ಸೌಕರ್ಯ ವಂಚಿತ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ
ಮಸ್ಕಿ : ಪಟ್ಟಣದ ನಿರ್ಜನ ಪ್ರದೇಶ ಸುಡುಗಾಡು ಗಡ್ಡೆಯಲ್ಲಿ ಇರುವ ಡಿ.ದೇವರಾಜು ಅರಸು ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯವು ಸೌಕರ್ಯ ವಂಚಿತ ನಿಲಯವಾಗಿ ಮಾರ್ಪಟ್ಟರು ಕ್ಯಾರೆ ಎನ್ನದ ಅಧಿಕಾರಿ ವರ್ಗ.ವಿದ್ಯಾರ್ಥಿಗಳ ಗೋಳು ಕೇಳುವವರೇ ಇಲ್ಲವೇ ಎಂಬುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.
ಪಟ್ಟಣದ ನಿರ್ಜನ ಪ್ರದೇಶ ಸುಡುಗಾಡು ಗಡ್ಡೆಯಲ್ಲಿ ಇರುವ ಡಿ.ದೇವರಾಜು ಅರಸು ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ದಲ್ಲಿ ಭೋಜನಾಲಯ, ಸಿಸಿ ಕ್ಯಾಮೆರಾ,ಬಿಸಿ ನೀರಿನ ವ್ಯವಸ್ಥೆ, ಗಾಧಿ, ಕ್ರೀಡಾ ಸಾಮಗ್ರಿ,50 ವಿದ್ಯಾರ್ಥಿಗಳಿಗೆ 2 ಸ್ನಾನ ಗೃಹ ಮತ್ತು 2 ಶೌಚಾಲಯ,ವೈದ್ಯಕೀಯ ತಪಾಸಣೆ ವರ್ಷಕ್ಕೊಮ್ಮೆ,ಆಟದ ಮೈದಾನ, ಕಾವಲುಗಾರ ಸಮಸ್ಯೆ,ಕೊಠಡಿಗಳ ಸಮಸ್ಯೆ, ಸಿಸಿ ರಸ್ತೆ ನಿರ್ಮಾಣ ಮಾಡದೇ ಇರುವುದು ಇಂತಹ ಜ್ವಲಂತ ಸಮಸ್ಯೆಗಳಿದ್ದರು ಸರಿಪಡಿಸದೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಯ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಸಮಾಜದ ಹಿತರಕ್ಷಕರು,ಸಾರ್ವಜನಿಕರು ಆಡಳಿತ ಮಂಡಳಿ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಮುಂದಾದರೂ ವರದಿಗೆ ಎಚ್ಚೆತ್ತುಕೊಂಡು ಸರಿಪಡಿಸುವರೆ ಕಾದು ನೋಡಬೇಕಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ