ಹದಗೆಟ್ಟ ರಸ್ತೆ : ಸಂಚಾರ ಸಾವರರಿಗೆ ಜೀವಕ್ಕೆ ಅಪತ್ತು

 

"ಅಂಬಳಿ ರಸ್ತೆ ಸರಿಪಡಿಸಲು ಆಗ್ರಹ"

ಕೊಟ್ಟೂರು: ತಾಲ್ಲೂಕಿನ ಅಂಬಳಿ ಗ್ರಾಮದ ಕಳೆದ 15 ವರ್ಷಗಳಿಂದಲೂ ಈ ರಸ್ತೆ ದುರಸ್ತಿ ಭಾಗ್ಯ ಕಾಣದಂತಾಗಿದೆ. 7 ಕಿ.ಮೀ. ರಸ್ತೆ ಉದ್ದಕ್ಕೂ ಜಾಲಿಗಿಡಗಳು ಅವರಿಸಿ ಓಡಾಡುವ ಜನರು ಭಯ ಬೀತರಾಗಿದ್ದಾರೆ ರಸ್ತೆಗೆ ಚಾಚಿರುವುದಲ್ಲದೆ ಆಳವಾದ ಗುಂಡಿಗಳಿಂದ ಆವೃತ್ತವಾಗಿದೆ.

ಅಂಬಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಸವಾರರು ವಾಹನಗಳನ್ನು ಚಲಾಯಿಸು ವಾಗ ಪ್ರಯಾಸ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ

ಕೊಟ್ಟೂರು- ಹಗರಿಬೊಮ್ಮನಹಳ್ಳಿ ಮುಖ್ಯ ರಸ್ತೆಯಿಂದ ಬೇವೂರು ಗ್ರಾಮದ ವರೆಗೆ ಇತ್ತೀಚೆಗೆ ರಸ್ತೆ ಕಾಮಗಾರಿ ಕೈಗೊಂಡಿದ್ದರು.

ಕಳಪೆ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಗೆ ಬಿಲ್ ಮೊತ್ತ ಪಾವತಿಸುವ ಮೊದಲೇ ತಗ್ಗು ಗುಂಡಿಗಳು ಪ್ರತ್ಯಕ್ಷವಾಗಿ ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಟ್ಟೂರು ತಾಲ್ಲೂಕಿನ ಅಂಬಳಿ ಗ್ರಾಮದ ರಸ್ತೆಯ ದುಸ್ಥಿತಿ 'ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ತರಗತಿಗಳಿಗೆ ಹಾಜರಾಗದಂತಹ ಪರಿಸ್ಥಿತಿ ಇದೆ. ಆಸ್ಪತ್ರೆ ಹಾಗೂ ವ್ಯಾಪಾರ ವಹಿವಾಟುಗಳಿಗಾಗಿ ಪಟ್ಟಣಕ್ಕೆ ಆಗಮಿ ಸುವ ವೃದ್ಧರು ಹಾಗೂ ಮಹಿಳೆಯರ ಗೋಳು ಹೇಳತೀರದಂತಾಗಿದೆ' ಎಂದು ಅಂಬಳಿ ಸೋಮಶೇಖರ್ ನೋವಿನಿಂದ ಹೇಳಿದರು.

ತಾಲ್ಲೂಕಿನ ರಸ್ತೆ ಸ್ಥಿತಿ ಗತಿ ಜನ ಪ್ರತಿನಿಧಿಗಳು, ಅಧಿಕಾರಿಗಳ ಆಡಳಿತ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.

ಕೊಟ್-1

'ನಮ್ಮ ಕ್ಷೇತ್ರಕ್ಕೆ ಒಳಪಡುವ ರಸ್ತೆಗಳ ಅವ್ಯವಸ್ಥೆಯ ಬಗ್ಗೆ ಗಮನವಿದ್ದು ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳು ವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ' ಎಂದು ಶಾಸಕ ಕೆ.ನೇಮರಾಜನಾಯ್ಕ ತಿಳಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ