ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರಿAದ ಶ್ರೀ ಮಠದ ಶಿಷ್ಯರಿಗೆ ತಪ್ತ ಮುದ್ರದಾರಣೆ
ಮಾನ್ವಿ: ಪಟ್ಟಣದ ಮಂತ್ರಾಲಯದ ಶ್ರೀ ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಗುರುವಾರ ಏಕದಾಶಿ ಅಂಗವಾಗಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಫೀಠಾಧೀಪತಿಗಳಾದ ಶ್ರೀ ೧೦೦೮ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಸಮಸ್ತ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ನೂರಾರು ಶಿಷ್ಯರಿಗೆ ಹಾಗೂ ಭಕ್ತರಿಗೆ ತಪ್ತಮುದ್ರಾಧಾರಣೆ ಮಾಡಿ ಆನುಗ್ರಹ ಸಂದೇಶವನ್ನು ನೀಡಿ ಮಾತನಾಡಿ ಇಂದು ರಾಯಚೂರು,ಮಾನ್ವಿ,ಬಳ್ಳಾರಿ,ಹೋಸಪೇಟೆಯ ಶ್ರೀ ಮಠದ ಶಿಷ್ಯರಿಗೆ ಹಾಗೂ ಭಕ್ತರಿಗೆ ತಪ್ತಮುದ್ರಾಧಾರಣೆ ಮಾಡುವ ಕಾರ್ಯಕ್ರಮವಿದ್ದು ತಪ್ತ ಮುದ್ರದಾರಣೆಯಿಂದ ದೇಹ ಮತ್ತು ಮನಸ್ಸು ಪವಿತ್ರವಾಗುತ್ತದೆ ಹಾಗೂ ಭಗವಂತನಿಗೆ ಆರ್ಪಿತವಾಗುವುದರಿಂದ ನಾವು ಚಾರ್ತುಮಾಸದಲ್ಲಿ ಮಾಡುವ ವೃತಗಳು ಹಾಗೂ ಪೂಜೆಗಳು ಪೂರ್ಣಫಲವನ್ನು ನೀಡುತ್ತವೆ ಆದ್ದರಿಂದ ತಮ್ಮ ತಮ್ಮ ಮಠಗಳ ಯತಿಗಳಿಂದ ಹಾಗೂ ಗುರುಗಳಿಂದ ಚಾರ್ತುಮಾಸದಲ್ಲಿ ಎರಡು ಕೈಗಳ ಮೇಲೆ ಭಗವಂತನ ಚಿನೆಃ ಗಳಾದ ಶಂಖ ಮತ್ತು ಚಕ್ರಗಳನ್ನು ತಪ್ತ ಮುದ್ರಾಧಾರಣೆಯಲ್ಲಿ ಹಾಕಿಸಿಕೊಂಡು ವಿಷ್ಣುವಿಗೆ ಪ್ರಿಯಾರಾದ ಭಕ್ತರಾಗ ಬೇಕು ಹಾಗೂ ಮಂತ್ರಾಲಯದಲ್ಲಿ . ಚಾರ್ತುಮಾಸದ ಅಂಗವಾಗಿ ವಿಶೇಷವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಶ್ರೀ ಮಠದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು.
ವಿವಿಧ ಮಹಿಳಾ ಭಜನ ಮಂಡಳಿಯವರಿAದ ಭಜನೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ತಾಲೂಕು ವಿಪ್ರ ಸಮಾಜದ ಅಧ್ಯಕ್ಷರಾದ ಮುದುರಂಗಪ್ಪ ಹಾಗೂ ಶ್ರೀ ಮಠದ ವ್ಯವಸ್ಥಾಪಕರು, ಆರ್ಚಕರು, ಹಾಗೂ ಶ್ರೀ ಮಠದ ಶಿಷ್ಯರು ಹಾಗೂ ಭಕ್ತರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ