ಉಜ್ಜೀವನ- ಜನ ನಿರ್ದೇಶಿತ ಸಮುದಾಯ ಆಧಾರಿತ ಕಾರ್ಯಕ್ರಮ ಯಶಸ್ವಿ

ಮಸ್ಕಿ : ತಾಲೂಕಿನ ಅಂಕುಶದೊಡ್ಡಿ ಗ್ರಾಮದಲ್ಲಿ ಇಂದು ಬಿಡಿಡಿಎಸ್ ಸಂಸ್ಥೆ ಬಳ್ಳಾರಿ ಸಂಸ್ಥೆಯ ವತಿಯಿಂದ ಉಜ್ಜೀವನ ಜನ ನಿರ್ದೇಶಿ ತ ಸಮುದಾಯ ಆದಾರಿತ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ದುರ್ಗಣ್ಣ ಮುಖ್ಯೋಪಾಧ್ಯಾಯರು ಮಾತನಾಡಿ ಅಂಕುಶದೊಡ್ಡಿ ಗ್ರಾಮದಲ್ಲಿ ಉಜ್ಜೀವನ ಯೋಜನೆಯ ಗ್ರಾಮ ಅಭಿವೃದ್ಧಿ ಸಮಿತಿಯ ಅನುಷ್ಠಾನ ಕಾರ್ಯಕ್ರಮದಲ್ಲಿ ಬಳ್ಳಾರಿ ಧರ್ಮ ಪ್ರಾಂತ್ಯ ಅಭಿವೃದ್ಧಿ ಸಂಸ್ಥೆಯ ಸಹಕಾರದಲ್ಲಿ ಗ್ರಾಮ ಅಭಿವೃದ್ಧಿ ಸಮಿತಿ ರಚನೆಯನ್ನು ಉದ್ದೇಶಿಸಿ ಎಲ್ಲಾ ಗ್ರಾಮದ ನಾಗರಿಕರು ಒಟ್ಟಾಗಿ ಸೇರಿ ಅಭಿವೃದ್ಧಿಗಾಗಿ ದುಡಿಯಿರಿ ಎಂದು ಸಮಿತಿಯನ್ನುದೇಶಿಸಿ ಮಾತನಾಡಿದರು.

ನಂತರ ಉಜ್ಜೀವನ ಯೋಜನೆಯ ಸಂಯೋಜಕರಾದ ಶಾಂತಪ್ಪ ಸೋಮನಮರಡಿಯವರು ಗ್ರಾಮ ಅಭಿವೃದ್ಧಿ ಸಮಿತಿಯಿಂದ ಗ್ರಾಮ ಬೆಳವಣಿಗೆ ಸಾಧ್ಯ ಎಂದು ಮಾತನಾಡಿದರು.ಗ್ರಾಮ ಪಂಚಾಯತಿ ಸದಸ್ಯರಾದ ಬಸವರಾಜ್ ವಂದಲಿ ಇವರು ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ ಹಾಗೂ ಒಗ್ಗಟ್ಟಿನಲ್ಲಿ ಬಲವಿದೆ ಎಂದು ಮಾತನಾಡಿದರು.  

ಈ ಸಂದರ್ಭದಲ್ಲಿ ಸಮಿತಿಯ ರಚನೆಯ ಕಾರ್ಯಕರ್ತರಾದ ಮುದುಕಪ್ಪ ಪರಪೂರ್, ವಿಜಯಕುಮಾರ್ ಕಾಟಿಗಲ್.ಗ್ರಾಮ ಪಂಚಾಯತಿ ಸದಸ್ಯರಾದ ಲಿಂಗರಾಜು, ಮಾನಪ್ಪ,ಪರಶುರಾಮ, ಯಂಕಣ್ಣ.ಅಂಗನವಾಡಿ ಕಾರ್ಯಕರ್ತರಾದ ಮರಿಯಮ್ಮ,ಕುಪ್ಪಮ್ಮ,ಶಿವಮ್ಮ ,

ಆಶಾ ಕಾರ್ಯಕರ್ತರಾದ ಶರಣಮ್ಮ,ಶಾರದಮ್ಮ, ನಂದಿನಿ.ಮಹಿಳಾ ಸ್ವಸಹಾಯ ಸಂಘ ಸದಸ್ಯರು ಹಾಗೂ ಗ್ರಾಮದ ನಾಗರಿಕರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ