ಯುನೈಟೆಡ್ ಹಾಸ್ಪಿಟಲ್ ಯಿಂದ ಜಯನಗರ ಲಯನ್ಸ್ ಕ್ಲಬ್ ಸದಸ್ಯರಿಗೆ ಪ್ರಿವಲೇಜ್ ಹೆಲ್ತ್ ಕಾರ್ಡ್ ಕೊಡುಗೆ.
ಬೆಂಗಳೂರು : ವಿಶ್ವ ವೈದ್ಯರ ದಿನದ ಅಂಗವಾಗಿ ಜಯನಗರದ ಪ್ರತಿಷ್ಠಿತ ಯುನೈಟೆಡ್ ಹಾಸ್ಪಿಟಲ್, ಲಯನ್ಸ್ ಕ್ಲಬ್ ಬೆಂಗಳೂರು ಜಯನಗರ ಘಟಕದ ಸದಸ್ಯರಿಗೆ ವಿಶೇಷವಾದ “ಪ್ರಿವಲೇಜ್ ಹೆಲ್ತ್ ಕಾರ್ಡ್” ನೀಡಿ ಆರೋಗ್ಯ ಸೇವೆ ಒದಗಿಸಲು ಮುಂದಾಗಿದೆ. ಲಯನ್ ಡಾ. ಬಿ. ಎಂ. ಉಮೇಶ್ ಕುಮಾರ್ ಕ್ಲಬ್ಬಿನ ಅಧ್ಯಕ್ಷರಾದ ಮೇಲೆ ಕ್ಲಬ್ಬಿನ ಸದಸ್ಯರ ಆರೋಗ್ಯ ಕಾಳಜಿಯಿಂದ ಜಾರಿಗೊಳಿಸಿರುವ ಮೊದಲ ಯೋಜನೆ ಇದಾಗಿದ್ದು. ಸೋಮವಾರ ಜಯನಗರದ ಯುನೈಟೆಡ್ ಆಸ್ಪತ್ರೆ ಆವರಣದಲ್ಲಿ ವಿಶೇಷವಾಗಿ ಆಯೋಜಿಸಲಾಗಿದ್ದ ವಿಶ್ವ ವೈದ್ಯರ ದಿನದ ಸಮಾರಂಭದಲ್ಲಿ ಈ ಕಾರ್ಡ್ ಅನ್ನು ಯುನೈಟೆಡ್ ಹಾಸ್ಪಿಟಲ್ ನ ಸಿ.ಓ.ಓ ಕರ್ನಲ್ ರಾಕೇಶ್ ಭಾರದ್ವಾಜ ರವರು ಬಿಡುಗಡೆ ಮಾಡಿದರು.
ಕಾರ್ಡ್ ಬಿಡುಗಡೆ ಗೊಳಿಸಿ ಮಾತನಾಡಿದ ಲಯನ್ಸ್ ಜಯನಗರ ಅಧ್ಯಕ್ಷರಾದ ಡಾ. ಬಿ.ಎಂ. ಉಮೇಶ್ ಕುಮಾರ್ , “ಈ ಸದಾವಕಾಶಕ್ಕಾಗಿ ಯುನೈಟೆಡ್ ಹಾಸ್ಪಿಟಲ್ ನ ಚೇರ್ಮನ್ ಆದ ಡಾ. ವಿವೇಕ್ ಸಿದ್ದಾರೆಡ್ಡಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ ಕಾರ್ಡ್ ಹೊಂದಿದವರಿಗೆ ಆಸ್ಪತ್ರೆಯಲ್ಲಿ ವಿಶ್ವ ದರ್ಜೆಯ ಅನೇಕ ಚಿಕಿತ್ಸೆಗಳ ಮೇಲೆ ವಿಶೇಷ ಸೌಲಭ್ಯಗಳು ಮತ್ತು ರಿಯಾಯಿತಿ ದೊರಕುತ್ತದೆ. ಲಯನ್ಸ್ ಸದಸ್ಯರು ಇದರ ಸದುಪಯೋಗ ಪಡೆಯಬೇಕು ಎಂದು ವಿನಂತಿಸುತ್ತೇನೆ” ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಯುನೈಟೆಡ್ ಹಾಸ್ಪಿಟಲ್‍ನಾ ಖ್ಯಾತ ವೈದ್ಯರಾದ ಡಾ.ಸೃಜನ, ಡಾ.ವಕಾರ್ ಡಾ.ಅಯಾಜ್ ಡಾ.ಚನ್ನವೀರ, ಎ.ಜಿ.ಎಂ ಆನಂದ್, ಬಾಲಕೃಷ್ಣ ಹಾಗೂ ಕ್ಲಬ್ಬಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ