ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಪ್ರೋತ್ಸಾಹ ಧನ ಮುಂದುವರೆಸುವಂತೆ ಡಿವಿಪಿ ಮನವಿ

 

ಮಸ್ಕಿ, : ರಾಜ್ಯದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಪ್ರೋತ್ಸಾಹ ಧನವನ್ನು ಮೊದಲಿನಂತೆ ಮುಂದುವರೆಸುವಂತೆ ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ (ಡಿವಿ ಪಿ)ನ ಸದಸ್ಯರು ಪ್ರತಿಭಟನೆ ನಡೆದ ಸಿದರು.

 ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ದಲಿತ ವಿದ್ಯಾರ್ಥಿ ಪರಿಷತ್‌ನ ತಾಲೂಕು ಅಧ್ಯಕ್ಷ ಮೌನೇಶ ತುಗ್ಗ ಲದಿನ್ನಿ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ 

ತಹ ಶೀಲ್ದಾ‌ರ್ ಮೂಲಕ ಮುಖ್ಯಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ದಲಿತರ ಬಗ್ಗೆ ಕಾಳಜಿ ಇರುವಂತೆ ಅಭಿವೃದ್ಧಿ ನಮ್ಮಿಂದಲೇ ಹೊರೆತು ಬೇರೆಯವರಿಂದ ಸಾಧ್ಯವಿಲ್ಲ ಎನ್ನುವಂತೆ ವತಿ೯ಸಿ, ದಲಿತರ ಮತಗಳನ್ನು ಪಡೆದು ಅಧಿಕಾರಕ್ಕೆ ಬಂದು ರಾಜ್ಯ ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯಕ್ಕೆ ಮನವಿಲ್ಲ ಅನುದಾನ ವನ್ನು ಬೇರೆ ಯೋಜನೆಗಳಿಗೆ ಉಪಯೋಗಿಸುತ್ತಿರುವುದು ತೀರಾ ಖಂಡನೀಯ ಹಾಗು ಇದು ದಲಿ ತರಿಗೆ ಮಾಡುತ್ತಿರುವ ಘೋರ ಅನ್ಯಾಯ, ಚುನಾವಣ ಪೂರ್ವದಲ್ಲಿ ಸಂವಿಧಾನ. ಸಾಮಾಜಿಕ ನ್ಯಾಯ, ಸಮಾನತೆ ಬಗ್ಗೆ ಮಾತನಾಡುತ್ತಿದ್ದ ತಮ್ಮ ಮಾತುಗಳು ಇಂದು ದಾಯಕವಾಗಿ ಕಾಣುತ್ತಿದೆ. ಇದು ಶೋಷಿತ ಸಮು ದಾಯಕ್ಕೆ ಮಾಡುತ್ತಿರುವ ನಯ ವಂಚನೆಯಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗಾಗಿ ಮೀಸಲಿರಿಸಿದ್ದ. ಅನುದಾನವನ್ನು ದಲಿತರ ಏಳಿಗೆಗಾಗಿ ಬಳಸದೆ ಸಾವಿ ರಾರು ಕೋಟಿ ರೂಪಾಯಿಗಳನ್ನು ತಮ್ಮ ಸರ್ಕಾರದ ಐತಿಹಾಸಿಕ ಸಾಧ ನೆಯೆಂದು ಹೇಳಿಕೊಳ್ಳುವ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುತ್ತಿ ರುವುದು ನಾಚಿಕೆಗೇಡಿನ ಸಂಗತಿ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಅನುದಾನವನ್ನು ಬೆರೆ ಉದ್ದೇಶಗಳಿಗೆ ಬಳಸಿ ದಲಿತರನ್ನು ಬಲಿಪಶುಗಳಾಗಿ ಮಾಡುತ್ತಿರುವುದು ಅತ್ಯಂತ ದುರ್ದೈವದ ಸಂಗತಿ. ದಲಿತ ಸಮುದಾಯವು ಶೈಕ್ಷಣಿಕವಾಗಿ ಮುಂದು ವರೆಯಲು ಪ್ರೋತ್ಸಾಹ ಧನ ಸಹಕಾರಿಯಾಗಿದೆ. ಆದರೆ ಅದನ್ನು ಸಹ ಬಿಡದ ರಾಜ್ಯ ಸರ್ಕಾರ ಪ್ರೋ ತ್ಸಾಹ ಧನಕ್ಕೆ ಕತ್ತರಿ ಹಾಕಿ ದಲಿತ ವಿರೋಧಿ ಕೆಲಸವನ್ನು ರಾಜ್ಯ ಸಕಾ೯ರ ಮಾಡುತ್ತಿರುವುದು

ದುರದೃಷ್ಯರ ಸಂಗತಿ. ಕೂಡಲೆ ಸರ್ಕಾರ ನಿರ್ಧಾರವನ್ನು ಹಿಂದಕ್ಕೆ ಪಡೆದು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಪ್ರೋತ್ಸಾಹ ಧನ ಮುಂದುವರೆಸಬೇಕು ಎಂದು ಆಗ್ರಹಿಸಿದರು. 

ಈ ಸಂದರ್ಭದಲ್ಲಿ ಡಿವಿಪಿ ಸಂಘಟನೆಯ ಹುಸೇನಪ್ಪ ಇರಕಲ್, ರಮೇಶ, ಶರಣಪ್ಪ, ಅನಿಲಕುಮಾ‌ರ್, ಮ ರಿಗೌಡ, ಹುಚ್ಚಪ್ಪ, ಸಿದ್ದಪ್ಪ ಸೇರಿದಂತೆ ಇತರರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ