ಕೊಟ್ಟೂರಿನಲ್ಲಿ ಜೆಸ್ಕಾಂ ಉಪ ವಿಭಾಗ ಕಛೇರಿ ಅನುಮೋದನೆಗೆ ಅಧಿಕೃತ ಆದೇಶ













ಕೊಟ್ಟೂರು ಮಹಾ ಜನತೆಯ ದಶಕಗಳ ಕನಸನ್ನು ಈಡೇರಿಸಿದ ಶಾಸಕ:- ನೇಮಿರಾಜ ನಾಯ್ಕ್

ಕೊಟ್ಟೂರು:- ಹೊಸದಾಗಿ ತಾಲೂಕು ಘೋಷಣೆಯಾಗಿ ಐದಾರು ವರ್ಷಗಳು ಕಳೆದರು, ನೆಪಕ್ಕೆ ಮಾತ್ರ ತಾಲ್ಲೂಕು ಕೇಂದ್ರವೆಂದು ಕೊಟ್ಟೂರು ಪಟ್ಟಣವನ್ನು ಕಳೆದ ಐದಾರು ವರ್ಷದಿಂದ ಕರೆಯುತ್ತಿದ್ದಾರೆ, ಆದರೇ ಇಲ್ಲಿ ಇನ್ನೂ ಸಹ ಅಧಿಕೃತವಾಗಿ ಸರಕಾರಿ ಕಛೇರಿಗಳನ್ನು ಪ್ರಾರಂಭಿಸಿಲ್ಲ. 

ಈ ಕ್ಷೇತ್ರದ ಮತದಾರರ ಆಶೀರ್ವಾದದಿಂದ, ಶಾಸಕರಾದ ನೇಮಿರಾಜ ನಾಯ್ಕ್, ಈ ಭಾಗದ ಮತದಾರರ ಸಮಸ್ಯೆಗಳನ್ನು ಹಾಗೂ ತಾಲೂಕಿನಲ್ಲಿ ಸರಕಾರಿ ಕಛೇರಿಗಳನ್ನು ಪ್ರಾರಂಭಿಸಲು ಅತಿರಥ ಪ್ರಯತ್ನವನ್ನು ಮಾಡುತ್ತ ಬಂದುದ್ದಾರೆ, ಇದೀಗ ಅವರ ಪರಿಶ್ರಮ, ಜನರ ಒತ್ತಾಸೆಯ ಬೇಡಿಕಡಯಿಂದ ಇದೀಗ, ಕೊಟ್ಟೂರಿನಲ್ಲಿ ಜೆಸ್ಕಾಂ ಉಪವಿಭಾಗವನ್ನು ಪ್ರಾರಂಭಿಸಲು ಸರಕಾರದಿಂದ ಅಧಿಕೃತ ಆದೇಶ ಹೊರಬಂದಿದೆ.

ಶ್ರೀಗುರು ಕೊಟ್ಟೂರೇಶ್ವರ ಆಶೀರ್ವಾದದಿಂದ, ಈ ಭಾಗದಲ್ಲಿ ಜ್ವಲಂತ ಸಮಸ್ಯೆಯಾಗಿ ಉಳಿದಿದ್ದ, *ಕೆಇಬಿ ಸಬ್ ಸ್ಟೇಷನ್* (ಉಪ ವಿಭಾಗ ಕಛೇರಿ) ಆದೇಶ ಮಾಡಿಸಿದ ಕೀರ್ತಿ ಶಾಸಕರಿಗೆ ಸಲ್ಲುತ್ತದೆ.

 ಈ ಭಾಗದಲ್ಲಿ ವಿದ್ಯುತ್ ಸಂಬಂಧಿತ ಉಂಟಾಗುತ್ತಿದ್ದ ಸಮಸ್ಯೆಗಳಿಗೆ ತತ್‍ಕ್ಷಣವೇ ಕೊಟ್ಟೂರು ನಲ್ಲೇ ಮಂಜೂರಾತಿ ಆದೇಶ ದೊರೆಯುತ್ತದೆ. 

ಅಗತ್ಯತೆಗಳ ಪ್ರಕಾರ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಸೇವೆ ಒದಗಿಸುವ ದೃಷ್ಟಿಯಿಂದ, ಉತ್ತಮ ಆಡಳಿತಾತ್ಮಕ ನಿಯಂತ್ರಣ ಮತ್ತು ಆಡಳಿತದಲ್ಲಿ ದಕ್ಷತೆ ಹೊಂದಲು ಸಹಕಾರಿ ಆಗುತ್ತದೆ. ಸಾರ್ವಜನಿಕರು ಕೂಡ್ಲಿಗಿ- ಹಗರಿಬೊಮ್ಮನಹಳ್ಳಿ ಹೋಗುವ ಅಲೆದಾಟವನ್ನು ಕಡಿಮೆಯಾಗುತ್ತದೆ, ಕೊಟ್ಟೂರಿನಲೇ ಜೆಸ್ಕಾಂ ಸೇವೆಗಳು ದೊರೆಯುತ್ತವೆ. ಅನುದಾನದ ಕೋರತೆ ಕಡಿಮೆ ಆಗುತ್ತದೆ. 

ಉಪ ವಿಭಾಗ ಕೇಂದ್ರ ವ್ಯಾಪ್ತಿ ಕೊಟ್ಟೂರು ತಾಲ್ಲೂಕಿಗೆ ಸೀಮಿತ ಗೊಂಡಿರುವುದರಿಂದ ಸೇವೆಗಳು ನೀಡುವಿಕೆ ತ್ವರಿತವಾಗುತ್ತದೆ. ಕೊಟ್ಟೂರು ತಾಲ್ಲೂಕಿನಲ್ಲೇ ಅಂದಾಜು 2 ಕೋಟಿಗೂ ಹೆಚ್ಚು ಆದಾಯ ಸಂಗ್ರಹಣ ಆಗುವುದರಿಂದ, ಅಭಿವೃದ್ಧಿ ಅನುಕೂಲ ಆಗುತ್ತದೆ.

ಜೆಸ್ಕಾಂ ಉಪವಿಭಾಗ ಕಛೇರಿ ಅನುಮೊದನೆಗೊಂಡ ನಂತರ ಭಾಗದ ಮತದಾರರು, ಮುಖಂಡರು ಅಭಿನಂದನೆಗಳನ್ನು ತಿಳಿಸಿದರು. ಇನ್ನೂ ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಅನೊಮೊದನೆಗೊಳ್ಳದ ಇತರೇ ಸರಕಾರಿ ಕಛೇರಿಗಳನ್ನು ಅನುಮೋದನೆಗೊಳಿಸಲು ಶಾಸಕರು, ಶ್ರಮಿಸಬೇಕು ಎಂದು ಸಾರ್ವಜನಿಕರು ತಿಳಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ