ವಿವಿಧ ಬೇಡಿಕೆಗಳ ಈಡೇರಿಕೆಗೆ ಕೆ.ಆರ್.ಎಸ್ ಒತ್ತಾಯ
ಸಿಂಧನೂರು ಜು.13 ನಗರದ ಶಾಸಕರ ಕಾರ್ಯಾಲಯ / ಮನೆಯ ಮುಂದೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರೈತ ಸಂಘ ತಾಲುಕ ಸಮಿತಿ ಸಂಘಟನೆ ಒತ್ತಾಯಿಸಿ ಶಾಸಕ ಹಂಪನಗೌಡ ಬಾದರ್ಲಿ ಮೂಲಕ ಮುಖ್ಯಮಂತ್ರಿ ಗಳಿಗೆ ಮನವಿಯನ್ನು ಸಲ್ಲಿಸಿದರು.
ಕಳೆದ ನಲವತ್ತು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಸರ್ಕಾರಿ ಪರಂಪೂಕ ,ಗೈರಾಣಿ ,ಖಾರಿಜಾತ ಭೂಮಿಗೆ ಮಂಜೂರಾತಿ ಕೊಡಬೇಕು ,ಗ್ರಾಮೀಣ ಭಾಗದ 94 ಸಿ ,ನಗರ ಭಾಗದ 94 ಸಿಸಿ ,ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರ್ಹ ಗ್ರಾಮೀಣ ,ನಗರ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸುವಂತೆ ಮನವಿ ,ಸಕಾರಣವಿಲ್ಲದೆ ತಿರಸ್ಕತಗೊಂಡ ಪಾರಂ ನಂ 57 ಅರ್ಜಿಗಳನ್ನು ಪುನರ್ ಪರಿಶೀಲನೆ ನಡೆಸಿ ಅರ್ಹ ಅರ್ಜಿದಾರರಿಗೆ ಭೂಮಿ ಮಂಜೂರು ಮಾಡಬೇಕು ,ಮೂರು ಎಕರೆಗಿಂತ ಕಡಿಮೆ ಅರಣ್ಯ ಭೂಮಿ ಯನ್ನು ಸಾಗುವಾಳಿ ಮಾಡುವಬಡ ಸಾಗುವಾಳಿದಾರರನ್ನು ಒಕ್ಕಲೆಬ್ಬಿಸಬಾರದು ,ಅರಣ್ಯ ಇಲಾಖೆಯಿಂದ ವಾಪಸು ಪಡೆದಿರುವ ಏಳು ಲಕ್ಷ ಹೆಕ್ಟೇರ್ ಡಿಮ್ಡ್ ಫಾರೆಸ್ಟ್ ಭೂಮಿಯನ್ನು ಭೂ ಹಿನ ಬಡವರಿಗೆ ಹಂಚಿಕೆ ಮಾಡಬೇಕು ,ಸರ್ಕಾರಿ ಅರಣ್ಯ ಭೂಮಿಯನ್ನು ಖಾಸಗಿ ಕಂಪನಿಗಳಿಗೆ ,ಭೂ ಮಾಫಿಯಾ ಗಳಿಗೆ ಗುತ್ತಿಗೆ ಕೊಡಲು ಹಿಂದಿನ ಸರ್ಕಾರ ಕಾಯ್ದೆ ತಿದ್ದುಪಡಿ ಮಾಡಿತ್ತು ,ಆ ಕಾಯ್ದೆ ರದ್ದು ಪಡಿಸಬೇಕು ,2016 ರಲ್ಲಿ ನೇಮಿಸಿದಂತೆ ಭೂ ಸಮಸ್ಯೆಗಳ ಪರಿಹಾರ ಕ್ಕಾಗಿ ಹೋರಾಟ ನಿರತ ಸಂಘಟನೆಗಳ ಮುಖಂಡರಗಳನ್ನು ಒಳಗೊಂಡು ಕಂದಾಯ ಪ್ರಧಾನ ಕಾರ್ಯದರ್ಶಿ ಗಳು ,ಸಮಾಜ ಕಲ್ಯಾಣ ಸೇರಿದಂತೆ ಉನ್ನತ ಮಟ್ಟದ ಸಮಿತಿ ರಚನೆ ಮಾಡಬೇಕು .
ಮುಂಗಾರು ಮಳೆ ವಿಫಲಗೊಂಡು ಈಗ ಸಣ್ಣ ಪ್ರಮಾಣದಲ್ಲಿ ಪ್ರಾರಂಭ ವಾಗಿದೆ ಕೃಷಿಕರು ಸಂಕಷ್ಟಕ್ಕೆ ಈಡಾಗಿದ್ದಾರೆ ಈ ಹಿನ್ನೆಲೆಯಲ್ಲಿ ಬೆಳೆ ನಷ್ಟ ಪರಿಹಾರ ಕೊಡಬೇಕು ,ಗೋ ಶಾಲೆ ಪ್ರಾರಂಭಿಸ ಬೇಕು ,ಜಾನುವಾರುಗಳಿಗೆ ಮೇವು ಸರಬರಾಜು ಮಾಡಬೇಕು ,ಗ್ರಾಮೀಣ ಭಾಗದಲ್ಲಿ ಕೃಷಿಕರಿಗೆ ತ್ರಿ ಫೇಸ್ ವಿದ್ಯುತ್ ಕೊಡಬೇಕು ,ನರೇಗಾ ಮಾನವ ದಿನಗಳನ್ನು ನೂರು ರಿಂದ ಎರಡು ನೂರು ದಿನಗಳವರೆಗೆ ಹೆಚ್ಚಿಸಬೇಕು ಕೂಲಿ 500 ರೂ ಕೊಡಬೇಕು ,ಬಿಜೆಪಿ ಸರ್ಕಾರ ಜಾರಿಗೊಳಿಸಿದ ಹೊಸ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕಾಯ್ದೆ ವಾಪಸು ಪಡೆದು ರೈತರ ಕೃಷಿ ಜಮೀನು ರಕ್ಷಣೆ ಮಾಡಬೇಕೆಂಬ ಹಲವಾರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿಯನ್ನು ಸಲ್ಲಿಸಿದರು.
ತಾಲುಕ ಅದ್ಯಕ್ಷ ರಮೇಶ ಪಾಟೀಲ ಬೇರ್ಗಿ ,ಉಪಾಧ್ಯಕ್ಷ ಚಿಟ್ಟಿಬಾಬು ,ಬಿ.ಎನ್.ಯರದಿಹಾಳ ,ಪೃಥ್ವಿ ರಾಜ ,ಪಂಪಾಪತಿ ,ಗಂಗಾರಾಜ್ ,ತಿಮೋತಿ ,ಮುದಿಯಪ್ಪ ,ಹುಸೇನಪ್ಪ ,ಹನುಮಂತ, ಜಯಮ್ಮ, ಸತ್ಯವತಿ,ಸುಜಾತ ,ಸಣ್ಣ ಲಕ್ಷ್ಮೀ ಸೇರಿದಂತೆ ಹತ್ತಾರು ಹೋರಾಟಗಾರರು ಗ್ರೇಡ್ - 2 ತಹಶಿಲ್ದಾರ ರ ರಿಗೆ ಮನವಿಯನ್ನು ಸಲ್ಲಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ