ಶ್ರೀಮತಿ ಎಸ್ ಎಸ್ ಪಾಟೀಲ್ ಬೀಳ್ಕೊಡುಗೆ ಸಮಾರಂಭ
ಕೂಡ್ಲಿಗಿ: ಪಟ್ಟಣದ ಹೀರೇಮಠ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾದ ಶ್ರೀಮತಿ ಎಸ್ ಎಸ್ ಪಾಟೀಲ್ ಇವರ ನಿವೃತ್ತಿಯ ಪ್ರಯುಕ್ತ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಹಿರೇಮಠ ವಿದ್ಯಾ ಪೀಠದ ಸ್ವಾಮಿಗಳಾದ ಶ್ರೀ ಪ್ರಶಾಂತ ಸಾಗರ ಸ್ವಾಮಿಜಿಗಳು ಶಿಕ್ಷಕರ ವೃತ್ತಿ ಎಂದರೆ ಯಾವುದೇ ಫಲಾಪೇಕ್ಷೆ ಇಲ್ಲದೆ ಇರುವ ವೃತ್ತಿ. ಸಮಾಜವನ್ನು ತಿದ್ದುವ ಹಾಗೂ ಸಮಾಜಕ್ಕೆ ಓಳ್ಳೆಯ ಪ್ರಜೆಗಳನ್ನು ನೀಡುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದರು. ನಂತರ ಮಾತನಾಡಿದ ಶಿಕ್ಷಕರ ಸಂಘದ ಅಧ್ಯಕ್ಷರಾದ ಶಿವಕುಮಾರ್ ಶಿಕ್ಷಕ ವೃತ್ತಿ ಸಮಾಜ ಸೇವಕ ವೃತ್ತಿ ಇದ್ದಂತೆ ಸಮಾಜದ ಅಂಕುಡೊಂಕುಗಳನ್ನು ಸರಿಮಾಡುವ ಶಿಕ್ಷಕರು ಕೊನೆಗೆ ಕೇಳುವುದು ಒಂದನ್ನೆ ತಾವು ಸೇವೆ ಸಲ್ಲಿದ ಶಾಲೆ ಅಥವಾ ಕಾಲೇಜಿನಿಂದ ಒಂದು ಸನ್ಮಾನ ಅಥವಾ ಹಿತ ನುಡಿಗಳು ಅಷ್ಟೇ ಈ ಬಗ್ಗೆ ಎಲ್ಲ ಶಾಲೆಗಳು ಗಮನಹರಿಸಿ ಶಿಕ್ಷಕರಿ ಗೌರವಯುತವಾಗಿ ಬಿಳ್ಕೋಡುಗೆ ನೀಡಬೇಕು ಎಂದರು ಈ ಸಮಾರಂಭದಲ್ಲಿ ಹಿರೇಮಠ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳು ಹಾಗೂ ಸಿಬ್ಬಂದಿಗಳು ಹಾಗೂ ಪ್ರೌಢಶಾಲೆಯ ಶಿಕ್ಷಕರು ಹಾಗೂ ಮಕ್ಕಳು ಸೇರಿ ಇನ್ನು ಅನೇಕರು ಭಾಗವಹಿಸಿದ್ದರು...