ಹಟ್ಟಿ ಚಿನ್ನದ ಗಣಿಯಲ್ಲಿ ಭೂಕುಸಿತ ದಲ್ಲಿ ಮೃತ ಪಟ್ಟ ಕಾರ್ಮಿಕನ ಕುಟುಂಬಕ್ಕೆ ಪರಿಹಾರ ನೀಡಲು ಸಿಐಟಿಯು ಆಗ್ರಹ.
ಲಿಂಗಸಗೂರು-12 ರಾಯಚೂರು ಜಿಲ್ಲೆಯ ಲಿಂಗಸ್ಗೂರು ತಾಲ್ಲೂಕಿನ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಭೂಕುಸಿತ ಸಂಭವಿಸಿದ್ದು ಕಾರ್ಮಿಕರೊಬ್ಬರು ಸಾವನ್ನಪ್ಪಿದ್ದಾರೆ.ಜೊತೆಗೆ ನಾಲ್ವರಿಗೆ ಗಂಭೀರ ಗಾಯಗಳಾಗಿವೆ.ಮೃತ ಕಾರ್ಮಿಕನಿಗೆ ಸಿಐಟಿಯು ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಹಟ್ಟಿ ಚಿನ್ನದ ಗಣಿ ಕಂಪನಿಯ ಮಲ್ಲಪ್ಪ ಶಾಫ್ಟ್‌ನ ಭೂಮಿಯ ಕೆಳಮೈ ವಿಭಾಗದಲ್ಲಿ ಶುಕ್ರವಾರ ಬೆಳಗಿನ ಜಾವ 3.30ಕ್ಕೆ ಭೂಕುಸಿತವಾಗಿದೆ.ಮೃತ ಕಾರ್ಮಿಕರ ಕುಟುಂಬಕ್ಕೆ ಘೋಷಣೆ ಮಾಡಿದ ಪರಿಹಾರ ಮೊತ್ತ ಕಡಿಮೆಯಾಗಿದ್ದು, ಜೀವ ಕಳೆದುಕೊಂಡ ಮಲ್ಲಪ್ಪಶಾಫ್ಟ್ ವಿಭಾಗದಲ್ಲಿ ಕರ್ತವ್ಯ ಮಾಡುತ್ತಿದ್ದ ಮೌನೇಶ್ ಎನ್ನುವ ಕಾರ್ಮಿಕನ ಕುಟುಂಬಕ್ಕೆ ಕೇವಲ 5 ಲಕ್ಷ ನೀಡಿ ಕೈ ತೊಳೆದುಕೊಳ್ಳುವ ಕೆಲಸ ಮಾಡಿದೆ.ಇದನ್ನು ಸಿಐಟಿಯು ಹಟ್ಟಿ ಚಿನ್ನದ ಗಣಿ ಘಟಕ ತೀವ್ರವಾಗಿ ಖಂಡಿಸುತ್ತದೆ.
ಕಾರ್ಮಿಕರ ಜೀವದ ಜೊತೆ ಕಂಪನಿ ಆಡಳಿತ ಚೆಲ್ಲಾಟವಾತ್ತಿದೆ. ನಿರಂತರವಾಗಿ ಭೂ ಕೆಳ ಮೈನಲ್ಲಿ ನಿರಂತರ ಹೇರ್ ಬ್ಲಾಸ್ಟ್ ಹಾಗೂ ಕಲ್ಲು ಬಂಡೆ ಕುಸಿತ ಸಂಭವಿಸುತ್ತಿದ್ದು, ಆಡಳಿತ ನಿರ್ಲಕ್ಷ್ಯ ವಹಿಸಿದೆ.ಕಾರ್ಮಿಕರನ್ನು ಯಂತ್ರದಂತೆ ಟ್ರೀಟ್ ಮಾಡುತ್ತಿರುವ ಕಂಪನಿ ಆಡಳಿತದ ಕಾರ್ಮಿಕ ವಿರೋಧಿ ಕ್ರಮವನ್ನು ಸಿಐಟಿಯು ಹಟ್ಟಿ ಚಿನ್ನದ ಗಣಿ ಘಟಕ ಖಂಡಿಸುತ್ತದೆ.
ಇನ್ನೂ ನಾಲ್ಕು ಜನಕ್ಕೆ ಗಂಭೀರ ಗಾಯಗಳಾಗಿದ್ದು, ಗಾಯಾಳು ಶಿವರಾಜ್, ಪರುಶುರಾಮ, ಬೂದೆಪ್ಪ,.ರಂಗಸ್ವಾಮಿ, ಹನುಮಂತರಾಯ ಅವರಿಗೆ ಸರಿಯಾದ ಚಿಕತ್ಸೆ ಸೇರಿದಂತೆ ವಿಶೇಷ ಸೌಲಭ್ಯಗಳು ಸೇರಿದಂತೆ ಪರಿಹಾರವೂ ನೀಡಬೇಕು.
ಸಿಐಟಿಯು ಮುಖಂಡರಾದ ಅಮರೇಶ ಗುರಿಕಾರ್, ರಮೇಶ ವೀರಾಪೂರು, ಹನೀಫ್,ಆಲ್ಲಾಭಕ್ಷ, ಫಕ್ರುದ್ದೀನ್,ವೆಂಕಟೇಶ್, ಮಲ್ಲಿಕಾರ್ಜುನ್, ಪೆಂಚಲಯ್ಯ,ನಿಂಗಪ್ಪ ಎಂ ಹಾಗೂ ಅನೇಕ ಕಾರ್ಮಿಕರು ಆಗ್ರಹಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ