ಅಂತರಾಜ್ಯ ಕಳ್ಳರ ಬಂಧನ-ಬಳ್ಳಾರಿ ಪೊಲೀಸರ ಭರ್ಜರಿ ಕಾರ್ಯಾಚರಣೆ

30 ಲಕ್ಷ ರೂ. ಮೌಲ್ಯದ ವಾಹನಗಳ ವಶ

ಬಳ್ಳಾರಿ:ಕೌಲ್ ಬಜಾರ್ ಪೋಲೀಸರು ಭರ್ಜರಿ ಬೇಟೆಯಾಡಿದ್ದು, ಅಂತರರಾಜ್ಯ ವಾಹನ ಕಳ್ಳರ ಬಂಧಿಸಿ ಟಿಪ್ಪರ್ ಸೇರಿದಂತೆ 30 ಲಕ್ಷ ರೂ. ಮೌಲ್ಯದ ವಿವಿಧ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. 

ವಿಜಯನಗರ ಜಿಲ್ಲೆ ಹೊಪೇಟೆ ತಾಲ್ಲೂಕು ಮಲಪನಗುಡಿಯ ಮಹೇಶ(32), ಪ್ರಭಾಕರ್(26) ಬಂಧಿತರು.

ಕಳೆದ ತಿಂಗಳ 26ರಂದು ಈ ಇಬ್ಬರನ್ನು ವಶಕ್ಕೆ ಪಡೆದಿದ್ದ ಪೊಲೀಸರು ಕೂಲಂಕೂಷ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆರೋಪಿತರು ಕೌಲ್ ಬಜಾರ್ ಠಾಣಾ ವ್ಯಾಪ್ತಿಯಲ್ಲಿ 3 ಟಿಪ್ಪರ್ ಲಾಇ, ಸಂಡೂರು ಠಾಣಾ ವ್ಯಾಪ್ತಿಯಲ್ಲಿ 4 ಟಿಪ್ಪರ್, ತೋರಣಗಲ್ ವ್ಯಾಪ್ತಿಯಲ್ಲಿ ಒಂದು ಟಿಪ್ಪರ್, ಒಂದು ರಾಯಲ್ ನ್‌ಫೀಲ್ಡ್ ಬೈಕ್, ಒಂಡು ಟಾಟಾ ಸುಮೊ, ಆಂಧ್ರಪ್ರದೇಶದ ಉರವಕೊಂಡ ಠಾಣಾ ವ್ಯಾಪ್ತಿಯಲ್ಲಿ ಒಂದು ಟಿಪ್ಪರ್, ಒಂದು ರಾಯಲ್ ಎನ್‌ಫೀಲ್ಡ್, ಹೊಳಗುಂಧ ಠಾಣಾ ವ್ಯಾಪ್ತಿಯಲ್ಲಿ ಪಲ್ಸರ್ ಬೈಕ್ ಸೇರಿ ಒಟ್ಟಾರೆ 11 ಟಿಪ್ಪರ್ ಲಾರಿ, 3 ಬೈಕ್, 1 ಟಾಟಾ ಸುಮೊ ಕಳ್ಳತನ ಮಾಡಿದ್ದನ್ನು ಪತ್ತೆಮಾಡಿದ್ದಾರೆ.

ಟಿಪ್ಪರ್ ಲಾರಿಗಳ ಮೌಲ್ಯ 15 ಲಕ್ಷ ರೂ. ಟಾಟಾ ಸುಮೊ ಮೌಲ್ಯ 4 ಲಕ್ಷ ರೂ., ರಾಯಲ್ ಎನ್‌ಫೀಲ್ಡ್ ಬೈಕ್ ಬೆಲೆ 3 ಲಕ್ಷ ರೂ., ಬಜಾಜ್ ಪಲ್ಸಾರ್ ಬೈಕ್ ಬೆಲೆ 1 ಲಕ್ಷ ರೂ. ಎಂದು ಅಂದಾಜಿಸಲಾಗಿದ್ದು, ಒಟ್ಟಾರೆ 23 ಲಕ್ಷ ರೂ. ಮೌಲ್ಯದ ವಾಹನ, 7 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‌ಕುಮಾರ್ ಭಂಡಾರು ತಿಳಿಸಿದ್ದಾರೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ