ರಾಯಚೂರಿನಲ್ಲಿಯೇ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (AIIMS) ಮಂಜೂರು ಮಾಡಲು : ಕರವೇ ಮನವಿ
ಮಸ್ಕಿ ಪಟ್ಟಣದ ಬಸವೇಶ್ವರ ನಗರದ ತಹಶೀಲ್ದಾರರ ಕಚೇರಿಯಲ್ಲಿ ಕಲ್ಯಾಣ ಕರ್ನಾಟಕದ ರಾಯಚೂರಿನಲ್ಲಿಯೇ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (AIIMS) ಮಂಜೂರು ಮಾಡಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಘಟಕ ಹೆಚ್. ಶಿವರಾಮೇಗೌಡ ಬಣದ ವತಿಯಿಂದ ತಹಶೀಲ್ದಾರರ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಪ್ರಧಾನಮಂತ್ರಿ ನರೇಂದ್ರ ಮೋದಿ ರವರು ಘೋಷಿಸಿದಂತೆ ಈ ದೇಶದಲ್ಲಿ 112 ಮಹತ್ವಾಕಾಂಕ್ಷಿ ಜಿಲ್ಲೆಗಳಲ್ಲಿ, ಕರ್ನಾಟಕ ರಾಜ್ಯದ ಅದು ಕಲ್ಯಾಣ ಕರ್ನಾಟಕದ, ರಾಯಚೂರು ಮತ್ತು ಯಾದಗಿರಿ ಜಿಲ್ಲೆ, ಇವೆರಡು ಜಿಲ್ಲೆಗಳು ಕರ್ನಾಟಕ ರಾಜ್ಯದಲ್ಲಿ ಮಹತ್ವಾಕಾಂಕ್ಷಿ ಜಿಲ್ಲೆಯ ಅಡಿಯಲ್ಲಿ ಬರುತ್ತವೆ. ಕಳೆದ 76 ವರ್ಷಗಳಿಂದ ಅಂದರೆ ಸ್ವಾತಂತ್ರ ನಂತರ ಇಂದಿಗೂ ರಾಯಚೂರು ಜಿಲ್ಲೆಗೆ ಯಾವುದೇ ಮಹತ್ವಕಾಂಕ್ಷಿ ಯೋಜನೆ ಜಾರಿಯಾಗಿಲ್ಲ. ರಾಯಚೂರು ಜಿಲ್ಲೆಯು ಬಹಳ ಹಿಂದುಳಿದ ಜಿಲ್ಲೆಯಾಗಿದ್ದು, ಕರ್ನಾಟಕ ರಾಜ್ಯ ಸರ್ಕಾರವು ಪ್ರಾದೇಶಿಕ ಅಸಮತೋಲನತೆಯನ್ನು ಹೋಗಲಾಡಿಸಲು. ನಂಜುಂಡಪ್ಪ ಆಯೋಗವನ್ನು ರಚಿಸಲಾಯಿತು. ನಂಜುಂಡಪ್ಪನ ವರದಿಯಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಬೇಡಿಕೆಯಂತೆ, ರಾಯಚೂರು ಜಿಲ್ಲೆಗೆ ಐಐಟಿಯನ್ನು ಕೊಡಬೇಕೆಂದು ತಿಳಿಸಲಾಗಿತ್ತು. ಆದರೆ ರಾಯಚೂರಿನಲ್ಲಿ ಐ ಐ ಟಿ ಹೋರಾಟ ಸಮಿತಿಯನ್ನು ಒಳಗೊಂಡು ಹಲವು ಸಂಘ ಸಂಸ್ಥೆಗಳು ಕೂಡ ಐ ಐ ಟಿ ಯನ್ನು ಪಡೆಯಲು ಬಹಳ ಗಂಭೀರವಾದ ಹೋರಾಟ ಮಾಡಿದರು.
ಆದರೆ ಐ ಐ ಟಿ ಮೋಸದಿಂದ. ಧಾರವಾಡದ ಪ್ರಭಲ ರಾಜಕೀಯ ಪ್ರಭಾವದಿಂದ, ಐ ಐ ಟಿ ಯನ್ನು ಧಾರವಾಡಕ್ಕೆ ಕಸಿದುಕೊಳ್ಳಲಾಯಿತು. ಆ ಸಮಯದಲ್ಲಿ ನಮಗೆ ಸಮಾಧಾನಿಸಲು. ರಾಯಚೂರಿಗೆ ಭಾರತೀಯ ವೈದಿಕೀಯ ವಿಜ್ಞಾನಗಳ ಸಂಸ್ಥೆಯನ್ನು (AIIMS) ಆಗಿನ ರಾಜ್ಯ ಸರ್ಕಾರವು, ಭರವಸೆಯನ್ನು ನೀಡಲಾಗಿತ್ತು. ಕರ್ನಾಟಕ ರಾಜ್ಯಕ್ಕೆ ಒಂದು ಭಾರತೀಯ ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆ (AIIMS) ನೀಡಲಾಗುವುದೆಂದು ತಮ್ಮ ಸರಕಾರ ಘೋಷಣೆ ಮಾಡಿತು. ಆದರೆ ಮತ್ತೆ ಅದೇ ಧಾರವಾಡದ ಪ್ರಭಲ ರಾಜಕಾರಣಿಗಳ ಕುತಂತ್ರ. ಏಮ್ಸ್ ಧಾರವಾಡಕ್ಕೆ ತೆಗೆದುಕೊಂಡು ಹೋಗಲು ಹುನ್ನಾರ ಮಾಡಲಾಗಿದೆ ಈ ವಿಷಯ ತಮ್ಮ ಗಮನಕ್ಕಿರಲಿ. ಅದಲ್ಲದೆ ಸುಮಾರು 26 ತಿಂಗಳಿಂದ (788 ದಿನಗಳಿಂದ) ತಿಂಗಳಿಂದ ಅಂದರೆ ಎರಡು ವರ್ಷಗಳ ಮೇಲ್ಪಟ್ಟು ರಾಯಚೂರಿನಲ್ಲಿ, ರಾಯಚೂರು ಜಿಲ್ಲಾ ಎಮ್ಸ್ (AIIMS) ಹೋರಾಟ ಸಮಿತಿಯಿಂದ ಹಾಗೂ ಹಲವೂ ಸಂಘ ಸಂಸ್ಥೆಗಳ, ವ್ಯಾಪಾರ ಸಂಸ್ಥೆಗಳು, ವಿವಿಧ ಸಂಘಗಳ ಬೆಂಬಲದಿಂದ ನಿರಂತರ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಮುಂದುವರೆದಿದೆ. ನ್ಯಾಯುತವಾಗಿ ಮಹತ್ವದ ಒಂದು ಆರೋಗ್ಯ ಸಂಸ್ಥೆಯನ್ನು ಪಡೆಯಲು ಎರಡು ವರ್ಷಗಳ ಕಾಲ, 26 ತಿಂಗಳಿಂದ (788 ದಿನಗಳಿಂದು ಹೋರಾಟ ಮಾಡಬೇಕಾಗುತ್ತದೆಯೇ?? ಇದು ಆಲೋಚಿಸಬೇಕಾಗಿದೆ!!!? ರಾಯಚೂರಿಗೆ ಎಮ್ಸ್ ಪ್ರಧಾನಿಯವರು ಗಂಭೀರವಾಗಿ ಕೊಡಬೇಕೆಂದು ಇಲ್ಲಿಯ ರಾಜ್ಯ ಸರ್ಕಾರದಿಂದ ಮಂತ್ರಿಗಳು, ಶಾಸಕರುಗಳು ಮತ್ತು ಸಂಸದರು ಹಾಗೂ ಹೋರಾಟಗಾರರ ಒಳಗೊಂಡು, ಕರ್ನಾಟಕ ರಾಜ್ಯ ಸರ್ಕಾರವೂ ಒಂದು ನಿಯೋಗವನ್ನು ತೆಗೆದುಕೊಂಡು ತಮ್ಮ ಸರಕಾರದ ಹಿಂದಿನ ಆರೋಗ್ಯ ಕುಟುಂಬ ಕಲ್ಯಾಣ ಮಂತ್ರಿಗಳಾದ ಮನಸೂಕ ಮಾಂಡವಿಯಾ ರವರಿಗೂ ಭೇಟಿ ಮಾಡಲಾಗಿತ್ತು. ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಅವರು ಕೂಡ ಎರಡು ಪತ್ರಗಳನ್ನು ತಮ್ಮ ಆರೋಗ್ಯ ಸಚಿವರಿಗೆ ಬರೆದರು. ಕೇಂದ್ರ ಚುನಾವಣೆಯ ಮುಂಚೆ ಬಜೆಟ್ ಘೋಷಣೆಯ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು, ಒಂದು ಪತ್ರವನ್‌ನ ಹಿಂದಿನ ಮತ್ತು ಈಗಿನ ಹಣಕಾಸು ಸಚಿವ ಶ್ರೀಮತಿ ನಿರ್ಮಲಾ ಸೀತಾರಾಮನ್ ರವರಿಗೂ ಪತ್ರ ಬರೆದರೂ. ಕರ್ನಾಟಕ ರಾಜ್ಯ ಸರಕಾರದ ಇಷ್ಟು ಒತ್ತಡವಿದ್ದರೂ, ತಮ್ಮ ಮತ್ತು ತಮ್ಮ ಸರಕಾರದ ಕಡೆಯಿಂದ ನೀರೂತ್ತರ ಯಾಕೆ??
ಮಹತ್ವಾಕಾಂಕ್ಷಿ ಜಿಲ್ಲೆ ಘೋಷಣೆ ಮಾಡಿದ ನಂತರ ಹಿಂದುಳಿದ ಜಿಲ್ಲೆ ಎಂದು ಹಣೆಪಟ್ಟಿ ಕಳಪೆಗೋಸ್ಕರ ತಾವ್ಯಾಕೆ ರಾಯಚೂರು ಜಿಲ್ಲೆಗೆ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನೀಡುತ್ತಿಲ್ಲ??. ಪ್ರಧಾನಮಂತ್ರಿ ಜಿ ಅವರೇ ಈ ಬಾರಿ ಕಲ್ಯಾಣ ಕರ್ನಾಟಕದ 5 ಸಂಸದರು ಕಾಂಗ್ರೆಸ್ ನಿಂದ ಆಯ್ಕೆ ಆಗಿದ್ದಾರೆ. ಇದಕ್ಕೆ ಕಾರಣ ಏಮ್ಸ್ (AIIMS) ಹೋರಾಟ ದೀರ್ಘದ ಹೋರಾಟ!||. ಇತಿಹಾಸ ನಿರ್ಮಾಣ ಮಾಡಿದ ಹೋರಾಟ. ದಯವಿಟ್ಟು ಜನರ ಬೇಡಿಕೆಗಳಿಗೆ ತಾವು ಸ್ಪಂದಿಸಲಿಲ್ಲ ಅಂದ್ರ ಏಕೆ.?? ತಾವು ವಿಶೇಷವಾಗಿ ಗಮನಹರಿಸಿ, ನಮ್ಮ ರಾಯಚೂರಿಗೆ ತಕ್ಷಣ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಏಮ್ಸ್ (AIIMS) ಘೋಷಣೆ ಮಾಡಿ ಇಲ್ಲದಿದ್ದರೆ. ಕಲ್ಯಾಣ ಕರ್ನಾಟಕದಲೆಲ್ಲ ಭಯಂಕರ ಚಳುವಳಿಯಾಗುತ್ತದೆ. ಅದಕ್ಕೆ ಅವಕಾಶ ಮಾಡಿಕೊಡಬೇಡಿ ಅಪಾರ ಭರವಸೆಯೊಂದಿಗೆ ಈ ಮನವಿ ವತ್ರವನ್ನು ಕರ್ನಾಟಕ ರಕ್ಷಣಾ ವೇದಿಕೆ ಎಚ್.ಶಿವರಾಮಗೌಡರ ಬಣದ ವತಿಯಿಂದ ತಹಶೀಲ್ದಾರ್ ಸುಧಾ ಅರಮನೆ ಇವರ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಆರ್.ಕೆ ನಾಯಕ ತಾಲೂಕ ಅಧ್ಯಕ್ಷರು ಮಸ್ಕಿ,ಸಿದ್ದಪ್ಪ ಮೇಟಿ ಅಧ್ಯಕ್ಷರು ಮೆದಿಕಿನಾಳ ಹೋ.ಘಟಕ, ಅಮರೇಶ ನಾಯಕ ಕಾಸ್ಲಿ,ಮೌನೇಶ್ ಹಸಮಕಲ್,ದೇವಪ್ಪ ಮಾಸ್ತರ,ಹನುಮಂತ ಉಪ್ಪಾರ,ಆಂಜನೇಯ ಮೋಚಿ,ನಾಗರಾಜ ನಾಯಕ ಮೆದಿಕಿನಾಳ,ಸಂತೋಷ್ ಕಬ್ಬೆರ್, ಮೌನೇಶ್ ನಾಯಕ ನಗನೂರು,ಯಂಕೋಬ ನಾಯಕ ಕಾಸ್ಲಿ,ಮೌನೇಶ್ ಹಳ್ಳಿ,ಚನ್ನಬಸವ ಹೂಗಾರ್, ಅಶರಪ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ