ಕುಲುಮೆ ವೃತ್ತಿಯೇ ಜೀವನಕ್ಕೆ ಆಸರೆ ,ಕೃಷಿ ಉಪಕರಣಗಳನ್ನು ತಯಾರಿಸುವ ಕೊಟ್ಟೂರಿನ ಚಮನ್ ಸಾಬ್ : ಔದ್ಯೋಗಿಕ ಕ್ರಾಂತಿ

*ವಂಶ ಪರಂಪರೆಕವಾಗಿ ಕುಲಕಸುಬು ಮರಚಿಕೆ*

ಕೊಟ್ಟೂರು : ತಂತ್ರಜ್ಞಾನದ  ದಾಂಗುಡಿಯಿಂದಾಗಿ  ಸಾಂಪ್ರದಾಯಿಕ  ಕಸಬುದಾರರ  ಬದುಕು ಕಮರಿ ಹೋಗತೊಡಗಿದೆ. ಇಂತ ಗ್ರಾಮೀಣ ಕುಲಕಸುಬಾಗಿದ್ದ  ಕಮ್ಮಾರಿಕೆ, ಕುಂಬಾರಿಕೆ ಎಲ್ಲವೂ ಜಾಗತಿಕ ಹೊಡತಕ್ಕೆ ತತ್ತರಿಸಿ ಹೋಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ  ಕೊಟ್ಟೂರಿನ  ಚಮನ್ ಸಾಬ್ ಅವರು  ಉತ್ತಮ ಗುಣಮಟ್ಟದ ಕೃಷಿ ಉಪಕರಣವನ್ನು  ತಯಾರಿಸುತ್ತಾ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ.

ಕುಲುಮೆ ವೃತ್ತಿಯು  ನಮ್ಮ ವಂಶ ಪಾರಂಪರವಾಗಿ ಬಂದಂತಹ ಕುಲಕಸುಬು ಆಗಿದೆ. ಕೊಟ್ಟೂರು ಹಾಗೂ ಸುತ್ತಮುತ್ತನಹಳ್ಳಿಯ ರೈತರು ಹೊಲದ ಕಳೆ ಸ್ವಚ್ಛಗೊಳಿಸಲು ಎಡಕುಂಟೆಗೆ, ಹರಗೋ ಕುಂಟೆಯನ್ನು 

ತಯಾರಿಸಿಕೊಂಡು ಹೋಗುತ್ತಿದ್ದರು.  ತಯಾರು ಮಾಡಿದ ಪರಿಕರ ಚೆನ್ನಾಗಿದ್ದಾರೆ ರೈತರೂ ಪುನಃ ತಮ್ಮ ಕುಲುಮೆ  ಬಂದು ನೀವು ಮಾಡಿಕೊಟ್ಟಂತಹ ಎಡಕುಂಟೆ  ಹೊಲದಲ್ಲಿ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದೆ. ಎಂದು ಹೇಳಿ ಖುಷಿಯಿಂದ ಹೆಚ್ಚಿಗೆ ಹಣವನ್ನು ನೀಡುತ್ತಿದ್ದರು ಎಂದು  ಚಮನ್ ಸಾಬ್  ಹಳೆಯ ನೆನಪಾಗಿ ಉಳಿದಿದೆ.

ಕಳೆದ ಇಪ್ಪತ್ತು ವರ್ಷಗಳಿಂದ ಪ್ರತಿ ವರ್ಷವೂ ಚೆನ್ನಾಗಿ ಮಳೆಯಾಗುತ್ತಿತ್ತು. ರೈತರು ಹೊಲ ಗದ್ದೆಗಳಲ್ಲಿ ದವಸ ಧಾನ್ಯಗಳನ್ನು ಬೆಳೆದು  ಎತ್ತಿನಬಂಡಿಗೆ ಜೋಡೆತ್ತುಗಳನ್ನು ಕಟ್ಟಿ ಸುಗ್ಗಿ  ಸಂಭ್ರಮ ಆಚರಿಸುತ್ತಿದ್ದರು. ಆದರೆ ಈಗ ಆಧುನಿಕ ಯಂತ್ರೋಪಕರಣಗಳು  ಹಳ್ಳಿಗಳಲ್ಲಿ ಇಟ್ಟು ರೈತರ ಸಂತೋಷವಲ್ಲವೂ ನಶಿಸಿ ಹೋಗಿದೆ ಎಂದರು.

ಈ ವರ್ಷ ಉತ್ತಮವಾದ ಮಳೆಯಾಗಿದ್ದು  ಹೊಲ- ಗದ್ದೆ   ಉಳುಮೆಗೆ ಮತ್ತು ಇನ್ನಿತರ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಉತ್ತಮವಾದ ಉಪಕರಣಗಳನ್ನು ತಯಾರಿಸಿ ಕೊಡುವುದರಲ್ಲಿ  ಹೆಸರುವಾಸಿ ಕೊಟ್ಟೂರಿನ ಚಮನ್ ಸಾಬ್.

ಪಟ್ಟಣ ತೇರು ಬಯಲಿನಲ್ಲಿ ಇರುವ ತಮ್ಮ ಕುಲುಮೆಯಿಂದಲೇ ರೈತರಿಗೆ ಗುಣಮಟ್ಟದ ಹಾಗೂ ಆಕರ್ಷಣೀಯವಾಗಿ ಮಡಿಕೆ ಕುಳ, ತಾಳು, ಎಡಕುಂಟೆ ಕುಳ,ಕುರ್ಚಿಗಿ,ಕುಡುಗೋಲು , ಗುದ್ದಲಿ ಹಾರಿಕೋಲು, ಓಣಕೆ ಮುಂತಾದಗಳನ್ನು ತಯಾರಿಸುತ್ತಿದ್ದಾರೆ.

ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆ ಗರಿಗೆದಿರುತ್ತದಂತಿಯೇ  ಪಕ್ಕದ ತಾಲೂಕುಗಳಾದ ಕೂಡ್ಲಗಿ ಹಗರಿಬೊಮ್ಮನಹಳ್ಳಿ ಹಡಗಲಿ ಹರಪನಹಳ್ಳಿ ಭಾಗದ ರೈತರು ಹೊಲಗದ್ದೆ ಉಳುಮೆ ಮಾಡುವುದಕ್ಕೆ  ಬೇಕಾದ ಪರಿಕರಣಗಳನ್ನು ಸಿದ್ಧಪಡಿಸಿಕೊಳ್ಳಲು ಕೊಟ್ಟೂರಿನ ಚಮನ್ ಸಾಬ್ ಕುಲುಮೆ ಕಡೆ ಆಗಮಿಸುತ್ತಿದ್ದಾರೆ.

ಕೋಟ್ -1

ನೆಲ ಹಸಿಯಾಗಿ ಉಳಿಮೆ ಮಾಡುವ ಸುಗ್ಗಿ ಬಂದರೆ ಸಾಕು ರೈತರು ಮತ್ತು ಕುಲುಮೆ ಬಡಿಗರ ನಡುವೆ ಅವಿನಾಭಾವ ಸಂಬಂಧಗಳನ್ನು ಬೆಸೆಯುತ್ತಿವೆ. ಬಿತ್ತುವುದರಿಂದ ಹಿಡಿದು ಬೆಳೆ ಕಟಾವ್ ಮಾಡುವ ತನಕ ಕುಲು ಮೆ ಅವಶ್ಯಕತೆ ಪ್ರತಿಯೊಬ್ಬ ರೈತರಿಗೆ ಇರುವುದರಿಂದ ಕುಲುಮೆಯ ಸಹಾಯ ನಮಗೆ ಬೇಕಿದೆ.

ದೊಡ್ಡ ಬಸಪ್ಪ 

ರೈತ ರಾಂಪುರ 


ಕೊಟ್-2

ಗ್ರಾಮೀಣ ಪ್ರದೇಶದಲ್ಲಿ ವಂಶ  ಪರಂಪರೆಕವಾಗಿ  ಕುಲುಮೆ ವೃತ್ತಿಯು, ಕಮ್ಮಾರಿಕೆ, ಕುಂಬಾರಿಕೆ  ಕುಲಕಸುಬಾಗಿದ್ದ ಎಲ್ಲವೂ ಜಾಗತಿಕ ಹೊಡತಕ್ಕೆ ತತ್ತರಿಸಿ ಹೋಗಿವೆ ಈ ತಂತ್ರಜ್ಞಾನದಲ್ಲಿ ಕುಲಕಸುಬು ಮರೀಚಿಕೆಯಾಗಿದೆ ಸರ್ಕಾರ ಇಂತವರಿಗೆ ನೆರವಾಗಬೇಕಾಗಿದೆ.ಎಂದು ಡಿಎಸ್ಎಸ್ ತಾಲೂಕು ಅಧ್ಯಕ್ಷ ಪಿ ಚಂದ್ರಶೇಖರ್ ಹೇಳಿದರು 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ