*ಹಂದಿಗಳ ಹಾವಳಿ: ಮೆಕ್ಕೆಜೋಳ ಬೆಳೆ ಹಾನಿ*
ಕಾನ ಹೊಸಹಳ್ಳಿ: ಸಮೀಪದ ಬಣವಿಕಲ್ಲು ಗ್ರಾಮದ ರೈತ ಡಿ.ನಾಗರಾಜ ತಂದೆ ಗಿಡ್ಡ ಓಬಣ್ಣ ಎಂಬುವರ 8 ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಬೀಜಗಳಿಗೆ ಕಾಡು ಹಂದಿಗಳು ಹಾನಿ ಮಾಡಿದ್ದು, ರೈತರಲ್ಲಿ ಆತಂಕ ಮೂಡಿಸಿವೆ. ರೈತ ಡಿ ನಾಗರಾಜ್ ಅವರ 8 ಎಕರೆ ಜಮೀನಿನಲ್ಲಿ 10 ಪ್ಯಾಕೇಟ್ ಮೆಕ್ಕೇಜೋಳ ಬೀಜವನ್ನು ಹಾಕಿದ್ದು, ಇತನ ಜಮೀನಿನಲ್ಲಿ ರಾತ್ರಿ ಹೊತ್ತು ಕಾಡು ಹಂದಿಗಳು ಬಿತ್ತನೆ ಮಾಡಿದ ಮೆಕ್ಕೇಜೋಳ ಬೀಜಗಳನ್ನು ತಿಂದು ಹೋಗಿದ್ದು. ಇದರಿಂದ ರೈತ ತುಂಬಾ ಸಂಕಷ್ಟಕ್ಕೀಡಾಗಿದ್ದು ಸಾಲ ಸೋಲ ಮಾಡಿ ಮೆಕ್ಕೇಜೋಳ ಬೀಜ ಮತ್ತು ಗೊಬ್ಬರ ತಂದು ತಮ್ಮ ಹೊಲದಲ್ಲಿ ಬಿತ್ತನೆ ಮಾಡಿದ್ದೇನೆ. ಆದರೆ ನಮಗೆ ಸುತ್ತಮುತ್ತಲಿನ ಹೊಲಗಳಿಗೆ ಕಾಡು ಹಂದಿಗಳು ನಮ್ಮ ಜಮೀನುಗಳಿಗೆ ನುಗ್ಗುತ್ತವೆ ಇದರಿಂದ ನಮಗೆ ತುಂಬಾ ನಷ್ಟ ಉಂಟಾಗಿದೆ ಎಂದು ರೈತ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಬಣವಿಕಲ್ಲು ಗ್ರಾಮದ ಸುತ್ತಮುತ್ತಲಿನ ರೈತರಾದ ಬಸವರಾಜ್, ನಾಗೇಂದ್ರಪ್ಪ, ಭೀಮಜ್ಜ ಒಲಗಳು ಸೇರಿದಂತೆ ಇತರೆ ಹೊಲಗಳಲ್ಲಿ ಕಾಡು ಹಂದಿಗಳು ದಾಳಿ ಮಾಡಿವೆ. ನಮ್ಮ ಜಮೀನುಗಳು ಹತ್ತಿರ ಸುತ್ತಲೂ ಅರಣ್ಯ ಪ್ರದೇಶ ಇದ್ದು ಕಾಡು ಪ್ರಾಣಿಗಳಾದ ಕರಡಿ, ಕಾಡು ಹಂದಿಗಳು ಇವುಗಳ ಕಾಟ ಜಾಸ್ತಿ ಆಗಿದ್ದು, ನಾವು ರಾತ್ರಿ ಹೊತ್ತು ನಮ್ಮ ಹೊಲಗಳಿಗೆ ಹೋಗಿ ಕಾಯುವುದಕ್ಕೆ ನಮಗೆ ತುಂಬಾ ಹೆದರಿಕೆ ಯಾಗಿದ್ದು. ಯಾವುದೇ ಕ್ಷಣದಲ್ಲಾದರೂ ಕಾಡು ಪ್ರಾಣಿಗಳು ರೈತರ ಮೇಲೆ ದಾಳಿ ಮಾಡುವ ಸಂಭವವಿದ್ದು ಅದಕ್ಕಾಗಿ ಕೂಡಲೇ ಸಂಬಂಧಪಟ್ಟ, ಕೂಡ್ಲಿಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಇಲ್ಲಿನ ರೈತರ ಪರಿಸ್ಥಿತಿಯನ್ನು ಅವಲೋಕಿಸಿ ರೈತರು ತಮ್ಮ ಹೊಲದಲ್ಲಿ ಬಿತ್ತನೆ ಮಾಡಿದ ಬೀಜ ಮತ್ತು ಗೊಬ್ಬರದ ನಷ್ಟವನ್ನು ತುಂಬಿಕೊಡಲು ಅರಣ್ಯ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಬಣವಿಕಲ್ಲು ಗ್ರಾಮದ ಸುತ್ತಮುತ್ತಲಿನ ರೈತರುಗಳು ಒತ್ತಾಯಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ