ಅಕ್ರಮ ಮರಳು ಸಾಗಾಣಿಕೆ :ಸಾಗರಕ್ಯಾಂಪ್-ಶಾಲಾ ಕಾಲೇಜಿವಿದ್ಯಾರ್ಥಿಗಳಿಗೆ ನರಕ ದರ್ಶನ
ಸಾರ್ವಜನಿಕರ ಮೂಗಿಗೆ ತುಪ್ಪ ಸವರಲು ಯತ್ನಿಸಿದ ಪೊಲೀಸ್ ಪೇದೆ
ಮಸ್ಕಿ : ತಾಲೂಕಿನ ಬುದ್ದಿನ್ನಿ-ಜಾಲವಾಡ್ಗಿ ಹತ್ತಿರದ ನಾಲ್ಕು ಮರಳು ಯಾರ್ಡ ನಿಂದ ನಿತ್ಯ ಹಗಲು ರಾತ್ರಿ ಎನ್ನದೆ ಸಾಗರಕ್ಯಾಂಪ್ ಮಾರ್ಗವಾಗಿ ಕಾಲುವೆ ರಸ್ತೆಮೇಲೆ ಅಕ್ರಮ ಮರಳು ಸಾಗಾಣಿಕೆಯಿಂದ ಶಾಲಾ ಕಾಲೇಜ್ ವಿದ್ಯಾರ್ಥಿಗಳು ಸೇರಿ ರೈತರಿಗೆ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಲಾರಿ ತಡೆದು ಪ್ರತಿಭಟಿಸಿದರು.
ವಿಷಯ ತಿಳಿಯುತ್ತಿದಂತೆ ಸ್ಥಳಕ್ಕೆ ಭೇಟಿನೀಡಿದ ಪಿಎಸ್‌ಐ ವೀರೇಶ ಅವರಿಗೆ ಮರಳು ಲಾರಿಗಳ ಓಡಾಟ ತಡೆಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು. ಪಿ ಎಸ್ ಐ ಮಾತನಾಡುವ ವೆಳೆ ಮದ್ಯ ಪ್ರವೇಶಿಸಿದ ಪೊಲೀಸ್ ಪೇದೆ ಹಿರಿಯ ಪೇದೆ ಸಿದ್ದಪ್ಪ ಲಾರಿ ಮಾಲೀಕ ಮತ್ತು ಚಾಲಕನ ಪರವಾಗಿ ಮಾತನಾಡಿರುವುದರಿಂದ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾದರು. ಕೂಡಲೆ ಇತನ ವಿರುದ್ದ ಶಿಸ್ತುಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಸಾರ್ವಜನಿಕರ ಒತ್ತಾಯದ ಮೇರಗೆಗೆ ಪೊಲೀಸರು 4 ಲಾರಿಗಳನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಿದ್ದಾರೆ.
ದಿನ ನಿತ್ಯ 50 ಕ್ಕೂ ಹೆಚ್ಚು ಲಾರಿಗಳ ಓಡಾಟದಿಂದಾಗಿ ಸಾಗರಕ್ಯಾಂಪ್‌ಗೆ ಸಂಪರ್ಕ ಕಲ್ಪಿಸುವ ಕಾಲುವೆ ರಸ್ತೆ ಮೇಲೆ ಭೃಹತ್ ವಾಹನಗಳ ಓಡಾಟದಿಂದ ರಸ್ತೆ ಹದ್ದಗೆಟ್ಟಿದೆ. ಇಕ್ಕಟಾದ ರಸ್ತೆಯಿಂದ ಹಾಗೂ ಲಾರಿಗಳ ಉಪ್ಪಾಟಳದಿಂದ ಈಶ್ಯಾನ್ ಕರ್ನಾಟÀಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಓಡಾಟವನ್ನೆ ನಿಲ್ಲಿಸಿದೆ. ಹಿಗಾಗಿ ನಿತ್ಯ ಶಾಲಾ ಕಾಲೇಜುಗಳಿಗೆ ತೆರಳುವ 30 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನಿತ್ಯ 10 ಕಿ.ಮೀ. ನಡೆಯಬೇಕಾದ ಅನಿವಾರ್ಯತೆ ಬಂದಿದೆ.
ವಿದ್ಯಾರ್ಥಿಗಳು ನಿತ್ಯ ಶಾಲಾಕಾಲೇಜಿಗೆ ತೆರಳಲು ಬಳಗಾನೂರು-ಪೋತ್ನಾಳ ಮಾರ್ಗದಿಂದ ಮಧ್ಯದಲ್ಲಿ ಬರುವ ಸಾಗರಕ್ಯಾಂಪ್‌ಗೆ ತೆರಳಲು ಬಸ್‌ಇಕ್ಕಟ್ಟಾದ ರಸ್ತೆಯಲ್ಲಿ ಸಂಚರಿಸಬೇಕು. ಓವರ್ ಲೋಡ್ ಹಾಗೂ ಹಗಲು ರಾತ್ರಿ ಎನ್ನದೆ ಮರಳು ಸಾಗಾಣಿಕೆಯಲ್ಲಿ ತೊಡಗಿರುವ ಲಾರಿಗಳ ಓಡಾಟದಿಂದ ಬಸ್ ಸಂಚರಿಸಲು ಅಡಚಣೆ ಮಾಡಿದ್ದಾರೆ. ಸುಮಾರು 4-5 ಕಿಲೋ ಮೀಟರ್ ಸೈಡ್‌ತೆಗೆದುಕೊಳ್ಳಲು ಬಸ್‌ಹಿಂದುಗಡೆ ಸಂಚರಿಸಿದ್ದರಿAದ ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿ ಜೀವ ಭಯ ಉಂಟಾಗಿರುವ ಘಟನೆ ಜರುಗಿದೆ.
ಸರಕಾರದನಿಯಮ ಗಾಳಿಗೆ: ಮರಳು ಯಾರ್ಡ ಮಾಲೀಕರು ಹಾಗೂ ಲಾರಿ ಮಾಲಕರು, ಚಾಲಕರು ಸರಕಾರ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ. ಸಾಯಂಕಾಲ 6 ಗಂಟೆಯ ನಂತರ ಮರಳು ಸಾಗಾಣಿಕೆ ಸ್ಥಗಿತಗೊಳ್ಳಬೇಕು. ಓವರ್‌ಲೋಡ್ ಮರಳು ಸಾಗಾಣಿಕೆ ಯಾಗುತ್ತಿರುವುದು. ಒಂದೇ ರಾಯಾಲಿಟಿಯಲ್ಲಿ 3-4 ಟ್ರೀಪ್ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ನಾಲೆಕುಸಿಯುವಭೀತಿ:ತುಂಗ ಭದ್ರ ಎಡದಂಡೆ ನಾಲೆಯ ಉಪ ಕಾಳುವೆಗಳ ಮೇಲೆ ಓವರ್ ಲೋಡ್ ಮರಳು ಸಾಗಣಿಕೆ ಮಾಡುತ್ತಿರುವ ಹಿನ್ನನೆಲೆಯಲ್ಲಿ ಕಾಳುವೆ ಕುಸಿಯುವ ಬೀತಿ ಉಂಟಾಗಿದೆ. ಹೀಗಾಗಿ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಈ ಸಂದರ್ಭದಲ್ಲಿ ವೆಂಕಟೇಶನಾಯಕ, ರಮಣಾರೆಡ್ಡಿ, ಶ್ರೀಶೈಲಸಾಯಣ್ಣವರ, ವಿಜಯಕುಮಾರ,ನಾಗಪ್ಪ, ಬಸವರಾಜ,ಮಂಜುನಾಥ, ರಾಧಾಕೃಷ್ಣ, ಪ್ರತಾಪ,ರಾದಪ್ಪ,ಸೇರಿದಂತೆ ಸಾಗರಕ್ಯಾಂಪಿನ ಮುಖಂಡರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ