ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ,ಸದುಪಯೋಗ ಪಡೆದುಕೊಳ್ಳಿ : ಡಾಕ್ಟರ್ ಪ್ರಭುರಾಜ್ ಕೆ ಎಂ
ಕೊಟ್ಟೂರು ತಾಲೂಕಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಡಾಕ್ಟರ್ ಪ್ರಭು ರಾಜ್ ಕೆ ಎಂ ಅಕ್ಷಯ್ ಆಸ್ಪತ್ರೆಯ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದರು
ದಾವಣಗೆರೆ ನಗರದಲ್ಲಿ ವಿಶ್ವಾರಾಧ್ಯ ಕ್ಯಾನ್ಸರ್, ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ 2009ರಲ್ಲಿ ಪ್ರಾರಂಭವಾಗಿದ್ದು ಇಲ್ಲಿ ಸಮಗ್ರ ಕ್ಯಾನ್ಸರ್ ಚಿಕಿತ್ಸೆಯನ್ನು ನೀಡುತ್ತಾ ಬರಲಾಗಿದೆ. ಅದರಲ್ಲಿ ಸ್ತನ ಕ್ಯಾನ್ಸರ್, ಗರ್ಭಕೋಶ ಕ್ಯಾನ್ಸರ್, ಗುದದ್ವಾರ ಕ್ಯಾನ್ಸರ್, ಅನ್ನನಾಳ ಕ್ಯಾನ್ಸರ್, ಬಾಯಿ, ಕುತ್ತಿಗೆ ಮತ್ತು ಗಂಟಲು ಕ್ಯಾನ್ಸರ್, ಸೇರಿದಂತೆ ಸರ್ಜರಿ, ಕಿಮೋಥೆರಫಿ, ಅತ್ಯಾಧುನಿಕ ರೆಡಿಯೇಷನ್ ಸೌಲಭ್ಯವಿದ್ದು ಕ್ಯಾನ್ಸರ್ ಕಾಯಿಲೆ ಬಗ್ಗೆ ಜನಜಾಗೃತಿ ಮೂಡಿಸಲು ದಿನಾಂಕ : 11/07/2024ರ ಗುರುವಾರ ಕೊಟ್ಟೂರಿನ ಅಕ್ಷಯ ಆಸ್ಪತ್ರೆಯಲ್ಲಿ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ವಿಶೇಷ ಸೂಚನೆ : ನಮ್ಮ ಆಸ್ಪತ್ರೆಯಲ್ಲಿ ಎ.ಪಿ.ಎಲ್, ಬಿ ಪಿ ಎಲ್, ಯಶಸ್ವಿನಿ ಯೋಜನೆ, ಆಯುಷ್ಮಾನ್ ಕಾರ್ಡ್ ಹಾಗೂ ಖಾಸಗಿ ಇನ್ಸೂರೆನ್ಸ್ ಒಳಗೊಂಡಿದೆ.ತಿಳಿಸಿದರು
ಡಾಕ್ಟರ್ ಪ್ರಥಿಮ ಕೆ ಎಂ ಪ್ರಭುರಾಜ ಅವರು ಮಾತನಾಡಿ ಮಹಿಳೆಯರಲ್ಲಿ 50 ವರ್ಷದ ನಂತರ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗುತ್ತದೆ ಹಾಗಾಗಿ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು
ಆಸ್ಪತ್ರೆಯ ಹೆಸರಾಂತ ವೈಧ್ಯರ ತಂಡ ಆಗಮಿಸಲಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ಡಿ ರಾಘವೇಂದ್ರ ಆಡಳಿತಧಿಕಾರಿಗಳು ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ ದಾವಣಗೆರೆ ವಿನಂತಿಸಿ ಕೊಂಡರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ