ವಿ.ಎನ್. ಹಟ್ಟಿ ರವರ ನಿವೃತ್ತಿ ಬೀಳ್ಕೊಡುಗೆ ಸಮಾರಂಭ

 ಕೊಟ್ಟೂರು : ಒಬ್ಬ ಶಿಕ್ಷಕರ ಕೈಯಲ್ಲಿ ಈ ಸಮಾಜ ತಿದ್ದುವ ಶಕ್ತಿ ಇರುತ್ತದೆ. ಶಿಕ್ಷಕರ ವೃತ್ತಿ ಈ ಜಗತ್ತಿನಲ್ಲಿ ಅತ್ಯಂತ ಪವಿತ್ರ ವೃತ್ತಿಯಾಗಿದೆ . ಸಮಾಜಕ್ಕೆ ಉತ್ತಮವಾದ ವ್ಯಕ್ತಿ ಸಿಗಬೇಕಾದರೆ ಅದು ಶಿಕ್ಷಕರ ಸಾಧನೆ ಎಂದು ಕೊಟ್ಟೂರು ತಾಲೂಕು ಕರ್ನಾಟಕ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಕೆ. ಕೊಟ್ರೇಶ್ ಹೇಳಿದರು.

 ಪಟ್ಟಣದ ಸರ್ಕಾರಿ ಮೌಲಾನ ಆಜಾದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಉ. ಜ. ಸಿ. ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ವಿ. ಎನ್. ಹಟ್ಟಿ ನಿವೃತ್ತಿ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಿ ಮಾತನಾಡಿದರು ಈ ಜಗತ್ತಿನಲ್ಲಿ ಅತ್ಯಂತ ಪವಿತ್ರ ವೃತ್ತಿ ಎಂದರೆ ಅದು ಶಿಕ್ಷಕರ ವೃತ್ತಿಯಾಗಿದೆ ಒಂದು ಮಗುವಿನ ಸರ್ವತೋಮುಖ ಅಭಿವೃದ್ಧಿ ಹೊಂದಬೇಕಾದರೆ ಅದರ ಹಿಂದೆ ವಿ. ಎನ್. ಹಟ್ಟಿ ಅವರಂತ ಶಿಕ್ಷಕರು ಶಕ್ತಿ ಇರುತ್ತದೆ. ಅವರು ಶಿಕ್ಷಣ ಕ್ಷೇತ್ರದಲ್ಲಿ ಸುಮಾರು 40 ವರ್ಷ ಕಾಲ ಮಕ್ಕಳಿಗೆ ವಿದ್ಯಾದಾನ ನೀಡಿದ್ದಾರೆ ಅವರ ನಿವೃತ್ತಿ ಜೀವನ ಸುಖವಾಗಿ ಕುಟುಂಬಸ್ಥರ ಜೊತೆಗೆ ಸಂತೋಷ ನೆಮ್ಮದಿಯಿಂದ ಇರಲಿ ನಾಡಿನ ಆರಾಧ್ಯ ದೈವನಾದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಅವರಿಗೆ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ ಎಂದು ಭಗವಂತನಲ್ಲಿ ಬೇಡಿಕೊಳ್ಳುತ್ತೇನೆ ಎಂದರು.

ನಂತರ ಮಾತನಾಡಿದ ಉ.ಜ.ಸಿ. ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ವಿ. ಎನ್. ಹಟ್ಟಿ ಅವರು ಮಾತನಾಡಿದರು ಈ ನನ್ನ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ನೀಡಿದ್ದೇನೆ ಎಂದು ಭಾವಿಸಿದ್ದೇನೆ ನನ್ನ ಜೊತೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರು ಹಾಗೂ ನಮ್ಮ ಉ.ಜ. ಸಿ. ಸಂಸ್ಥೆಯ ಮಂಡಳಿಯ ಸದಸ್ಯರಿಗೆ ವಂದನೆಗಳನ್ನು ಅರ್ಪಿಸುತ್ತೇನೆ ಹಾಗೂ ಈ ನನ್ನ ನಿವೃತ್ತಿ ಬಿಳ್ಕೊಡೆ ಸಮಾರಂಭಕ್ಕೆ ಸಹಕರಿಸಿದ ಸರ್ಕಾರಿ ಮೌಲಾನ ಆಜಾದ್ ಆಂಗ್ಲ ಮಾಧ್ಯಮ ಶಾಲೆಯ ಸರ್ವ ಶಿಕ್ಷಕರಿಗೂ ಹಾಗೂ ಮಕ್ಕಳಿಗೆ ಧನ್ಯವಾದಗಳು ಹೇಳಲು ಇಷ್ಟಪಡುತ್ತೇನೆ ಎಂದರು.

 ಈ ಸಂದರ್ಭದಲ್ಲಿ ಬಿ ಆರ್ ಪಿ ರವೀಂದ್ರ, ಸಿಆರ್‌ಪಿ ಅಜ್ಜಪ್ಪ, ಗುರುದೇವ ಆಂಗ್ಲ ಮಾಧ್ಯಮ ಶಾಲೆಯ ಪ್ರಕಾಶ್, ಕೋಲಶಾಂತೇಶ್ವರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ವೀರೇಶ್, ಗಚ್ಚಿನಮಠ ಶಾಲೆಯ ಮುಖ್ಯ ಶಿಕ್ಷಕಿ ಕಲಾ, ಸರ್ಕಾರಿ ಮೌಲಾನ ಆಜಾದ್ ಆಂಗ್ಲ ಮಾಧ್ಯಮ ಶಾಲೆಯ ಸರ್ವ ಶಿಕ್ಷಕರು ವಿದ್ಯಾರ್ಥಿಗಳು ವಿ ಎನ್ ಹಟ್ಟಿ ಅವರ ಧರ್ಮಪತ್ನಿಯಾದ ಎಸ್. ಎಸ್ ಪಾಟೀಲ್ ಮಕ್ಕಳು ಸೊಸೆಂದರು ಮೊಮ್ಮಕ್ಕಳು ಇತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ