*🪔ನಿಧನ ವಾರ್ತೆ:ಶ್ರೀಮತಿ ಕಜ್ಜೇರ ಮಲ್ಲಮ್ಮ-ಗೆದ್ದಲ ಗಟ್ಟೆ ಗ್ರಾಮ*🪔*

ವಿಜಯನಗರ ಜಿಲ್ಲೆ ಕೂಡ್ಲಿಗಿ:ತಾಲೂಕಿನ ಗೆದ್ದಲಗಟ್ಟೆ ಗ್ರಾಮವಾಸಿಗಳು, ಹಾಗೂ ದಲಿತ ಹಿರಿಯ ಮಹಿಳಾ ಚೇತನರು. ದಲಿತರ ಪರ ಹೋರಾಟಗಾರರು, ಹಾಗೂ DSS ಜಿಲ್ಲಾ ಘಟಕದ ಮುಖಂಡರಾದ ಹನುಮೇಶರವರ ತಾಯಿ. ಶ್ರೀಮತಿ ಕಜ್ಜೇರ ಮಲ್ಲಮ್ಮ(80), ಜುಲೈ26ರ ರಾತ್ರಿ ಸ್ವ ಗೃಹದಲ್ಲಿ ನಿಧನರಾಗಿದ್ದಾರೆ. ಅವರು ಬಹು ದಿನಗಳಿಂದ, ವಯೋ ಸಹಜ ಅನಾರೋಗ್ಯದಿಂದ ಬಳಲುತಿದ್ದರು. ಮೃತರು ಮಕ್ಕಳು ಮೊಮ್ಮಕ್ಕಳು ಸೊಸೆಯಂದಿರು ಸೇರಿದಂತೆ, ತುಂಬು ಕುಟುಂಬವನ್ನು ಅಪಾರ ಬಂಧು ಬಳಗವನ್ನು ಹೊಂದಿದವರಾಗಿದ್ದರು. *ಅಂತ್ಯಕ್ರಿಯೆ*-ಜುಲೈ 27ರಂದು ಮಧ್ಯಾಹ್ನ , ಗ್ರಾಮದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು. *ಸಂತಾಪ*- ಗೆದ್ದಲ ಘಟ್ಟೆ ಗ್ರಾಮದ ದಲಿತ ಸಮುದಾಯದವರು, ಹಾಗೂ ವಿವಿದ ಸಮುದಾಯದವರು ಸಮಸ್ತ ಗ್ರಾಮಸ್ಥರು. ದಲಿತ ಸಮುದಾಯದವರು ಸೇರಿದಂತೆ, ವಿವಿದ ಸಮುದಾಯದವರು. ದಲಿತ ಸಂಘರ್ಷ ಸಮಿತಿ ಸೇರಿದಂತೆ ದಲಿತ ಪರ ಸಂಘಟನೆಗಳು, ಪತ್ರಕರ್ತರು ರೈತರು ಕಾರ್ಮಿಕರು ಮಹಿಳೆಯರ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು. ದಲಿತ ಸಂಘರ್ಷ ಸಮಿತಿ ವಿವಿದ ಗ್ರಾಮ ಘಟಕಗಳ, ತಾಲೂಕು ಜಿಲ್ಲಾ ರಾಜ್ಯ ಘಟಕಗಳ ಪದಾಧಿಕಾರಿಗಳು ಸರ್ವ ಸದಸ್ಯರು. ಶಾಸಕರು ಮೊದಲ್ಗೊಂಡು ತಾಲೂಕಿನ ವಿವಿದ ಜನಪ್ರತಿನಿಧಿಗಳು, ಹಾಗೂ ಹೋರಾಟಗಾರರು ಗಣ್ಯರು. ಕೂಡ್ಲಿಗಿ ಪಟ್ಟಣದ ಪ್ರಮುಖ ನಾಗರೀಕರು, ಗೆದ್ದಲ ಘಟ್ಟೆ ಗ್ರಾಮದ ನೆರೆ ಹೊರೆ ಗ್ರಾಮಸ್ಥರು. ಮೃತ ಶ್ರೀಮತಿ ಕಜ್ಜೇರ ಮಲ್ಲಮ್ಮರವರ ಅಗಲಿಕೆಗೆ, ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ