ವರ್ಷದ ವರದಿಗಳನ್ನು ಪತ್ರಿಕಾ ದಿನಾಚರಣೆ ದಿನದಂದು ಆತ್ಮಾವಲೋಕನ ಮಾಡಿಕೊಳ್ಳಬೇಕು : ಕೆ ಕೊಟ್ರೇಶ್

"ಕರ್ನಾಟಕ ಪತ್ರಕರ್ತರ ಸಂಘದ ಮೊದಲನೇ ಪತ್ರಿಕಾ ದಿನಾಚರಣೆ ಹಾಗೂ ರಾಜ್ಯಮಟ್ಟದ ಕಾರ್ಯಕಾರಿಣಿ ಸಭೆ"

ಕೊಟ್ಟೂರು : ತಾಲ್ಲೂಕು ಘಟಕದ ವತಿಯಿಂದ ಕರ್ನಾಟಕ ಪತ್ರಕರ್ತರ ಸಂಘದ ಮೊದಲನೇ ರಾಜ್ಯ ಪತ್ರಿಕಾ ದಿನಾಚರಣೆ ಹಾಗೂ ರಾಜ್ಯಮಟ್ಟದ ಕಾರ್ಯಕಾರಿಣಿ ಸಭೆ ಶನಿವಾರ ನಡೆಯಿತು. ಯಶೋಧರ ಸಾನ್ನಿಧ್ಯ ವಹಿಸಿದ್ದರು ಸಮಾರಂಭದ ಉದ್ಘಾಟನೆಯನ್ನು ರಾಜ್ಯಾಧ್ಯಕ್ಷರಾದ ಮುರುಗೇಶ ಬಿ. ಶಿವಪೂಜೆ ನೆರವೇರಿಸಿ ಡಿಜಿಟಲ್ ಮಾಧ್ಯಮದ ಮೇಲೆ ಜನರ ನಂಬಿಕೆ ಈಗ ಕಳೆದು ಹೋಗುತ್ತಿದೆ, ಇದನ್ನು ನಾನು ಹೇಳುತ್ತಿಲ್ಲ, ಅನೇಕ ಹೈಕೋರ್ಟ್ ಪೀಠದ ನ್ಯಾಯಾಧೀಶರು, ಆಂತರಿಕ ಸರಕಾರದ ಗುಪ್ತದಳ ಹಾಗೂ ಸಾರ್ವಜನಿಕವಾಗಿ ಈಗ ಮಾತಾನಾಡುತ್ತಿದ್ದಾರೆ. 

ಡಿಜಿಟಲ್ ಮಾಧ್ಯಮ ಎಷ್ಟೇ ಮುಂದುವರೆದರೂ ಪತ್ರಿಕೆಗಳ ಮೌಲ್ಯ ಯಾವತ್ತೂ ಕಡಿಮೆ ಆಗುವುದಿಲ್ಲ ಎಂದು ಹೇಳಿದರು. 

ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ವಿಮರ್ಶಕರಾದ ಚಿಕ್ಕಮಗಳೂರಿನ ಡಾ. ಸತ್ಯನಾರಾಯಣ ಅವರು ಬಹಳ ಮಾರ್ಮಿಕವಾಗಿ ಪತ್ರಿಕಾ ರಂಗದ ಜವಾಬ್ದಾರಿ, ಪತ್ರಕರ್ತರ ಪ್ರಾಮುಖ್ಯತೆ ಮತ್ತು ಕುವೆಂಪು ಅವರು ಬದುಕಿನಲ್ಲಿ ಪತ್ರಿಕೆ ಯಾವ ರೀತಿ ಪರಿಣಾಮ ಬೀರಿತ್ತೆಂಬುದನ್ನು ಮತ್ತು ಕೆಲವು ಹಿರಿಯ ಪತ್ರಿಕೆಯ ಸಂಪಾದಕರ ವಿಚಾರಗಳನ್ನು ಬಹಳ ಪ್ರಸ್ತುತವಾಗಿ ಉಪನ್ಯಾಸ ನೀಡಿದರು. ನಂತರ ಮಾತನಾಡಿದ ವೀರನಗೌಡ ಪಾಟೀಲ್ ರವರು ಯಾವುದೇ ಒಂದು ಪ್ರಕರಣಗಳಲ್ಲಿ ನಾವಾಲಿ, ತಾವಾಗಲಿ ಬಹಳ ಅದ್ಯಯನ ಮಾಡಿ ಅದರ ಬಗ್ಗೆ ಪೂರ್ಣ ವರದಿ ಮಾಡಬೇಕು, ಹಾಗೆ ಅನೇಕರು ವಾಸ್ತವಿಕ ಸತ್ಯ ಅರಿಯದೇ ಅದೇ ಸುದ್ದಿಯನ್ನು ಕಾಪಿ ಮಾಡಿ ಬಿತ್ತರಿಸುವುದು ಸರಿ ಅಲ್ಲ ನೂರಾರು ಜನ ಉತ್ತಮ ಪತ್ರಕರ್ತರ ಮಧ್ಯ ಇಂತಹ ಒಂದು ಸುಳ್ಳು ಸುದ್ದಿ ಬಿತ್ತರಿಸಿದಾಗ ಪತ್ರಕರ್ತರ ಮೌಲ್ಯ ಕುಂಠಿತವಾಗುತ್ತದೆ ಎಂದರು. 

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಅನೇಕರು ಮಾತನಾಡಿ ಪತ್ರಕರ್ತರ ಸಾಮಾಜಿಕ ಸೇವೆ ಅನನ್ಯ ಸರಕಾರ ಪತ್ರಕರ್ತರ ವಾಸ್ತವಿಕ ಸ್ಥಿತಿಯನ್ನು ಅರ್ಥಮಾಡಿಕೊಂಡು ವಿವಿಧ ಸೌಲಭ್ಯಗಳನ್ನು ಒದಗಿಸಬೇಕೆಂದು ಸರಕಾರಕ್ಕೆ ರಾಜ್ಯ ಉಪಾಧ್ಯಕ್ಷ ಸುಧೀಶಕುಮಾರ ಅವರು ಕರೆ ನೀಡಿದರು. ವಿ.ಟಿ.ಎಸ್. ತಿಪ್ಪೇಸ್ವಾಮಿ ವೆಂಕಟೇಶ್ ಮಾತನಾಡುತ್ತಾ, ದಿನನಿತ್ಯದ ಬದುಕಿನಲ್ಲಿ ಪತ್ರಿಕೆಗಳು ಯಾವ ರೀತಿ ಪರಿಣಾಮ ಬೀರುತ್ತೆ ಎಂದು ಮಾತನಾಡಿದರು. ಕೆ.ಪಿ.ಸಿ.ಸಿ. ಸದಸ್ಯರಾದ ಗೂಳಿ ಮಲ್ಲಿಕಾರ್ಜುನ ಮಾತನಾಡಿ, ಪತ್ರಕರ್ತರ ಏಳಿಗೆಗಾಗಿ ನಾವು ಸದಾ ಜೊತೆಯಲ್ಲಿರುತ್ತೇವೆ ಎಂದರು. ವಿಜಯನಗರ ಜಿಲ್ಲೆಯ ಅಧ್ಯಕ್ಷರಾದ ಶ್ರೀ  ಬಿ.ಎಚ್.ಎಸ್.ರಾಜು ಮಾತನಾಡುತ್ತಾ, ಮೌಲ್ಯಾಧಾರಿತ ಪತ್ರಿಕಾಧರ್ಮವನ್ನು ಅನುಸರಿಸಿ ಸಮಾಜ ಬದಲಾವಣೆಗಾಗಿ ಶ್ರಮಿಸಬೇಕು ಎಂದರು. 

ಕೊಟ್ಟೂರು ತಾಲ್ಲೂಕು ಅಧ್ಯಕ್ಷರಾದ ಕೆ.ಕೊಟ್ರೇಶ್ ಮಾತನಾಡುತ್ತಾ, ವರ್ಷದ ವರದಿಗಳನ್ನು ಪತ್ರಿಕಾ ದಿನಾಚರಣೆ ದಿನದಂದು ಸಾರ್ವಜನಿಕವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕು, ಪತ್ರಿಕಾ ವಿತರಕರೇ ಪತ್ರಕರ್ತರ ಬೆನ್ನೆಲುಬು ಕ್ಷೇತ್ರದ ಶಾಸಕರು ಪತ್ರಕರ್ತರಿಗೆ ಸೌಲಭ್ಯಗಳನ್ನು ಒದಗಿಸಲು ಸರ್ಕಾರದಲ್ಲಿ ದನಿ ಎತ್ತಬೇಕೆಂದು ಮನವಿ ಮಾಡಿದರು. 

ಈ ಸಂದರ್ಭದಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಾದ ದೊಡ್ಡಬಸಪ್ಪ ರೆಡ್ಡಿ ರಾಜ್ಯಾಧ್ಯಕ್ಷರು ಕರ್ನಾಟಕ ಪತ್ರಕರ್ತರ ರಾಜ್ಯ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ ,ಎನ್.ಎಫ್.ಐ.ಡಬ್ಲು. ರಾಜ್ಯ ಕಾರ್ಯದರ್ಶಿ ರೇಣುಕಮ್ಮ, ವಿಶೇಷ ಸನ್ಮಾನ, ರಾಜ್ಯಪ್ರಶಸ್ತಿ ಪಡೆದ ವಿಜಯವಾಣಿ, ಹಾಫೀಜ್ ಇಮ್ರಾನ್ ಮೌಲ್ವಿ, ಡಾಕ್ಟರೇಟ್ ಪದವಿ ಪಡೆದ ಸತೀಶ್ ಪಾಟೀಲ್, ರವಿಕುಮಾರ್.ಎಂ., ಶೋಭಾ ಪಾಟೀಲ್, ಗಂಗಾಧರ.ಎಲ್., ಶಿಕ್ಷಕರಾದ ವೆಂಕನಗೌಡ ಹಟ್ಟಿ, ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಕವಿತಾ.ಬಿ., ಶಾಲಿನಿ, ಪ್ರಕೃತಿ.ಕೆ.ಎಂ., ಅಸಗೋಡ್ ಹಾಲಮ್ಮ, ಬೇವೂರು ಅಜ್ಜಪ್ಪ ಸೈನಿಕರು, ಎಚ್.ನಾಗೇಶ್, ಆಕಾಶ್ ರಾಂಪುರ್, ಕೊಟ್ರೇಶ್ ಗೊಲ್ಲರಹಳ್ಳಿ, ನಿವೃತ್ತ ಪೌರ ಕಾರ್ಮಿಕರಾದ ದೋಟಾಲ್ ಪ್ರಕಾಶ್, ಮತ್ತು ಪೌರ ಕಾರ್ಮಿಕರು ಸುಭದ್ರಮ್ಮ, ಮಾದೂರ್ ಕೊಟ್ರೇಶ್, ಗೋಣೆಪ್ಪ, ಪತ್ರಿಕಾ ವಿತರಕರು ಶಂಕರ್ ಕುದುರಿ ಮೂಟಿ  ,ಅರಮನೆ ರೇವಣ್ಣ , ಸಂದೀಪ್ ಕುಮಾರ್ ,ಮಹಾಂತಪ್ಪ,  ಶಿವಮೂರ್ತಿರವರಿಗೆ ವಿಶೇಷ ಸನ್ಮಾನ ಮಾಡಲಾಯಿತು. ನಂತರ ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯಮಟ್ಟದ ಕಾರ್ಯಕಾರಿಣಿ ಸಭೆ ನಡೆಯಿತು. ಸಂಘಟನೆಯ ಬಗ್ಗೆ ಹಲವಾರು ವಿಷಯಗಳು ಚರ್ಚಿಸಿದರು. ಈ ಸಂದರ್ಭದಲ್ಲಿ ಹಲವು ಜಿಲ್ಲೆಗಳಿಂದ ಜಿಲ್ಲಾಧ್ಯಕ್ಷರುಗಳು, ತಾಲ್ಲೂಕು ಅಧ್ಯಕ್ಷರುಗಳು, ಪದಾಧಿಕಾರಿಗಳು ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಿದರು. 

ಈ ಸಂದರ್ಭದಲ್ಲಿ ಶ್ರೀ ಸೋಮಶೇಖರ ಹಿರೇಮಠ, ಕಾರ್ಯಾಧ್ಯಕ್ಷರು, ವಿಜಯನಗರ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಕಾಕುಬಾಳ್ ಪ್ರಕಾಶ್, ಉಪಾಧ್ಯಕ್ಷರಾದ ಭರಮಯ್ಯ, ರಾಮು ಅಸ್ರಿತ್, ಜಿಲ್ಲಾ ಗೌರವ ಅಧ್ಯಕ್ಷರಾದ ಕೆ.ಎಸ್. ಮುರಳೀಧರ, ಜಿಲ್ಲಾ ಕಾರ್ಯದರ್ಶಿ ಆರ್.ರಾಮಜೀನಾಯ್ಕ, ರಾಜ್ಯ ಸಲಹಾ ಸಮಿತಿ ಸದಸ್ಯರಾದ ಡಿ.ಎಂ.ಈಶ್ವರಪ್ಪ, ಬಾಗಲಕೋಟೆ ಜಿಲ್ಲಾ ಅಧ್ಯಕ್ಷರಾದ ಶ್ರೀ ಡಿ.ಬಿ.ವಿಜಯಶಂಕರ್, ಕೂಡ್ಲಿಗಿ ತಾಲ್ಲೂಕು ಅಧ್ಯಕ್ಷರಾದ ಸಾಲುಮನಿ ರಾಘವೇಂದ್ರ, ಕೊಟ್ಟೂರು ತಾಲ್ಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಸಿದ್ದಪ್ಪ, ಕಾರ್ಯಾಧ್ಯಕ್ಷ ವಿಜಯಕುಮಾರ್.ಎಚ್., ಚಿರಿಬಿ ಕೊಟ್ರೇಶ್, ಎಂ.ಶ್ರೀನಿವಾಸ್, ಪ್ರಕಾಶ್, ಶಿವರಾಜ್, ಕೆ.ಎಂ. ಚಂದ್ರಶೇಖರ್, ಕೆ.ಸತೀಶ್‌ಕುಮಾರ್, ಟಿ.ಕೊಟ್ರೇಶ್, ಎಂ.ಗುರುಪ್ರಸಾದ್, ಎಂ.ನಯನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದುದ್ದಕ್ಕೂ ಆರಕ್ಷಕ ಸಿಬ್ಬಂದಿಗಳು ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಲು ಸಹಕರಿಸಿದರು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ