ದಲಿತ ಸಂರಕ್ಷ ಸಮಿತಿ ಸಭೆ ಯಶಸ್ವಿ
ಮಸ್ಕಿ : ಇಂದು ಪಟ್ಟಣದ ಸರ್ಕ್ಯುಟ್ ಹೌಸ್ ನಲ್ಲಿ ದಲಿತ ಸಂರಕ್ಷ ಸಮಿತಿಯ ಜಿಲ್ಲಾ ಅಧ್ಯಕ್ಷರ ನೇತೃತ್ವದಲ್ಲಿ ಮಸ್ಕಿ ತಾಲ್ಲೂಕಿನ ಪದಾಧಿಕಾರಿಗಳ ಸಭೆ ಕರೆಯಲಾಗಿತ್ತು.
ಈ ಸಭೆಯಲ್ಲಿ ಸಂಘಟನೆಯ ಹೋರಾಟಗಳ ಬಗ್ಗೆ ಸಾಮಾಜಿಕ ಸಮಸ್ಯೆಗಳಾದ ಭೂ ಸಾಗುವಳಿ ಸಕ್ರಮಕ್ಕಾಗಿ ಸ್ಮಶಾನ ಭೂಮಿ ಮತ್ತು ದಲಿತರ ಮೂಲಭೂತ ಸೌಕರ್ಯಗಳಿಗಾಗಿ ಒತ್ತಾಯಿಸಲು ಈ ತಿಂಗಳ 30 ನೇ ತಾರೀಖ ಮಂಗಳವಾರ ದಂದು ಸಂಘಟನೆ ವತಿಯಿಂದ ಹೋರಾಟ ಮಾಡಬೇಕೆಂದು ಎಲ್ಲರ ಉಪಸ್ಥಿತಿಯಲ್ಲಿ ಒಮ್ಮತದಿಂದ ನಿರ್ಧಾರ ಕೈಗೊಳ್ಳಲಾಯಿತು. ಹಾಗೂ ನಮ್ಮ ಸಂಘಟನೆಗೆ ನೂತನವಾಗಿ ಮಸ್ಕಿ ತಾಲ್ಲೂಕಿನ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ನಜೀರ್ ಅಹಮದ್ ಮಸ್ಕಿ ಅವರನ್ನು ಆಯ್ಕೆ ಮಾಡಿ ನಂತರ ಮಸ್ಕಿ ತಾಲ್ಲೂಕ ಘಟಕಕ್ಕೆ ನೂತನವಾಗಿ ಮಲ್ಲಪ್ಪ ದೀನಸಮುದ್ರ , ರಾಘು ದೀನಸಮುದ್ರ, ಅವರನ್ನು ಜಿಲ್ಲಾ ಅಧ್ಯಕ್ಷರ ನೇತೃತ್ವದಲ್ಲಿ ಸೇರ್ಪಡೆ ಮಾಡಲಾಯಿತು.
ಈ ಸಭೆಯಲ್ಲಿ ಜಿಲ್ಲಾ ಅಧ್ಯಕ್ಷರಾದ ಬಾಲಸ್ವಾಮಿ ಜಿನ್ನಾಪೂರ,ರಾಜ್ಯ ಕಾನೂನು ಸಲಹೆಗಾರರು ಮಲ್ಲಪ್ಪ ವಕೀಲರಾದ ನಾಗರಬೆಂಚಿ,ಜಿಲ್ಲಾ ಕಾರ್ಯಾಧ್ಯಕ್ಷರಾದ ಸಿದ್ದಪ್ಪ ಹೂವಿನಭಾವಿ,ಜಿಲ್ಲಾ ಉಪಾಧ್ಯಕ್ಷರಾದ ಮೌನೇಶ ಬಳಗಾನೂರ,ಅಮರಪ್ಪ ಡಬ್ಬೇರಮಡಗು,ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚನ್ನಬಸವ ಕುಣೆಕೆಲ್ಲೂರ,
ಮಸ್ಕಿ ತಾಲ್ಲೂಕು ಅಧ್ಯಕ್ಷರಾದ ಮರಿಸ್ವಾಮಿ ಬೆನಕನಾಳ, ಪ್ರಧಾನ ಕಾರ್ಯದರ್ಶಿ ಆಂಜನೇಯ ಮುರಾರಿ, ಉಪಾಧ್ಯಕ್ಷರಾದ ಲಕ್ಷ್ಮಣ ಹೀರೆಕಡಬೂರ,ಅಮೃತ ಯದ್ದಲದಿನ್ನಿ, ಖಜಾಂಚಿ ರಾಘವೇಂದ್ರ ಕೊಡ್ಲಿ,
ಸಂಘಟನಾ ಕಾರ್ಯದರ್ಶಿ ಭೀಮೇಶ ಜಿನ್ನಾಪೂರ,ನಗರ ಘಟಕದ ಅಧ್ಯಕ್ಷರಾದ ವೆಂಕಟೇಶ ಮುರಾರಿ ಮಸ್ಕಿ,ಉಪಾಧ್ಯಕ್ಷರಾದ ಸಿದ್ದು ಮುರಾರಿ,ಸಂಘಟನಾ ಕಾರ್ಯದರ್ಶಿ ಹುಲಗೇಶ ಮುರಾರಿ,ಅಶೋಕ ವೆಂಕಟಾಪೂರ,ಮಂಜುನಾಥ್ ಗಾಂಧಿನಗರ, ಮಣಿಕಂಠ ಬೋವಿ.ಸುರೇಶ ಮಸ್ಕಿ,ಮೆದಿಕಿನಾಳ ಹೋಬಳಿ ಅಧ್ಯಕ್ಷರಾದ ಸುರೇಶ ನಾಗರಬೆಂಚಿ ಹಾಲಪೂರ ಹೋಬಳಿ ಅಧ್ಯಕ್ಷರಾದ ಬಸವರಾಜ ದೊಡ್ಡಮನಿ,ದಲಿತ ಸರಕಾರಿ ನೌಕರರ ಸಂಘದ ತಾಲ್ಲೂಕ ಅಧ್ಯಕ್ಷರಾದ ಚಂದ್ರು ಉದ್ಬಾಳ, ಉಪಾಧ್ಯಕ್ಷರಾದ ಆನಂದ ಹುಲ್ಲೂರ ಸೇರಿದಂತೆ ಸಂಘದ ಸದಸ್ಯರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ