ಭದ್ರಾ ಭರ್ತಿ ಗ್ಯಾರಂಟಿ
ದಾವಣಗೆರೆ:ಈ ಬಾರಿ ಭದ್ರಾ ಭರ್ತಿ ಆಗುವುದು ಖಚಿತ. ಅದು ಹೇಗೆ ಅಂದರೆ ಹೀಗೆ ಒಳ ಹರಿವು ಮುಂದುವರಿದರೆ ಭದ್ರಾ ತುಂಬಲು ಇನ್ನು ಮೂರು ದಿನ ಬೇಕು. ಹಾಲಿ 64.887 ಟಿಎಂಸಿ ಸಂಗ್ರಹ ಇದೆ. ಜಲಾಶಯದ ಸಮರ್ಥ 71.535. ಅಲ್ಲಿಗೆ ಜಲಾಶಯಕ್ಕೆ ಇನ್ನು 6.648 ಟಿಎಂಸಿ ನೀರು ಹರಿದು ಬರಬೇಕಿದೆ.
1 ಟಿಎಂಸಿ ನೀರು ಜಲಾಶಯಕ್ಕೆ ಹರಿದು ಬರಲು ಒಳ ಹರಿವು 24 ತಾಸು 11,574 ಕ್ಯೂಸೆಕ್ ಬೇಕು. ಹಾಲಿ 35,557 ಕ್ಯೂಸೆಕ್ ಇದೆ. ಇದೆ ರೀತಿ ನೀರು ಹರಿದು ಬಂದರೆ ನಾಳೆ ಬೆಳಗ್ಗೆ 6 ಗಂಟೆ ವೇಳೆಗೆ ಜಲಾಶಯಕ್ಕೆ 3.07ಟಿಎಂಸಿ ನೀರು ಬರಲಿದೆ.
ಮಲೆನಾಡ ಭಾಗದಲ್ಲಿ ಇನ್ನು ಮಳೆ ಆಗುತ್ತಿರುವುದರಿಂದ ಭದ್ರಾ ನದಿಗೆ ಬರುತ್ತಿರುವ ಒಳ ಹರಿವು ಹೆಚ್ಚುತ್ತಲೇ ಇದೆ. ಬಾಳೆಹೊನ್ನೂರು ಭಾಗದಲ್ಲಿ ಒಳ ಹರಿವು ಇಳಿದಿಲ್ಲ. ಇಂದು ನಾಳೆ ಕಡಮೆ ಆದರೂ ಒಳ ಹರಿವು ಇಳಿಕೆ ಆಗಲ್ಲ.
ಸೋಮವಾರದಿಂದ ಮತ್ತೆ ಮಳೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿರುವ ಹಿನ್ನೆಲೆಯಲ್ಲಿ ಭದ್ರಾ ಭರ್ತಿ ಗ್ಯಾರಂಟಿ ಅನ್ನಲು ಅಡ್ಡಿ ಇಲ್ಲ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ