ಭದ್ರಾ ಜಲಾಶಯ ಭರ್ತಿಗೆ ಕ್ಷಣಗಣನೆ
ದಾವಣಗೆರೆ:ಭದ್ರಾ ನದಿ ಪಾತ್ರದಲ್ಲಿ ನಿರಂತರ ಮಳೆ ಆಗುತ್ತಿರುವ ಕಾರಣಕ್ಕೆ ಭದ್ರಾ ಜಲಾಶಯಕ್ಕೆ ಒಳ ಹರಿವು ಪ್ರಮಾಣ ಪ್ರತಿ ಕ್ಷಣಕ್ಕೂ ಹೆಚ್ಚುತ್ತಿದ್ದು ಜಲಾಶಯ ಭರ್ತಿಗೆ ಕ್ಷಣ ಗಣನೆ ಆರಂಭ ಆಗಿದೆ.
ಇಂದು ಬೆಳಗಿನ ಜಾವ ಜಲಾಶಯದ ಒಳ ಹರಿವು 49,555 ಕ್ಯೂಸೆಕ್ ಇದೆ. ಜಲಾಶಯದ ನೀರಿನ ಮಟ್ಟ 157.11 ಅಡಿ ತಲುಪಿದೆ. ನಿನ್ನೆ 153 ಅಡಿ ಇದ್ದ ನೀರಿನ ಮಟ್ಟ ಒಂದೇ ದಿನ 3.11 ಅಡಿ ಹೆಚ್ಚಳ ಆಗಿದೆ.
ಒಳ ಹರಿವು ನಿನ್ನೆ 42,165 ಕ್ಯೂಸೆಕ್ ಇತ್ತು. ಇಂದು ಸುಮಾರು 7 ಸಾವಿರ ಕ್ಯೂಸೆಕ್ ಹೆಚ್ಚಳ ಆಗಿದೆ. 71.53ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಹಾಲಿ 40.04 ಟಿಎಂಸಿ ನೀರು ಸಂಗ್ರಹ ಆಗಿದೆ.
ಮಲೆನಾಡ ಭಾಗದಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಕೆಲವೇ ದಿನಗಳಲ್ಲಿ ಜಲಾಶಯ ಭರ್ತಿ ಆಗುವ ನಿರೀಕ್ಷೆ ಇದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ