*ಗೋಮರ್ಸಿಯಲ್ಲಿ ಜರುಗಿದ ಅದ್ದೂರಿ ಮೊಹರಂ ಹಬ್ಬದ ಆಚರಣೆ*
ಸಿಂಧನೂರು : ಹಿಂದೂ ಮುಸ್ಲಿಮರ ಭಾವೈಕ್ಯತೆಯ ಪವಿತ್ರ ಮೊಹರಂ ಹಬ್ಬದ ಆಚರಣೆಯು ಗೋಮರ್ಸಿ ಗ್ರಾಮದಲ್ಲಿ ಬಹಳ ವಿಶಿಷ್ಟ ಹಾಗೂ ವಿಜೃಂಭಣೆಯಿಂದ ನಡೆಯಿತು. ಮೊಹರಂ ಕಡೆಯ ದಿನವಾದ ಬುಧವಾರ ಗೋಮರ್ಸಿ ಗ್ರಾಮದಿಂದ ಬೆಳಿಗ್ಗೆ ಐದು ಗಂಟೆಗೆ ಆರಂಭವಾದ ದೇವರುಗಳ ಸವಾರಿ ಪಕ್ಕದ ಮಾಡಶಿರಿವಾರ ಹಾಗೂ ಕನ್ನಾರಿ ಗ್ರಾಮಗಳಿಗೆ ತೆರಳಿ ತಲ ತಲಾಂತರದಿಂದ ಬಂದ ಆಲಾಯಿ ಬಿಲಾಯಿ ಮಾಡುವ ಸಂಪ್ರದಾಯದಂತೆ ಈ ವರ್ಷವೂ ಸಹ ನಡೆಯಿತು. ಈ ಸಂದರ್ಭದಲ್ಲಿ ಸಾವಿರಾರು ಜನ ಮಸೀದಿ ಬಳಿ ಸೇರಿ ರೋಮಾಂಚನದ ಸಂದರ್ಭವನ್ನು ಕಣ್ಣು ತುಂಬಿಕೊಂಡು ತಮ್ಮ ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಹರಕೆಯನ್ನು ತೀರಿಸಿ ಹಸೇನ್,ಹುಸೇನ್ ದೇವರಗಳ ಆಶೀರ್ವಾದವನ್ನು ಪಡೆದರು. ಗೋಮರ್ಸಿ ಗ್ರಾಮದಲ್ಲಿ ಇನ್ನೂ ಅದ್ದೂರಿಯಾಗಿ ಊರಿನ ಸರ್ವ ಜನಾಂಗದ ಸಹಭಾಗಿತ್ವದಲ್ಲಿ ಮೊಹರಂ ಹಬ್ಬದ ಕೊನೆಯ ದಿನದ ವಿಶಿಷ್ಟ ಆಚರಣೆಗಳನ್ನು ನೆರವೇರಿಸಿ. ನೂರಾರು ಯುವಕರು ಕುಣಿದು ಕುಪ್ಪಳಿಸಿ ಮೆರಗನ್ನು ತಂದರು.
ಗೋಮರ್ಸಿ ಗ್ರಾಮದ ಮೊಹರಂ ಹಬ್ಬವು ಸಿಂಧನೂರು ತಾಲೂಕಿನಲ್ಲಿ ನಡೆಯುವ ವಿಶಿಷ್ಟ ಆಚರಣೆಗಳಲ್ಲಿ ಒಂದಾಗಿದೆ. ಈ ಹಬ್ಬವು ಸುಗ್ಗಿಯ ಪೂರ್ವದಲ್ಲಿ ರೈತರ ಒಗ್ಗೂಡುವಿಕೆ, ಸಂತೋಷ,ನೆಮ್ಮದಿಯ ನೆರವೇರಿಕೆ ಮುಂಗಾರು ಹಾಗೂ ಹಿಂಗಾರು ಮಳೆ ಹಾಗೂ ಗ್ರಾಮದ ಜನ ಜೀವನದ ಬಗ್ಗೆ ವಿಶೇಷ ಹೇಳಿಕೆ ಕಾರ್ಯ ಜರುಗುವ ಕಾರ್ಯಕ್ರಮ ವಿಶೇಷತೆಯಿಂದ ಕೂಡಿರುತ್ತದೆ ಎಂದು ಮೊಹರಂ ಹಬ್ಬದ ಆಚರಣೆ ಸಮಿತಿಯ ಸದಸ್ಯ ಮುತ್ತವಲಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಗೋಮರ್ಸಿ ಗ್ರಾಮದ ಗುರು ಹಿರಿಯರು,ಗ್ರಾಮ ಪಂಚಾಯಿತಿ ಸರ್ವ ಸದಸ್ಯರು,ಸಮಿತಿ ಸದಸ್ಯರು,ಸಾರ್ವಜನಿಕರು ಹಾಗೂ ಮುದ್ದು ಮಕ್ಕಳು ಸೇರಿದಂತೆ ಇನ್ನಿತರರು ಭಾಗವಹಿಸಿದ್ದ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ