ರೆಬೆರೆಂಡ್ ಫಾದರ್ ರಾಬರ್ಟ್ ಪಾಲ್ ಅವರಿಗೆ ಕಲಾ ವೈಭವ-2024 ವಿಶ್ವಚೇತನ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ.
ಲಿಂಗಸಗೂರು:ದರ್ಶನ್ ಸೋಶಿಯಲ್ ಹಾಗೂ ಕಲ್ಚರಲ್ ಅಕಾಡೆಮಿ(ರಿ) ಬೆಂಗಳೂರು ಹಾಗೂ ನೆಹರು ಯುವ ಕೇಂದ್ರ ಬೆಂಗಳೂರು ಇವರ ಸಂಯೋಗದಲ್ಲಿ
ಕಲಾ ವೈಭವ 2024 ದಿನಾಂಕ 28 -07- 2024 ಭಾನುವಾರ ಬೆಂಗಳೂರಿನ ಸಾಂಸ್ಕೃತಿಕ ಕಲಾಗ್ರಾಮ ಮಲ್ಲತಹಳ್ಳಿ ಅಡಿಟೋರಿಯಂನಲ್ಲಿ ಕಲಾ ವೈಭವ-2024 ಕಾರ್ಯಕ್ರಮ.ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ವಿಶ್ವಚೇತನ ರಾಷ್ಟ್ರೀಯ ಪ್ರಶಸ್ತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯ ಡಾ.ವಿದ್ವಾನ್ ಗೋಪಾಲಕೃಷ್ಣ ಶರ್ಮಾ ಗುರೂಜಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. ಕಾರ್ಯಕ್ರಮದ ಅಧ್ಯಕ್ಷತೆ ಶ್ರೀ ಮಹೇಂದ್ರ ಮುನೋತ್.ರಾಜ್ಯ ಪ್ರಶಸ್ತಿ ಪುರಸ್ಕೃತರು ಚಲನಚಿತ್ರ ನಟರು ಹಾಗೂ ಸಮಾಜ ಸೇವಕರು.
ಕಂಬದ ರಂಗಯ್ಯ ಜೀ ಕನ್ನಡ ವಾಹಿನಿಯ ಗಾಯಕರು ಹಾಗೂ ಸಂಗೀತ ನಿರ್ದೇಶಕರು. ಶ್ರೀ ಗಣೇಶ್ ರಾವ್ ಕೆಸರ್ಕಾರ್ ರಂಗಭೂಮಿ ಕಲಾವಿದರು ಹಾಗೂ ಚಲನಚಿತ್ರ ನಟರು. ಹಾಗೂ ಡಿಸಿಎ ಸಂಸ್ಥಾಪಕರು ಶ್ರೀಮತಿ ರೇಣುಕಾ ಪಿ ಹಾಗೂ ಅಧ್ಯಕ್ಷರಾದ ಚಿ ದರ್ಶನ್ ದರ್ಶನ್ ಸೋಶಿಯಲ್ ಅಂಡ್ ಕಲ್ಚರಲ್ ಅಕಾಡೆಮಿ ಹಾಗೂ ಗಣ್ಯರ ಸಮ್ಮುಖದಲ್ಲಿ.
ಈ ವಿಶ್ವಚೇತನ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾದ ಲಿಂಗಸುಗೂರು ತಾಲೂಕಿನ ಗುರುಗುಂಟಾದ ರವರಂಡ್ ಫಾದರ್ ರಾಬರ್ಟ್ ಪಾಲ್ ಇವರು ಸುಮಾರು 19 ವರ್ಷ ಶಿಕ್ಷಣ ಕ್ಷೇತ್ರದಲ್ಲಿ ಅಮೋಘ ಸೇವೆ ಸಲ್ಲಿಸಿ. ಸಮಾಜ ಸೇವೆಯಲ್ಲಿ ಗುರುತಿಸಿಕೊಂಡ ಇವರಿಗೆ ವಿಶ್ವಚೇತನ ರಾಷ್ಟ್ರೀಯ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಇವರ ಪ್ರಶಸ್ತಿಯನ್ನು ಕಣ್ತುಂಬಿಕೊಳ್ಳಲು ತಾಯಿ ಹಾಗೂ ಕುಟುಂಬದ ಸದಸ್ಯರು ಸಿಸ್ಟರ್.ಫಾದರ್. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಅದೇ ರೀತಿ ಗುರುಗುಂಟದ ಮೌಂಟ್ ಕಾರ್ಮೆಲ್ ಶಾಲೆಯ ಮುದ್ದು ಪುಟಾಣಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಹಾಗೂ ಶಿಕ್ಷಕಿಯರು ಹಾಗೂ ಹಿತೈಷಿಗಳು ರೆವರೆಂಡ್ ಫಾದರ್ ರಾಬರ್ಟ್ ಪಾಲ್ ಅವರಿಗೆ ವಿಶ್ವಚೇತನ ರಾಷ್ಟ್ರೀಯ ಪ್ರಶಸ್ತಿ ಲಭಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು.
Thavugalellaru namma hagu namma samstheinda nadediruva sadhaneyannu guruthisi prashamse padisiddakke nanna hagu namma thanda kadeinda thumbu hrudayada anthantha dhanyavadagalu
ಪ್ರತ್ಯುತ್ತರಅಳಿಸಿ