ವಿಶ್ವ ಚೇತನ ರಾಷ್ಟ್ರೀಯ ಪ್ರಶಸ್ತಿಗೆ ಆಟೋ ಚಾಲಕರ ಸಂಘದ ಅಧ್ಯಕ್ಷ ಸಿದ್ದು ಮುರಾರಿ ಆಯ್ಕೆ

 

ಮಸ್ಕಿ : ದರ್ಶನ ಸೋಶಿಯಲ್ ಹಾಗೂ ಕಲ್ಚರಲ್ ಅಕಾಡೆಮಿ (ರಿ)ಬೆಂಗಳೂರು ಮತ್ತು ನೆಹರು ಯುವ ಕೇಂದ್ರ ಬೆಂಗಳೂರು ಇವರ ಸಂಯೋಗದಲ್ಲಿ ಕಲಾ ವೈಭವ 2024 ರ ಕಾರ್ಯಕ್ರಮ ದಲ್ಲಿ ವಿಶ್ವ ಚೇತನ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಪ್ರಶಸ್ತಿಗೆ ಮಸ್ಕಿ ಪಟ್ಟಣದ ಸಮಾಜ ಸೇವಕ ಹಾಗೂ ಮಸ್ಕಿ ತಾಲೂಕು ಆಟೋ ಚಾಲಕರ ಸಂಘಟನೆ ಅಧ್ಯಕ್ಷ ಸಿದ್ದು ಮುರಾರಿ ರವರಿಗೆ ವಿಶ್ವ ಚೇತನ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸಮಾಜ ಸೇವೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಕೋವಿಡ್ ಸಮಯದಲ್ಲಿ ಉಚಿತವಾಗಿ ಗರ್ಭಿಣಿಯರರಿಗೆ ಹಾಗೂ ಸಾರ್ವಜನಿಕರಿಗೆ ಆಟೋ ಸೇವೆ ಸೇರಿದಂತೆ ಸಮಾಜ ಸೇವೆ ಯಲ್ಲಿ ಗಣನೀಯ ಸಾಧನೆಯನ್ನು ಗುರುತಿಸಿ ಜು.28/07/2024 ರಂದು ಬೆಂಗಳೂರಿನ ಕಲಾಗ್ರಾಮ ಮಲ್ಲತ್ತಹಳ್ಳಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿಶ್ವ ಚೇತನ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ದರ್ಶನ್ ಸೋಶಿಯಲ್ & ಕಲ್ಚರಲ್ ಅಕಾಡೆಮಿ (ರಿ) ಸಂಸ್ಥೆಯ ಅಧ್ಯಕ್ಷರು ಪತ್ರಿಕೆ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ