ಆಸ್ಪತ್ರೆಯಲ್ಲಿ ಅವ್ಯವಸ್ಥೆ ಸರಿಪಡಿಸಲು ಆಗ್ರಹ


ರಾಯಚೂರು,ಜು.೧೪-ರಿಮ್ಸ್ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಸರಿಪಡಿಸಲು ಆಗ್ರಹಿಸಿ ಜು.17 ರಿಂದ ಅನಿರ್ಧಿಷ್ಟಾವಧಿ ಧರಣಿ ನಡೆಸಲಾಗುತ್ತದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಸ್.ನರಸಿಂಹಲು ಹೇಳಿದರು.

ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ 7೦೦ ಹಾಸಿಗೆಯುಳ್ಳ ರಿಮ್ಸ್ ಆಸ್ಪತ್ರೆ ಜಿಲ್ಲೆಯ ಜನರಿಗೆ ಆರೋಗ್ಯ ಸೇವೆ ಕಲ್ಪಿಸುವ ಬದಲಿಗೆ ನರಕ ಕೂಪವಾಗಿದೆ ಎಂದು ದೂರಿದ ಅವರು ಆಸ್ಪತ್ರೆಯಲ್ಲಿ ಬಡವರಿಗೆ ಸರಿಯಾದ ಆರೋಗ್ಯಸೌಲಭ್ಯ ದೊರೆಯುತ್ತಿಲ್ಲ ವೈದ್ಯರ ಕೊರತೆಯಿದ್ದು ಇದ್ದ ವೈದ್ಯರು ಸಹ ಸರಿಯಾಗಿ ಕಾರ್ಯನಿರ್ವಹಿಸದೆ ತಮ್ಮ ಖಾಸಗಿ ಆಸ್ಪತ್ರೆಗಳಿಗೆ ತೆರಳುತ್ತಾರೆ ಎಂದರು.

ವೈದ್ಯರು ಸೇರಿದಂತೆ ಸಿಬ್ಬಂದಿಗಳ ಕೊರತೆ ಎದ್ದು ಕಾಣುತ್ತಿದ್ದು ಸೂಕ್ತ ಔಷಧೋಪಚಾರವಿಲ್ಲದೆ ಜನರು ಕಂಗೆಟ್ಟಿದ್ದು ಅನೇಕ ರೋಗಿಗಳು ತಮ್ಮ ಪ್ರಾಣ ಕಳೆದುಕೊಂಡಿದ್ದು ನಿರ್ದಿಷ್ಟ ದೂರದವರೆಗೆ ಆಂಬ್ಯೂಲೆನ್ಸ್ ವ್ಯವಸ್ಥೆ ಕಲ್ಪಿಸುವ ಬಗ್ಗೆ ನಿಯಮವಿದ್ದರೂ ಅದನ್ನು ಪಾಲಿಸುತ್ತಿಲ್ಲ ಇಲ್ಲಿ ಅರೋಗ್ಯ ಸೇವೆ ನೀಡದೆ ಬೆಂಗಳೂರು, ಬಳ್ಳಾರಿ ಮುಂತಾದೆಡೆ ರೋಗಿಗಳನ್ನು ಕಳಿಸುತ್ತಿದ್ದು ಇಷ್ಟೆಲ್ಲ ಅವ್ಯವಸ್ಥೆ ಬಗ್ಗೆ ಕೇಳಿದರೆ ಇಲ್ಲಿರುವ ವೈದ್ಯಾಧಿಕಾರಿಗಳು, ಆಡಳಿತಾಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಾದ್ದಾರೆಂದು ಆರೋಪಿಸಿದರು.

ಹಿಂದುಳೀದ ಜಿಲ್ಲೆಯಲ್ಲಿ ಆರೋಗ್ಯ ಮತ್ತು ಶಿಕ್ಷಣ ಸುಧಾರಿಸಬೇಕು ಈ ಬಗ್ಗೆ ವೈದ್ಯಕೀಯ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದರೂ ಯಾವುದೆ ಕ್ರಮವಾಗದ ಕಾರಣ ನಮ್ಮ ನ್ಯಾಯಯುತ ಬೇಡಿಕೆ ಈಡೇರುವವರೆಗೂ ಧರಣಿ ನಡೆಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ನೀಲಕಂಠ, ಎಲ್.ವಿ.ಸುರೇಶ,ಡಿಂಗ್ರಿ ನರಸಪ್ಪ,ಹನುಮೇಶ ಅರೋಲಿ,ಹನುಮಂತ,ವಿಜಯಕುಮಾರ್,ಪ್ರದೀಪ,ತಿಕ್ಕಯ್ಯ ಇನ್ನಿತರರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ