ಅಂತರರಾಷ್ಟ್ರೀಯ ವೈದ್ಯರ ದಿನಾಚರಣೆಯ. ಹಟ್ಟಿ ಚಿನ್ನದ ಗಣಿಯ ಚಿನ್ನದಂತ ವೈದ್ಯರಿಗೆ ಸನ್ಮಾನ.
ಹಟ್ಟಿ ಚಿನ್ನದ ಗಣಿ -ಜುಲೈ 1 ರಾಷ್ಟ್ರೀಯ ವೈದ್ಯರ ದಿನ.ಹಟ್ಟಿ ಚಿನ್ನದ ಗಣಿಯಲ್ಲಿ ವೈದ್ಯರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ತಾಯಿ ಜನ್ಮ ನೀಡಿದರೆ. ವೈದ್ಯರು ಪುನರ್ಜನ್ಮ ನೀಡುವರು.
ಇದೇ ಕಾರಣಕ್ಕೆ ವೈದ್ಯ ವೃತ್ತಿಯನ್ನು ಇತರೆ ಎಲ್ಲಾ ವೃತ್ತಿಗಳಿಗಿಂತ ಅತ್ಯಂತ ಶ್ರೇಷ್ಠವೆಂದು ಭಾವಿಸಲಾಗುತ್ತದೆ.
ತನ್ನ ಬಳಿ ಬರುವ ವ್ಯಕ್ತಿ ಬಡವನು ಶ್ರೀಮಂತನು ಮೇಲ್ಜಾತಿಯೋ ಕೆಳಜಾತಿಯ, ಸ್ವಧರ್ಮವು- ಪರ ಧರ್ಮವೂ ಯಾವುದರ ಬೇಧ ಭಾವವಿಲ್ಲದೆ ಪ್ರತಿಯೊಬ್ಬರನ್ನು ಸಮಾನ ಹಾರೈಕೆ ಮಾಡುವರು ವೈದ್ಯರು. ಹಾಗೂ ರೋಗಿಗಳ ಪ್ರಾಣ ರಕ್ಷಣೆಗಾಗಿ ಹಗಲಿರುಳು ಎನ್ನದೆ ದುಡಿಯುತ್ತಿರುವ ನಾಡಿನ ವೈದ್ಯರ ಸೇವೆ ಸಮರ್ಪಣಾ ಭಾವವನ್ನು ಈ ದಿನ ನಾವೆಲ್ಲರೂ ಅತ್ಯಂತ ಗೌರವದಿಂದ ಸ್ಮರಿಸೋಣ.
ಪ್ರಪಂಚದಲ್ಲಿ ಹಾಗೂ ಭಾರತ ದೇಶದಲ್ಲಿ ಕರೋನ ಬಂದ ಸಂದರ್ಭದಲ್ಲಿ.ತಮ್ಮ ಕುಟುಂಬ ಮತ್ತು ತಮ್ಮ ಪ್ರಾಣದ ಹಂಗನ್ನು ತೊರೆದು ಸದಾ ನಿಮ್ಮ ಸೇವೆಗೆ ಸಿದ್ದ ಎಂದು ಹಗಲಿರುಳು ಎನ್ನದೆ ಪ್ರತಿಯೊಬ್ಬರ ಪ್ರಾಣ ರಕ್ಷಣೆಗೆ ಮುಂದಾದ ಇಂಥ ವೈದ್ಯರನ್ನು ನಾವೆಲ್ಲರೂ ಪೂಜೆ ಮನೋಭಾವದಿಂದ ನೋಡುವುದಷ್ಟೇ ಅಲ್ಲದೆ ಅವರಿಗೆ ಗೌರವ ಸಲ್ಲಿಸುವುದು ನಮ್ಮ ಧರ್ಮ.
ಇಂಥ ಸಂದರ್ಭದಲ್ಲಿ ಹಟ್ಟಿ ಚಿನ್ನದ ಗಣಿ ಪಟ್ಟಣದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಅವರಿರುವ ಸ್ಥಳಕ್ಕೆ. ಬೇಟೆನೀಡಿದ ಹಟ್ಟಿ ಚಿನ್ನದ ಗಣಿಯ
ಉದಯ ಕಾಲ ಪತ್ರಿಕೆಯ ವರದಿಗಾರರು,ಹಾಗೂ ಆರ್ ಟಿವಿ ಕನ್ನಡ ನ್ಯೂಸ್ ಚಾನೆಲ್ ವ್ಯವಸ್ಥಾಪಕರು,ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ತಾಲೂಕ ಅಧ್ಯಕ್ಷರು ಆಗಿರುವ ಶ್ರೀನಿವಾಸ್ ಮಧುಶ್ರೀ,ಮತ್ತು ಯೋಗಪ್ಪ ದೊಡ್ಮನಿ.
ನಮ್ಮ ಸೇವೆಗೆ ನಿರಂತರವಾಗಿ ವೈದ್ಯ ವೃತ್ತಿಯಲ್ಲಿ ತೊಡಗಿರುವ ವೈದ್ಯರಿಗೆ ಸನ್ಮಾನ ಮಾಡುವ ಮೂಲಕ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಹಟ್ಟಿ ಚಿನ್ನದ ಗಣಿ ಕಂಪನಿಯ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರಾದ ವಸಂತ್ ಕುಮಾರ್,ಸಂತೋಷ್, ರವೀಂದ್ರನಾಥ್ ಮಾವಿನಕಟ್ಟಿ,ಸಾಜಿದಾ, ಸರ್ಕಾರಿ ವೈದ್ಯರಾದ, ಲಕ್ಷ್ಮಿಕಾಂತ್,ಖಾಸಗಿ ವೈದ್ಯರಾದ ಹನುಮಾನ್ ಸಿಂಗ್ ಠಾಕೂರ್, ವಾಸವಿ,ಪ್ರಶಾಂತ್ ಕುಮಾರ್ ಈ ಎಲ್ಲಾ ವೈದ್ಯರಿಗೆ ಸನ್ಮಾನಿಸಿ ಗೌರವ ಸಲ್ಲಿಸಲಾಯಿತು. ಅದೇ ರೀತಿ ಒಂದು ಮಗು ಹುಟ್ಟುವಾಗಿನಿಂದ - ವೃದ್ಧರವರೆಗೂ ನಮಗೆ ಬರುವ ಖಾಯಿಲೆಗಳನ್ನು ಗುಣಪಡಿಸುವ ಇಂಥ ವೈದ್ಯರಿಗೆ ಹೃತ್ಪೂರ್ವಕ ಧನ್ಯವಾದಗಳು ಅರ್ಪಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡರಾದ ಚಂದ್ರು, ನಾಗರೆಡ್ಡಿ,ಸಲೀಂ, ಕುಟ್ಟಿಮಾ,ಸೇರಿದಂತೆ ಇನ್ನು ಹಲವರು ಉಪಸಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ