ಕರ್ನಾಟಕ ರೈತ ಸಂಘ ತಹಶೀಲ್ದಾರರಿಗೆ ಮನವಿ ಸಲ್ಲಿಕೆ
ಮಸ್ಕಿ : ಕರ್ನಾಟಕ ರೈತ ಸಂಘ (AIKKS) ಮಸ್ಕಿ ತಾಲೂಕ ಸಮಿತಿಯು ತಹಶೀಲ್ದಾರರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಕರ್ನಾಟಕ ರೈತ ಸಂಘ (AIKKS) ಮಸ್ಕಿ ತಾಲೂಕ ಸಮಿತಿಯು ಕರ್ನಾಟಕ ಭೂ ಮಂಜೂರಾತಿ ನಿಯಮಗಳು -1969, ಉಪನಿಯಮ 3ರ ಅನ್ವಯ ತಹಸಿಲ್ದಾರರು ಪ್ರತಿ ವರ್ಷವೂ ಹಂಚಿಕೆಗೆ ತಾಲೂಕನಲ್ಲಿ ಲಭ್ಯ ಇರುವ ಸರಕಾರಿ ಭೂಮಿಯ ಪಟ್ಟಿಯನ್ನು ತಯಾರಿಸಬೇಕಾಗುತ್ತದೆ. ಅಷ್ಟೇ ಅಲ್ಲ, ಭೂಮಿಯ ಪಟ್ಟಿಯನ್ನು ಪ್ರತಿ ವರ್ಷ ಜುಲೈ 1 ನೇ ತಾರಿಖು ಮೀರದಂತೆ ಪ್ರಕಟಿಸಬೇಕಾಗುತ್ತದೆ.
ಈ ಮಹತ್ವದ ಕೆಲಸವನ್ನು ಕೈಗೆತ್ತಿಕೊಂಡು ಸಕಾಲದಲ್ಲಿ ತಾಲೂಕಿನಲ್ಲಿ ಭೂ ರಹಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ದುರ್ಬಲ ಸಮುದಾಯಗಳಿಗೆ ಹಂಚಲು ಲಭ್ಯ ಇರುವ ಸರಕಾರಿ ಭೂಮಿಯ ವಿವರವನ್ನು ಸಾರ್ವಜನಿಕವಾಗಿ ತಾವು ಇದುವರೆಗೂ ಪ್ರಕಟಿಸಿರುವುದಿಲ್ಲ. ಇದು ತಮ್ಮ ಪ್ರಮುಖ ಕರ್ತವ್ಯ ಒಂದರ ಚ್ಯುತಿಯಾಗಿರುತ್ತದೆ. ಭೂ ರಹಿತರ ಭೂಮಿಯ ಹಕ್ಕಿನ ಹರಣವಾಗುತ್ತದೆ. ಸ್ವಾತಂತ್ರ್ಯ ಪೂರ್ವದಿಂದಲೂ ಸಾಗುವಳಿ ಭೂಮಿಯಿಂದ ವಂಚಿತರಾದ ದಲಿತ ಹಾಗೂ ದುರ್ಬಲ ಸಮುದಾಯಗಳಿಗೆ ಭೂಮಿ ನೀಡುವ ಸರಕಾರದ ಮಹತ್ವಕಾಂಕ್ಷಿಯಾದ ಎಲ್ಲ ಯೋಜನೆಗಳ ಮೇಲೆ ಇದರ ಅಡ್ಡ ಪರಿಣಾಮವಾಗಿದೆ.
2024-25 ನೇ ಸಾಲಿನಲ್ಲಿ ಮಸ್ಕಿ ತಾಲೂಕಿನಲ್ಲಿ ಹಂಚಿಕೆ ಮಾಡಲು ಲಭ್ಯ ಇರುವ ಒಟ್ಟು ಸರಕಾರಿ ಭೂಮಿಯ ವಿವರವನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು, ಮತ್ತದರ ದೃಢೀಕೃತ ಪ್ರತಿಯನ್ನು ನಮಗೆ ಒದಗಿಸಬೇಕೆಂದು ಈ ಮನವಿ ಪತ್ರದ ಮೂಲಕ ತಮ್ಮಲ್ಲಿ ವಿನಂತಿಸುತ್ತೇವೆ ಎಂದು ತಾಲೂಕ ದಂಡಾಧಿಕಾರಿ ಸುಧಾ ಅರಮನೆ ಇವರಲ್ಲಿ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಸಂತೋಷ ಹಿರೇದಿನ್ನಿ ತಾಲೂಕು ಅಧ್ಯಕ್ಷರು ಕರ್ನಾಟಕ ರೈತ ಸಂಘಮಸ್ಕಿ,ಮಾರುತಿ ಜಿನ್ನಾಪುರ ಪ್ರಧಾನ ಕಾರ್ಯದರ್ಶಿ ಮಸ್ಕಿ,ಕರ್ನಾಟಕ ರೈತ ಸಂಘ ಮಸ್ಕಿ ತಾಲೂಕು ಸಮಿತಿಯ ಸರ್ವ ಸದಸ್ಯರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ