ರಾಜ್ಯಮಟ್ಟದ ಜಂಟಿ ಸಲಹಾ ಸಮಿತಿಗೆ ದೊಡ್ಡಬಸಪ್ಪ ರೆಡ್ಡಿ ಆಯ್ಕೆ

ಕೊಟ್ಟೂರು : ಕರ್ನಾಟಕ ಸರ್ಕಾರದ ರಾಜ್ಯಮಟ್ಟದ ಜಂಟಿ ಸಮಾಲೋಚನಾ ಸಮಿತಿಯನ್ನು ಎರಡು ವರ್ಷಗಳವರೆಗೆ ಪುನರ್ ರಚಿಸಿ ಆದೇಶ ಹೊರಡಿಸಲಾಗಿದೆ. ಈ ಹಿಂದೆ ರಚಿಸಿದ ಸಮಿತಿಯ ಅವಧಿ ದಿನಾಂಕ ೦೫-೧೨-೨೦೨೧ ಕ್ಕೆ ಪೂರ್ಣಗೊಂಡಿರುವುದರಿಂದ ಸಮಿತಿಗೆ ನೂತನವಾಗಿ ಸದಸ್ಯ ಕಾರ್ಯದರ್ಶಿಗಳೂ ಸೇರಿದಂತೆ ನೂತನ ಸದಸ್ಯರನ್ನು ನೇಮಕಗೊಳಿಸಿ ರಾಜ್ಯ ಮಟ್ಟದ ಜಂಟಿ ಸಮಾಲೋಚನಾ ಸಮಿತಿಯನ್ನು ಪುನರ್ ರಚಿಸಲಾಗಿದೆ. ಈ ಸಮಿತಿಯಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕರ ಆಪ್ತ ಸಹಾಯಕರೂ ಹಾಗೂ ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ಸಂಘದ ರಾಜ್ಯ ಅಧ್ಯಕ್ಷರೂ ಆದ ಬಿ. ದೊಡ್ಡಬಸಪ್ಪ ರೆಡ್ಡಿ ಅವರನ್ನು ಸೇರಿಸಿ ಸರ್ಕಾರ ಆದೇಶಿಸಿದೆ. ಸರ್ಕಾರದ ಆದೇಶ ಸಂಖ್ಯೆ ಜಿಎಡಿ ೭ ಡಿಎಸ್‌ಡಬ್ಲ್ಯೂ ೬೯ ದಿನಾಂಕ ೧೯-೧೦-೧೯೭೨ ರಂತೆ ಈ ಜಂಟಿ ಸಮಾಲೋಚನಾ ಸಮಿತಿಯು ಎರಡು ವರ್ಷಗಳವರೆಗೆ ಅಥವಾ ಮುಂದಿನ ಆದೇಶದವರೆಗೆ ಕಾರ್ಯನಿರ್ವಹಿಸಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕರ್ನಾಟಕ ರಾಜ್ಯದ ರಾಜ್ಯಮಟ್ಟದ ಜಂಟಿ ಸಮಾಲೋಚನಾ ಸಮಿತಿಯಲ್ಲಿ ದೊಡ್ಡಬಸಪ್ಪ ರೆಡ್ಡಿ ಅವರು ಆಯ್ಕೆಯಾಗಿರುವುದು ಈ ಭಾಗದ ಜನರಿಗೆ ಸಂತಸವನ್ನು ಉಂಟುಮಾಡಿದೆ. ಈ ಸಂದರ್ಭದಲ್ಲಿ ಕೊಟ್ರೇಶ್, ಅಂಜಿನಿ,ಪಿ ಚಂದ್ರಶೇಖರ್, ಪ್ರವೀಣ್, ಮಧು ನಾಯ್ಕ್ ,ಆಯ್ಕೆಯಾದ ದೊಡ್ಡಬಸಪ್ಪ ರೆಡ್ಡಿ ಅವರಿಗೆ ಉನ್ನತ ಮಟ್ಟದ ಸ್ಥಾನಗಳು ಲಭಿಸಲಿ ಎಂದು ಪತ್ರಿಕೆ ಮೂಲಕ ಶುಭಹಾರೈಸಿದರು.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ