ವಿದ್ಯಾರ್ಥಿ ಪುಟ್ಟ ಪೋರಿಯ ಮನವಿಗೆ ಮುಖ್ಯಾಧಿಕಾರಿ ದೌಡು
೧೨ ಕೊಟ್ಟೂರು ೦೨ : ಪಟ್ಟಣದ ಪುಟ್ಟ ಬಾಲಕಿ ನೀಡಿದ ದೂರಿನ ಪತ್ರಕ್ಕೆ ಇಲ್ಲಿನ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಾಲಕಿಯ ಮನೆಗೆ ಭೇಟಿ ನೀಡಿ ಸ್ಪಂದಿಸಿದರು.
ಪಟ್ಟಣದ ವಿಸ್ಟಂ ಶಾಲೆ ಜೆಪಿ ನಗರದ ನಿವಾಸಿ ಎಲ್ ಕೆ ಜಿ ಓದುತ್ತಿರುವ ತನ್ವಿತ ತನಗೆ ನಾಯಿ ಕಚ್ಚಿದೆ ಹಾಗೂ ಜೆಪಿ ನಗರದಲ್ಲಿ ನಾಯಿಯ ಉಪಟಳ ನಿಯಂತ್ರಣಕ್ಕೆ ಮುಖ್ಯಾಧಿಕಾರಿಗೆ ಆಂಗ್ಲ ಭಾಷೆಯಲ್ಲಿ ಪತ್ರ ಮೂಲಕ ಅಚ್ಚರಿಯಾಗಿ ದೂರು ಸಲ್ಲಿಸಿದ್ದು,
ಶಾಲೆಗೆ ಹೋಗುವ ಸಂದರ್ಭದಲ್ಲಿ ೧೦.೦೭.೨೦೨೪ ಮಣ್ಣೆಜ್ಜಿ ಕಾಳಮ್ಮ ಇವರ ಸಾಕಿರುವ ನಾಯಿಯ ತನ್ವಿತ ಗೆ ಕಚ್ಚಿದ್ದು ಮರುದಿನ ಬೆಳಿಗ್ಗೆ ೮:೩೦ ಕ್ಕೆ ತೆರಳಿ ಪಟ್ಟಣ ಪಂಚಾಯಿತಿ ಸಿಬ್ಬಂದಿ ವರ್ಗದವರಿಗೆ ಮನವಿ ಪತ್ರ ನೀಡಿದರು.
ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳು ಈ ಮನವಿ ಪತ್ರವನ್ನು ಪರಿಗಣಿಸಿ ನಾಲ್ಕು ವರ್ಷದ ಪುಟ್ಟ ಬಾಲಕಿಯ ಸಂಪರ್ಕಿಸಿ ಶಾಲೆಗೆ ಹೋಗಿರುವ ಗೊತ್ತಾದ ನಂತರ ಸಂಜೆ ಐದು ಗಂಟೆಗೆ ಪುಟ್ಟ ಬಾಲಕಿಯ ಮನೆಗೆ ತೆರಳಿ ಪತ್ರದ ಮನವಿಯ ಪ್ರಕಾರ ಸಾಕಿರುವ ಮಣ್ಣೆಜ್ಜಿ ಕಾಳಮ್ಮ ಅವರಿಗೆ ನೋಟಿಸ್ ನೀಡಿದರು
ಬಾಲಕಿಯ ಆರೋಗ್ಯ ವಿಚಾರಿಸಿ ಬಾಲಕಿಯ ಮನವಿಗೆ ಒಬ್ಬ ಅಧಿಕಾರಿಯು ಜರೂರಾಗಿ ಕ್ರಮ ವಹಿಸಿರುವ ಅಧಿಕಾರಿಗೆ ಸಾರ್ವಜನಿಕರಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು
ಈ ಪತ್ರಕ್ಕೆ ಸಾರ್ವಜನಿಕ ವಲಯದಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಅಧಿಕಾರಿ ನಸುರಲ್ಲ ತಮ್ಮ ಸಿಬ್ಬಂದಿ ಸಮೇತ ದೌಡಾಯಿಸಿ ಪುಟ್ಟ ಬಾಲಕಿಯನ್ನು
ಪ್ರೀತಿಯಿಂದ ಸಂತೈಸಿ ಮತ್ತು ಅವರ ತಾಯಿಯೊಂದಿಗೆ ಮಾಹಿತಿ ಪಡೆದು ಸಮಸ್ಯೆಗೆ ಪರಿಹಾರ ಕಲ್ಪಿಸಿದರು ಬಾಲಕಿ ತನ್ವಿತ ಬರೆದ ಪತ್ರಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಕಿರಿಯ ಆರೋಗ್ಯ ನಿರೀಕ್ಷಕರು ಅನುಷಾ , ಪರಶುರಾಮ್, ಸಿಬ್ಬಂದಿಗಳು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ