ಗುಡದೂರು ಗ್ರಾಮ ಪಂಚಾಯತಿಗೆ ಕೇಂದ್ರ ತಂಡ ಭೇಟಿ

 

ಕುಡಿಯುವ ನೀರಿನ ಗುಣಮಟ್ಟ ಪರಿಶೀಲನೆ 

ಮಸ್ಕಿ : ತಾಲ್ಲೂಕಿನ ಗುಡದೂರು ಗ್ರಾಮ ಪಂಚಾಯತಿಗೆ ಗುರುವಾರ ಕೇಂದ್ರ ಸರ್ಕಾರದ ಜಗಜಿತ್ ಸಿಂಗ್ ಸೌದಿ, ದೇವೇಶ್ ಕುಮಾರ್ ಭಾರಧ್ವಾಜ್ ಅವರು ಭೇಟಿ ನೀಡಿ ಜೆಜೆಎಂ ಕಾಮಗಾರಿ, ಕುಡಿಯುವ ನೀರು, ಸ್ವಚ್ಛ ಭಾರತ್ ಮಿಷನ್ ಸೇರಿ ವಿವಿಧ ವಿಷಯಗಳ ಕುರಿತು ಸಭೆ ಕೈಗೊಂಡರು. 

ಜಲ ಜೀವನ್ ಮಿಷನ್, ಸ್ವಚ್ಛ ಭಾರತ್ ಮಿಷನ್ ಅನುಷ್ಠಾನದ ಕುರಿತು ಗ್ರಾಮ ನೀರು ನೈರ್ಮಲ್ಯ ಸಮಿತಿಯ ರಚನೆ ಮತ್ತು ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ಪಡೆದರು. ತದ ನಂತರ ಕುಡಿಯುವ ನೀರಿನ ಗುಣಮಟ್ಟದ ಕುರಿತು ಸ್ಥಳೀಯ ನೀರು ನಿರ್ವಹಣೆ ಸಮಿತಿಯಿಂದ ಎಫ್ಟಿಕೆ (field test kit) ಕಿಟ್‌ ಮೂಲಕ ನೀರು ಪರೀಕ್ಷಿಸುವುದನ್ನು ಪರಿಶೀಲಿಸಿದರು. ಮನೆ ಮನೆಗೆ ಕಾರ್ಯಾತ್ಮಕ ನಳ, ವೈಯಕ್ತಿಕ ಶೌಚಾಲಯ, ಶಾಲಾ, ಅಂಗನವಾಡಿ - ಶೌಚಾಲಯ, ಸ್ವಸಹಾಯ ಸಂಘ ರಚನೆ ಕುರಿತು ಮಾಹಿತಿ ಪಡೆದರು.‌ 

ತದ ನಂತರ ಮೇರನಾಳ ಮತ್ತು ಗೋನಾಳ ಗ್ರಾಮದ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶೌಚಾಲಯ ಬಳಕೆ, ಕುಡಿಯುವ ನೀರಿನ ವ್ಯವಸ್ಥೆ, ಬಿಸಿಯೂಟದ ಕೊಠಡಿಗಳನ್ನು ಪರಿಶೀಲಿಸಿದರು. 



ಈ ವೇಳೆ ಗ್ರಾ.ಪಂ ಅಧ್ಯಕ್ಷರಾದ ಮಾರೆಮ್ಮ, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಉಮೇಶ್, ಸಹಾಯಕ ನಿರ್ದೇಶಕರಾದ (ಪಂಚಾಯತ್ ರಾಜ್) ಸೋಮನಗೌಡ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯ ಪಾಲಕ ಅಭಿಯಂತರರಾದ ವಿನೋದ್ ಕುಮಾರ್ ಗುಪ್ತಾ, ಸಹಾಯಕ ಕಾರ್ಯ ಪಾಲಕ ಅಭಿಯಂತರರಾದ ವಿಜಯಲಕ್ಷ್ಮೀ, ಇಂಜಿನಿಯರ್ ಗಳಾದ ಮಂಜುನಾಥ, ಮೌನೇಶ್, ಅಜರುದ್ದೀನ್, ತಾಪಂ ವ್ಯವಸ್ಥಾಪಕರಾದ ಗಂಗಾಧರ ಮೂರ್ತಿ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಮಲ್ಲಯ್ಯ, ನರೇಗಾ ಯೋಜನೆಯ ತಾಂತ್ರಿಕ ಸಂಯೋಜಕರಾದ ಅಶೋಕ್, ತಾಂತ್ರಿಕ ಸಹಾಯಕ ಅಭಿಯಂತರರಾದ ರಾಘವೇಂದ್ರ, ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ ಬಸವರಾಜ್ ಗಲಗಿನ್, ಎಸ್ ಬಿಎಂ ಸಂಯೋಜಕರಾದ ಅನೀಲ್, ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*