ಕೊಟ್ಟೂರು ಬಿಜೆಪಿಯ ಭದ್ರಕೋಟೆ - ಚೆನ್ನಬಸವನಗೌಡ್ರು
ಕೊಟ್ಟೂರು ಪಟ್ಟಣದ ಬಾಲಾಜಿ ಕನ್ವೆನ್ಷನ್ ಹಾಲ್ ನಲ್ಲಿ ಮಂಗಳವಾರ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಂಡಲದ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷರಾದ ಚನ್ನಬಸವನಗೌಡ ಕೊಟ್ಟೂರು ಹಾಗೂ ಸುತ್ತಮುತ್ತ ಹಳ್ಳಿಗಳು ಬಿಜೆಪಿಯ ಭದ್ರಕೋಟೆ. ಪ್ರತಿ ಚುನಾವಣೆಗಳಲ್ಲಿ ಉತ್ತಮ ಫಲಿತಾಂಶ ಬರುವುದು ನಮಗೆ ಹೆಮ್ಮೆಯ ವಿಷಯವಾಗಿದೆ.
ಕಾಂಗ್ರೆಸ್ ಸರ್ಕಾರದಲ್ಲಿ ಎಸ್ ಟಿ ನಿಗಮದ 187ಕೋಟಿ ಮತ್ತು ಮೂಡ ಹಗರಣ ಬಹುದೊಡ್ಡ ಹಗರಣಗಳು ನಡೆದಿದೆ. ಸರ್ಕಾರ ನೀಡಿದ ಐದು ಗ್ಯಾರಂಟಿ ಗಳನ್ನು ನೀಡುವಲ್ಲಿ ವಿಫಲವಾಗಿದೆ. ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು. ಮುಂದಿನ ದಿನದಲ್ಲಿ ಭಾರತ ವಿಶ್ವಗುರುವಾಗಲಿದೆ ಎಂದರು.
ಈಶ್ವರ್ ಗೌಡ್ರು ಮಾತನಾಡಿ ಮೋದಿಜಿ ಅವರ 12 ಪ್ರಸ್ತಾವನೆಯನ್ನು ಹೇಳಿದರು. ಕೇಂದ್ರದಲ್ಲಿ ಬಿಜೆಪಿಯವರು ಅಧಿಕಾರಕ್ಕೆ ಬಂದರೆ ಅಂಬೇಡ್ಕರ್ ನೀಡಿರುವ ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದು ಸುಳ್ಳುಗಳನ್ನು ಹೇಳಿ ಕಾಂಗ್ರೆಸ್ನವರು ಜನರ ಮತಗಳನ್ನು ಪಡೆದಿದ್ದಾರೆ. ಆದರೆ ಬಿಜೆಪಿ ಯಾವತ್ತೂ ಸಂವಿಧಾನ ಬದಲಾವಣೆ ಮಾಡಲ್ಲ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಸರ್ಕಾರ ಮಹಾ ಮೋಸ ಮಾಡಿದೆ ಆದರೆ ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಿದ್ದು ಬಿಜೆಪಿ ಸರ್ಕಾರ ಎಂದು ಹೇಳಿದರು.
ಕಾಂಗ್ರೆಸ್ ಮಾಡುತ್ತಿರುವ ಹಗರಣದ ವಿರುದ್ಧ ಮೈಸೂರಿನಲ್ಲಿ ರಾಷ್ಟ್ರೀಯ ಅಧ್ಯಕ್ಷರ ನೇತೃತ್ವದಲ್ಲಿ ಉಗ್ರವಾದ ಹೋರಾಟ ಮಾಡುತ್ತೇವೆ ಕಾಂಗ್ರೆಸ್ ಸರ್ಕಾರವನ್ನು ಉರುಳಿಸುತ್ತೇವೆ ಎಂದು ಬಿಜೆಪಿ ವಿಜಯನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಬಲ್ಲಹುಣಿಸಿ ರಾಮಣ್ಣನವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಬಿಜೆಪಿ ಕೊಟ್ಟೂರು ತಾಲೂಕು ಅಧ್ಯಕ್ಷರಾದ ಭರಮನ ಗೌಡ್ರು ಮಾತನಾಡಿ ಕೊಟ್ಟೂರಿನಲ್ಲಿ ವಕೀಲರ ಬೇಡಿಕೆಗೆ ನಾವು ನಿಮ್ಮ ಜೊತೆ ಇರುತ್ತೇವೆ. ಅನ್ಯಾಯದ ವಿರುದ್ಧ ಹೋರಾಟಕ್ಕೆ ಸದಾ ಸಿದ್ದರಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕಾರ್ಯಕಾರಣಿ ಸದಸ್ಯರಾದ ಟಿ ಸೋಮಶೇಖರ್ ಹಾಗೂ ಎಸ್ ಸಿ ಮೋರ್ಚ್ ತಾಲೂಕು ಅಧ್ಯಕ್ಷ ಎಲ್ ವಿಷ್ಣು, ಜಯಪ್ರಕಾಶ್ , ರಾಜೇಶ್ ,ರಾಕೇಶ್ ,ಚಪ್ಪರದಹಳ್ಳಿ ಕೆ ಕೊಟ್ರೇಶ್,ಬಿಜೆಪಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಸಾರ್ ವಿದ್ಯಾನಗರ ಗಮನ ಕೊಡಿ ನೀವು ಎಲೆಕ್ಷನ್ ಗೆದ್ದ ನಂತರ ಕಡೆಗೆ ಕಂಡೆ ಇಲ್ಲ.. ವಿದ್ಯಾನಗರ ವಿರುದ್ಧ ಪಕ್ಷ ನಾಯಕ. ಚಂದ್ರಶೇಖರ್ ಗೌರಿಹಳ್ಳಿ.
ಪ್ರತ್ಯುತ್ತರಅಳಿಸಿ