ಮೊಹರಂ ಕಡೆ ದಿನ.ಹಿರೇನಗನೂರು ಹಿಂದೂ ಮುಸಲ್ಮಾನರು ಶಾಂತಿ ಸೌಹಾರ್ದತೆಯಿಂದ ಮೊರಂ ಆಚರಣೆ.
ಹಟ್ಟಿ ಚಿನ್ನದ ಗಣಿ-ಪಟ್ಟಣಕ್ಕೆ ಸಮೀಪದ ಹಿರೇನಗನೂರು ಗ್ರಾಮದಲ್ಲಿ ಹಿಂದೂ ಮುಸ್ಲಿಂಮರು ಒಂದೇ ಭಾವೈಕ್ಯತೆಯಿಂದ ಮೊಹರಂ ಕೊನೆಯ ದಿನ ಸಾಯಂಕಾಲ ಮೂರು ಗಂಟೆಯಿಂದ ಪ್ರಾರಂಭವಾದ ಹಲೈ. ಗ್ರಾಮದ ಯುವಕರು. ಬಣ್ಣ ಬಣ್ಣದ ಬಟ್ಟೆಯನ್ನು ಧರಿಸಿ. ಕೈಯಲ್ಲಿ ಛತ್ರಿ ಹಿಡಿದು. ಕಾಲಲ್ಲಿ ಗೆಜ್ಜೆ ಕಟ್ಟಿ.
ಇದೆ ಗ್ರಾಮದ ಯುವಕ ಆಂಜನೇಯ ಬೇವಿನ ಗಿಡ.ಇವರ ಹಲಗೆಯ ಶಬ್ದಕ್ಕೆ.ದೊಡ್ಡಹೆಜ್ಜೆ.ಸವಾರಿಹೆಜ್ಜೆ.ಯತಗಲ್ ಹೆಜ್ಜೆ. ಒಂಟಿಹೆಜ್ಜೆ.ಎರಡುಹೆಜ್ಜೆ.ಸೇರಿದಂತೆ ವಿವಿಧ ಹೆಜ್ಜೆಗಳ ಕುಣಿತ ನೋಡುಗರ ಗಮನ ಸೆಳೆದವು.
ಅಲಾಯಿದೇವರುಗಳಾದ ಹಿಮಾಮ್ ಕಾಸಿಂ.ಬೆಳ್ಳಿ ಮೌಲಾಲಿ.ಇಮಾಮ್ ಹುಸೇನಿ.ಹಸೇನ್-ಹುಸೇನಿ.ಕಾಸಿಂ ಆಲಿ.ಅಕ್ಬರ್ ಅಲಿ(ಕಂಬಾರದೇವರು) ದೇವರುಗಳ.ಮೊರಂ ಕೊನೆಯ ದಿನದ ಸವಾರಿಯು ನಡೆಯಿತು.
ಗ್ರಾಮದಲ್ಲಿ ಹಿಂದೂಗಳೇ ಬಹು ಸಂಖ್ಯಾತರಿರುವ ಈ ಗ್ರಾಮದಲ್ಲಿ ಹಿಂದೂ ಮುಸ್ಲಿಂಮರು ಸೇರಿ ಮೊಹರಂ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸುವುದು ಒಂದು ವಿಶೇಷ.ಹಿರೇನಗನೂರು ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತರು ಆಗಮಿಸಿ,ದೇವರ ದರ್ಶನ ಪಡೆದರು.ಹಾಗು ಅಲಾಯಿ ದೇವರಿಗೆ ಸಕ್ಕರೆ ನೈವೇದ್ಯದ ಹರಕೆ ತೀರಿಸಿದರು.
ಸಾಯಂಕಾಲ ಅಲಾಯಿ ದೇವರು ಹೊತ್ತವರು(ಕುದುರೆ) ಅಗ್ನಿಕುಂಡ ತುಳಿದು, ಗ್ರಾಮದ ನಾನಾ ಓಣಿಗಳಲ್ಲಿ ಹರಕೆ ಹೊತ್ತವರ ಮನೆಗಳಿಗೆ ಸವಾರಿ ಮಾಡಿದರು. ನಂತರ ಹಲಾಯಿ ದೇವರು ದಫನ ಸ್ಥಳಕ್ಕೆ ಹೋಗುವಸಂದರ್ಭದಲ್ಲಿ ಮಹಿಳೆಯರು.ಹಿರಿಯರು ಗ್ರಾಮದ ಯುವಕರು. ಅಲಾಯಿ ದೇವರಿಗೆಕೈ ಮುಗಿದು ಮನಸ್ಸಿನಲ್ಲಿ ಬೇಡಿಕೊಂಡು ದಫನ್ ಮಾಡುವ ಸ್ಥಳದ ಕಡೆಗೆ ಕಳುಹಿಸಿಕೊಟ್ಟರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಸದಸ್ಯರು ಹಾಗೂ ಹಿರಿಯರಾದ ಮೈಬೂಬ್ ಸಾಬ್.ಮೋದಿನ ಪಾಷಾ. ಬುಡ್ಡಪ್ಪ ಬೆಂಚಮಟ್ಟಿ. ಶರಣಪ್ಪ ಹೆಗ್ಗಡದಿನ್ನಿ. ಫಕೀರಪ್ಪ.ಬೆಂಚಮಟ್ಟಿ. ಕಾಜಾವಲಿ ಗೌಡೂರ್. ಲಾಲ್ ಅಹ್ಮದ್. ಮೊಹಮ್ಮದ್ ರಫಿ. ಬಾಬಾ ಅಜ್ಮೀರ್ ಬಿಎಂಟಿಸಿ.ಎಂಡಿಜಿಲಾನಿ.ಹಾಗೂ ಗ್ರಾಮಸ್ಥರು ಸೇರಿ ಮೊಹರಂ ಕಡೆಯ ದಿನವನ್ನು.ಸಡಗರ ಸಂಭ್ರಮದಿಂದ ಆಚರಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ