ರಾಘವ ಭಟ್, ಅರ್ಪಣಾ ಪೂಜಾ, ವಿಕ್ರಂ ವಿನ್ನರ್
ಬಳ್ಳಾರಿ: ಭಾರತೀಯ ದಂತ ವೈದ್ಯಕೀಯ ಸಂಘದ ಜಿಲ್ಲಾ ಶಾಖೆಯು ಆತಿಥ್ಯ ವಹಿಸಿಕೊಂಡು ಎರೆಡು ದಿನಗಳ ಕಾಲ ಇಲ್ಲಿನ ಜಿಲ್ಲಾ ಕ್ರೀಡಾಂಗಣದ ಬಳಿಯ ಕ್ರೀಡಾ ಸಮುಚ್ಚಯದಲ್ಲಿ ನಡೆದ
ರಾಜ್ಯ ಮಟ್ಟದ ದಂತ ವೈದ್ಯರ ಷಟಲ್ ಬ್ಯಾಡ್ ಮಿಂಟಂನ್ ಪಂದ್ಯಾವಳಿ ಇಂದು ಸಮಾರೋಪಗೊಂಡಿದೆ. ಆತಿಥೇಯ ಬಳ್ಳಾರಿಯ ವೈದ್ಯರು ವಿಜೇತರಾಗದಿದ್ದರೂ ಬಹುತೇಖ ವೇಳೆ ಭಾಗಗಳಲ್ಲಿ ರನ್ನರ್ ಅಪ್ ಸ್ಥಾನ ಪಡೆಯುವಲ್ಲಿ ಯಶ ಸಾಧಿಸಿದ್ದಾರೆ.
ನಾಕೌಟ ಹಂತದಲ್ಲಿ ನಡೆದ ಪಂದ್ಯಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 58 ಕ್ಕೂ ಕ್ರೀಡಾಪಟುಗಳು ಇದರಲ್ಲಿ ಪಾಲ್ಗೊಂಡಿದ್ದರು.
ಅಂತಿಮ ಪಂದ್ಯಗಳಲ್ಲಿ:40 ವರ್ಷದೊಳಗಿನ ಡಬಲ್ಸ್ ನಲ್ಲಿ ಬೆಳಗಾವಿಯ ಡಾ.ದೀಪಾಎಂ ಮತ್ತು ಹುಬ್ಬಳ್ಳಿಯ ಡಾ.ಪೂಜಾ ಅವರು ಬಳ್ಳಾರಿಯ ಡಾ. ವಿಜಯಲಕ್ಷ್ಮಿ, ಡಾ ದೀಪಾ ಪಿ ಅವರನ್ನು ನೇರ ಸೆಟ್ ಗಳಿಂದ (2-0) 21-08, 21-02 ಅಂಕಗಳಿಂದ ಮಣಿಸಿದರು. 40 ವರ್ಷ ಮೇಲ್ಪಟ್ಟ ಸಿಂಗಲ್ಸ್ ನಲ್ಲಿ ಉತ್ತರ ಕನ್ನಡದ ಡಾ ಅರ್ಪಣಾ ಅವರು ಡಾ.ಕೋಕಿಲಾ ಹೆಗಡೆ ಅವರನ್ನು 21-16 ಮತ್ತು 21-12 ಅಂಕಗಳಿಂದ ಮಣಿಸಿದರು.40 ವರ್ಷ ಮೇಲ್ಪಟ್ಟ ಡಬಲ್ಸ್ ನಲ್ಲಿ ಬೆಳಗಾವಿಯ ಡಾ.ದೀಪ ಎಂ ಮತ್ತು ಉತ್ತರ ಕನ್ನಡದ ಡಾ. ಅರ್ಪಣಾ ಅವರು ಉತ್ತರ ಕನ್ನಡದ ಡಾ.ಸಂಗೀತಾ ಮತ್ತು ಡಾ.ಕೋಕಿಲಾ ಅವರನ್ನು 21-17, 21-16 ಅಂಕಗಳಿಂದ ಸೋಲಿಸಿದರು.
40 ವರ್ಷ ಕೆಳಗಿನ ಮಿಕ್ಸ್ ಡಬಲ್ಸ್ ನಲ್ಲಿ ಬೆಂಗಳೂರಿನ ಡಾ.ಶಶಿಧರ ಮತ್ತು ಹುಬ್ಬಳ್ಳಿಯ ಡಾ.ಪೂಜಾ ಅವರು ಬಳ್ಳಾರಿಯ ಡಾ.ಸುರೇಶ್ ಮತ್ತು ಡಾ.ದೀಪಾ ಪಿ ಅವರನ್ನು ನೇರ ಸೆಟ್ ನಿಂದ ಮಣಿಸಿ 21-15, 22-20 ಅಂಕಗಳಿಂದ ವಿಜಯ ಸಾಧಿಸಿದ್ದಾರೆ.
40 ವರ್ಷ ಕೆಳಗಿನ ಸಿಂಗಲ್ಸ್ ನಲ್ಲಿ ಹುಬ್ಬಳ್ಳಿಯ ಡಾ.ಪೂಜಾ ಅವರು ಬಳ್ಳಾರಿಯ ಡಾ.ದೀಪಾ ಪಿ ಅವರನ್ನು 21-07, 21-05 ಅಂಕಗಳಿಂದ ಮಣಿಸಿ ವಿಜಯಿಯಾದರು.
ಪುರುಷರ ವಿಭಾಗ:
40 ವರ್ಷ ಮೇಲ್ಪಟ್ಟ ಸಿಂಗಲ್ಸ್‌ನಲ್ಲಿ ಬೆಂಗಳೂರಿನ ಡಾ.ರಾಘವ ಭಟ್ ಅವರು, ಶಿವಮೊಗ್ಗದ ಡಾ.ಶೈಲೇಂದ್ರ ಅವರನ್ನು 15-04, 15-05 ಅಂಕಗಳಿಂದ ಮಣಿಸಿದರು.
40 ವರ್ಷದೊಳಗಿನ ಸಿಂಗಲ್ಸ್‌ನಲ್ಲಿ ಬೆಂಗಳೂರಿನ ಡಾ.ವಿಕ್ರಂ ಅವರು ಬಳ್ಳಾರಿಯ ಡಾ.ಸುರೇಶ್ ಕುಮಾರ್ ಎಸ್.ಕೆ.ಇವರನ್ನು 21-11, 21-10 ಅಂಕಗಳಿಂದ ಸೋಲಿಸಿ ವಿಜಯಿಯಾದರು.
40 ವರ್ಷದೊಳಗಿನ ಡಬಲ್ಸ್ ನಲ್ಲಿ ಬೆಂಗಳೂರಿನ ಡಾ.ಶಶಿಧರ ಮತ್ತು ಡಾ ರಾಘವ ಭಟ್ ಅವರು ಶಿವಮೊಗ್ಗದ ಡಾ.ಜೈ ಭಾರತ್ ರೆಡ್ಡಿ ಹಾಗು ಡಾ.ಶೈಲೇಂದ್ರ ಅವರನ್ನು 21-16 ಮತ್ತು 21-11 ಅಂಕಗಳಿಂದ ಮಣಿಸಿದರು.
40 ವರ್ಷ ಮೇಲ್ಪಟ್ಟ ವಿಭಾಗದಲ್ಲೂ ಬೆಂಗಳೂರಿನ ಡಾ.ಶಶಿಧರ ಬಿ.ವಿ ಮತ್ತು ಡಾ.ರಾಘವ ಭಟ್ ಅವರುಗಳು ಡಾ.ಆದರ್ಶನ ಎನ್. ಹಾಗು ಡಾ.ಸುರೇಶ್ ಕುಮಾರ್ ಎಸ್.ಕೆ. ಇವರನ್ನು 21-18, 22-20 ಅಂಕಗಳಿಂದ ಮಣಿಸಿದರು.
40 ವರ್ಷ ಮೇಲ್ಪಟ್ಟ ಮಿಕ್ಸ್ ಡಬಲ್ಸ್ ನಲ್ಲಿ ಡಾ.ಶಶಿಧರ್ ಹಾಗು ಡಾ.ದೀಪಾ ಎಂ ಅವರು ಡಾ.ಶೈಲೇಂದ್ರ ಮತ್ತು ಡಾ.ಕೋಕಿಲಾ ಹೆಗಡೆ ಅವರುಗಳನ್ನು 21-19, 21-18 ಅಂಕಗಳಿಂದ ಮಣಿಸಿದರು.
ಅಂತಿಮವಾಗಿ ಆಡಿದ ವಿವಿಧ ವಿಭಾಗಗಳ 10 ಪೈನಲ್ ಪಂದ್ಯಗಳಲ್ಲಿ ಬೆಸ್ಟ್ ಆಫ್ 3 ಯಾವು ಆಗಲಿಲ್ಲ. ಎಲ್ಲವೂ ನೇರ ಸೆಟ್ ಗಳಿಂದ ಗೆಲುವು ಆಗಿದ್ದವು. ಅಂದರೆ ಮ್ಯಾಚ್ ಗಳು ಬಹುತೇಖ ಒನ್ ಸೈಡ್ ಆಗಿದ್ದವು ಎನ್ನಬಹುದು.
ನಂತರ ಟ್ರೋಪಿ ವಿತರಣೆ ಸಮಾರಂಭ ನಡೆಯಿತು.
ಎಸ್ಪಿ ಡಾ.ಶೋಭಾರಾಣಿ ವಿ.ಜೆ.ಅವರು ವಿನ್ನರ್ ಹಾಗು ರನ್ನರ್ ಗಳಿಗೆ ಟ್ರೋಫಿಗಳನ್ನು ವಿತರಿಸಿದರು.
ಭಾರತೀಯ ದಂತ ವೈದ್ಯಕೀಯ ಸಂಘದ ರಾಜ್ಯ ಕಾರ್ಯದರ್ಶಿ ಡಾ.ಮಹೇಶ್ ಚಂದ್ರ, ಖಜಾಂಚಿ ಡಾ. ಸಂಜತ್ ಕುಮಾರ್, ಉಪಾಧ್ಯಕ್ಷ ನರೇಂದ್ರ ಕುಮಾರ್, ಹಿರಿಯ ದಂತ ವೈದ್ಯ ಶೇಷಗಿರಿರಾವ್,
ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಡಾ.ಮಧುಸೂಧನ ರೆಡ್ಡಿ, ಕಾರ್ಯದರ್ಶಿ ಡಾ.ಶ್ರೀಧರರೆಡ್ಡಿ, ಖಜಾಂಚಿ ಡಾ.ರಾಜೀವ್ ವಿ, ರಾಜ್ಯ ಪ್ರತಿನಿಧಿ ಡಾ.ಮಂಜುನಾಥ, ಡಾ.ವೀರಾರೆಡ್ಡಿ ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ