ದೇಶದ ಭಾವೈಕ್ಯತೆ ಸಂಕೇತ ಮೊಹರಮ್ ಪ್ರಯುಕ್ತ ಹಲಗೆಯ ನಾದಕ್ಕೆ ಹೆಜ್ಜೆ ಕುಣಿತ
ಮಸ್ಕಿ : ತಾಲ್ಲೂಕಿನ ಹಾಲಾಪೂರ ಗ್ರಾಮವು ಮೊದಲಿನಿಂದಲೂ ಕಲೆ,ಸಂಗೀತ, ಸಾಹಿತ್ಯ, ನಾಟಕಕ್ಕೆ ಪ್ರಸಿದ್ಧ ಪಡೆದ ಗ್ರಾಮವಾಗಿದೆ ಇಂದು ಕೂಡ ಭಾವೈಕ್ಯತೆ ಸಾರುವ
ಮೊಹರಮ್ ಹಬ್ಬದ ಅಂಗವಾಗಿ ರಿವಾಯ್ತು ಪದಗಳು, ಅವುಗಳ ಲಯಬದ್ಧಹಾಡುಗಾರಿಕೆ,
ವಿಶೇಷವಾಗಿ ಹಾಲಾಪೂರದಲ್ಲಿ ಹಲವು ವರ್ಷಗಳ ಬಳಿಕ ಹೆಜ್ಜೆ ಕುಣಿತ ಈ ವರ್ಷದ ಪ್ರಸಿದ್ಧಿ ಕುಣಿತವಾಗಿದೆ ಈ ಒಂದು ಹೆಜ್ಜೆ ಕುಣಿತವು ಕಾಲಲ್ಲಿ ಗೆಜ್ಜೆ,ಕೈಯಲ್ಲಿ ಕೊಲು ಹಿಡಿದು,ಕೊಡೆ ಹೊತ್ತು ಕುಣಿಯುವುದು,
ನೋಡುವುದೇ ಒಂದು ಮೈ ರೋಮಾಂಚನಗೊಳ್ಳುವುದು,
ಹೆಜ್ಜೆ ಕುಣಿತವನ್ನು ಗುಡಿಹಾಳ ಶರಣಬಸವ ಎಂಬುವರು ಒಂದು ತಿಂಗಳ ಕಾಲ ತರಬೇತಿ ಕೊಟ್ಟು ಶಿಸ್ತು ಬದ್ದವಾಗಿ ಒಟ್ಟು ಹನ್ನೆರಡು ಪ್ರಕಾರದ ಹೆಜ್ಜೆಗಳನ್ನು ಕಲಿಸಿಕೊಟ್ಟಿದ್ದರೆ, ಹಾಗೆ ಮಸೀದಿಯಲ್ಲಿ ದೇವರುಗಳಾದ ಹುಸೇನಭಾಷ, ಹಸೇನಿ ಉಸೇನಿ ಮೌಲಾಲಿ,ಖಾಸಿಂಸಾಬು,ಇಮಾಮ್ ಖಾಸಿಂ,ಹಜರತ್ ಮೌಲಾಲಿ ಮಸೀದಿಯಲ್ಲಿ ಕೂಡುವ ದೇವರುಗಳು ಹಾಗೆ ದೊಡ್ಡ ಖತಲ್ ರಾತ್ರಿ ದಿನ ವಿಶಿಷ್ಟ ಕಾರ್ಯಕ್ರಮ ಇಡಿ ರಾತ್ರಿ ನಡೆಯುತ್ತವೆ ಒಟ್ಟಾರೆ ಹಿಂದೂ ಮುಸ್ಲಿಂ ನಾವೆಲ್ಲ ಒಂದು ಎಂದು ಭಾವೈಕ್ಯತೆ ಸಾರುವ ಹಬ್ಬ ಮೊಹರಮ್ ಹಬ್ಬ ವೈಶಿಷ್ಟ್ಯವಾಗಿದೆ.
ಹೇಳಿಕೆ 1
ನಮ್ಮ ಗ್ರಾಮದಲ್ಲಿ ಮೊಹರಮ್ ಹಬ್ಬದ ಅಂಗವಾಗಿ ಗ್ರಾಮದ ಪ್ರತಿಯೊಬ್ಬರೂ ಭಾವೈಕ್ಯತೆಯಿಂದ ಹಬ್ಬವನ್ನು ಆಚರಿಸಿ, ಜಾತ್ಯಾತೀತ ಮನೋಭಾವ ಕಾಣುತ್ತೇವೆ.
ಅಮರಯ್ಯಸ್ವಾಮಿ ಕಾಳಹಸ್ತಿಮಠ ಸಂಗೀತಗಾರರು
ಹೇಳಿಕೆ ೨
ನಾನು ಹನ್ನೊಂದು ವರ್ಷಗಳಿಂದ ಹೆಜ್ಜೆ ಕುಣಿತ,ಬಯಲಾಟ,ಭಜನೆ ಮಾಡುವುದು ಮತ್ತು ಕಲಿಸುವುದರ ಮೂಲಕ ತೃಪ್ತಿ ಇದೆ,ಹಾಲಾಪೂರದಲ್ಲಿ ಒಂದು ತಿಂಗಳ ಕಾಲ ಹನ್ನೆರಡು ಬಗೆಯ ಹೆಜ್ಜೆ ಕುಣಿತ ಕಲಿಸಿದ್ದೆನೆ".
ಶರಣಬಸವ ಗುಡಿಹಾಳ
ಹೇಳಿಕೆ ೩
ಹಲವು ವರ್ಷಗಳ ನಂತರ ಹಾಲಾಪೂರದಲ್ಲಿ ಜಾನಪದ ಕಲೆ ಬಿಂಬಿಸುವ ಹೆಜ್ಜೆ ಕುಣಿತವು ಪ್ರಸಿದ್ದಿ ಪಡೆದಿದೆ, ನಾವು ಹೆಜ್ಜೆ ಕುಣಿತ ಇದೆ ಮೊದಲಬಾರಿಗೆ ನೋಡಿದ್ದು, ಸದಾಕಾಲವೂ ನಮ್ಮ ಗ್ರಾಮ ಕಲೆಯ ಪ್ರತಿಬಿಂಬಿಸುವ ಸಂಕೇತ.
ಸಿದ್ದಾರ್ಥ ಪಾಟೀಲ್ ಗ್ರಾಮದ ಯುವಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ