ಭದ್ರಾ ಭರ್ತಿಗೆ 8 ಅಡಿ ಮಾತ್ರ ಬಾಕಿ!
<script async src="https://pagead2.googlesyndication.com/pagead/js/adsbygoogle.js?client=ca-pub-9024117737958146"
crossorigin="anonymous"></script>
ದಾವಣಗೆರೆ:ಮಲೆನಾಡು ಭಾಗದಲ್ಲಿ ಆಗುತ್ತಿರುವ ಭಾರೀ ಮಳೆಯ ಕಾರಣಕ್ಕೆ ಭದ್ರಾ ಜಲಾಶಯಕ್ಕೆ ಭರಪೂರ ನೀರು ಹರಿದು ಬರುತ್ತಿದ್ದು ಇಂದು ಬೆಳಗಿನ ಜಾವ 6 ಗಂಟೆ ವೇಳೆಗೆ ಜಲಾಶಯದ ನೀರಿನ ಮಟ್ಟ 178 ಅಡಿ ತಲುಪಿದೆ. 186 ಎತ್ತರದ ಜಲಾಶಯಕ್ಕೆ ಇನ್ನು 8 ಅಡಿ ನೀರು ಬಂದರೆ ಭರ್ತಿ ಆಗಲಿದೆ. ನಿನ್ನೆ 57.5 ಟಿಎಂಸಿ ಇದ್ದ ನೀರಿನ ಪ್ರಮಾಣ ಇಂದು 61.8 ಟಿಎಂಸಿ ಆಗಿದೆ. ಒಂದೇ ದಿನ 4.3 ಟಿಎಂಸಿ ನೀರು ಜಲಾಶಯಕ್ಕೆ ಬಂದು ಸೇರಿದೆ.
ಸದ್ಯ ಒಳ ಹರಿವು 48,901 ಕ್ಯೂಸೆಕ್ ನೀರು ಹಾರಿದು ಬರುತ್ತಿದೆ. ಇನ್ನು ಮೂರು ದಿನಗಳ ಕಾಲ ಇದೇ ರೀತಿ ಮಳೆ ಸುರಿಯುವ ನಿರೀಕ್ಷೆ ಇದ್ದು ಈ ಲೆಕ್ಕಾಚಾರದಲ್ಲಿ ಇನ್ನು ಎರಡು ಮೂರು ದಿನದಲ್ಲಿ ಜಲಾಶಯ ಭರ್ತಿ ಆಗಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ