61 ಸಾವಿರ ಕ್ಯೂಸೆಕ್ ಒಳ ಹರಿವು!!!!
ದಾವಣಗೆರೆ:ಮಲೆನಾಡು, ಚಿಕ್ಕಮಗಳೂರು ಭಾಗದಲ್ಲಿ ಭಾರೀ ಮಳೆ ಆಗುತ್ತಿರುವುದರಿಂದ ಭದ್ರಾ ಜಲಾಶಯದ ಒಳ ಹರಿವು ದಾಖಲೆಯ ಪ್ರಮಾಣದಲ್ಲಿ ಹೆಚ್ಚಾಗಿದೆ.
ಮೊನ್ನೆ ಮಳೆ ಇಳಿಕೆ ಆಗಿದ್ದರಿಂದ ಒಳ ಹರಿವು ಇಳಿಕೆ ಆಗಬಹುದು ಎಂಬ ಲೆಕ್ಕಾಚಾರ ಇತ್ತು. ಆದರೆ, ಮಳೆ ಏಕಾಏಕಿ ಬೀರಿಸುಗೊಂಡ ಕಾರಣ ಒಳ ಹರಿವ ಭಾರೀ ಏರಿಕೆ ಆಗಿದೆ. ಇಂದು ಒಳ ಹರಿವು ಬರೋಬ್ಬರಿ 61,042 ಕ್ಯೂಸೆಕ್ ಆಗಿದೆ.
ಹೀಗಾಗಿ ಜಲಾಶಯದಿಂದ 41,957 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ.
ಇಂದು ಸಹ ಮಲೆನಾಡು, ಚಿಕ್ಕಮಗಳೂರು ಭಾಗದಲ್ಲಿ ರೆಡ್ ಅಲರ್ಟ್ ನೀಡಿರುವ ಹಿನ್ನೆಲೆಯಲ್ಲಿ ಇಂದು ಸಹ ಭಾರೀ ಮಳೆ ನಿರೀಕ್ಷೆ ಇದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ