜ್
  ಕೊಟ್ಟೂರು: ಮುಂಬರುವ ಬೆಳಗಾವಿ ಅಧಿವೇಶ ನದಲ್ಲಿ ಶಿಕ್ಷಕರ ಸಮಸ್ಯೆಗಳ ಮತ್ತು ಹಳೆ ಪಿ೦ಚಣ ಜಾರಿಗೊಳಿಸಬೇಕೆಂದು ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸುತ್ತೇನೆ ಎಂದು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕೆ. ನೇಮಿರಾಜ್ ನಾಯಕ್ ಹೇಳಿದರು. ಪಟ್ಟಣದ ಶ್ರೀ ಮರುಳಸಿದ್ದೇಶ್ವರ ಸಭಾಂಗ ಣದಲ್ಲಿ ಶನಿವಾರದಂದು ಜಿಲ್ಲಾ ಪಂಚಾಯಿತಿ, ವಿಜಯನಗರ ಕೊಟ್ಟೂರು ತಾಲೂಕು ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಡಾ... ಸರ್ವಪಲ್ಲಿ ರಾಧಾಕೃಷ್ಣನ್ ಅವರ 135 ನೇ ಜಯಂತಿ ಅಂಗವಾಗಿ ಕೊಟ್ಟೂರು ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಅದು ಶಿಕ್ಷಕ ವೃತ್ತಿಯಾಗಿರುತ್ತದೆ. ಒಂದು ಮೂರ್ತಿ ಕೆತ್ತಲು ಶಿಲ್ಪಿ ಅದನ್ನು ತಿದ್ದಿ ತೀಡಿ ಒಂದು ಮೂರ್ತಿಯಾಗಿ ಮಾರ್ಪ ಈ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಲು ಡಿಸುತ್ತಾನೆ ಅದೇ ರೀತಿ ಮಕ್ಕಳಿಗೆ ಪಾಠ ಮಾಡುವ ಒಬ್ಬ ಬಂದಿದ್ದ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕರು ಮತ್ತು ಶಿಕ್ಷಕ ಇಡೀ ಸಮಾಜವನ್ನೇ ಬದಲಾಯಿಸುವ ಶಕ್ತಿ ಶಿಕ್ಷಕನ ಸಂಶೋಧಕರು ಡಾ. ಬಿ. ಸಿ. ಮಹಾ ಬಲೇಶ್ವರಪ್ಪ ಶಿಕ್ಷಕರ ಕೈಯಲ್ಲಿ ಇರುತ್ತದೆ. ಗ್ರಾಮ ಪಂಚಾಯಿತಿ ಯಿಂದ ಹಿಡಿದು ವೃತ್ತಿ ಅನನ್ಯವಾದದ್ದು ಶಿಕ್ಷಕರ ಕುರಿತು ಸಹ ವಿಸ್ತಾರವಾಗಿ ರಾಷ್ಟ್ರಪತಿಗಳ ವರೆಗೆ ತಮ್ಮ ಗುರುಗಳ ಯಾರು ಎಂದರೆ ಉಪನ್ಯಾಸ ನೀಡಿದರು. ಶಿಕ್ಷಕರು ಎನ್ನುತ್ತಾರೆ ಶಿಕ್ಷಕರ ವೃತ್ತಿ ಅತ್ಯಂತ ಅಮೂಲ್ಯ ಕೆಲವು ದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತ ವಾದದ್ದಾಗಿದೆ. ಮುಂಬ

ಎಲೆಮರೆಯ ಕಾಯಿಗಳಂತೆ ಇದ್ದ ಶಿಕ್ಷಕರನ್ನು ಗುರುತಿಸಿದ್ದು ಹೆಮ್ಮೆಯ ಸಂಗತಿ - ಪ್ರತಾಪಗೌಡ ಪಾಟೀಲ್

ಇಮೇಜ್
ಶಿಕ್ಷಕರ ದಿನಾಚರಣೆ ಪ್ರಯುಕ್ತ ಮಸ್ಕಿಯ ಅಭಿನಂದನ್ ಸಂಸ್ಥೆಯ ವತಿಯಿಂದ ಜನ ಮೆಚ್ಚಿದ 20 ಜನ ಶಿಕ್ಷಕರಿಗೆ "ಅಭಿನಂದನ್ ಶಿಕ್ಷಕ ರತ್ನ" ಎಂಬ ರಾಜ್ಯಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಹಿರಿಯ ನಿವೃತ್ತ ಮುಖ್ಯ ಗುರುಗಳಾದ ಶ್ರೀ ಯಲ್ಲಪ್ಪ ಗುಂಡಪ್ಪ ಜಾಲಿಹಾಳ ಅವರಿಗೆ ಅಭಿನಂದನ್ ಜೀವಮಾನ ಸಾಧನೆ ಪ್ರಶಸ್ತಿ, ಸಿದ್ದಾರೆಡ್ಡಿ ಗಿಣಿವಾರ, ಬಿ ಆರ್ ಪಿ ರಾಮಚಂದ್ರ ನಿರಾಳೆ, ಸಿಆರ್‌ಪಿ ರಾಮಸ್ವಾಮಿ, ಚಂದ್ರು ಬೆಂಡೋಣಿ, ಶಿವಯೋಗಿ ಹುಲಿಗುಡ್ಡ, ಚಿಕ್ಕಮಗಳೂರು ಜಿಲ್ಲೆಯ ದಿನೇಶ್, ವಿಜಯನಗರ ಜಿಲ್ಲೆಯ ಅರುಣ್ ಕುಮಾರ್, ಜಮಖಂಡಿಯ ಪರಮಾನಂದ ಹಾಗೂ ಇನ್ನಿತರ ಶಿಕ್ಷಕರಿಗೆ ರಾಜ್ಯಮಟ್ಟದ ಅಭಿನಂದನ್ ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಮಾರಂಭದಲ್ಲಿ ಮಾತನಾಡಿದ ಮಾಜಿ ಶಾಸಕರಾದ ಪ್ರತಾಪ್ ಗೌಡ ಪಾಟೀಲ್ ಅವರು ಎಲೆಮರೆಯ ಕಾಯಿಗಳಂತೆ ಇದ್ದು ಕಾರ್ಯನಿರ್ವಹಿಸಿದ ಹಾಗೂ ಅತ್ಯುತ್ತಮವಾಗಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸಿದ ಹಲವಾರು ಜನ ಶಿಕ್ಷಕರಿಗೆ ಈ ಪ್ರಶಸ್ತಿಯನ್ನು ನೀಡಿ ಇನ್ನಷ್ಟು ಚೈತನ್ಯವನ್ನು ತುಂಬಿದ ಅಭಿನಂದನ್ ಸಂಸ್ಥೆಯ ಕಾರ್ಯ ಶುಭವಾಗಲಿ ಎಂದು ಶುಭ ಕೋರಿದರು.  ನಂತರ ಮಾತನಾಡಿದ ವೆಂಕಟಗಿರಿ ಸಿದ್ಧಾಶ್ರಮದ ಶ್ರೀಗಳಾದ ಸದಾಶಿವಾಚಾರ್ಯರು ಪವಿತ್ರವಾದ ಬೋಧನೆಯ ಕಾರ್ಯವನ್ನು ಮಾಡುತ್ತಿರುವ ಶಿಕ್ಷಕರನ್ನು ಅದರಲ್ಲೂ ಹಿಂದುಳಿದ ಪ್ರದೇಶಗಳಲ್ಲಿ ತಮ್ಮ ಅಮೂಲ್ಯವಾದ ಹಾಗೂ ಸುಂದರವಾದ ಕಾರ್ಯದಲ್ಲಿ ನಿರತರಾದ ಶಿಕ್ಷ