ಡೇ-ನಲ್ಮ್ ಯೋಜನೆಯ ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭಾರ್ ಯೋಜನೆಯಡಿ ಕಾರ್ಮಿಕ ಕಾರ್ಡ ನೊಂದಣಿ ಅಭಿಯಾನ
ಕೊಟ್ಟೂರು : ಜನರು ತಮ್ಮ ಸ್ವಂತ ಕೆಲಸ ಅಂದರೆ ವ್ಯಾಪಾರವನ್ನು ಪ್ರಾರಂಭಿಸಲು ಸರ್ಕಾರದಿಂದ ಸಾಲವನ್ನು ನೀಡಲಾಗುತ್ತದೆ. ಈ ಯೋಜನೆಯ ಲಾಭ ಗರಿಷ್ಠ ಸಂಖ್ಯೆಯ ಜನರಿಗೆ ತಲುಪಬೇಕು ಎಂಬುದು ಕೇಂದ್ರ ಸರ್ಕಾರದ ಉದ್ದೇಶ. ಇದಕ್ಕಾಗಿ ಸರ್ಕಾರವು ಪ್ರಧಾನಮಂತ್ರಿ ಸ್ವಾನಿಧಿ ಯೋಜನೆಯ ಅಪ್ಲಿಕೇಶನ್ ಅನ್ನು ಸಹ ಪ್ರಾರಂಭಿಸಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ನಸರುಲ್ಲಾ ಹೇಳಿದರು.
ಪಟ್ಟಣದ ಪಟ್ಟಣ ಪಂಚಾಯಿತಿ ಆವರಣದಲ್ಲಿ ಶನಿವಾರ ಡೇ-ನಲ್ಮ್ ಯೋಜನೆಯ ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭಾರ್ ಯೋಜನೆ ಅಡಿ ಪಿಎಂ ಸ್ವ-ನಿಧಿ ಸಾಲ ಪಡೆದ ಬೀದಿಬದಿ ವ್ಯಾಪಾರಸ್ಥರಿಗೆ , ಜಿಲ್ಲಾಧಿಕಾರಿಗಳ ಕಛೇರಿ, ಜಿಲ್ಲಾ ನಗರಾಭಿವೃದ್ದಿ ಕೋಶ, ಜಿಲ್ಲಾ ಕೌಶಲ್ಯ ಅಭಿವೃದ್ದಿ ಇಲಾಖೆ. ಸಮೂದಾಯ ಸಂಘಟನಾಧಿಕಾರಿಗಳು, ಸಮೂದಾಯ ಸಂಘಟಿಕರು, ಕಾರ್ಮಿಕ ಇಲಾಖೆ, ಕರ್ನಾಟಕ ಬ್ಯಾಂಕ್, ಬಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರುಗಳು ಮತ್ತು ಪಟ್ಟಣ ಪಂಚಾಯಿತಿ ಕೊಟ್ಟೂರು ಇವರುಗಳ ನೇತೃತ್ವದಲ್ಲಿ ಅಯೋಜಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡುತ್ತಿದೆ. ಇದಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ಯೋಜನೆಗಳಲ್ಲಿ ಒಂದು ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆ. ಈ ಯೋಜನೆಯ ಅಡಿಯಲ್ಲಿ, ನಿಮ್ಮ ವ್ಯಾಪಾರವನ್ನು ಪ್ರಾರಂಭಿಸಲು ನೀವು ಯಾವುದೇ ಗ್ಯಾರಂಟಿ ಇಲ್ಲದೆ ಸುಲಭವಾಗಿ ಸಾಲವನ್ನು ತೆಗೆದುಕೊಳ್ಳಬಹುದು ಎಂದರು.
ಬಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರು ಮಾತನಾಡಿ ಈ ಯೋಜನೆಯಲ್ಲಿ ನೀವು ಯಾವುದೇ ಗ್ಯಾರಂಟಿ ಇಲ್ಲದೆ ಸುಲಭವಾಗಿ ಸಾಲವನ್ನು ಪಡೆಯಬಹುದು. ಸಾಲದ ಮೊತ್ತದ ಸಹಾಯದಿಂದ ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಬಹುದು. ಇದರಲ್ಲಿ ಸರಕಾರ ೧೦ ಸಾವಿರದಿಂದ ೫೦ ಸಾವಿರದವರೆಗೆ ಸಾಲ ನೀಡುತ್ತದೆ. ಈ ಯೋಜನೆಯಲ್ಲಿ ಮೊದಲ ಬಾರಿಗೆ ೧೦,೦೦೦, ಎರಡನೇ ಬಾರಿ ೨೦,೦೦೦ ಮತ್ತು ಮೂರನೇ ಬಾರಿ ೫೦,೦೦೦ ರೂ. ಸಾಲ ಪಡೆಯಬಹುದು.ಈ ಯೋಜನೆಯಡಿ ಪಡೆದ ಸಾಲದ ಮೊತ್ತವನ್ನು ೧೨ ತಿಂಗಳೊಳಗೆ ಅಂದರೆ ೧ ವರ್ಷದೊಳಗೆ ಹಿಂತಿರುಗಿಸಬೇಕು ಎಂದರು.
ಶ್ರೀಮತಿ ಮಂಜುಳ, ಕಾರ್ಮಿಕ ಅಧಿಕಾರಿಗಳು ಮಾತನಾಡಿ ಇತ್ತೀಚಿಗೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಅಸಂಘಟಿತ ಕಾರ್ಮಿಕರಿಗೆ ಇ-ಶರ್ಮ ಕಾರ್ಡ, ಕಾರ್ಮಿಕ ಕಾರ್ಡ ತಿಳಿಸಿದ್ದರು ಅದರಂತೆ ಎಪಿಎಂಸಿ ಹಮಾಲರಿಗೆ ಕಾರ್ಡಗಳನ್ನು ಆನ್‌ಲೈನ್‌ನಲ್ಲಿ ಹಾಕಿ ವಿತರಿಸಲಾಗಿದೆ ಅದೇ ರೀತಿ ಈಗ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಬೀದಿ ವ್ಯಾಪಾರಿಗಳಿಗೆ ಹಾಗೂ ಅಸಂಘಟಿತ ಕಾರ್ಮಿಕರಿಗೆ ಮುಖ್ಯಾಧಿಕಾರಿಗಳ ಸಂಯೋಗದಲ್ಲಿ ಕಾರ್ಮಿಕಾರ್ಡ್ಗಳನ್ನು ವಿತರಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ನಗರಾಭಿವೃದ್ದಿ ಕೋಶ, ವಿಜಯನಗರದಿಂದ, ಶ್ರೀಮತಿ ಲಕ್ಷ್ಮೀ, ಜಿಲ್ಲಾ ಕೌಶಲ್ಯ ಅಭಿವೃದ್ದಿ ಅಧಿಕಾರಿಗಳು. ಹಾಗೂ, ಶ್ರೀ ಮೈಲಾರಪ್ಪ, ಸಮೂದಾಯ ಸಂಘಟಿಕರು, ಪಟ್ಟಣ ಪಂಚಾಯಿತಿ ಸಿಬ್ಬಂದಿ ಹಾಗೂ ಬೀದಿ ವ್ಯಾಪಾರಿಗಳು ಮತ್ತಿತರರು ಇದ್ದರು. ಶ್ರೀ ಬಸವರಾಜ, ಸಮೂದಾಯ ಸಂಘಟನಾಧಿಕಾರಿಗಳು ಇವರು ಕಾರ್ಯಕ್ರಮವನ್ನು ನಿರೂಪಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ