*ಪತ್ರಕರ್ತರಿಗೆ ಸರ್ಕಾರದ ಮೂಲ ಸೌಲಭ್ಯ ನೀಡಲಿ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ*
ಕೂಡ್ಲಿಗಿ :- ಕರ್ನಾಟಕ ನಿರತ ಪತ್ರಕರ್ತರ ಧ್ವನಿ ತಾಲೂಕು ಘಟಕದ ವತಿಯಿಂದ ಜ್ಞಾನ ಮಂಟಪ ಶಾಲೆ ಗುಂಡಿನಹೊಳೆ ಕೂಡ್ಲಿಗಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ
ಪತ್ರಿಕೆ ಮತ್ತು ಪತ್ರಕರ್ತರ ಸಂಕಷ್ಟವನ್ನು ಸರ್ಕಾರ ಅರಿಯಬೇಕು. ಪತ್ರಕರ್ತರಿಗೆ ಸರ್ಕಾರವು ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಪತ್ರಕರ್ತರಿಗೆ ನೀಡಿಲ್ಲ. ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕಾಗಿದೆ. ಪತ್ರಕರ್ತರು ಸಾರ್ವಜನಿಕ ವರದಿ ಮಾಡಲು ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆಯನ್ನು ಕಲ್ಪಿಸಬೇಕಿತ್ತು. ಸರ್ಕಾರ ಹಾಗೂ ರಾಜಕಾರಣಿಗಳು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಇದು ಸಲ್ಲದು ಪತ್ರಕರ್ತರಿಗೆ ಎಷ್ಟೊಂದು ನೋವುಗಳಿದ್ದರೂ ವರದಿ ಮಾಡಲು ಹಿಂಜರಿಯುವುದಿಲ್ಲ. ಹಿಂಗಾದಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡುವ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕಾಗುತ್ತದೆ ಎಂದು ಕಾ.ನಿ. ಪ.ಧ್ವನಿ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಪ್ರಾಸ್ತವಿಕವಾಗಿ ಮಾತನಾಡಿದರು.
ಷ.ಬ್ರ. ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿಗಳು.
ಐಮಡಿ ಶರಣಾರ್ಯರು ಧರ್ಮಾಧಿಕಾರಿಗಳು ದಾಸೋಹ ಮಟ್ಟ ಕಾನಮಡುಗು. ದಿವ್ಯ ಸಾನಿಧ್ಯ ವಹಿಸಿದ್ದರು.
ವಿಶೇಷ ಉಪನ್ಯಾಸ ರೂಪ ಶಿoತ್ರಿ ಮಾತನಾಡಿ ವಿಜಯನಗರ ಜಿಲ್ಲೆಯಲ್ಲಿ ಶ್ರೀ ಕೃಷ್ಣದೇವರಾಯ ಆಡಳಿತದ ಬಗ್ಗೆ ತಿಳಿಸಿ. ಕನ್ನಡದ ಮೊಟ್ಟ ಮೊದಲ ಪತ್ರಿಕೆ ಮಂಗಳೂರು ಸಮಾಚಾರ ದಿಂದ ಹಿಡಿದು ಇಲ್ಲಿಯ ತನಕ ಪತ್ರಿಕೆಗಳು ಹಾಗೂ ಪತ್ರಕರ್ತರ ಸಂಕಷ್ಟ. ಸ್ಥಿತಿಗತಿ. ಸಂಕೋಲೆಗಳು. ಸಮಸ್ಯೆಗಳು ನೂರೆಂಟುದ್ದರೂ ಪತ್ರಕರ್ತರು ಯಾವುದನ್ನು ಗಮನಿಸದೆ ನ್ಯಾಯದ ಪರವಾಗಿ ಸುದ್ದಿಗಳನ್ನು ಮಾಡುತ್ತಾ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಯಾವುದೇ ಸಂಭಾವನೆ ಇಲ್ಲ. ಕನಿಷ್ಠ ಮೂಲಭೂತ ಸೌಲಭ್ಯಗಳಿಲ್ಲ. ಪಿಂಚಣಿ ಇಲ್ಲ. ನಿವೇಶನ ಹಾಗೂ ವಸತಿ ಸೌಲಭ್ಯಗಳಿಲ್ಲ. ಪತ್ರಕರ್ತರ ಸಂಕಷ್ಟಗಳನ್ನು ರಾಜಕಾರಣಿಗಳು ಹಾಗೂ ಸರ್ಕಾರ ಅರಿಯದೆ, ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ನೀಡಲು ಮೀನಾ ಮೇಷ ಎಣಿಸುತ್ತಿರುವುದು ಸರಿಯಲ್ಲ. ಸರ್ಕಾರ ಕನಿಷ್ಠ ಐದು ವರ್ಷ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸಿರುವ ಪತ್ರಕರ್ತರಿಗೆ ವಾರ್ತ ಇಲಾಖೆಯಿಂದ ಪಿಂಚಣಿ ದೊರೆಯುವಂತಾಗಬೇಕು ಎಂದು ಹೇಳಿದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಎನ್.ಎಂ. ರವಿಕುಮಾರ್ ಮಾತನಾಡಿ ಕೂಡ್ಲಿಗಿ ತಾಲೂಕು ರಂಗಭೂಮಿ ತವರೂರು, ತಾಲೂಕಿನಲ್ಲಿ 15ಕ್ಕೂ ಹೆಚ್ಚು ಕನ್ನಡ ಪಂಡಿತರಿದ್ದ ತಾಲೂಕು ಎಂಬ ಹೆಗ್ಗಳಿಕೆ ಇದೆ. ಕೋ ಚನ್ನಬಸಪ್ಪ. ಹಿಮ ನಾಗಯ್ಯ. ಮರಳು ಸಿದ್ದಯ್ಯ. ಸೋಮಶೇಖರಯ್ಯ. ಚಂದ್ರಶೇಖರಯ್ಯ. ರುದ್ರಮುನಿಯಯ್ಯ. ವಿದ್ವಾನ್ ಗುರುಸಿದ್ಧಯ್ಯ.ಸೇರಿದಂತೆ ಅನೇಕ ವಿದ್ವಾಂಸರಿಂದ ನಾಡು ಕೂಡ್ಲಿಗಿ.ಎಂದು ಸ್ವವಿವರ ವಾಗಿ ತಿಳಿಸಿದರು.
ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷರು ಸಂಸ್ಥಾಪಕರು ಹಾಗೂ ಅಧ್ಯಕ್ಷರು ಜ್ಞಾನ ಮಂಟಪ ಎಜುಕೇಶನ್ ಟ್ರಸ್ಟ್ ನ ಜಿ ಉಮೇಶ್ ಮಾತನಾಡಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪುಸ್ತಕ ಓದುವವ್ಯಾಸವನ್ನು ರೂಡಿಸಿಕೊಳ್ಳಬೇಕು ಜೊತೆಗೆ ಪುಸ್ತಕದಿಂದ ಜ್ಞಾನಾರ್ಜನೆ ಉಂಟಾಗುತ್ತದೆ. ವಿದ್ಯಾಭ್ಯಾಸ ಮಾಡುವುದರಿಂದ ಉನ್ನತ ಹುದ್ದೆಗೆ ಹೇರಲು ಸಾಧ್ಯ. ಉತ್ತಮ ಶಿಕ್ಷಣ ಕೊಡಿಸುವುದರ ಜೊತೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿಸಬೇಕಿದೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಷ.ಬ್ರ. ಪ್ರಶಾಂತ ಸಾಗರ ಶಿವಾಚಾರ್ಯ ಮಹಾಸ್ವಾಮಿಗಳು, ದಾ.ಮ. ಐಮಡಿ ಶರಣಾರ್ಯರು ಧರ್ಮಾಧಿಕಾರಿಗಳು ಕಾನಮಡಗು. ರೂಪ ಶಿoತ್ರಿ ,
ಹಿರಿಯ ಪತ್ರಕರ್ತರಾದ ಕಾವಲಿ ಶಿವಪ್ಪ ನಾಯಕ. ಭೀಮೇಶ್. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಏನ್ ಎಂ ರವಿಕುಮಾರ್ . ಜ್ಞಾನ ಮಂಟಪ ಎಜುಕೇಶನ್ ಟ್ರಸ್ಟಿನ ಕಾರ್ಯದರ್ಶಿ ವಾಣಿ ಕೆ, ಬಿಜೆಪಿ ಮಂಡಲ ಅಧ್ಯಕ್ಷ ನಾಗರಾಜ್, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಧ್ವನಿ ತಾಲೂಕು ಘಟಕದ ಅಧ್ಯಕ್ಷ ಬಾಣದ ಶಿವಮೂರ್ತಿ, ಶಾಸಕರ ಆಪ್ತ ಸಹಾಯಕರಾದ ದಿನಕರ, ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸಾಲುಮನೆ ರಾಘವೇಂದ್ರ, ಕಾ. ನಿ. ಪ. ಧ್ವನಿ ಪದಾಧಿಕಾರಿಗಳಾದ ಬಿ ರಾಘವೇಂದ್ರ, ಮಂಜುನಾಥ,ಅನಿಲ್ ಕುಮಾರ್, ನಾರಾಯಣ, ಬಣಕಾರ್ ಮೂಗಪ್ಪ, ರಮೇಶ್, ವಸಂತ, ತಿಪ್ಪೇಸ್ವಾಮಿ, ಕೆ. ಎಸ್. ವೀರೇಶ್, ವಾಗೀಶ್ ಮೂರ್ತಿ, ಸೇರಿದಂತೆ ಗಣನೆಯ ಸಾಧನೆ ಮಾಡಿದ ಸಾಧಕರಿಗೆ ಕಲಾವಿದರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ