ಬಾಷುಮಿಯಾ ಕಾಲೇಜ್ ವಿದ್ಯಾರ್ಥಿಗಳಿಂದ ರಕ್ತದಾನ
ಮಾನ್ವಿ: ಪಟ್ಟಣದ ಬಾಷುಮಿಯಾ ಸಾಹುಕಾರ ಸರಕಾರಿ ಪ್ರಥಮ ದರ್ಜೆ ಕಾಲೇಜ್ ಸಭಾಂಗಣದಲ್ಲಿ ತಾ. ರೆಡ್ ಕ್ರಾಸ್ ಘಟಕ, ರಿಮ್ಸ್ ಆಸ್ಪತ್ರೆ, ತಾ.ಅರೋಗ್ಯ ಇಲಾಖೆ, ಹೆಚ್.ಡಿ.ಎಫ್.ಸಿ. ಬ್ಯಾಂಕ್ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ರಿಮ್ಸ್ನ ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಪೂಜಾ ಮಾತನಾಡಿ ವಿದ್ಯಾರ್ಥಿಗಳು ರಕ್ತದಾನ ಮಾಡುವುದರ ಮೂಲಕ ತಮ್ಮ ಆರೋಗ್ಯವನ್ನು ವೃದ್ದಿಸಿಕೊಳ್ಳುವುದರ ಜೊತೆಗೆ ಮತ್ತೊಬ್ಬರ ಜೀವವನ್ನು ಕಾಪಾಡ ಬಹುದು , ಗರ್ಭಿಣಿ ಮಹಿಳೆಯರಲ್ಲಿನ ರಕ್ತಹಿನ್ನತೆಯನ್ನು ನಿವಾರಿಸಲು,ಡೆಂಗ್ಯೂ ಕಾಯಿಲೆ, ಅಪಘಾತ ಸಂದರ್ಬದಲ್ಲಿ ರಕ್ತದ ಅವಶ್ಯಕತೆ ಇರುವುದರಿಂದ ಯುವಕರು ನಿಯಮಿತವಾಗಿ ರಕ್ತದಾನವನ್ನು ಮಾಡುವ ಮೂಲಕ ಹಲವು ಪ್ರಾಣಗಳನ್ನು ಉಳಿಸಬಹುದು ವಿದ್ಯಾರ್ಥಿಗಳಲ್ಲಿ ರಕ್ತದಾನದ ಮಹಾತ್ವವನ್ನು ತಿಳಿಸಿ ರಕ್ತದಾನಿಗಳನ್ನಾಗಿಸುವ ಉದ್ದೇಶದಿಂದ ರಕ್ತದಾನ ಶಿಬಿರವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಯುವ ರೆಡ್ ಕ್ರಾಸ್ ಘಟಕದ ಸಂಯೋಜಕರಾದ ವಿದ್ಯಾಸಾಗರ್ ವಿದ್ಯಾರ್ಥಿಗಳಿಗೆ ರೆಡ್ ಕ್ರಾಸ್ ಘಟಕದ ಪ್ರತಿಜ್ಞಾ ವಿಧಿಯನ್ನು ಭೋಧಿಸಿ ವಿದ್ಯಾರ್ಥಿಗಳು ತಮ್ಮ ಆರೋಗ್ಯದ ಸ್ವಾಸ್ಥö್ಯದ ಜೊತೆಗೆ ರಕ್ತದಾನ ಮಾಡುವುದರ ಮೂಲಕ ಇನ್ನೊಬ್ಬರ ಜೀವನ ಉಳಿಸುವ ಅತ್ಯುತ್ತಮ ಸಮಾಜಿಕ ಕಾರ್ಯಗಳನ್ನು ತಾವೆಲ್ಲರೂ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು
ಶಿಬಿರದಲ್ಲಿ ೩೧ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ರಕ್ತದಾನವನ್ನು ಮಾಡಿದರು.
೬೫ ಕ್ಕೂ ಹೆಚ್ಚು ವಿದ್ಯಾರ್ಥಿಗಳ ತಮ್ಮ ರಕ್ತದ ಗುಂಪಿನ ತಪಾಸಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ಸುರೇಶ ಶರಣಪ್ಪ ಪಾಟೀಲ್, ರೆಡ್ ಕ್ರಾಸ್ ಘಟಕದ ತಾ. ಸಂಚಾಲಕರಾದ ಡಾ ಚನ್ನಬಸವ ಮಾಡಗಿರಿ, ಹೆಚ್.ಡಿ.ಎಫ್.ಸಿ. ಬ್ಯಾಂಕ್ ಅಧಿಕಾರಿ ಪಂತ್ರಿವಿರೇಶ, ಸಹಾಯಕ ಪ್ರಾಧ್ಯಾಪಕರಾದ ಶಿವರಾಜ ಕೊಪ್ಪರ್, ಶೋಭಾ ಸಿ.ಹೆಚ್, ಸುಧಾ ಆರ್.ಸಚಿನ್ ಕೇಣಿಕರ್, ರಂಗನಾಥ, ವಿರುಪನಗೌಡ, ಶರಣಬಸವಯ್ಯ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ