ಗಾಮ ಪಂಚಾಯತಿಯಲ್ಲೇ ಸದಸ್ಯ ಚಂದ್ರಪ್ಪ ಹಾಸಿಗೆ ಸಮೇತ ಮಲಗಿ ಪ್ರತಿಭಟನೆ

ಅನಾರೋಗ್ಯದಿಂದ ಬಳಲುತ್ತಿರುವ ಚಂದ್ರಪ್ಪನಿಂಗೆ  ಸತಾಯಿಸುತ್ತಿರುವ ಉಜ್ಜಿನಿ ಗ್ರಾಮ ಪಂಚಾಯಿತಿ ಪಿಡಿಒ ,ಅಧ್ಯಕ್ಷರು 

ಕೊಟ್ಟೂರು ತಾಲೂಕಿನ ಉಜ್ಜಿನಿ ಗ್ರಾಮ ಪಂಚಾಯತಿಯ ಬೈರದೇವರ ಗುಡ್ಡದ ಸದಸ್ಯರಾದ ಚಂದ್ರಪ್ಪ ನವರು ಪೈಪ್ಲೈನ್ ರಿಪೇರಿ ಮಾಡಿದ ಕೆಲಸಕ್ಕೆ ಹಣ ಕೊಡದೆ ಸತಾಯಿಸುತ್ತಿರುವ ಪಿಡಿಒ ಮತ್ತು ಅಧ್ಯಕ್ಷರ  ವಿರುದ್ಧ ಗ್ರಾಮ ಪಂಚಾಯತಿಯಲ್ಲಿ ಹಾಸಿಗೆ ಸಮೇತ ಮಲಗಿ ವಿನೂತನವಾಗಿ ಪ್ರತಿಭಟಿಸಿದ್ದಾರೆ.

ಗ್ರಾಮ ಪಂಚಾಯತಿ ಸದಸ್ಯರಾದ ಚಂದ್ರಪ್ಪ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆಗೆ ಹಣದ ಕೊರತೆಯಾಗಿ ಆಸ್ಪತ್ರೆಗೆ ತೋರಿಸಲು ಹಣ ಬೇಕಾಗಿದೆ ಎಂದು ಪರಿ ಪರಿಯಾಗಿ ಬೇಡಿಕೊಂಡರು ಸಹ ಕೊಡುತ್ತಿಲ್ಲವೆಂದು ಪಿಡಿಓ, ಅಧ್ಯಕ್ಷರ ವಿರುದ್ದ ದೂರಿದರು.

ಚಳಿ ಜ್ವರ ಬಂದು ಚಂದ್ರಪ್ಪ ಪಂಚಾಯತಿಯಲ್ಲಿ ಮಲಗಿಕೊಂಡಿದ್ದನ್ನು ಕಂಡ ಮಾಜಿ ಅಧ್ಯಕ್ಷರು ಅವರನ್ನು ಮಾತನಾಡಿಸಿ ವಿಚಾರಿಸಿದಾಗ ನಾನು ವರ್ಗ 1 ರಲ್ಲಿ 12 ಸಾವಿರ ಮೊತ್ತದ ಪೈಪ್ ಲೈನ್ ಕೆಲಸ ಮಾಡಿದ್ದು ನಾಲ್ಕು ತಿಂಗಳುಗಳಿಂದ ಹಣ ನೀಡಲು ಪಿಡಿಒ ರವರು ಸತಾಯಿಸುತ್ತಿದ್ದಾರೆ. ನಾನು ಅನಾರೋಗ್ಯದಿಂದ ಬಳಲುತ್ತಿದ್ದು  ಚಿಕಿತ್ಸೆ ಅನಿವಾರ್ಯ ಇದೆ  ಪಿಡಿಓ ಗಮನಕ್ಕೆ ಇದ್ದರೂ ನನಗೆ ಹಣ ಪಾವತಿ ಮಾಡುತ್ತಿಲ್ಲ ಎಂದರು.

ಈ ಸಂದರ್ಭದಲ್ಲಿ ರವಿ, ಕುರುಗೋಡು ಸಿದ್ದೇಶ ಗ್ರಾಮ ಪಂಚಾಯತಿ ಸದಸ್ಯರು ಇದ್ದರು.

ಕೊಟ್ -1 : ಗ್ರಾಮ ಪಂಚಾಯತಿಯಲ್ಲಿ  ಗ್ರಾ.ಪಂ ಸದಸ್ಯ ಚಂದ್ರಪ್ಪ ಹಾಸಿಗೆ ಸಮೇತ ಮಲಗಿ ವಿನೂತನವಾಗಿ ಪಿಡಿಒ , ಅಧ್ಯಕ್ಷರ ವಿರುದ್ಧ ಪ್ರತಿಭಟಿಸುವುದು ಈ ವಿಷಯವಾಗಿ ಪರಿಶೀಲನೆ ನೆಡಸಿ ಅಧಿಕಾರಿಗಳ ತಪ್ಪು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ.ವಿಜಯನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಕರು.

ಕೋಟ್ -2 : ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಪ್ಪ ವರ್ಗ-೧ ರಲ್ಲಿ ಪೈಪ್‌ಲೈನ್ ಕೆಲಸ ಮಾಡಿದ ಹಣ ಪಿಡಿಓ ಕೊಟ್ಟಿರುವುದಿಲ್ಲ . ಇಂತಹ ವಿಷಯ ಚಂದ್ರಪ್ಪ ಪ್ರತಿಭಟಿಸುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ. ನೋಟೀಸ್ ಕೊಟ್ಟು ವಿವರಣೆ ಪಡೆಯುತ್ತೇನೆ – ತಾಲೂಕು ಪಂಚಾಯಿತಿ ಇಒ ವೈ ರವಿಕುಮಾರ್ ಕೊಟ್ಟೂರು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ