ತಾಲೂಕ ಸಾಮಾಜಿಕ ಪರಿಶೋಧನೆ ತಂಡ ಭೇಟಿ ಗ್ರಾ.ಪಂ.ಅಧಿಕಾರಿಗಳು ಗೈರು : ಸಾರ್ವಜನಿಕರ ಆಕ್ರೋಶ

ಮಸ್ಕಿ : ತಾಲ್ಲೂಕಿನ ಮೆದಿಕಿನಾಳ ಗ್ರಾಮ ಪಂಚಾಯತಿಗೆ ಬುಧವಾರ ತಾಲ್ಲೂಕು ಸಾಮಾಜಿಕ ಪರಿಶೋಧನೆ ವರದಿ ಕಮಿಟಿ ಭೇಟಿ ನೀಡಿ

ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ವಿವಿಧ ಕಾಮಗಾರಿ ಗಳ ಬಗ್ಗೆ ಪರಿಶೀಲನೆ ಮಾಡ ತೊಡಗಿದ್ದರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕಿರಿಯ ಇಂಜಿನಿಯರ್ ಗೈರು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಿರಿಯ ಇಂಜಿನಿಯರ್ ಗೈರು ಆಗಿದ್ದರೂ ತಾಲೂಕ ಕೋ ಆರ್ಡಿನೇಟರ್ ಶ್ಯಾಮ್ ಸುಂದರ್ ಪವರ್ ಇವರ ನೇತೃತ್ವದಲ್ಲಿ ಗ್ರಾಮ ಪಂಚಾಯ್ತಿಯ ಸಾಮಾಜಿಕ ಲೆಕ್ಕ ಪರಿಶೋಧನೆ ಮಾತ್ರ ನಡೆಯುತ್ತಿದೆ.

ಸರಕಾರದ ಸುತ್ತೋಲೇ ಪ್ರಕಾರ ಅಧಿಕಾರಿಗಳು ಪಂಚಾಯತಿಯಲ್ಲಿ ಬೆಳಗ್ಗೆ ಬಂದರೆ ಸಾಯಂಕಾಲ ವರೆಗೆ ಇರಬೇಕು. ಸಾರ್ವಜನಿಕರ ಕುಂದು ಕೊರತೆಗಳ ಪರಿಹರಿಸಿ ಎಂದರೆ ಅಧಿಕಾರಿಗಳು ಮಾತ್ರ ಕುಂಟು ನೆಪವನ್ನು ಹೇಳಿ ಗೈರು ಆಗಿದ್ದು ನಿಜಕ್ಕೂ ಶೋಚನೀಯ ಸಂಗತಿ . ಒಂದೆಡೆ ಉದ್ಯೋಗ ಖಾತ್ರಿಯ ಮೇಟಿ ಗಳು ಕಾಮಗಾರಿ ಕೆಲಸ

ಮಾಡಿದ್ದಾರೆ ಆದರೆ ಅವರಿಗೆ ಒಂದು ತಿಂಗಳಾದರೂ ಬಿಲ್ ಮಾಡದೇ ಬಿಲ್ ಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು

ಮೇಟಿಗಳು ತಮ್ಮ ಅಸಮಧಾನ ವ್ಯಕ್ತ ಪಡಿಸಿದ್ದಾರೆ.ಇಷ್ಟು ಇದ್ದರೂ ಒಂದು ಕಡೇ ಸಾಮಾಜಿಕ ಲೆಕ್ಕ ಪರಿಶೋಧನೆ ಯನ್ನು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳ ಮತ್ತು ಜೆ.ಇ ಅನುಪಸ್ಥಿತಿಯಲ್ಲಿ ವರದಿಯ ಪರಿಶೀಲನೆಯಲ್ಲಿ ತೊಡಗಿದ್ದಾರೆ ಇನ್ನೊಂದು ಕಡೆ ಉದೋಗ ಖಾತ್ರಿಯ ಮೇಟಿ ಗಳು ಕಾಮಗಾರಿ ಕೆಲಸದ ವೇತನಕ್ಕೆ ಕಾಯುತ್ತಿದ್ದಾರೆ.

ಪಿಡಿಓ ಹಾಗೂ ಜೆಇ ಅಧಿಕಾರಿಗಳು ಲೆಕ್ಕ ಪರಿಶೋಧನೆ ವೇಳೆ ಹಾಜರಾಗುವರೋ ಅಥವಾ ಕೂಲಿ ಕಾರ್ಮಿಕರ ವೇತನ ಮಾಡುವರೋ ಅಥವಾ ಸಂಬಂಧಿಸಿದ ಮೇಲಾಧಿಕಾರಿಗಳು ಇವರ ಮೇಲೆ ಕ್ರಮ ಕೈಗೊಳ್ಳುವರೇ ? ಎಂದು ಕಾದು ನೋಡಬೇಕಿದೆ!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ