ಕೆಸರು ಗದ್ದೆ ಯಾದ ರಸ್ತೆ: ಶಾಲಾ ವಿದ್ಯಾರ್ಥಿಗಳಿಗೆ ತೊಂದರೆ

 

ಕೊಟ್ಟೂರು ಪಟ್ಟಣದ ಜೆಪಿ ನಗರದ ರಸ್ತೆಗಳು ಮಳೆಯಿಂದ ಕೆಸರು ಗದ್ದೆ ಯಾಗಿ ಹದಗೆಟ್ಟಿದ್ದು ನಿತ್ಯವೂ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಬೈಕ್ ಸವಾರರು ರಸ್ತೆಯ ಕೆಸರಿನಲ್ಲಿ ಸಿಲುಕಿ ಸಂಚಾರಕ್ಕೆ ಅಡಚಣೆ ಉಂಟಾಗಿರುವ ಘಟನೆ ಶನಿವಾರ ನಡೆಯಿತು. 

ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ರಸ್ತೆಗಳು ಗುಡಿಗಳಾಗಿ ಪರಿವರ್ತನೆಗೊಂಡು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಕೆಸರು ಗದ್ದೆ ಯಾಗಿ ಪರಿಣಾಮವಾಗಿ ರುವುದರಿಂದ ಡೆಂಗ್ಯೂ ಮಲೇರಿಯಾ ಹರಡುವಂತ ಸಾಧ್ಯತೆಗಳು ಹೆಚ್ಚಿದ್ದು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪರದಾಡುವಂತಾಯಿತು. ಇದರಿಂದ ಸರಿಯಾದ ಸಮಯಕ್ಕೆ ಮಕ್ಕಳನ್ನು ಶಾಲಾ ಗೆ ಹೋಗಲು ಸಾಧ್ಯವಾಗದ ವಿದ್ಯಾರ್ಥಿಗಳು ರಸ್ತೆ ಪರಿಸ್ಥಿತಿಗೆ ಕಾರಣವಾದ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು. 

ಮಳೆ ಬಂದರೆ ಈ ರಸ್ತೆ ಕೆಸರು ಗದ್ದೆ ಯಾಗಿ ಮಾರ್ಪಡುತ್ತವೆ.ಈ ವೇಳೆ ವಾಹನ ಸವಾರರು ಜಾರಿ ಬೀಳುವುದು ಹಾಗೂ ಅವಘಡಗಳು ಕಟ್ಟಿಟ್ಟ ಬುತ್ತಿ ಯಾಗಿದೆ. ಆದರೆ ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳು 500 ಮೀಟರ್ ರಸ್ತೆ ಮಾತ್ರ ಅಭಿವೃದ್ಧಿಯ ಗೋಜಿಗೆ ಹೋಗುತ್ತಿಲ್ಲ ಎನ್ನುವುದು ಸಾರ್ವಜನಿಕರಾದ ಜೊಳ್ಳಿ ಪ್ರಶಾಂತ್,ಚಂದ್ರು, ಕೊಟ್ರೇಶ್ ದೂರಿದರು


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ