ಭದ್ರಾ ಜಲಾಶಯಕ್ಕೆ ಒಂದೇ ದಿನ 2 ಟಿಎಂಸಿ ನೀರು
ಭದ್ರಾ ಜಲಾಶಯಕ್ಕೆ ಭಾರೀ ಒಳ ಹರಿವು
ದಾವಣಗೆರೆ:ಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ನೀರಿನ ಹರಿವಿನ ಪ್ರಮಾಣ ಭಾರೀ ಏರಿಕೆ ಕಂಡಿದೆ. ಬಹುತೇಕ ನಿನ್ನೆಗೆ ಹೋಲಿಸಿದರೆ ದುಪ್ಪಟ್ಟು ಆಗಿದೆ.
ನಿನ್ನೆ 16,041 ಕ್ಯೂಸೆಕ್ ಇದ್ದ ಒಳ ಹರಿವು ಇಂದು 27,839 ಕ್ಯೂಸೆಕ್ ಗೆ ತಲುಪಿದೆ. ನಿನ್ನೆ 23.57 ಟಿಎಂಸಿ ಇದ್ದ ನೀರಿನ ಪ್ರಮಾಣ ಇಂದು 25.96 ಟಿಎಂಸಿ ತಲುಪಿದೆ. ಒಂದೇ ದಿನ 2.4 ಟಿಎಂಸಿ ನೀರು ಜಲಾಶಯಕ್ಕೆ ಸೇರಿದೆ.
ಇನ್ನು ಮಳೆ ಹೀಗೆ ಮುಂದುವರಿಯುವ ಲಕ್ಷಣ ಇರುವುದರಿಂದ ಇನ್ನೊಂದು ವಾರದಲ್ಲಿ ಜಲಾಶಯ ಭರ್ತಿ ಆಗಬಹುದು ಎಂಬ ಆಶಯ ಇದೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ